ಜೈನ ಧರ್ಮದಲ್ಲಿ, ಸಮವಸರಣ ಅಥವಾ ಸಮೋಶರಣ ಎಂದರೆ ತೀರ್ಥಂಕರನ ಪವಿತ್ರ ಉಪದೇಶ ಸಭಾಂಗಣ. ಸಮವಸರಣ ಶಬ್ದವು ಎರಡು ಶಬ್ದಗಳಿಂದ ವ್ಯುತ್ಪನ್ನವಾಗಿದೆ, ಸಮ ಎಂದರೆ ಸಾಮಾನ್ಯ ಮತ್ತು ಅವಸರ ಎಂದರೆ ಅವಕಾಶ. ಇದು ಜ್ಞಾನ ಪಡೆಯಲು ಎಲ್ಲರಿಗೂ ಅವಕಾಶವಿರುವ ಸ್ಥಳ.[೧] ತೀರ್ಥಂಕರನು ಕೇವಲ ಜ್ಞಾನವನ್ನು (ಸರ್ವಜ್ಞತೆ) ಪಡೆದ ಮೇಲೆ ಈ ಪವಿತ್ರ ಮಂಟಪವನ್ನು ದೇವತೆಗಳು ನಿರ್ಮಿಸುತ್ತಾರೆ. ಸಮವಸರಣಗಳ ವಿಷಯವು ಜೈನ ಕಲೆಯಲ್ಲಿ ಜನಪ್ರಿಯವಾಗಿದೆ.

ತೀರ್ಥಂಕರನ ಸಮವಸರಣ

ಪ್ರಭಾವಗಳುಸಂಪಾದಿಸಿ

ಸಮವಸರಣದಲ್ಲಿ, ತೀರ್ಥಂಕರರು ಪೂರ್ವಾಭಿಮುಖವಾಗಿ ಕುಳಿತಿರುತ್ತಾರೆ, ಆದರೆ ಎಲ್ಲ ದಿಕ್ಕುಗಳಲ್ಲಿ ನೋಡುತ್ತಿರುವಂತೆ ಕಾಣುತ್ತಾರೆ. ಜೈನ ತತ್ತ್ವಶಾಸ್ತ್ರವನ್ನು ಸರಳ ಪದಗಳಲ್ಲಿ ಬೋಧಿಸುವಾಗ ತೀರ್ಥಂಕರರು ಕಮಲ ಪೀಟದ ಮೇಲೆ ಗಾಳಿಯಲ್ಲಿ ಕುಳಿತುಕೊಳ್ಳುತ್ತಾರೆ. ಪ್ರವಚನವನ್ನು ಎಲ್ಲ ಮನುಷ್ಯರು ಮತ್ತು ಪ್ರಾಣಿಗಳು ಅರ್ಥಮಾಡಿಕೊಳ್ಳಬಹುದು. ಕೇಳುವ ಎಲ್ಲ ಜೀವಿಗಳು ಕಡಿಮೆ ಹಿಂಸಾತ್ಮಕ ಮತ್ತು ಕಡಿಮೆ ಆಸೆಬುರುಕರಾಗುತ್ತಾರೆಂದು ಜೈನ ಧರ್ಮಗ್ರಂಥಗಳು ಹೇಳುತ್ತವೆ. ತೀರ್ಥಂಕರನ ಭಾಷಣವನ್ನು ಉಪಸ್ಥಿತರಿರುವ ಪ್ರತಿಯೊಬ್ಬರೂ ಸ್ಪಷ್ಟವಾಗಿ ಕೇಳಿಸಿಕೊಳ್ಳುತ್ತಾರೆ.

ಉಲ್ಲೇಖಗಳುಸಂಪಾದಿಸಿ

  1. Jain 2008, p. 97.
"https://kn.wikipedia.org/w/index.php?title=ಸಮವಸರಣ&oldid=1001036" ಇಂದ ಪಡೆಯಲ್ಪಟ್ಟಿದೆ