ಸರ್ ಎಡ್ವಿನ್ ಆರ್ನಲ್ಡ್

ಆಂಗ್ಲ ಶಿಕ್ಷಕ, ಕವಿ, ಹಾಗೂ ಪತ್ರಕರ್ತ


ಸರ್ ಎಡ್ವಿನ್ ಆರ್ನಲ್ಡ್ (10 ಜೂನ್ 1832 – 24 ಮಾರ್ಚ್ 1904)ದ ಲೈಟ್ ಆಫ್ ಏಷ್ಯ ಅಥವಾ ದಿ ಗ್ರೇಟ್ ರಿನನ್ಸಿಯೇಷನ್ (೧೮೭೦) ಎಂಬ ಬುದ್ಧಜೀವನವನ್ನು ಕುರಿತ ಖ್ಯಾತ ಕವನದ ಕರ್ತೃ. ಇಂಗ್ಲೆಂಡಿನ ಸಸೆಕ್ಸ್‌ನಲ್ಲಿನ ಒಬ್ಬ ಮ್ಯಾಜಿಸ್ಟ್ರೇಟನ ಮಗನಾಗಿ ಜನಿಸಿ ಲಂಡನ್, ಆಕ್ಸ್‌ಫರ್ಡ್‍ಗಳಲ್ಲಿ ಓದಿ, ಪುಣೆಯ ಡೆಕನ್ ಕಾಲೇಜಿನಲ್ಲಿ ಮುಖ್ಯಾಧಿಕಾರಿಯಾಗಿ ಕೆಲಸ ಮಾಡಿದ (೧೮೫೬-೬೧). ಈತ ಸಂಸ್ಕೃತದಿಂದ ಅನುವಾದಿಸಿದ ಮೊದಲಕೃತಿ ಹಿತೋಪದೇಶ (೧೮೬೧). ಭಗವದ್ಗೀತೆಯನ್ನು ಇಂಗ್ಲಿಷ್‍ಗೆ ಅನುವಾದಿಸಿದ್ದಾನೆ.

ಸರ್ ಎಡ್ವಿನ್ ಆರ್ನಲ್ಡ್
ಜನನ(೧೮೩೨-೦೬-೧೦)೧೦ ಜೂನ್ ೧೮೩೨
Gravesend, Gravesham, Kent, England
ಮರಣ೨೪ ಮಾರ್ಚ್ ೧೯೦೪(1904-03-24) (aged ೭೧)
ಲಂಡನ್,ಇಂಗ್ಲಂಡ್
ವೃತ್ತಿಪತ್ರಕರ್ತ,ಸಂಪಾದಕ,ಮತ್ತು ಕವಿ
ರಾಷ್ಟ್ರೀಯತೆಇಂಗ್ಲಿಷ್
ವಿದ್ಯಾಭ್ಯಾಸಯುನಿವರ್ಸಿಟಿ ಕಾಲೇಜು,ಆಕ್ಸ್ ಫರ್ಡ್
ಪ್ರಮುಖ ಕೆಲಸ(ಗಳು)ದಿ ಲೈಟ್ ಆಫ್ ಏಷಿಯಾ


ಈತ ೧೮೬೧ರಲ್ಲಿ ಇಂಗ್ಲೆಂಡಿಗೆ ಹಿಂದಿರುಗಿ ಡೇಲಿ ಟೆಲಿಗ್ರಾಫ್ ಪತ್ರಿಕೆಯ ಸಂಪಾದಕ ಮಂಡಲಿಯನ್ನು ಸೇರಿದ. ಮುಂದೆ ಅದರ ಸಂಪಾದಕನಾದ. ಪೂರ್ವ ಜಗತ್ತಿನ ಬದುಕಿನ ರೀತಿ ಮತ್ತು ಚಿಂತನೆಗಳನ್ನು ಪಶ್ಚಿಮ ಜಗತ್ತಿಗೆ ಪರಿಚಯ ಮಾಡಿಕೊಡುವುದು ಇವನ ಗುರಿ. ದ ಲೈಟ್ ಆಫ್ ಏಷ್ಯ ಎನ್ನುವ ದೀರ್ಘ ಕವನವನ್ನು ಬರೆದ. ಇವನ ಇತರ ಕೃತಿಗಳು ದ ಸಾಂಗ್ ಆಫ್ ಸಾಂಗ್ಸ್ ಆಫ್ ಇಂಡಿಯ, ವಿತ್ ಸಾದಿ ಇನ್ ದ ಗಾರ್ಡನ್, ಮತ್ತು ದಿ ಟೆನ್ತ್ ಮ್ಯಾನ್’.


ಈತನ ದ ಲೈಟ್ ಆಫ್ ಏಷ್ಯ ಕೃತಿ ಬಹು ಜನಪ್ರಿಯವಾಯಿತು. ಪಾಶ್ಚಾತ್ಯ ಜಗತ್ತಿಗೆ ಬುದ್ಧನ ಜೀವನ ಮತ್ತು ಉಪದೇಶವನ್ನು ಸರಳವಾದ ಭಾಷೆಯಲ್ಲಿ ಮೂರ್ತವಾದ ಪ್ರಸಂಗಗಳಿಗೆ ಪ್ರಾಧಾನ್ಯ ನೀಡಿ ಪರಿಚಯ ಮಾಡಿಕೊಟ್ಟಿತು. ಭಾರತದಲ್ಲಿ ಇಂಗ್ಲಿಷ್ ಬಲ್ಲವರೂ ಈ ಕವನವನ್ನು ಮೆಚ್ಚಿಕೊಂಡರು. ದ ಲೈಟ್ ಆಫ್ ದಿ ವಲ್ರ್ಡ್ ಎನ್ನುವ ದೀರ್ಘ ಕವನದಲ್ಲಿ ಯೇಸು ಕ್ರಿಸ್ತನ ಬದುಕನ್ನು, ಉಪದೇಶವನ್ನು ನಿರೂಪಿಸಲು ಪ್ರಯತ್ನಪಟ್ಟಿದ್ದಾನೆ. ಆದರೆ ಈ ರಚನೆ ಹೆಚ್ಚು ಯಶಸ್ವಿಯಾಗಲಿಲ್ಲ.

ಬಾಹ್ಯ ಸಂಪರ್ಕಗಳುಸಂಪಾದಿಸಿ