ಸಲೇಶಿಯಾ ಒಂದು ಅಳಿವಿನಂಚಿನಲ್ಲಿರುವ ಪಶ್ಚಿಮ ಘಟ್ಟ ಶ್ರೇಣಿಗಳಲ್ಲಿ ಕಂಡುಬರುವ ಸಸ್ಯ ಪ್ರಬೇಧ. ಇದನ್ನು ಏಕನಾಯಕನ ಬಳ್ಳಿಯೆಂದೂ ಕರೆಯುತ್ತಾರೆ. ಸಲೇಶಿಯಾ ರೆಟಿಕುಲೇಟ ಇದರ ವೈಜ್ಞಾನಿಕ ಹೆಸರು.

ಸಲೇಶಿಯಾ

ಸಸ್ಯದ ರಚನೆ

ಬದಲಾಯಿಸಿ

ಸಸ್ಯವು ಎರಡು ವಿಧದ ಕವಲೊಡೆಯುವ ಮಾದರಿಯನ್ನು ಹೊಂದಿದೆ. ತೊಗಟೆಯು ನಯವಾಗಿ ಹಸಿರು ಅಥವಾ ಬೂದು ಬಣ್ಣದಲ್ಲಿರುತ್ತವೆ. ಎಲೆಗಳು ಅಭಿಮುಖ ಮತ್ತು ಅಂಡಾಕಾರದಲ್ಲಿರುತ್ತವೆ. ಹೂವುಗಳು ಉಭಯಲಿಂಗಿಯಾಗಿರುತ್ತವೆ. ಹಣ್ಣು ಗೋಳಾಕಾರದಲ್ಲಿದ್ದು ೧-೪ರಷ್ಟು ಬೀಜಗಳಿರುತ್ತವೆ.

 
ಸಲೇಶಿಯಾದ ಬೇರು

ಬೆಳೆಯುವ ಪ್ರದೇಶ

ಬದಲಾಯಿಸಿ

ಶ್ರೀಲಂಕಾದಲ್ಲಿನ ಶುಷ್ಕ ವಲಯ ಕಾಡುಗಳಲ್ಲಿ ಸಲೇಶಿಯಾ ಬೆಳೆಯುತ್ತದೆ. ಭಾರತದ ಪಶ್ಚಿಮ ಘಟ್ಟ ಶ್ರೇಣಿಗಳಲ್ಲಿ ಇದರ ಪ್ರಬೇಧಗಳು ಇದ್ದು ಪ್ರಸ್ತುತ ಈ ಸಸ್ಯಗಳು ಅಳಿವಿನಂಚಿನಲ್ಲಿದೆ.[]

ಸಾಂಪ್ರದಾಯಿಕ ಭಾರತೀಯ ಔಷಧಿಯಾದ ಆಯುರ್ವೇದದಲ್ಲಿ ಸಲೇಶಿಯಾವನ್ನು ಮಧುಮೇಹದ ಚಿಕಿತ್ಸೆಗೆ ಬಳಸುತ್ತಾರೆ.[][]

ಉಲ್ಲೇಖ

ಬದಲಾಯಿಸಿ
"https://kn.wikipedia.org/w/index.php?title=ಸಲೇಶಿಯಾ&oldid=1252970" ಇಂದ ಪಡೆಯಲ್ಪಟ್ಟಿದೆ