ಸದ್ಬೋಧ ಚಂದ್ರಿಕೆ, ಕನ್ನಡ ಮಾಸಪತ್ರಿಕೆ
ಸದ್ಬೋಧ ಚಂದ್ರಿಕೆ, [೧]ಶತಮಾನೋತ್ಸವ," ವನ್ನು ಆಚರಿಸುತ್ತಿರುವ 'ಕನ್ನಡ, ಧಾರ್ಮಿಕ, ಸಾಹಿತ್ಯಿಕ ಮಾಸಿಕಪತ್ರಿಕೆ'. ಇದರ ಸ್ಥಾಪಕರು, ಸುವಿಖ್ಯಾತ ಕಾದಂಬರಿಕಾರ, 'ಹೊಸಗನ್ನಡದ ಗದ್ಯ ಪ್ರವರ್ತ,' ಕರೆಂದು ಖ್ಯಾತಿಗಳಿಸಿದ, 'ಗಳಗನಾಥ'ರು. ೧೯೦೭ ರಲ್ಲಿ, 'ಶ್ರೀ ಶೇಷಾಚಲ ಸದ್ಗುರು,' ಗಳಿಂದ ಸ್ಥಾಪಿತವಾದ, ಮಾಸಪತ್ರಿಕೆ, 'ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಸುವರ್ಣ ಕರ್ನಾಟಕ', ವರ್ಷದಲ್ಲಿ ಪಡೆದುಕೊಂಡಿದೆ. 'ಅಗಡಿ'ಯ 'ಆನಂದವನ,' ದಿಂದ ಪ್ರಕಾಶಿತ, 'ಚಿದಂಬರ ಚಕ್ರವ'ರ್ತಿಗಳು ಸಂಪಾದಕರು ಹಾಗೂ ಸಂರಕ್ಷಕರು. ಆಗಿನ ಕಾಲದ ಕಲ್ಲಚ್ಚಿನಲ್ಲಿ ಮುದ್ರಿತವಾದ ಸುಮಾರು ೪೦ ಪುಟಗಳ ಪತ್ರಿಕೆಯ ಬೆಲೆ, ೪ ಆಣೆಗಳಾದರೆ, ಇಂದಿಗೂ ಅಷ್ಟೇ ಪುಟಗಳಲ್ಲಿ 'ಆಧುನಿಕ ಆಫ್ ಸೆಟ್ ಹೊಸವಿನ್ಯಾಸ'ದಲ್ಲಿ ಪ್ರಕಟಿತಗೊಳ್ಳುತ್ತಿರುವ ಈ ಮಾಸಪತ್ರಿಕೆಯ ಬೆಲೆ, ೧೦ ರೂಪಾಯಿಗಳು. ಹಿಂದಿನಂತೆ ಇಂದಿಗೂ ಆಸಕ್ತ ಓದುಗರ ಸಂಖ್ಯೆ ೭ ಸಾವಿರವಿದೆ. ಇದು ಸ್ವಲ್ಪ ಹೆಚ್ಚುತ್ತಲೇ ಹೋಗುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಚಳುವಳಿಗೆ ಬೆಂಬಲ ನೀಡಿದ ಈ ಪತ್ರಿಕೆ, ಗಡಿನಾಡು ಭಾಷಾವಾರು ಹೋರಾಟಗಳಲ್ಲೂ ಜನರನ್ನು ಹುರಿದುಂಬಿಸುವ ಕಾರ್ಯದಲ್ಲಿ ಸಫಲವಾಗಿದೆ. ಬಹುತೇಕ ಸುಪ್ರಸಿದ್ಧ ಸಾಹಿತಿಗಳು ಈ ಪತ್ರಿಕೆಯಿಂದ ಪ್ರೇರಣೆ ಪಡೆದಿದ್ದರಲ್ಲದೆ, ಅವರಿಗೆಲ್ಲಾ ಇದೊಂದು ವೇದಿಕೆಯನ್ನು ಕಲ್ಪಿಸಿಕೊಟ್ಟಿತ್ತು. ವರಕವಿ, ದ.ರಾ.ಬೇಂದ್ರೆಯವರು, ಈ ವಿಶಯಗಳನ್ನು ತಮ್ಮ ಕೆಲವು ಕೃತಿಗಳಲ್ಲಿ ಸ್ಮರಿಸಿಕೊಂಡಿದ್ದಾರೆ.
ಈಗಿನ ಸಂಪಾದಕರು
ಬದಲಾಯಿಸಿ" ಸದ್ಬೋಧ ಚಂದ್ರಿಕೆ," ಯ ಈಗಿನ ವ್ಯವಸ್ಥಾಪಕ ಸಂಪಾದಕರು, ವೆಂಕಟೇಶ್ ಚಕ್ರವರ್ತಿ, ಹಾಗೂ ಗುರುದತ್ತ ಚಕ್ರವರ್ತಿ, ಉಪಸಂಪಾದಕರಾಗಿ, ಪತ್ರಿಕೆಯ ಪ್ರಕಟಣೆಯ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. "ಈ ಪತ್ರಿಕೆಯ ಶತಮಾನದ ಅಸ್ತಿತ್ವಕ್ಕೆ ಕಾರಣರಾದವರು, ಕರ್ನಾಟಕದ ಆಸ್ತಿಕ ಬಂಧುಗಳು. ಪತ್ರಿಕೆ ದೀರ್ಘಕಾಲ ಬಾಳಬೇಕು. ನಾಡಿನ ಜನತೆಯ ಮನ-ಮನೆಗಳನ್ನು ಬೆಳಗಬೇಕು. ಸದ್ವಿಚಾರಗಳಿಗೆ ಸೋಲಿಲ್ಲ, " ಎಂಬ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಅವರು ದುಡಿಯುತ್ತಿದ್ದಾರೆ.
ಗಳಗನಾಥರ ಕೊಡುಗೆ
ಬದಲಾಯಿಸಿಸರಕಾರಿ ನೌಕರರಾಗಿದ್ದ ಗಳಗನಾಥರು ಕಾನೂನಿನ ಪ್ರಕಾರ ಒಬ್ಬ ಸರಕಾರಿ ನೌಕರ ನೇರವಾಗಿ ಪತ್ರಿಕೆಯನ್ನು ನಡೆಸಲು ಅನುಮತಿ ಇಲ್ಲದಿದ್ದರಿಂದ, ಪರೋಕ್ಷವಾಗಿ ಅವರು ತಮ್ಮ ಪ್ರಿಯ ಸ್ನೇಹಿತರ ಸಹಾಯ, ಸಹಕಾರದಿಂದ ಪತ್ರಿಕೆಯನ್ನು ಚೆನ್ನಾಗಿ ನಡೆಸಿಕೊಂಡು ಹೋದರು. 'ಗಳಗನಾಥರು', ಹಾಗೂ, 'ವೈ. ಜಿ. ಕುಲಕರ್ಣಿ,' ಯವರು, "ಸದ್ಬೋಧಚಂದ್ರಿಕೆ," ಯನ್ನು, ಕೈಹಿಡಿದು ದೀರ್ಘಕಾಲ, ನಡೆಸಿಕೊಂಡುಬಂದರು.
ವಿ.ಜಿ.ಕುಲಕರ್ಣಿ
ಬದಲಾಯಿಸಿ'ವಲ್ಲೋ ಗುಡ್ಡೋ ಕುಲಕರ್ಣಿ,' ಯವರು, ೪೬ ವರ್ಷಗಳಕಾಲ, 'ಸದ್ಬೋಧ ಚಂದ್ರಿಕೆ ಪತ್ರಿಕೆ'ಗೆ ದುಡಿದರು. ಗುತ್ತಲದ ಕುಲಕರ್ಣಿದ್ವಯರು ಸದಭಿರುಚಿಯ ಸಾಹಿತ್ಯ ಸೃಷ್ಟಿಸಿ, ವಾಚನಾಭಿರುಚಿ ಹೆಚ್ಚಿಸಿ, ಸುಮಾರು ೭,೦೦೦ ಪ್ರತಿಗಳನ್ನು ಆ ಕಾಲದಲ್ಲೇ ಮುದ್ರಿಸಿ, ಚಂದಾದಾರರಿಗೆ ವಿತರಿಸಿದ್ದು ವಿಶೇಷ ಸಾಧನೆ. ಅಂಚೆಯ ಸೌಕರ್ಯವಿಲ್ಲದ ಕಾಲದಲ್ಲಿ, ಹಾವೇರಿಯಿಂದ ರವನಿಸಲು, 'ಆನಂದವನ,' ದಿಂದ ಚಕ್ಕಡಿಯಲ್ಲಿ ಪ್ರತಿಗಳನ್ನು ಸಾಗಿಸುತ್ತಿದ್ದರಂತೆ. "ಅಮೃತ ಮಹೋತ್ಸವ ವರ್ಷದ ವಿಶೆಷಾಂಕ," ಆನಂದವನ, ಅಪೂರ್ವ ಆಕರಗ್ರಂಥವೆನಿಸಿದ್ದು, ರಾಯಲ್ ಆಕೃತಿಯ ಸಾವಿರದ ಪುಟಗಳನ್ನು ಹೊತ್ತ ಸಾವಿರದ ಹೊತ್ತಗೆ, 'ತ.ರಾ.ಸು', 'ನಾರಾಯಣರಾವ್ ತಾಳೀಕೋಟೆ', 'ಗೋ.ವೆ.ಚುಳಕಿ', 'ಕೆ.ಕೇಶವಮೂರ್ತಿ', 'ಲಕ್ಷ್ಮಣ ಜೋಶಿ', 'ಶಂಕರ ದೀಕ್ಷಿತ್ ಕರ್ಕಿ ಹಳ್ಳಿ',... .. ಮುಂತಾದ ಲೇಖಕರು, ಈ ಮಾಸಿಕಕ್ಕೆ ಹೂರಣ, ತೋರಣ, ಸಿಂಗರಿಸಿ ಸಂಪನ್ನಗೊಳಿಸಿದ್ದಾರೆ. ಕ್ಲಿಷ್ಟಕರ ಪರಿಸ್ಥಿತಿಯಲ್ಲೂ, ಪ್ರಕಟಣೆ ನಿಲ್ಲದೆ, ನಿರಂತರವಾಗಿ ಮುನ್ನಡೆದಿದ್ದು, ಕನ್ನಡ-ಅಕ್ಷರ ಲೋಕದ ಅಚ್ಚರಿ.
ಕನ್ನಡದ ಪ್ರಥಮ ಪತ್ರಿಕೆಗಳು
ಬದಲಾಯಿಸಿ- ಜುಲೈ, ೧೮೪೩ ರಲ್ಲಿ, 'ಮಂಗಳೂರು ಸಮಾಚಾರ,' ಕನ್ನಡದ ಪ್ರಥಮ ಪತ್ರಿಕೆ. ಇದನ್ನು, ಜರ್ಮನ್ ಧರ್ಮಪ್ರಚಾರಕ, 'ಹರ್ಮನ್ ಮೊಗ್ಲಿಂಗ್,' ಪ್ರಾರಂಭಿಸಿದರು.
- ೧೮೫೦ ರಲ್ಲಿ 'ಸುಬುದ್ಧಿ ಪ್ರಕಾಶ,' ಎಂಬ ವಾರ ಪತ್ರಿಕೆ, ಬೆಳಗಾವಿಯಲ್ಲಿ ಕನ್ನಡಿಗರಿಂದಲೇ ರೂಪುಗೊಂಡು, ಪ್ರಾರಂಭವಾದ 'ಕನ್ನಡದ ಮೊದಲ, ನಿಯತಕಾಲಿಕ'.
- ೧೯೦೦ ರಲ್ಲಿ, 'ಸುವಾಸಿನಿ', ಪತ್ರಿಕೆ, 'ಬೋಳಾರು ವಿಟ್ಠಲರಾಯ,' ರಿಂದ, ಪ್ರಾರಂಭಿಸಲ್ಪಟ್ಟಿತು. ಇದರ ಸಂಪಾದಕರು, ಬೆನೆಗಲ್ ರಾಮರಾಯರು.
- ೧೯೦೫ ರಲ್ಲಿ ಉಡುಪಿಯಿಂದ ಶುರುವಾದ, ಶ್ರೀ ಕೃಷ್ಣ ಸೂಕ್ತಿ' ಯ ಸಂಪಾದಕರು, ಕಡೇಕಾರು ರಾಜಗೋಪಾಲಕೃಷ್ಣರಾಯರು. ೧೮೬೫ ರಲ್ಲಿ, ಸರ್ಕಾರದ ಸಹಾಯದಿಂದಶುರುವಾದ " ಮಠ ಪತ್ರಿಕೆ", ಮುಂಬರುವ ಸಮಯದಲ್ಲಿ, ಬದಲಾವಣೆಯಾದ ಬಗೆ ಅನನ್ಯವಾದದ್ದು. ಮೊದಲು ಶಾಲಾ ಪತ್ರಿಕೆ, ಕೊನೆಯಲ್ಲಿ ಜೀವನ ಶಿಕ್ಷಣಕ್ಕೆ ಅನುವುಮಾಡಿಕೊಟ್ಟಿತು.
ಬೆಳೆದ ಪರಿ
ಬದಲಾಯಿಸಿ- 'ಶಾಲಾಪತ್ರಿಕೆ',
- 'ಕನ್ನಡ ಶಾಲಾ ಪತ್ರಿಕೆ'
- 'ಕನ್ನಡ ಪ್ರಾಥಮಿಕ ಶಿಕ್ಷಣ'
- 'ಜೀವನ ಶಿಕ್ಷಣ',
ಸರ್ಕಾರಿ ಸಂಸ್ಥೆ ಮುನ್ನಡಿಸಿದ ಇದರ ಶತಮಾನೋತ್ಸವ ಅಚರಿಸಿದ್ದಾಯಿತು. ಆದರೆ ಖಾಸಗಿಯಾಗಿ, 'ಚಂದ್ರಿಕೆ,' ಪತ್ರಿಕೆಗೆ ಈಗ 'ಶತಮಾನೋತ್ಸವದ ಸಂಭ್ರಮ'.
ಪ್ರಥಮ ಸಂಪಾದಕ, 'ಗಳಗನಾಥರು',
ಬದಲಾಯಿಸಿ೧೯೦೮ ರ ವರ್ಷದ ಯುಗಾದಿಯ ದಿನ ಮೊದಲು ಪ್ರಕಟವಾದ 'ಸುಬೋಧ ಚಂದ್ರಿಕದ', ದ ಜನಕರೇ, 'ಗಳಗನಾಥರು'. ಇವರು ಅಂದಿನ ಧಾರವಾಡದ ಹತ್ತಿರದ, 'ಗಳಗ,' ಎಂಬ ಗ್ರಾಮದವರು. 'ವೆಂಕಟೇಶ ತಿರಕೋ ಕುಲಕರ್ಣಿ,' ಯವರು, ಮುಂದೆ "ಗಳಗನಾಥ ಮಾಸ್ತರ್", ಎಂದು, ಹೆಸರುವಾಸಿಯಾದರು. ಶ್ರೀ ಶೇಷ ಗುರುಗಳ ಪರಮ ಶಿಷ್ಯರಾದ ಗಳಗನಾಥರು, ತಮ್ಮ ಸರಕಾರಿವೃತ್ತಿಯನ್ನು ತೊರೆದು, ಅಂಗಡಿಯಲ್ಲಿ ನೆಲಸಿದರು. ಗುರುಗಳ ಅಣತಿಯಂತೆ ಸ್ಥಾಪಿತವಾದ " ಶ್ರೀ ಶೇಷಾಚಲ ಸದ್ಗುರು ವೇದ ಸಂಸ್ಕೃತ ಪಾಠಶಾಲೆ," ಮತ್ತು "ಸದ್ಬೋಧ ಚಂದ್ರಿಕೆ," ಯನ್ನು ಸಂಪಾದಕರಾಗಿ, ನಡೆಸಿಕೊಂಡು ಬಂದರು.
ಧರ್ಮ,ಕಲೆ,ಸಂಸ್ಕೃತಿ ಹಾಗೂ ಮೌಲಿಕ ಶಿಕ್ಷಣಕ್ಕೆ ಆದ್ಯತೆ
ಬದಲಾಯಿಸಿ'ಸದ್ಬೋಧ ಚಂದ್ರಿಕೆ,' ಧರ್ಮ, ಕಲೆ-ಸಂಸ್ಕೃತಿಗಳ ಆಗರ, ಹಾಗೂ ಮೌಲಿಕ-ಶಿಕ್ಷಣಕ್ಕೆ ಆದ್ಯತೆ ನೀಡುತ್ತಾಬಂದಿದೆ. ವೈವಿಧ್ಯಮಯ ಲೇಖನಗಳು, ನೈತಿಕಮೌಲ್ಯಗಳ ಉಪಾಸನೆ, ಶೈಕ್ಷಣಿಕ ವಿಚಾರಗಳ ಜೋಡಣೆ, ಗಳಗನಾಥರ ಕಥೆಗಳು, ಕಾದಂಬರಿಗಳಿಂದಾಗಿ, ಪತ್ರಿಕೆಯ ಪ್ರಸಾರ ಹೆಚ್ಚಿತು. ಆಗಿನಕಾಲದಲ್ಲಿ ಪತ್ರಿಕೆಯಲ್ಲಿ, ಪ್ರಕಟವಾಗುತ್ತಿದ್ದ, ಹೆಸರುವಾಸಿಯಾಗಿದ್ದ ಧಾರಾವಾಹಿಗಳಾದ, 'ಕಮಲಕುಮಾರಿ', 'ಪ್ರಬುದ್ಧ ಪದ್ಮನಯನೆ', 'ಸತ್ವಸಾರ', ಮುಂತಾದವುಗಳು, ವಾಚಕರಿಗೆ ಬಹಳ ಪ್ರಿಯವಾಗಿದ್ದವು. 'ಬೆಟಗೇರಿ ಕೃಷ್ಣ ಶರ್ಮ', ಮತ್ತು 'ಶ್ರೀರಂಗ,' ರಂತಹ ಪ್ರಸಿದ್ಧರು, ಬರುವ ಸಂಚಿಕೆಯನ್ನು ಆತುರದಿಂದ, ಎದುರುನೋಡುತ್ತಿದ್ದರು.
ಉಲ್ಲೇಖಗಳು
ಬದಲಾಯಿಸಿ
-ಆರೂರು ಲಕ್ಷ್ಮಣ ಶೇಟ್