ಸರಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯ, ಝಳಕಿ, ಇಂಡಿ, ವಿಜಾಪುರ

ಸರಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯವು ಬಿಜಾಪುರ ಜಿಲ್ಲೆಯ ಝಳಕಿ ನಗರದಲ್ಲಿ ೨೦೧೦ರಲ್ಲಿ ಪ್ರಾರಂಭವಾಗಿದೆ. ಇದು ಸಂಪೂರ್ಣ ಕರ್ನಾಟಕ ಸರಕಾರದ ಅಧೀನದಲ್ಲಿದೆ. ಮಹಾವಿದ್ಯಾಲಯವು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ನವದೆಹಲಿ)ಯಿಂದ ಮಾನ್ಯತೆ ಪಡೆದಿದೆ.

ಸರಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯ, ಝಳಕಿ
ಸ್ಥಾಪನೆ೨೦೧೦
ಸ್ಥಳಸೋಲಾಪುರ ರಸ್ತೆ, ಝಳಕಿ, ಬಿಜಾಪುರ
ವಿದ್ಯಾರ್ಥಿಗಳ ಸಂಖ್ಯೆ೫೦೦

ವಿಭಾಗಗಳು ಬದಲಾಯಿಸಿ

  1. ವಾಹನ ಎಂಜಿನಿಯರಿಂಗ್
  2. ಸಿವಿಲ್ ಎಂಜಿನಿಯರಿಂಗ್
  3. ಗಣಕಯಂತ್ರ ವಿಜ್ಞಾನ ಎಂಜಿನಿಯರಿಂಗ್
  4. ವಿದ್ಯುತ್ ಮತ್ತು ವಿದುನ್ಮಾನ ಎಂಜಿನಿಯರಿಂಗ್
  5. ವಿದ್ಯುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್
  6. ಯಾಂತ್ರಿಕ ಎಂಜಿನಿಯರಿಂಗ್

ಆವರಣ ಬದಲಾಯಿಸಿ

ಮಹಾವಿದ್ಯಾಲಯವು ೨೦ ಎಕರೆ ವಿಶಾಲವಾದ ಆವರಣ ಹೊಂದಿದೆ. ಆವರಣದಲ್ಲಿ ಕ್ರಿಕೇಟ್, ಟೆನ್ನಿಸ್, ಕಾಲ್ಚಂಡು ಮೈದಾನ ಇದೆ.

ಗ್ರಂಥಾಲಯ ಬದಲಾಯಿಸಿ

ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರವು ಸಾವಿರಾರು ಎಲ್ಲ ವಿಭಾಗದ ಪುಸ್ತಕಗಳನ್ನು ಹೊಂದಿದೆ. ವೈಜ್ಞಾನಿಕ ಹಾಗೂ ತಾಂತ್ರಿಕ ದೈನಿಕ, ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳು ಉಂಟು. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ನಿಯತಕಾಲಿಕಗಳು ಸಿಗುತ್ತವೆ.

ಪ್ರವೇಶ ಬದಲಾಯಿಸಿ

ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ (೧೦+೨) ವಿಜ್ಞಾನ ವಿಭಾಗ, ಕಲಾ ವಿಭಾಗ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಪ್ರವೇಶವಿದೆ.