ಸರಸ್ವತಿ ವಿಶ್ವೇಶ್ವರ

ಭಾರತೀಯ ವಿಜ್ಞಾನಿ

ಸರಸ್ವತಿ ವಿಶ್ವೇಶ್ವರ (30 ಏಪ್ರಿಲ್ 1946)[]ರವರು ಭಾರತದ ಜೈವಿಕ ಭೌತಶಾಸ್ತ್ರ ತಜ್ಞರು.ಇವರು ಭಾರತೀಯ ವಿಜ್ಞಾನ ಕೇಂದ್ರ, ಬೆಂಗಳೂರು ಇಲ್ಲಿಯ ಜೈವಿಕ ಭೌತಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು, ಇದೀಗ್ ನಿವೃತ್ತಿಯಾಗಿದ್ದಾರೆ. ಇವರು ಜೀವಶಾಸ್ತ್ರ ಗಣನೆ ಮತ್ತು ಜೈವಿಕ ವ್ಯವಸ್ಥೆಗಳ ರಚನೆ-ಕಾರ್ಯ ಸಂಬಂಧ ಪಟ್ಟ ವಿಷಯಗಳಿಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.[]ಡಾ. ಸರಸ್ವತಿಯವರ ಸಂಶೋಧನೆಯು ಗಣಿತಶಾಸ್ತ್ರದ ತಂತ್ರಗಳನ್ನು ಉಪಯೋಗಿಸಿಕೊಂಡು, ಸ್ಥೂಲ ಅಣು ಮತ್ತು ಪ್ರೋಟೀನ್‍ಗಳನ್ನು ಅರ್ಥ ಮಾಡಿಕೊಳ್ಳುವ ಕ್ಷೇತ್ರದಲ್ಲಿ ಮಹತ್ವದ್ದು.[]

ಸರಸ್ವತಿ ವಿಶ್ವೇಶ್ವರ
ಜನನ೩೦ ಏಪ್ರಿಲ್ ೧೯೪೬
ಕಾರ್ಯಕ್ಷೇತ್ರಗಳುಜೈವಿಕ ಭೌತವಿಜ್ಞಾನ
ಸಂಸ್ಥೆಗಳುಭಾರತೀಯ ವಿಜ್ಞಾನ ಕೇಂದ್ರ ಬೆಂಗಳೂರು
ಅಭ್ಯಸಿಸಿದ ಸಂಸ್ಥೆಬೆಂಗಳೂರು ವಿಶ್ವವಿದ್ಯಾಲಯ
ಸಿಟಿ ಯುನಿವರ್ಸಿಟಿ ಆಫ್ ನ್ಯೂಯಾರ್ಕ್ (ಪಿಎಚ್‍ಡಿ)
ಡಾಕ್ಟರೆಟ್ ಸಲಹೆಗಾರರುಡೇವಿಡ್ ಬೆವರಿಡ್ಜ್

ವಿದ್ಯಾಭ್ಯಾಸ

ಬದಲಾಯಿಸಿ

ಸರಸ್ವತಿಯವರು ತಮ್ಮ ಬಿ.ಎಸ್ಸಿ ಮತ್ತು ಎಂ.ಎಸ್ಸಿ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮುಗಿಸಿದರು. ಎಂ.ಎಸ್ಸಿಯ ನಂತರ ಸಿಟಿ ಯುನಿವರ್ಸಿಟಿ ಆಫ್ ನೂಯಾರ್ಕ್ ನಲ್ಲಿ ಜೀವ ರಸಾಯನಶಾಸ್ತ್ರದಲ್ಲಿ, ಡಾ. ಡೇವಿಡ್ ಬೇವರಿಡ್ಜ್ ರ ಮಾರ್ಗದರ್ಶನದಲ್ಲಿ ಪಿ.ಹಚ್.ಡಿ ಪದವಿಯನ್ನು ಪಡೆದರು ಕ್ವಾಂಟಮ್ ಕೆಮಿಸ್ಟ್ರಿ ಎಂಬ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದರು. ಡಾ. ಸರಸ್ವತಿ ಅದೇ ಸಮಯದಲ್ಲಿ, ೧೯೯೮ರ ನೊಬೆಲ್ ಪ್ರಶಸ್ತಿ ಪಡೆದ ಡಾ. ಜಾನ್ ಪಾಪಲ್ ರ ಅಡಿಯಲ್ಲಿ ಕ್ವಾಂಟಂ ರಸಾಯನಶಾಸ್ತ್ರವನ್ನು ಅಭ್ಯಸಿಸಿದರು. ಆ ಕಾಲದಿಂದಲೂ, ಡಾ. ಸರಸ್ವತಿ ರಸಾಯನ ಶಾಸ್ತ್ರ, ಜೀವಶಾಸ್ತ್ರ ಮತ್ತು ಭೌತಶಾಸ್ತ್ರದ ಜಂಟಿ ಅಧ್ಯಯನದ ಮುಂದಾಳುವಾಗಿದ್ದರು.

ಸಂಶೋಧನೆ

ಬದಲಾಯಿಸಿ

ಡಾ. ಸರಸ್ವತಿ ಪ್ರೋಟೀನ್ ಗಳ ಸಂರಚನೆ, ಪ್ರೋಟೀನ್ ನೊಳಗೆ ಇರುವ ಕಣಗಳು ಪರಸ್ಪರ ಹೇಗೆ ಬೆರೆತುಕೊಂಡಿರುತ್ತವೆ ಮತ್ತು ಅವು ಹೇಗೆ ಕೊಂಡಿಯಾಗಿ ಬೆಸೆದುಕೊಂಡು ಇರುತ್ತವೆ ಎಂಬುದನ್ನು ಕಂಪ್ಯೂಟೇಷನಲ್ ಬಯಾಲಜಿ (ಗಣಕೀಯ ಜೀವಶಾಸ್ತ್ರ)ದ ಮೂಲಕ ಸಂಶೋಧನೆ ಮಾಡುವ ಪ್ರಯೋಗಶಾಲೆಯಲ್ಲಿ ದುಡಿಯುತ್ತಲಿದ್ದಾರೆ. [] ಡಾ. ವಸುಂಧರಾ ಗಡಿಯಾರಂ ಮತ್ತು ತಮ್ಮ ಪುತ್ರಿ ಡಾ. ಸ್ಮಿತಾರೊಡಗೂಡಿ ಪ್ರೋಟೀನ್ ರಚನೆಯ ಬಗ್ಗೆ ಬರೆದ ಸಂಶೋಧನಾ ಕೃತಿ [] ವಿದ್ವತ್ ಮನ್ನಣೆಗೆ ಪಾತ್ರವಾಗಿದೆ. ಡಾ. ಸರಸ್ವತಿಯವರ ಪ್ರಬಂಧಗಳ ಪಟ್ಟಿ ರಿಸರ್ಚ್ ಗೇಟ್ ನಲ್ಲಿ ಕಾಣಬಹುದು.[]

ವೈಯಕ್ತಿಕ ಜೀವನ

ಬದಲಾಯಿಸಿ

ಸರಸ್ವತಿಯವರ ಪತಿ ಡಾ.ಸಿ.ವಿ.ವಿಶ್ವೇಶ್ವರ, ಭೌತಶಾಸ್ತ್ರಜ್ಞ ಮತ್ತು ಭಾರತದಲ್ಲಿ ಕಪ್ಪು ರಂಧ್ರ ಮನುಷ್ಯ ಎಂದು ಪ್ರಸಿದ್ಧರಾಗಿದ್ದರು. ಡಾ. ವಿಶ್ವೇಶ್ವರ, ಬೆಂಗಳೂರಿನ ತಾರಾಲಯದ ನಿರ್ದೇಶಕರಾಗಿ ದಶಕಗಳ ಕಾಲ ಸೇವೆ ಸಲ್ಲಿಸಿದ್ದರು.[] ಇವರು ೨೦೧೭ರಲ್ಲಿ ಮರಣ ಹೊಂದಿದರು.
ಡಾ. ಸರಸ್ವತಿಯವರ ಪುತ್ರಿ ಡಾ. ಸ್ಮಿತಾ ವಿಶ್ವೇಶ್ವರ ಕೂಡಾ, ತಾಯಿಯಂತೆಯೇ ಗಣಕೀಯ ಜೀವಶಾಸ್ತ್ರ ಮತ್ತು ಭೌತಶಾಸ್ತ್ರದ ತಜ್ಞರು.

ಇವರು ಡಾಕ್ಟರೇಟ್ ನ ನಂತರ ಪಿಟ್ಸ್‌ಬರ್ಗ್‌ನ ಕಾರ್ನೆಗೀ ಮೆಲಾನ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಸಹೋದ್ಯೋಗಿಯಾದರು. ಅವರು ಪ್ರಸಿದ್ಧ ಕ್ವಾಂಟಮ್ ರಸಾಯನಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಜಾನ್ ಪೋಪ್ಲೆ ಅವರೊಂದಿಗೆ ಕೆಲಸ ಮಾಡಿದರು. ಅವರು ಭಾರತಕ್ಕೆ ಮರಳಿದರು ಮತ್ತು ಆಣ್ವಿಕ ಬಯೋಫಿಸಿಕ್ಸ್ ಘಟಕದಲ್ಲಿ ಪೋಸ್ಟ್‌ಡಾಕ್ಟರಲ್ ಫೆಲೋ ಆಗಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ಗೆ ಸೇರಿದರು. ಅವರು ಅಧ್ಯಾಪಕ ಸದಸ್ಯರು ಮತ್ತು ಪ್ರಾಧ್ಯಾಪಕರಾದರು.[]

ಉಲ್ಲೇಖಗಳು

ಬದಲಾಯಿಸಿ