ಸಸೂರ್ ಲಿಂಗ್ವಿಸ್ಟಿಕ್

ಭಾಷೆಯನ್ನು ಸರಿಯಾಗಿ ಅಭ್ಯಸಿಸಲು ಇರುವ ಒಂದೇ ವಿಧಾನ ಅದು ಲಿಂಗ್ವಿಸ್ಟಿಕ್ ಸ್ಟ್ರಕ್ಚರ್ನ ಅಧ್ಯಯನ. ಇದು ಭಾಷೆಯ ಒಂದು ಭಾಗ. ಆದರೂ ಅತ್ಯಂತ ಮುಖ್ಯವಾದ ಭಾಗ. ಭಾಷೆ ಅನ್ನುವುದು ಒಂದು ಸಾಂಕೇತಿಕ ವ್ಯೆವಸ್ಥೆ. (ಶಬ್ದಗಳ ಮೂಲಕ ಅರ್ಥ ಮಾಡಿಕೊಳ್ಳುವುದು. ಅಂದರೆ ಒಂದು ಶಬ್ದಕ್ಕೆ ನಿರ್ಧಿಷ್ಟವಾದ ಅರ್ಥವಿರುತ್ತದೆ.) ಎಲ್ಲಾ ಜ್ನಾನವು ವ್ಯೆತ್ಯಾಸ ಮಾಡುವ ಅರಿವಿನಿಂದ ಬಂದದ್ದು. ಉದಾಹರಣೆ: ಬೆಂಕಿ ಬೆಳಕು ಶಾಖ

ಯಾವುದೇ ಭಾಷೆಯನ್ನು ಕಾಲದ ವ್ಯೆತ್ಯಾಸದಿಂದ ಅಥವಾ ಐತಿಹಾಸಿಕವಾಗಿ ಅಭ್ಯಸಿಸಬಾರದು ಅದರ ಮೂಲ ಸ್ವರೂಪವನ್ನು ಅಭ್ಯಸಿಸಬೇಕು,ಅಂದರೆ ಭಾಷೆಗೆ ಒಂದು ಜಾಯಮಾನ ಇರುತ್ತದೆ ಅದನ್ನು ಅಭ್ಯಸಿಸಬೇಕು. ಭಾಷೆ ಅನ್ನುವುದು ನೈಜ್ಯವಾದದ್ದು, ಕನ್ನಡ ಅನ್ನುವುದು ಸಂಸ್ಕೃತಿ ಉದಾಹರಣೆ: ನೀರು=ನೈಜ್ಯ=ಭಾಷೆ

            ವಿದ್ಯುತ್=ಕನ್ನಡ

ಭಾಷೆಯನ್ನು ಅಧ್ಯಯನ ಮಾಡಲು ಧ್ವನಿಪೆಟ್ಟಿಗೆ ಮುಖ್ಯವಲ್ಲ, ಅದು ಕೇವಲ ಮಾತನಾಡಲು ಕಾರಣೀಕೃತ. ಮಾತಿಗಿಂತ signification ಮುಖ್ಯ (ಏಕೆಂದರೆ ಭಾಷೆಗೊತ್ತಿದ್ದರೆ ನಾವು ಮಾತನಾಡದೆ ಇದ್ದರು ನಮ್ಮ Brain ನಲ್ಲಿ ಅ ಶಬ್ದದ ಅರ್ಥ ಕ್ಷಣಾರ್ಧದಲ್ಲಿ ಬಂದು ಹೋಗಿರುತ್ತದೆ. ಪದ ಅಥವಾ ಶಬ್ದ ಎಂದರೆ ಕೇವಲ ವಸ್ತುವನ್ನು ಗುರುತಿಸುವ ಕ್ರಮ. ಪರಿಕಲ್ಪನೆಗೊತ್ತಿದ್ದೆ ಎಂದರೆ ವ್ಯೆತ್ಯಾಸ ಮಾಡುವುದು ಬಂದಿದೆ ಎಂದು ಅರ್ಥ.)

ಸಸೂರ್ ಭಾಷೆಯನ್ನು ಯಾವ ಆಧಾರಗಳ ಮೂಲಕ ಅಭ್ಯಸಿಸಬೇಕು ಎಂದು ತನ್ನ lingusti study ಯಲ್ಲಿ ವಿವರಿಸಿದ್ದಾನೆ ಅದನ್ನು ನಾವು ಈ ಕೆಳಗೆ ತಿಳಿದುಕೊಳ್ಳೋಣ.

  • ಪೆರೋಲ್: ನಿರ್ದಿಷ್ಟ ಮಾತು ಇದನ್ನು ಅಭ್ಯಸಿಸಲು ಸಾಧ್ಯವಿಲ್ಲ ಏಕೆಂದರೆ ಅದು ಅನಂತ
  • ಲಾಂಗ್ : ಲಾಂಗ್ ಅನ್ನು ಅಭ್ಯಸಿಸಬಹುದು ಏಕೆಂದರೆ ಮಾತಡುವ ಬಗೆ ಹೇಗೆ ಎಂದು.
  • Diachronic:ಒಂದು ನಿರ್ಧಿಷ್ಟ ಕಾಲ ಘಟ್ಟದಲ್ಲಿ ಭಾಷೆಯಲ್ಲಿ ಆದ ಬದಲಾವಣೆಗಳನ್ನು ಅಭ್ಯಸಿಸುವುದು. ಐತಿಹಾಸಿಕವಾಗಿ ಭಾಷೆಯನ್ನು ಅಭ್ಯಸಿಸುವುದು. ಈ ಬದಲಾವಣೆಯು ಮಂದಗತಿಯಲ್ಲಿ ಸಾಗುತ್ತದೆ ಆದರೆ ಬದಲಾವಣೆಗಳು ಕಾಣುವುದಿಲ್ಲ. ಉದಾ:ಯುದ್ದಗಳು, ಮೈಗ್ರೇಶನ್, ಹೊಸ ಭೂಗೋಳವನ್ನು ಕಂಡು ಹಿಡಿಯುವುದರಿಂದ ಇವೆಲ್ಲವೂ ಭಾಷೆಯ ಮೇಲೆ ಪರಿಣಾಮ ಬೀರುತ್ತವೆ. ಪ್ರತಿಯೊಂದು ಜನರೇಶನ್ ಭಾಷೆಯ ಬದಲಾವಣೆಗೆ ತನ್ನದೇ ಆದ ರೀತಿಯಲ್ಲಿ ಕಾರಣವಾಗುತ್ತದೆ.ಭಾಷೆಯು ಸಾಂಸ್ಕೃತಿಕವಾಗಿ ಬದಲಾಗುತ್ತದೆ. ಮತ್ತೊಬ್ಬರನ್ನು ಅನುಸರಿಸುವುದರಿಂದ ಮತ್ತು ಕಲಿಕೆಯಿಂದ ಭಾಷಯಲ್ಲಿ ಕೆಲವೊಂದು ಬದಲಾವಣೆಗಳಾಗುತ್ತವೆ. ಈ ಎಲ್ಲಾ ಬದಲಾವಣೆಗಳು ನೈಜ್ಯವಾಗಿರುತ್ತವೆ. ಅಗತ್ಯತೆ, ಮತ್ತು ಮನಸ್ಥಿತಿ ಹಾಗೂ ಅ ಭಾಷೆಯ ಜಾಯಮಾನಕ್ಕೆ ಸಂಬಂಧಿಸಿದಂತೆ ಕೆಲವು ಬದಲಾವಣೆಗಳಾಗುತ್ತವೆ.ಹಾಗೂ ಸಾಮಾಜಿಕ-ಸಾಂಸ್ಕೃತಿಕ ಅಂಶಗಳ ಪ್ರಭಾವದಿಂದ...ಹೀಗೆ ಹತ್ತು ಹಲವು ಕಾರಣಗಳಿಂದ ಭಾಷೆಯಲ್ಲಿ ಬದಲಾವಣೆಗಳಾಗುತ್ತವೆ ಮತ್ತು ಹೊಸ ಪದಗಳು ಸೃಷ್ಟಿಯಾಗುತ್ತವೆ.

ಉದಾ:"postpone" ಪದದ ವಿರುದ್ದ ಪದ "Advance" ಆದರೆ ಭಾರತೀಯರು "pre-pone" ಎಂಬ ಬದವನ್ನು ಹುಟ್ಟು ಹಾಕಿದ್ದಾರೆ. ಡಯಾಕ್ರೋನಿಕ್ ವ್ಯೆತ್ಯಸವನ್ನು ಕನ್ನಡ ಭಾಷೆಯಲ್ಲಿ ನೋಡೋಣ ಉದಾಹರಣೆ ಹಳೆಗನ್ನಡ, ನಡುಗನ್ನಡ, ಹೊಸಗನ್ನಡ. ಮಾತೃ ಭಾಷೆ ಮಾತಾಡುವುದರಿಂದ ಭಾಷೆಯ ಬದಲಾವಣೆಗೆ ಒಂದು ರೀತಿ ಕಾರಣರಾದರೆ, ಬೇರೆ ಭಾಷೆ ಮಾತಡುವವರು ಇನ್ನೂಂದು ರೀತಿ ಕಾರಣರಗುತ್ತರೆ. ಉದಾಹರಣೆ ಕೆಲಸ , ವ್ಯಾಪಾರ, ವ್ಯವಹಾರ, ಆಡಳಿತ,ಹೊಲಸೆ ಬಂದ ಜನರು ಮತ್ತು ವಿದ್ಯಾಭ್ಯಾಸ ಇತ್ಯಾದಿ ಉದ್ದೇಶಗಳಿಗೆ ಹೊಸ ಭಾಷೆಯನ್ನು ಕಲಿಯುವ ಬಗೆ. ತಮ್ಮದೇ ಆದ ರೀತಿಯಲ್ಲಿ ಮಾತಡುವಾಗ ಕೆಲವೊಂದು ಅಂಶಗಳು ಭಾಷೆಯ ಬದಲಾವಣೆಗೆ ಕಾರಣವಗುತ್ತವೆ.ಏಕೆಂದರೆ ಅದು ಅವರ ಮಾತೃ ಭಾಷೆಯ ಒತ್ತಡದಿಂದ.

  • Synchronic ಒಂದು ನಿರ್ಧಿಷ್ಟ ಸಮಯಕ್ಕೆ ಸಂಬಂಧಿಸಿದಂತೆ ಒಂದು ಸ್ಥಳ ಅಥವಾ ಸಾಮಾಜಿಕ, ಸಾಂಸ್ಕೃತಿಕ ಹಾಗೂ ವೈಯಕ್ತಿಕವಾಗಿ ಭಾಷೆಯಲ್ಲಾದ ಬದಲಾವಣೆಗಳನ್ನು ಮತ್ತು ಅಭಿವೃಧ್ದಿಯನ್ನು.ಭಾಷೆಯಲ್ಲಿ ಹೇಗೆ ಮಾತನಾಡುವರಿಂದ ಬದಲಾವಣೆಗಳಾಗಿವೆ ಎಂದು ಅಭ್ಯಸಿಸುವುದು.(ವ್ಯಾಕರಣ, ಉಚ್ಚಾರಣೆ,ಪದಗಳು,ಶಬ್ದಕೋಶ, ಮಾತನಾಡುವ ಶೈಲಿ ಇತ್ಯಾದಿ)
  • Syntagmatic ಒಂದು ವಾಕ್ಯದಲ್ಲಿ ಪದಗಳು ಇಂತಹದ್ದೇ ಕ್ರಮದಲ್ಲಿ ಬರಬೇಕು ಎಂದು ತಿಳಿಸುವುದು. ಇದು ಭಾಷೆಯನ್ನು ಅಭ್ಯಸಿಸುವ ಒಂದು ವಿಧಾನ
  • Paradigmatic ಒಂದು ವಾಕ್ಯದಲ್ಲಿ ಬರುವ ಮೊದಲ ಪದ ಅಂದರೆ context ಅದು ಮುಂದೆ ಬರುವ ಪದಗಳನ್ನು ನಿರ್ಧರಿಸುತ್ತದೆ.

== ಪೊನಾಲಜಿ ( ==ಧ್ವನಿಶಾಸ್ತ್ರ) ಧ್ವನಿಶಾಸ್ತ್ರವು ಭಾಷಾಶಾಸ್ತ್ರದ ಒಂದು ವಿಭಾಗವಾಗಿದ್ದು ಇದು ಭಾಷೆಯ ಕ್ರಮವಾದ ಸಂಘಟಿತ ಶಬ್ದಗಳನ್ನು ಕುರಿತು ಅಭ್ಯಸಿಸುತ್ತದೆ. ಇದು ಸಾಂಪ್ರದಾಯಿಕವಾಗಿ ಭಾಷೆಗಳಲ್ಲಿನ ಶಬ್ದಗಳನ್ನು ಕೇಂದ್ರಿಕರಿಸಿ ಅಧ್ಯಯನ ಮಾಡುತ್ತದೆ. ಭಾಷಾ ಅಧ್ಯಯನದಲ್ಲಿ ವಿಶ್ಲೇಷಣೆ ಸೇರಿದಂತೆ ಪದ ಹಾಗೂ ಕೆಳಮಟ್ಟದಲ್ಲಿನ ಉಚ್ಚಾರಾಂಶದ ಆಕ್ರಮಣ ಮತ್ತು ಪ್ರಾಸಬದ್ಧವಾದ ಸನ್ನೆಗಳು, ವೈಶಿಷ್ಟ್ಯಗಳು ಇನ್ನೂ ಇತ್ಯಾದಿ ಅಥವಾ ಒಂದು ಭಾಷೆಯನ್ನು ವ್ಯೆಕ್ತಪಡಿಸುವಲ್ಲಿ ಧ್ವನಿ ಎಲ್ಲಾ ಹಂತಗಳಲ್ಲಿ ಹೇಗೆ ನಿರ್ಮಾಣವಾಗಿದೆ ಎಂದು ಪರಿಗಣಿಸಲ್ಲಾಗುತ್ತದೆ.

ಪೊನಿಂ:ಸ್ವತಂತ್ರವಾಗಿ ಉಚ್ಚರಿಸಲಾಗುವ ಅತ್ಯಂತ ಚಿಕ್ಕದಾದ ಶಬ್ದವನ್ನು ಪೊನಿಂ ಎನ್ನುತ್ತಾರೆ. ಇದರಲ್ಲಿ ಸ್ವರ ಮತ್ತು ವ್ಯಂಜನಗಳು ಸೇರಿರುತ್ತವೆ. ಉದಾಹರಣೆ: ಪೊ / ನಾ / ಲ / ಜಿ ಪೊನಿಂ ಕೆಲಸ ಒಂದು ಭಾಷೆಯಲ್ಲಿ ಎಷ್ಟು ವ್ಯಾಲಿಡ್ ಕಾಂಬಿನೇಶನ್ ಇದೆ ಇಂದು ಕಂಡು ಹಿಡಿಯುವುದು. ಉದಾಹರಣೆಗೆ ಕನ್ನಡದಲ್ಲಿ ಕೆಲವು ಪದ(ಅಕ್ಷರ) ಗಳಾದ ನಂತರ ಕೆಲವು ಅಕ್ಷರಗಳು ಬರುವುದಿಲ್ಲ ಉದಾ:ಅಜಝ ಬರುವುದಿಲ್ಲ ಪ್ರತಿ ಭಾಷೆಗೂ ಅದರದ್ದೇ ಆದ ಧ್ವನಿಯ ಜಾಯಮಾನ ಇದೆ. ಆದ್ದರಿಂದಲೇ ಪದಗಳು ಬೇರೊಂದು ಭಾಷೆಗೆ ಹೋದಾಗ ಕೆಲವೊಂದು ಸಮಸ್ಯೆಗಳು ಆಗುತ್ತವೆ. ಉದಾ:ಆ+ಆಂಟಿ=ಆವಾಂಟಿ