ಸರ್ ಕವಾಸ್ ಜಿ ಜೆಹಾಂಗೀರ್, ೨ ನೆಯ ಬಾರೋನೆಟ್
’Sir Cowasji Jehangir” (2nd Bart)
ಸರ್ ಕವಾಸ್ ಜಿ ಜೆಹಾಂಗೀರ್ (೨ ನೆಯ ಬಾರೊನೇಟ್), ರವರ ಉದಾರ ಧನಸಹಾಯದಿಂದ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ಶಿಕ್ಷಣ ಸಂಸ್ಥೆಯ ಉದಯವಾಯಿತು
ಬದಲಾಯಿಸಿಬೊಂಬಾಯಿನಲ್ಲಿ ನಿರ್ಮಿಸಿದ, ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ಶಿಕ್ಷಣ ಸಂಸ್ಥೆಯನ್ನು ತಮ್ಮ ಉದಾರ ಹಣದ ದೇಣಿಗೆಯ ಮೂಲಕ, ಬೊಂಬಾಯಿನ ಜನತೆಗೆ ಕೊಡುಗೆಯಾಗಿ ಕೊಟ್ಟಿದ್ದಾರೆ. ಅವರ ಜೀವಿತಕಾಲದಲ್ಲಿ ಸರ್ ಕವಾಸ್ ಜಿ ಜೆಹಾಂಗೀರ್ ರವರು, ಪಾರ್ಸಿ ಸಮುದಾಯದ ಅತ್ಯಂತ ಪ್ರತಿಷ್ಠಿತ ವ್ಯಕ್ತಿಗಳಲ್ಲೊಬ್ಬರಾಗಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಅವರು, ಭಾರತಕ್ಕಾಗಿ ತಮ್ಮ ಪಾರ್ಸಿ ಸಮುದಾಯವನ್ನು ಸಂಘಟಿಸಿ ಭಾಗವಹಿಸಿದರು. ೧೯೧೯ ರಲ್ಲಿ Western India National Liberation Federation ನ್ನು ಸ್ಥಾಪಿಸಿದ್ದಲ್ಲದೆ, ೧೯೩೬ ಮತ್ತು ೧೯೩೭ ರ ಅವಧಿಯಲ್ಲಿ ಅದರ ಅಧ್ಯಕ್ಷರಾಗಿ ಚುನಾಯಿಸಲ್ಪಟ್ಟಿದ್ದರು. Parsee Central Committee ಎಂಬ ಸಂಘಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ದಾದಾಭಾಯ್ ನವರೋಜಿ, ಮತ್ತು ಫಿರೋಜ್ ಶ ಮೆಹ್ತ ರಂತಹ ಕಾಂಗ್ರೆಸ್ ನಾಯಕರ ಕೆಲವು ಕಾರ್ಯವಿಧಾನಗಳನ್ನು ಸಮರ್ಥಿಸಲಿಲ್ಲ. ೧೯೩೦-೩೨, ರಲ್ಲಿ ಲಂಡನ್ ನಲ್ಲಿ ನಡೆದ, ಎರಡನೆಯ ರೌಂಡ್ ಟೇಬಲ್ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ್ದರು. ಅಲ್ಲಿ ಭಾರತದ ಸಂವಿಧಾನದ ನೀಲ-ನಕ್ಷೆಯನ್ನು ಸಿದ್ಧಪಡಿಸಿದ್ದರು. ರಾಜಕೀಯವಾಗಿ ಹಾಗೂ ಸಾಂವಿಧಾನಿಕವಾಗಿ, ಪಾರ್ಸಿ ಜನಸಮುದಾಯವನ್ನು ಪ್ರತಿನಿಧಿಸುವ ಮೂರು ರಾಜಕೀಯ ಪ್ರಗತಿಪರ ವ್ಯಕ್ತಿಗಳಲ್ಲಿ ಅವರೂ ಒಬ್ಬರು. ಅಲ್ಪಸಂಖ್ಯಾತರ ಸಮಿತಿ, ಹಾಗೂ ಮತದಾನಮಾಡುವವರ ಸಮಿತಿಗೆ ಅವರು ಕೆಲವು ಶಿಫಾರಸುಗಳನ್ನು ಮಾಡಿದರು. ಸಾಮಾನ್ಯವಾದ ಮಟ್ಟದಲ್ಲಿ ಪಾರ್ಸಿ ಜನಾಂಗದವರು, ಅತ್ಯಂತ ಹೆಚ್ಚು ವಿದ್ಯಾವಂತರಾಗಿರುವ ನೈಜತೆಯನ್ನು ಒತ್ತಿಹೇಳಿ, ಅವರಿಗೆ ಕೆಲವು ಸವಲತ್ತುಗಳನ್ನು ದಯಪಾಲಿಸಲು ಅವರು ಸರ್ಕಾರವನ್ನು ಪ್ರೇರೇಪಿಸಲು ಶ್ರಮವಹಿಸಿದರು. ಹೆಚ್ಚಿನ ಆದ್ಯತೆಗಳನ್ನು, ಹೆಚ್ಚು ಹೆಚ್ಚು ಪಾರ್ಟಿಗಳು ಪ್ರತಿನಿಧಿಸಲು. ಈ ತರಹದ ಮಾತುಗಳಿಗೆ ಯಾವ ಹೆಚ್ಚಿನ ಅರ್ಥವನ್ನು ಬೇರೆ ಪಾರ್ಟಿಗಳು ಕೊಡಲಿಲ್ಲ.
ಸರ್ ಕವಾಸ್ ಜಿ ಯವರು ದ ಜೆಹಾಂಗೀರ್ ಆರ್ಟ್ ಗ್ಯಾಲರಿ, ಜೆಹಾಂಗೀರ್ ಇನ್ ಸ್ಟಿಟ್ಯೂಟ್ ಆಫ್ ಸೈಕಿಯಾಟ್ರಿಗಳಂತಹ ಪ್ರತಿಷ್ಠಿತ ಸಾರ್ವಜನಿಕ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ
ಬದಲಾಯಿಸಿ೧೯೩೯ ರ ನಂತರ ಇನ್ನೇನು ಸ್ವಾತಂತ್ಯ ಸಿಗುತ್ತದೆ ಅನ್ನುವ ಲಕ್ಷಣಗಳು ಕಾಣಬರಹತ್ತಿದವು. ಆಗ ಹೆಚ್ಚಿನ ಪಾರ್ಸಿ ಜನಗಳು, ಸ್ವಲ್ಪ ಸಮಯದಲ್ಲಿ, WINLF ಸಂಘಟನೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸಲು ಆರಂಭಿಸಿದರು. ಪ್ರತಿಪಾರ್ಸಿಯರು, ಮನೆಯಯಲ್ಲೂ ಕೂತು ಚರ್ಚೆಮಾಡಲು ಪ್ರಾರಂಭಿಸಿದರು. ೧೯೪೫ ರಲ್ಲಿ ಸಾಮೂಹಿಕವಾಗಿ ಪಾರ್ಸಿ ಜನರೆಲ್ಲಾ ಒಟ್ಟುಗೂಡಿ ಆಗಿನ ವೈಸ್ ರಾಯ್ ರವರಿಗೆ ಟೆಲಿಗ್ರಾಮ್ ಮುಖಾಂತರ ಮನವಿ ಸಲ್ಲಿಸಿದರು. ಪಾರ್ಸಿಜನಗಳ ಆದ್ಯತೆಗಳನ್ನು ಗೌರವಿಸಲು. Parsee Central Association ಇದನ್ನು ವಿರೋಧಿಸಿ ಇನ್ನೊಂದು ಪಾರ್ಸಿ ಜನಸಮುದಾಯ ತಮ್ಮನ್ನು ಸ್ವಾತಂತ್ರ್ಯ ಕ್ಕೆ ಹೋರಾಡುವ ತಂಡವೆಂದು ಗೆ ಸೇರಿದವರೆಂದು ಗುರುತಿಸಿಕೊಂಡು ಹೇಳಿಕೆ ಕೊಟ್ಟರು. ಪಾರ್ಸಿಗಳಿಗೆ ಬೇರೆ ಏನೂ ಹೆಚ್ಚಿನ ಸವಲತ್ತುಗಳ ಅವಶ್ಯಕತೆಯಿಲ್ಲವೆಂದು ಸಾರಿ ಹೇಳಿಕೆ ಕೊಟ್ಟರು. ದ ಜೆಹಾಂಗೀರ್ ಆರ್ಟ್ ಗ್ಯಾಲರಿ, ಹಾಗೂ ಜೆಹಾಂಗೀರ್ ಇನ್ ಸ್ಟಿಟ್ಯೂಟ್ ಆಫ್ ಸೈಕಿಯಾಟ್ರಿ ಅವರ ಹೆಸರಿನಲ್ಲೇ ಸ್ಥಾಪನೆಯಾದವು. ಪುಣೆಯ ಜೆಹಾಂಗೀರ್ ನರ್ಸಿಂಗ್ ಹೋಮ್ ಈಗ ಈ ಸಂಸ್ಥೆ ಹಾಸ್ಪಿಟಲ್ ಆಗಿದೆ. ಇದು ಲೇಡಿ ಹೀರಾಬಾಯಿ ಕವಾಸ್ ಜಿ ಜೆಹಾಂಗೀರ್ ಯವರ ವೈಯಕ್ತಿಕ ಹಣದ ಸಹಾಯದಿಂದ ಆಯಿತು. ಮೊದಲು ರೆಡಿಮನಿ ವಿಲ್ಲ ಎಂದು ಹೆಸರಿಸಲಾಗಿದ್ದ ಬಂಗಲೆಯ ಹೆಸರನ್ನು ೧೯೪೪ ರಲ್ಲಿ, ಮಗ, ಜೆಹಾಂಗೀರ್ ಕವಾಸ್‍ಜಿಯವರ ಹೆಸರಿಗೆ ಬದಲಾಯಿಸಲಾಯಿತು. ಜೆಹಾಂಗೀರ್ ಒಂದು ಅಪಘಾತದಲ್ಲಿ ಮೃತರಾಗಿದ್ದರು.