ಸರ್. ಬ್ರೈಸ್ ಚಾಡ್ಲೆ ಬರ್ಟ್

(ಸರ್. ಬ್ರೈಸ್ ಬರ್ಟ್ ಇಂದ ಪುನರ್ನಿರ್ದೇಶಿತ)

ಸರ್.ಬ್ರೈಸ್ ಚಾಡ್ಲೆ ಬರ್ಟ್,ರವರು,ಕೇಂದ್ರೀಯ ಹತ್ತಿ ಸಮಿತಿಯ ಪ್ರಪ್ರಥಮ ಸೆಕ್ರೆಟರಿಯಾಗಿ ಸೇವೆ ಸಲ್ಲಿಸಿದ್ದರು [] ಭಾರತದಲ್ಲಿನ ಹತ್ತಿಯ ಗುಣಮಟ್ಟವನ್ನು ಸುಧಾರಿಸಿ, ಯಂತ್ರಗಳಲ್ಲಿ ಅವನ್ನು ಸಕ್ಷಮವಾಗಿ ಬಳಸಲು ಯೋಗ್ಯವಾಗುವಂತಹ ದಿಶೆಯಲ್ಲಿ ಅನುಸಂಧಾನಗಳನ್ನು ಹತ್ತಿ ಹೊಲಗಳಲ್ಲಿ ಪ್ರಾರಂಭಿಸುವ ಗುರುತರ ಜವಾಬ್ದಾರಿಗಳನ್ನು ಮುಂಬಯಿಯಲ್ಲಿ ಸ್ಥಾಪಿಸಲಾಗಿದ್ದ 'ಕೇಂದ್ರೀಯ ಹತ್ತಿ ಸಮಿತಿ ಗೆ ವಹಿಸಿಕೊಡಲಾಗಿತ್ತು. ಹತ್ತಿಸಮಿತಿಯ ಅಡಿಯಲ್ಲಿ ಟೆಕ್ನೊಲಾಜಿಕಲ್ ಲ್ಯಾಬೋರೇಟೊರಿ ಕೆಲಸ ನಿರ್ವಹಿಸುತ್ತಿತ್ತು. ಹತ್ತಿಸಮಿತಿಯ ಸೆಕ್ರೆಟರಿ'ಯಾಗಿದ್ದ ಸರ್ ಬ್ರೈಸ್ ಚಾಡ್ಲೆ ಬರ್ಟ್ ರು, ತಮ್ಮ ಕಾರ್ಯಾವಧಿಯಲ್ಲಿ ಅತ್ಯಂತ ಮಹತ್ತರ ಕೊಡುಗೆಗಳನ್ನು ಕೊಟ್ಟಿದ್ದಾರೆ. ಹತ್ತಿ ಸಂಶೋಧನಾಲಯವನ್ನು ಸ್ಥಾಪಿಸಲು 'ಸರ್ ಬ್ರೈಸ್ ಬರ್ಟ್' ರವರ ಕೊಡುಗೆ ಅನನ್ಯ. ೧೯೨೪ ರಲ್ಲಿ ಮುಂಬೈನಗರದ ಮನೆಗಳಿಗೆ ವಿದ್ಯುತ್ ಸರಬರಾಜು ಮಾಡುತ್ತಿರಲಿಲ್ಲ. ಬೊಂಬಾಯಿನ ಸುಮಾರು ೮೦ ಬಟ್ಟೆ ಗಿರಣಿಗಳ ಯಂತ್ರಗಳು ಹಬೆ ಅಥವಾ ನೀರಿನ ಬಲದಿಂದ ಕೆಲಸ ಮಾಡುತ್ತಿದ್ದವು. ವಿದ್ಯುತ್ ಇಲ್ಲದೆ ಕಾರ್ಖಾನೆಗಳು ದಿನದ ಬೆಳಕಿನಲ್ಲಿ ಮಾತ್ರ ಕೆಲಸ ಮಾಡುತ್ತಿದವು. ಅಂತಹ ಸಮಯದಲ್ಲಿ 'ಸರ್.ಬ್ರೈಸ್ ಬರ್ಟ್' ರವರು ಬೊಂಬಾಯಿನ 'ದಾದರ್ ಮಾಟುಂಗಾ ಜಿಲ್ಲೆ'ಯ 'ಪಾರ್ಸಿ ಕಾಲೋನಿ'ಯಲ್ಲಿ ಒಂದು ಉತ್ತಮವಾದ ಜಾಗವನ್ನು ಆರಿಸಿ, ಅಲ್ಲಿ ಒಂದು ಭವ್ಯವಾದ 'ಲ್ಯಾಬೋರೇಟೊರಿ'ಯನ್ನು ೧೯೨೩ ರಲ್ಲಿ ನಿರ್ಮಿಸಿದರು.

ಚಿತ್ರ:SPINNING LAB(1923).jpg
'ಟೆಕ್ನೊಲಾಜಿಕಲ್ ಲ್ಯಾಬೋರೇಟೊರಿ, ಮಾಟುಂಗ,ಮುಂಬಯಿ'

ಬೊಂಬಾಯಿನಗರದಲ್ಲಿ ಇನ್ನೂ ರಸ್ತೆ, ಮತ್ತು ಮನೆಗಳಲ್ಲಿ ವಿದ್ಯುತ್ ಇಲ್ಲದ ಸಮಯದಲ್ಲಿ ಸೆಂಟ್ರೆಲ್ ಕಾಟನ್ ಕಮಿಟಿಯ ಅಡಿಯಲ್ಲಿ ಸ್ಥಾಪನೆಯಾದ, ಟೆಕ್ನೊಲಾಜಿಕಲ್ ಲ್ಯಾಬೋರೇಟೊರಿಯಲ್ಲಿ ಸ್ಥಾಪಿಸಲಾಗಿದ್ದ ಮೆಶಿನ್ ಗಳು ವಿದ್ಯುತ್ ಸಹಾಯದಿಂದ ಕೆಲಸ ಮಾಡಿದವು. ಕೇವಲ ೩ ವರ್ಷಗಳಲ್ಲಿ ಒಂದು ಸಂಶೋಧನ ಪ್ರಬಂಧವನ್ನು ಪ್ರಕಟಿಸಲಾಯಿತು.

ಜನನ, ವಿದ್ಯಾಭ್ಯಾಸ, ವೃತ್ತಿಜೀವನ

ಬದಲಾಯಿಸಿ

'ಬ್ರೈಸ್ ಚಾಡ್ಲೆ ಬರ್ಟ್' 'ನ್ಯೂವಾರ್ಕ್ ಆನ್ ಟ್ರೆಂಟ್' ನಲ್ಲಿ ೧೮೮೧ ರ ಏಪ್ರಿಲ್, ೨೯ ರಂದು ಜನಿಸಿದರು. ಅವರ ತಂದೆ 'ಐಸಾಕ್ ಬರ್ಟ್', ಚರ್ಚ್ ಹ್ಯಾಮ್ ಗ್ಲಾಸ್ಟರ್ ಶೈರ್ ನ ವಾಸಿ. ಬರ್ಟ್ ತಮ್ಮ, ಪ್ರಾರಂಬಿಕ ಶಿಕ್ಷಣ 'ಬ್ರಿಸ್ಟಲ್ ನ ಮರ್ಚೆಂಟ್ಸ್ ವೆಂಚರ್ಸ್ ಕಾಲೇಜಿ'ನಲ್ಲಿ ನಡೆಯಿತು. ಲಂಡನ್ ನ, ಕೌಂಟಿ ಕೌಸಿಲ್ ನಲ್ಲಿ ವಿದ್ಯಾರ್ಜನೆಗೆ ಹೋದರು. ೧೯೦೧ರಲ್ಲಿ ಪ್ರಥಮ ದರ್ಜೆಯಲ್ಲಿ ಬಿ.ಎಸ್ಸಿ (ರಸಾಯನ ಶಾಸ್ತ್ರ) ಪರೀಕ್ಷೆಯಲ್ಲಿ ತೇರ್ಗಡೆಹೊಂದಿದರು. ೧೯೦೦ ರಲ್ಲಿ 'ಕೆಮಿಸ್ಟ್ರಿ ಪೆವಿಲಿಯನ್' ನಲ್ಲಿ ತಮ್ಮ ಉಪಲಬ್ಧಿಗಳನ್ನು ಪ್ರದರ್ಶಿಸಲು ಸ್ಥಾನ ದೊರೆಯಿತು. ಮುಂದೆ 'ಪ್ರೊಫ಼ೆಸರ್ ಡನನ್' ಮಾರ್ಗದರ್ಶನಲ್ಲಿ ಉನ್ನತ ವ್ಯಾಸಂಗಮಾಡಿ ಸ್ನಾತಕೋತ್ತರ ಪದವಿ ಗಳಿಸಿದರು. ಮುಂದೆ ಸ್ನಾತಕೋತ್ತರೆ ಪದವಿಯನ್ನು ಮಿ. ಕ್ಯಾಂಬೆಲ್ ಬ್ರೌನ್ ರ ಬಳಿ ಮಾಡಿದರು. ಅವರ ಪ್ರಬಂಧ, 'The vapour pressures of Sulphuric acid solutions, and the molecular condition of sulphuric acid in concentrated solution'(J; 1904, 85, 1339) ಬರ್ಟ್ ಪ್ರತಿಭೆಯಿಂದ ಅವರ ಗೆಳೆಯರೆಲ್ಲಾ ಪ್ರಭಾವಿತರಾದರು.

ಟ್ರಿನಿಡಾಡ್ ನಲ್ಲಿ ನೌಕರಿ

ಬದಲಾಯಿಸಿ

೧೯೦೪ ರಲ್ಲಿ ದಕ್ಷಿಣ ಅಮೆರಿಕದ ಬ್ರಿಟಿಷ್ ವಸಾಹತುಗಳಲ್ಲೊಂದಾದ, ಟ್ರಿನಿಡಾಡ್ ಸರ್ಕಾರದಲ್ಲಿ ರಸಾಯನ ಶಾಸ್ತ್ರದ ವಿಷಯದಲ್ಲಿ ಸಹಾಯಕರಾಗಿ ನಿಯುಕ್ತಿಗೊಂಡು ಅಲ್ಲಿ ೩ ವರ್ಷ ದುಡಿದರು. ಆದರೆ 'ಹಳದಿ ಜ್ವರದ ಬಾಧೆ'ಯನ್ನು ತಡೆಯಲಾರದೆ ಅವರು ೧೯೦೮ ರಲ್ಲಿ ಭಾರತ ಸರ್ಕಾರ ದಿಂದ ಬಂದ ಕರೆಯನ್ನು ಮನ್ನಿಸಿ, 'ಇಂಡಿಯನ್ ಅಗ್ರಿಕಲ್ಚರಲ್ ಸೇವೆ'(ICCC Services) ಗೆ ಹೋಗಲು ಒಪ್ಪಿಕೊಂಡರು. ಉತ್ತರ ಭಾರತದ, 'ಯುನೈಟೆಡ್ ಪ್ರಾವಿನ್ಸ್' ನಲ್ಲಿ ಕೃಷಿ ಇಲಾಖೆಯ ಉಪ-ನಿರ್ದೇಶಕರಾಗಿ ನಿಯುಕ್ತರಾದರು. 'ಡಬ್ಲ್ಯು ಎಚ್. ಮೋರ್ ಲ್ಯಾಂಡ್'; ಐ.ಸಿ.ಎಸ್. ರವರ ಕೈಕೆಳಗೆ ಕೆಲಸ ಪ್ರಾರಂಭಿಸಿದರು. ಕಬ್ಬಿನ ತಳಿ, ಸುಧಾರಿಸುವ ಬಗ್ಗೆ ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡರು. ಭಾರತದಲ್ಲಿ ಬೆಳೆಯುತ್ತಿದ್ದ ಸಂಮೃದ್ಧ ಸೆಣಬಿನ ತಳಿಯ ಗುಣಮಟ್ಟವನ್ನು ಸುಧಾರಿಸುವ ಬಗ್ಗೆಯೂ ಸಂಶೋಧನೆ ನಡೆಸಿದರು. ೧೯೧೧ರಲ್ಲಿ 'ಅಲಹಾಬಾದ್' ನಲ್ಲಿ ಒಂದು 'ಕೃಷಿ ಮೇಳ'ವನ್ನು ಆಯೋಜಿಸಿ ಪ್ರದರ್ಶಿಸಿದರು. ಅದುವರೆಗೂ ಕಂಡರಿಯದ ನಾಗರಿಕರು, ಈ ಮೇಳವನ್ನು ಕಂಡು ಹರ್ಷಗೊಂಡರು. ಬರ್ಟ್, ಬಹಳ ಜನಪ್ರಿಯತೆ ಗಳಿಸಿದರು. ಮುಂದೆ 'ಇಂಡಿಯನ್ ಸೆಂಟ್ರೆಲ್ ಕಾಟನ್ ಕಮಿಟಿ'ಯಲ್ಲಿ 'ಪ್ರ ಪ್ರಥಮ ಸೆಕ್ರೆಟರಿ'ಯಾಗಿ ಮಾಡಿದ ಕೆಲಸ ಬಹಳ ಮಹತ್ವದ ಕಾರ್ಯವೆಂದು 'ಬ್ರಿಟಿಷ್ ಸರಕಾರ' ಪರಿಗಣಿಸಿತು. ಭಾರತದ ಚಿಕ್ಕ ತಂತುಗಳ ಹತ್ತಿಯ ಗುಣಮಟ್ಟ ಹಾಗೂ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಬರ್ಟ್ ಮಾಡಿದ ಸೇವೆ ಚಿರಸ್ಮರಣೀಯವಾದದ್ದು.

ಬೊಂಬಾಯಿನ ಟೆಕ್ನೊಲಾಜಿಕಲ್ ಲ್ಯಾಬೊರೇಟೊರಿ

ಬದಲಾಯಿಸಿ

ಎ.ಜೆ.ಟರ್ನರ್, ಲ್ಯಾಬೊರೇಟೊರಿಯ ಪ್ರಥಮ ನಿರ್ದೇಶಕರಾಗಿ, ಮತ್ತು 'ರಾಲ್ಫ್ ರಿಚರ್ಡ್ಸನ್', 'ಮೊಟ್ಟಮೊದಲ ಸ್ಪಿನ್ನಿಂಗ್ ಮಾಸ್ಟರ್' ಆಗಿ, ಅಧಿಕಾರ ಸ್ವೀಕರಿದ ನಂತರ ಭಾರತದ ಹತ್ತಿಯನ್ನು ಉತ್ಪಾದಿಸುವ ರಾಜ್ಯಗಳ ಪ್ರಾಯೋಗಿಕ ಹೊಲಗಳಲ್ಲಿ ಸಂಶೋಧಿತ ತಳಿಗಳನ್ನು 'ಬೊಂಬಾಯಿನ ಟೆಕ್ನೊಲಾಜಿಕಲ್ ಲ್ಯಾಬೊರೇಟೊರಿ'ಗೆ ತಂದು 'ಹತ್ತಿಯ ಗುಣಗಳ ಮೂಲ್ಯಾಂಕನ' ಮಾಡಲಾಗುತ್ತಿತ್ತು. ಒಳ್ಳೆಯ ಸುಧಾರಿತ ಹತ್ತಿಯ ತಳಿಗಳನ್ನು ಹೆಚ್ಚು ಹೆಚ್ಚು ಬೆಳೆಯಲು ಅನುಮಾತಿ ನೀಡಲಾಗುತ್ತಿತ್ತು. 'ಸರ್. ಬ್ರೈಸ್ ಬರ್ಟ್', ಹೀಗೆ 'ಐ.ಸಿ.ಸಿ.ಸಿ. ಸೇವೆ'ಯಲ್ಲಿ ೭ ವರ್ಷ ಸೇವೆಯಲ್ಲಿ ಕೆಲಸಮಾಡಿದರು.೧೯೨೮ ರಲ್ಲಿ 'ಬಿಹಾರಕ್ಕೆ ಕೃಷಿ ನಿರ್ದೇಶಕ'ರಾಗಿ ವರ್ಗವಾಯಿತು. 'ರಾಯಲ್ ಕಮಿಟಿ ಆಫ್ ಇಂಡಿಯನ್ ಅಗ್ರಿಕಲ್ಚರ್', 'ಲಾರ್ಡ್ ಲಿನ್ ಲಿತ್ ಗೊ' ರವರ ನೇತೃತ್ವದಲ್ಲಿ 'ಲಂಡನ್ ನ ಇಂಪೀರಿಯಲ್ ಅಗ್ರಿಕಲ್ಚ್ರಲ್ ಕಮಿಟಿ'ಗೆ ನಿಯುಕ್ತರಾದರು. 'ಇಂಡಿಯನ್ ಜರ್ನಲ್ ಆಫ್ ಕಾಟನ್', ಮತ್ತು ಐ.ಸಿ.ಸಿ.ಸಿ ಯ ವತಿಯಿಂದ ೧೯೩೨ ರಲ್ಲಿ 'ಒಟ್ಟಾವ'ದಲ್ಲಿ ಜರುಗಿದ ಸಮಾವೇಷಕ್ಕೆ ಭಾರತೀಯ ಕೃಷಿ ತಜ್ಞರ ಜೊತೆಗೆ ಪ್ರತಿನಿಧಿಯಾಗಿ ಹೋಗಿದ್ದರು. ೧೯೩೭ ರಲ್ಲಿ ಲಂಡನ್ನಿಗೂ ೧೯೩೫ ರಲ್ಲಿ 'ಇಂಪೀರಿಯಲ್ ಅಗ್ರಿಕಲ್ಚರ್ ವೈಸ್ ಚೇರ್ಮನ್' ೧೯೩೯ ರ ವರೆಗೆ ಆದರು.

ಸನ್ಮಾನ, ಪ್ರಶಸ್ತಿಗಳು

ಬದಲಾಯಿಸಿ
  • ಕೈಸರ್-ಎ-ಹಿಂದ್ ಪದಕ ವಿಜೇತರು (೧೯೧೨);
  • ಮೆಂಬರ್ ಆಫ್ ದ ಆರ್ಡರ್ ಆಫ್ ದ ಬ್ರಿಟಿಷ್ ಎಂಪೈರ್ (MBE) (೧೯೧೯);
  • ಸಿ.ಐ.ಇ. (CIE) (೧೯೩೦); ಮತ್ತು ನೈಟ್ ಪ್ರಶಸ್ತಿ (Knighted,೧೯೩೬)
  • ನ್ಯಾಷನಲ್ ಇನ್ಸ್ಟಿ ಟ್ಯೂಟ್ ಸೈನ್ಸಸ್ ಆಫ್ ಇಂಡಿಯ ಕ್ಕೆ ಏಡಿಟೋರಿಯಲ್ ಬೋರ್ಡ್ ಗೆ ಛೇರ್ಮನ್ (Member of council of the National institute of Sciences of India), ಆಗಿ ಸೇವೆ ಸಲ್ಲಿಸಿದರು.[]

ಲಂಡನ್ ಗೆ ವಾಪಸ್ಸಾದರು

ಬದಲಾಯಿಸಿ

ಬ್ರೈಸ್ ಬರ್ಟ್, ಲಂಡನ್ ಗೆ ಹೋಗಿ 'ಅನಿಮಲ್ ಫೀಡಿಂಗ್ ಬೋರ್ಡ್ ನ ಡೈರೆಕ್ಟರ್' (Incharge of Animal feeding stuffs division of Ministry of Food) ಆಗಿ ೧೯೪೨ ರ ವರೆಗೆ ದುಡಿದರು. ಬರ್ಟ್ ರವರ ಆರೋಗ್ಯ ಬಹಳ ಕೆಟ್ಟಿತ್ತು. ಕೊನೆಗೆ, ೧೯೪೩ ರ ಜನವರಿ ೨ ರಂದು ವಿಧಿವಶರಾದರು.

ಉಲ್ಲೇಖಗಳು

ಬದಲಾಯಿಸಿ
  1. . 'Publishing journals, books, and databases',
  2. "Deceased Fellow, Indian Science National Academy". Archived from the original on 2016-08-13. Retrieved 2016-06-06.