ಸದಸ್ಯ:Yeshwanth S A/ನನ್ನ ಪ್ರಯೋಗಪುಟ

ಲ್ಯಾರಿ ಪೇಜ್
Born
ಲಾರೆನ್ಸ್ ಪೇಜ್

(1973-03-26) ಮಾರ್ಚ್ ೨೬, ೧೯೭೩ (ವಯಸ್ಸು ೫೧)
ಅಮೇರಿಕ
Nationalityಅಮೆರಿಕನ್
Alma materಮಿಚಿಗನ್ ವಿಶ್ವವಿದ್ಯಾಲಯ
Occupation(s)ಕಂಪ್ಯೂಟರ್ ವಿಜ್ಞಾನಿ, List of Internet entrepreneurs
Known forಗೂಗಲ್,ಸಹ ಸಂಸ್ಥಾಪಕ ,ಆಲ್ಫಾಬೆಟ್ ಸಿಇಒ,
Spouseಲುಸಿನ್ಡಾ ಸೌತ್ವರ್ತ್ (ವಿವಾಹ 2007)
Signature
Larry Page

ಲಾರೆನ್ಸ್ ಪೇಜ್ (ಲ್ಯಾರಿ ಪೇಜ್), ಇವರು ೨೬ ಮಾರ್ಚ್ ೧೯೭೩ ರಂದು ಅಮೇರಿಕದಲ್ಲಿ ಜನಿಸಿದರು. ಇವರು ಕ್ಯಾಲಿಫೊರ್ನಿಯದಲ್ಲಿರುವ ಪಾಲೊ ಆಲ್ಟೊ ಎಂಬ ಊರಿನಲ್ಲಿ ವಾಸಿಸಿದರು. ಲ್ಯಾರಿ ಪೇಜ್ ಅವರ ತಂದೆಯ ಹೆಸರು ಕಾರ್ಲ್ ವಿಕ್ಟರ್ ಪೇಜ್ ಹಾಗು ತಾಯಿಯ ಹೆಸರು ಗ್ಲೋರಿಯಾ. ಪೇಜ್ ರವರು ೧೯೬೫ ರಂದು ಗಣಕಯಂತ್ರ ವಿಜ್ಞಾನದಲ್ಲಿ ಪಿ.ಎಚ್.ಡಿ ಪದವಿಯನ್ನು ಮಿಚಿಗನ್ ವಿಶ್ವವಿದ್ಯಾಲಯದಲ್ಲಿ [೧] ಪಡೆದರು. ಪೇಜ್ ರವರು ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಗಣಕಯಂತ್ರ ವಿಜ್ಞಾನದ ಪ್ರೊಫೆಸರ್ ಆಗಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಪೇಜ್ ರವರು ಒಂದು ಸಂದರ್ಶನದಲ್ಲಿ ತಮ್ಮ ಬಾಲ್ಯದ ದಿನಗಳ ಬಗ್ಗೆ ಹೀಗೆಂದು ಹೇಳಿದ್ದಾರೆ "ನಾನು ಬಾಲ್ಯದಲ್ಲಿ ಗಣಕಯಂತ್ರ, ವಿಜ್ಞಾನ,ತಂತ್ರಜ್ಞಾನದ ಪುಸ್ತಕಗಳನ್ನು ತಮ್ಮ ಮನೆಯಲ್ಲಿ ರಶಿಯಾಗಿ ಹರಡಿದ್ದೆ" ಎಂದು ಹೇಳಿದರು. ಇವರು ತಮ್ಮ ಹೆಚ್ಚಿನ ಸಮಯವನ್ನು ಪುಸ್ತಕ ಹಾಗೂ ಪತ್ರಿಕೆಗಳನ್ನು ಓದುವುದರಲ್ಲಿ ಕಳೆಯುತ್ತಾರೆ. ಇವರಿಗೆ ಸಂಗೀತದಲ್ಲಿ ಬಹಳಷ್ಟು ಆಸಕ್ತಿ ಇದೆ. ಪೇಜ್ ರವರಿಗೆ ಸುಮಾರು ಆರು ವಯಸ್ಸಿನಿಂದಲೇ ಗಣಕಯಂತ್ರದ ಬಗ್ಗೆ ಹೆಚ್ಚು ಆಸಕ್ತಿ ಇತ್ತು. ಅವರು ತಮ್ಮ ಮನೆಯಲ್ಲಿದ್ದ ಮೊದಲನೆಯ ಪೀಳಿಗೆಯ ಗಣಕಯಂತ್ರವನ್ನು ತುಂಬಾ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುತ್ತಿದ್ದರು. ಪೇಜ್ ಮತ್ತು ಬ್ರಿನ್ ಇವರಿಬ್ಬರೂ ಬಹಳ ಒಳೆಯ ಸ್ನೇಹಿತರು. ಇವರಿಬ್ಬರೂ ಕೂಡಿ ಹೊಸ ಹೊಸ ಯೋಜನೆಯ ಬಗ್ಗೆ ಚರ್ಚಿಸುತ್ತಿದ್ದರು. ಪೇಜ್ ಅವರು ತಮ್ಮ ಬಿಡುವಿನ ಸಮಯದಲ್ಲಿ ತಮ್ಮ ಕುಟುಂಬದ ಸದಸ್ಯರ ಬಳಿ ಕರೆಯುತ್ತಿದ್ದರು.

ಗೂಗಲ್ ಬದಲಾಯಿಸಿ

ಬ್ರಿನ್ ಹಾಗೂ ಪೇಜ್ ರವರು ೧೯೯೮ ರಲ್ಲಿ "ಗೂಗಲ್" ಸಂಸ್ಥೆಯನ್ನು ಸ್ಥಾಪಿಸಿದರು. ಮೊದಲು ಇವರು 'ಗೂಗಾಲ್' ಎಂಬ ಹೆಸರು ಇಟ್ಟಿದ್ದರು ನಂತರ ಗೂಗಲ್ ಎಂದು ನೇಮಿಸಿದರು. ಲ್ಯಾರಿ ಪೇಜ್ ಅವರು ಗೂಗಲ್ ಸಂಸ್ಥೆಯ ಸಿಇಒ ಹಾಗೂ ಬ್ರಿನ್ ರವರು ಸಹ ಸಂಸ್ಥಾಪಕರು [೨] ಇವರ ಪ್ರಥಮ ಗುರಿ ಏನೆಂದರೆ ವಿಶ್ವವಿಡೀ ಅವರ ಸಂಸ್ಥೆಯ ಉಪಯೋಗ ಪಡೆಯಬೇಕೆಂದು. ಪೇಜ್ ರವರು ತಮ್ಮ ಕುಟುಂಬದ ಹಾಗೂ ಗೆಳೆಯರ ಸಹಾಯದಿಂದ ಸಂಸ್ಥೆಯನ್ನು ಸ್ಥಾಪಿಸಿದರು. ಜೂನ್‌ ೨೦೦೦ ರಂದು ಗೂಗಲ್ ಸಂಸ್ಥೆಯು ಸುಮಾರು ಒಂದು ಬಿಲಿಯನ್ ಜನರು ಇಂಟರ್ನೆಟ್ ಯು.ಆರ್.ಎಲ್ ಉಪಯೋಗಿಸುವುದು ಕಂಡು ಬಂದಿತು. ಮೊದಮೊದಲು ಪೇಜ್ ರವರು ಸಾಕಷ್ಟು ಸೋಲನ್ನು ಅನುಭವಿಸಿದರು , ನಂತರ ಹಲವಾರು ಗೆಲುವನ್ನು ಸಾಧಿಸಿದರು. ಪೇಜ್ ಅವರು ಗೂಗಲ್ ಸಂಸ್ಥೆಯನ್ನು ತುಂಬಾ ಹೆಚ್ಚಿನ ಪ್ರಮಾಣದಲ್ಲಿ ನಿರ್ವಹಣೆ ಮಾಡಿದರು. ಹಲವಾರು ಯೋಜನೆಯನ್ನು ಪರಿಚಯಿಸಿದರು. ಕೆಲವು ಯೋಜನೆಗಳು ಸೋಲನ್ನು ಕಂಡರು ಇನ್ನು ಕೆಲವು ಯೋಜನೆಗಳು ಗೆಲುವನ್ನು ಕಂಡಿತು. ಗೂಗಲ್ ಸರ್ಚ್ ಇಂಜಿನ್ ನ ಸಹಾಯದಿಂದ ಸಾಕಷ್ಟು ಪ್ರಮಾಣದಲ್ಲಿ ಜನರಿಗೆ ಸಹಾಯವಾಯಿತು. ಗೂಗಲ್ ಸಂಸ್ಥೆಯು ಸಾಕಷ್ಟು ಜನರಿಗೆ ಉದ್ಯೋಗವನ್ನು ಒದಗಿಸಿದೆ. ಗೂಗಲ್ ಸರ್ಚ್ ಇಂಜಿನ್ ನ ಮುಕಾಂತರ ಸಾಕಷ್ಟು ಜನರು ಉಪಯೋಗವನ್ನು ಪಡೆದಿದ್ದಾರೆ. ಪ್ರತಿಯೊಂದು ಮೊಬೈಲಿನಲ್ಲು ಗೂಗಲ್ ಸರ್ಚ್ ಇಂಜಿನ್ ಇದೆ. ಕೋಟ್ಯಾಂತರ ಜನರು ಗೂಗಲ್ ಸಂಸ್ಥೆಯಿಂದ ಉಪಯೋಗವನ್ನು ಪಡೆದಿದ್ದಾರೆ.

ಆಲ್ಫಾಬೆಟ್ ಬದಲಾಯಿಸಿ

೧೦ ಆಗಸ್ಟ್ ೨೦೧೫ ರಂದು ಪೇಜ್ ರವರು ಹೊಸ ಕಂಪನಿಗಳ ಬೆಳವಣಿಗೆಗಾಗಿ ಸಹಾಯಮಾಡಲು ಆಲ್ಫಾಬೆಟ್ ಎಂಬ ಕಂಪನಿಯುನ್ನು ಸ್ಥಾಪಿಸಿದರು. ಆಲ್ಫಾಬೆಟ್ ಕಂಪನಿಯ ಸಿಇಒ ಲ್ಯಾರಿ ಪೇಜ್‌. ಒಂದು ಸಂದರ್ಶನದಲ್ಲಿ ಪೇಜ್ ರವರು ತಮ್ಮ ಆಲ್ಫಾಬೆಟ್ ಕಂಪನಿಯ ಬಗ್ಗೆ ಹೀಗೆಂದಿದ್ದರು "ಆಲ್ಫಾಬೆಟ್ ಕಂಪನಿಯು ಹಲವಾರು ಕಂಪನಿಗಳ ಸಂಗ್ರಹವಾಗಿದೆ. ಮತ್ತು ಈ ಸಂಸ್ಥೆಯಿಂದ ಹಲವಾರು ಕಂಪನಿಗಳಿಗೆ ಸಹಾಯವಾಗುತ್ತದೆ. ಆಲ್ಫಾಬೆಟ್ ಕಂಪನಿಯು ಒಳ್ಳೆಯ ಗೆಲುವನ್ನು ಕಂಡಿತು. ಆಲ್ಫಾಬೆಟ್ ಕಂಪನಿಯ ಸಹಾಯದಿಂದ ಹಲವಾರು ಯುವಕರ ಕಂಪನಿಗಳಿಗೆ ಸಹಾಯವಾಯಿತು.

ವೈಯಕ್ತಿಕ ಜೀವನ ಬದಲಾಯಿಸಿ

ಲ್ಯಾರಿ ಪೇಜ್‌ ರವರು ಲುಸಿನ್ಡಾ ಸೌತ್ವರ್ತ್ ಎಂಬ ಹೆಸರಿನ ಮಹಿಳೆಯನ್ನು ಮದುವೆಯಾದರು. ಲುಸಿನ್ಡಾ ಸೌತ್ವರ್ತ್ ಅವರು ಸಂಶೋಧನಾ ವಿಜ್ಞಾನಿ ಎಂದು ಕರೆಯಲಾಗುತ್ತದೆ. ಇವರ ಸಹೋದರಿ ಕ್ಯಾರಿ ಸೌತ್ವರ್ತ್ ಚಲನಚಿತ್ರ ನಟಿ ಹಾಗೂ ಮಾಡಲ್. ಲ್ಯಾರಿ ಪೇಜ್‌ ಮತ್ತು ಲುಸಿನ್ಡಾ ಸೌತ್ವರ್ತ್ ಇವರಿಗೆ ಎರಡು ಮಕ್ಕಳು ಜನಿಸಿದರು. ಪೇಜ್ ರವರು ಪರಿಸರ ಸ್ನೇಹಿ ಎಂದು ಕರೆಯಲಾಗುತ್ತದೆ. ಪೇಜ್ ಅವರು ತಮ್ಮ ಹೊಸ ಮನೆಯನ್ನು ಹಳ್ಳಿಯ ಮನೆಯ ಪಕ್ಕದಲ್ಲಿ ಕಟ್ಟಿಸಿದರು. ತಮ್ಮ ಮನೆಯನ್ನು ಪರಿಸರ ಮನೆಯನ್ನಾಗಿ ಮಾಡಿದರು. ತಮ್ಮ ಹಳೆಯ ಮನೆಯನ್ನು ಖಂಡಿಸಿದರು. ಮತ್ತು ಆ ಮನೆಯ ಹಳೆಯ ವಸ್ತುಗಳನ್ನು ಬಡವರಿಗೆ ದಾನ ಮಾಡಿದರು. ತಮ್ಮ ಹೊಸ ಮನೆಯನ್ನು ಅದ್ದೂರಿಯಾಗಿ ನಿರ್ಮಿಸಿದರು.

ಪ್ರಶಸ್ತಿಗಳು ಬದಲಾಯಿಸಿ

೧೯೯೯ ರಲ್ಲಿ ಪಿ.ಸಿ.ಮ್ಯಾಗಜೀನ್ ಅವರು ಗೂಗಲ್ ಸಂಸ್ಥೆಗೆ 'ಟೆಕ್ನಿಕಲ್ ಎಕ್ಸೆಲೆನ್ಸ್ ಅವಾರ್ಡ್' ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ೨೦೦೦ ರಲ್ಲಿ 'ವೆಬ್ಬಿ ಅವಾರ್ಡ್' ಎಂಬ ಪ್ರಶಸ್ತಿ ಪಡೆದಿದೆ. ೨೦೦೧ ರಲ್ಲಿ ಅತ್ಯುತ್ತಮ ಹುಡುಕಾಟ ಸೇವೆ, ಅತ್ಯುತ್ತಮ ಚಿತ್ರ ಹುಡುಕಾಟ ಎಂಜಿನ್, ಅತ್ಯುತ್ತಮ ವಿನ್ಯಾಸ, ಹೆಚ್ಚಿನ ವೆಬ್ಮಾಸ್ಟರ್ ಮುಂತಾದ ಬಿರುದನ್ನು ಪಡೆದಿದೆ. ಪೇಜ್ ರವರು ೨೦೦೨ ರಲ್ಲಿ ವಿಶ್ವ ಆರ್ಥಿಕ ವೇದಿಕೆಯು ವಿಶ್ವ ನಾಯಕ ಎಂಬ ಬಿರುದನ್ನು ನೀಡಿತು. ೨೦೦೩ ರಲ್ಲಿ ಪೇಜ್ ಮತ್ತು ಬ್ರಿನ್ ಇಬ್ಬರೂ ಐಇ ಬಿಜಿನೆಸ್ ಸ್ಕೂಲ್ ಅಲ್ಲಿ ಎಂಬಿಎ, ಗೌರವ ಸಾಮರ್ಥ್ಯದಲ್ಲಿ, "ಹೊಸ ವ್ಯವಹಾರಗಳು ಸೃಷ್ಟಿಗೆ ಉದ್ಯಮಶೀಲತಾ ಸ್ಪಿರಿಟ್ ಮತ್ತು ಸಾಲ ಆವೇಗ ಒಟ್ಟುಗೂಡಿಸುವಂತಹ ಸಾಹಸಿಗರು ಎಂಬ ಬಿರುದನ್ನು ಪಡೆದರು. 2004 ರಲ್ಲಿ ಅವರು ಮಾರ್ಕೋನಿ ಫೌಂಡೇಶನ್ನ ಪ್ರಶಸ್ತಿಯನ್ನು ಪಡೆದರು, ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಮಾರ್ಕೋನಿ ಫೌಂಡೇಶನ್ ಫೆಲೋಸ್ ಗೆ ಆಯ್ಕೆಯಾಗಿದ್ದರು. ಬ್ರಿನ್ ಮತ್ತು ಪೇಜ್ ಅಮೆರಿಕನ್ ಅಕ್ಯಾಡೆಮಿ ಆಫ್ ಆರ್ಟ್ಸ್ ಅಂಡ್ ಸೈನ್ಸಸ್ ಸಂಸ್ಥೆಗೆ ಆಯ್ಕೆಯಾದರು. ೨೦೦೮ ರಲ್ಲಿ ಪೇಜ್ ಅವರು ಪುಟ ಸಂವಹನ ಪ್ರಶಸ್ತಿಯನ್ನು ಗೂಗಲ್ ಪರವಾಗಿ ಆಸ್ಟೂರಿಯಾಸ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಇನ್ನೂ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. ಇವರ ಸಾದನೆಯ ದಾರಿ ಸಾಕಷ್ಟು ಜನರಿಗೆ ಪ್ರೋತ್ಸಾಹ ನೀಡಿದೆ. ಹಲವಾರು ಯುವಕರಿಗೆ ಇವರು ಸ್ಪೂರ್ತಿಯನ್ನು ನೀಡಿದರು. ಇವರ ಸಾಧನೆಗೆ ವಿಶ್ವವಿಡಿ ಸಲಾಮು ಮಾಡಿತು. ಪೇಜ್ ಅವರ ಸಾಧನೆಯು ಅನನೀಯ.

ಉಲ್ಲೇಖ ಬದಲಾಯಿಸಿ

  1. https://http://www.biography.com/people/larry-page-12103347.html
  2. http://www.itpro.co.uk/strategy/leadership/22753/larry-page-biography-salary-and-career-history-of-google-s-co-founder-and.html