ಸಮಾಧಾನ ಶಬ್ದವು ಒಂದು ಸಂಸ್ಕೃತ ನಾಮಪದವಾಗಿದೆ. ಇದು ಸಮಾಧಾ ಎಂಬ ಶಬ್ದದಿಂದ ವ್ಯುತ್ಪನ್ನವಾಗಿದೆ ಮತ್ತು ಇದು ಒಟ್ಟಾಗಿಸುವುದು, ಒಂದಾಗಿಸುವುದು, ಆತ್ಮದ ನೈಜ ಸ್ವರೂಪದ ಮೇಲಿನ ಅಮೂರ್ತ ಆಲೋಚನೆಯಲ್ಲಿ ಮನಸ್ಸನ್ನು ತೊಡಗಿಸುವುದು, ಏಕತೆಯನ್ನು ಚಿಂತಿಸುವುದು, ಏಕಾಗ್ರ ಅಥವಾ ರೂಪವಿಲ್ಲದ ಧ್ಯಾನ, ಬದ್ಧತೆ, ಮಗ್ನತೆ, ಸ್ಥಿರತೆ, ಶಾಂತತೆ, ಮನಃಶಾಂತಿ, ಸಂಪೂರ್ಣ ಏಕಾಗ್ರತೆ, ಅನುಮಾನವನ್ನು ಬಗೆಹರಿಸುವುದು ಅಥವಾ ಪೂರ್ವಪಕ್ಷಕ್ಕೆ ಉತ್ತರ ನೀಡುವುದು, ಒಪ್ಪುವುದು ಅಥವಾ ಮಾತು ಕೊಡುವುದು, ಮೊದಲಿನ ಘಟನೆ, ಒಂದು ಹೇಳಿಕೆಯ ಸಮರ್ಥನೆ, ಸಾಕ್ಷ್ಯಾಧಾರ, ಸಾಮರಸ್ಯ ಅಥವಾ ಅತ್ಯಾಸಕ್ತಿ ಎಂದು ವಿವಿಧ ಅರ್ಥಗಳನ್ನು ಕೊಡುತ್ತದೆ.[]

ಮನಸ್ಸಿನ ಏಕಾಗ್ರತೆಯನ್ನು ಅಭಿವೃದ್ಧಿಪಡಿಸುವ ಸಮಾಧಾನವು ಸತ್ಯವನ್ನು ಅರಸುವವನು ಎಲ್ಲ ಸ್ವಾರ್ಥಗಳಿಂದ ನಿರ್ಲಿಪ್ತತೆಯ ಮನೋಭಾವವನ್ನು ಅಭ್ಯಾಸ ಮಾಡಿಕೊಳ್ಳುವುದಕ್ಕಾಗಿ ಬೆಳೆಸಿಕೊಳ್ಳಬೇಕೆಂದು ಅಪೇಕ್ಷಿಸಲಾಗುವ ಆರು ಸದ್ಗುಣಗಳಲ್ಲಿ ಒಂದಾಗಿದೆ (ಷಡ್ ಸಂಪತ್); [] ಇದು ಒಂದೇ ಬಿಂದುವಿನ ಮೇಲೆ ಮನಸ್ಸನ್ನು ಹಿಡಿದಿಡುವ ಸಾಮರ್ಥ್ಯವನ್ನು ಬೆಳೆಸುತ್ತದೆ.[] ಈ ಅರ್ಹತೆಯನ್ನು ಸಾಧಿಸಲು ಮನಸ್ಸನ್ನು ಸಾಕಷ್ಟು ತರಬೇತಿಗೊಳಿಸಬೇಕಾಗುತ್ತದೆ. []

ಉಲ್ಲೇಖಗಳು

ಬದಲಾಯಿಸಿ
  1. V.S.Apte. The Practical Sanskrit-English Dictionary. Digital Dictionaries of South Asia. p. 1633.
  2. Debabrata Sen Sharma. The Philosophy of Sadhana. SUNY Press. p. 74.
  3. Swamini Nityananda. Fire of Freedom. Trafford Publishing. p. 78.
  4. Swami Chinmayananda. Self Unfoldment. Chinmaya Mission Trust. p. 119.


"https://kn.wikipedia.org/w/index.php?title=ಸಮಾಧಾನ&oldid=1129935" ಇಂದ ಪಡೆಯಲ್ಪಟ್ಟಿದೆ