ಸರ್ಕಾರಿ ಕಲಾ ಕಾಲೇಜು, ಅಂಬೇಡ್ಕರ್ ವೀಧಿ
ಸರ್ಕಾರಿ ಕಲಾ ಕಾಲೇಜು ಬೆಂಗಳೂರಿನ ಹೃದಯ ಭಾಗದಲ್ಲಿ ಅಂಬೇಡ್ಕರ್ ವೀಧಿಯಲ್ಲಿ ನೆಲೆಗೊಂಡಿರುವ ಐತಿಹಾಸಿಕ ಕಟ್ಟಡವಾಗಿದೆ. ಬ್ರಿಟೀಷ್ ಭಾರತದ ಆಳ್ವಿಕೆಯಲ್ಲಿ ಇದನ್ನು ಸ್ಥಾಪಿಸಲಾಯಿತು. ಆರಂಭದಲ್ಲಿ ಇದನ್ನು ಹೈಸ್ಕೂಲ್ ಎಂತಲೂ ನಂತರ 1927 ರಲ್ಲಿ ಇದನ್ನು ಇಂಟರ್‌ಮೀಡಿಯೇಟರ್ ಕಾಲೇಜು ಎಂತಲೂ ಕರೆಯಲಾಯಿತು.
ಸರ್ಕಾರಿ ಕಲಾ ಕಾಲೆಜು | |
---|---|
ಹಳೆಯ ಹೆಸರುಗಳು | ಹೈ ಸ್ಕೂಲ್, ಇಂಟರ್‌ಮೀಡಿಯೇಟ್ ಕಾಲೇಜು |
ಸಾಮಾನ್ಯ ಮಾಹಿತಿ | |
ವಿಳಾಸ | ಅಂಬೇಡ್ಕರ್ ವೀಧಿ, ಬೆಂಗಳೂರು, ಕರ್ನಾಟಕ |
ತೆರೆಯುವ ದಿನಾಂಕ | 1886 |
Technical details | |
ಮಹಡಿಯ ಜಾಗ | 2 |
ಜಾಲ ತಾಣ | |
https://www.gfgc.kar.nic.in/gac |
ಧ್ಯೇಯ
ಬದಲಾಯಿಸಿನೈತಿಕ ಉನ್ನತ ಕಲಿಕೆಯ ಮೂಲಕ ಸಾಮಾಜಿಕ ನ್ಯಾಯ, ಸಹಿಷ್ಣುತೆ ಮತ್ತು ಸಾರ್ವತ್ರಿಕ ಜ್ಞಾನ ಮೂಡಿಸಿವುದು. ಅದರ ಮೂಲಕ ಮುಂದಿನ ತಲೆಮಾರಿನ ಕಲಿಯುವವರನ್ನು ಕ್ರಿಯಾತ್ಮಕ ಮತ್ತು ಸಶಕ್ತ ಯುವಶಕ್ತಿಯಾಗಿ ಪರಿವರ್ತಿಸಲು ಉತ್ತೇಜಿಸುವುದು.[೧]
ವಿಭಾಗಗಳು
ಬದಲಾಯಿಸಿಕಲಾ ವಿಭಾಗ
ಬದಲಾಯಿಸಿ- ಇತಿಹಾಸ ವಿಭಾಗ
- ರಾಜ್ಯಶಾಸ್ತ್ರ ವಿಭಾಗ
- ಅರ್ಥಶಾಸ್ತ್ರ ವಿಭಾಗ
- ಕನ್ನಡ ಅಧ್ಯಯನ ವಿಭಾಗ
- ಆಂಗ್ಲ ಅಧ್ಯಯನ ವಿಭಾಗ
- ಸಮಾಜಶಾಸ್ತ್ರ ವಿಭಾಗ
- ಪತ್ರಿಕೋದ್ಯಮ ಮತ್ತು ದೃಶ್ಯಕಲಾ ವಿಭಾಗ
- ಭೂಗೋಳಶಾಸ್ತ್ರ ವಿಭಾಗ
ಉದ್ಧೇಶಗಳು
ಬದಲಾಯಿಸಿ- ಉನ್ನತ ಶಿಕ್ಷಣ ಕಲಿಯುವವರಿಗೆ ಆರೋಗ್ಯಕರ ಮತ್ತು ಸಂಶೋಧನಾ ಸ್ನೇಹಿ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸುವುದು.
- ವಯುಕ್ತಿಕ ಕೌಶಲ್ಯವನ್ನು ವೃದ್ಧಿಸುವ ಮೂಲಕ ಎಲ್ಲರಿಗೂ ಸಮಾನ ಅವಕಾಶಗಳನ್ನೊದಗಿಸುವುದು.
- ಶಿಕ್ಷಣದಲ್ಲಿ ಪಾರದರ್ಶಕತೆಯನ್ನು ಕಾಪಾಡುವುದು.
ಪ್ರಶಸ್ತಿಗಳು
ಬದಲಾಯಿಸಿNAAC ನಿಂದ ʼಬಿ++ʼ ಮಾನ್ಯತೆಯನ್ನು ಪಡೆದಿದೆ.