ಸಭಾಕಂಪ (ರಂಗಭಯ, ಪ್ರದರ್ಶನ ಆತಂಕ) ಎಂದರೆ ವಾಸ್ತವವಾಗಿ ಅಥವಾ ಸಂಭಾವ್ಯವಾಗಿ (ಉದಾಹರಣೆಗೆ, ಕ್ಯಾಮರದ ಮುಂದೆ ಪ್ರದರ್ಶಿಸುವಾಗ) ಪ್ರೇಕ್ಷಕರ ಮುಂದೆ ಪ್ರದರ್ಶಿಸುವ ಅಗತ್ಯದಿಂದ ಒಬ್ಬ ವ್ಯಕ್ತಿಯಲ್ಲಿ ಪ್ರಚೋದಿತವಾಗಬಹುದಾದ ಆತಂಕ, ಭಯ, ಅಥವಾ ನಿರಂತರ ಫೋಬಿಯಾ. ಪರಿಚಿತವಲ್ಲದ ಪ್ರೇಕ್ಷಕರ ಮುಂದೆ ಪ್ರದರ್ಶಿಸುವುದು ಪರಿಚಿತ ಮುಖಗಳ ಮುಂದೆ ಪ್ರದರ್ಶಿಸುವುದಕ್ಕಿಂತ ಗಣನೀಯವಾಗಿ ಹೆಚ್ಚು ಆತಂಕವನ್ನು ಉಂಟುಮಾಡಬಹುದು. ಕೆಲವು ಸಂದರ್ಭಗಳಲ್ಲಿ, ವ್ಯಕ್ತಿಯು ಇದರಿಂದ ಅಂತಹ ಯಾವುದೇ ಭಯವನ್ನು ಅನುಭವಿಸುವುದಿಲ್ಲ, ಆದರೆ ಅವರು ಯಾರಿಗಾಗಿ ಪ್ರದರ್ಶಿಸುತ್ತಿದ್ದೇವೆ ಎಂದು ತಿಳಿಯದೆ ನರಳಬಹುದು. ಸಾರ್ವಜನಿಕ ಭಾಷಣದ ವಿಷಯದಲ್ಲಿ, ಸಾರ್ವಜನಿಕ ಸ್ವ-ಪ್ರದರ್ಶನವನ್ನು ಒಳಗೊಳ್ಳುವ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಕೆಯ ಮೊದಲು ಅಥವಾ ಅದರ ಜೊತೆಗೆ ಇರಬಹುದು.

ಮೂಲಗಳು

ಬದಲಾಯಿಸಿ
  • "Beyond shyness and stage fright: Social anxiety disorder". Harvard Mental Health Letter. 4 April 2010. Retrieved December 8, 2012.
  • Dale, Cyphert (2005). "Managing Stage Fright". Retrieved 10 December 2012.
"https://kn.wikipedia.org/w/index.php?title=ಸಭಾಕಂಪ&oldid=922417" ಇಂದ ಪಡೆಯಲ್ಪಟ್ಟಿದೆ