ಸದಸ್ಯ:Yashaswini.N575/ನನ್ನ ಪ್ರಯೋಗಪುಟ

"ನನ್ನ ಜೀವನ'' ಬದಲಾಯಿಸಿ

 
ರೇವಣ್ಣ ಸಿದ್ದೇಶ್ವರ ಬೆಟ್ಟ ,ರಾಮನಗರ

ಪರಿಚಯ ಬದಲಾಯಿಸಿ

     ನನ್ನ ಹೆಸರು ಯಶಸ್ವಿನಿ.ಎನ್. ನಾನು ೨೪/೪/೨೦೦೦ ರಂದು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಒಂದು ಪುಟ್ಟ ಹಳ್ಳಿಯಲ್ಲಿ ಜನಿಸಿದೆನು. ಪ್ರಸ್ತುತ ನಾನು ಬೆಂಗಳೂರು ನಗರದಲ್ಲಿ ವಾಸವಾಗಿದ್ದೇನೆ. ಮನೆಯ ಹಿರಿಮಗಳಾಗಿರುವ ನನ್ನನ್ನು ಎಲ್ಲರು ತುಂಬಾ ಪ್ರೀತಿಯಿಂದ ಬೆಳೆಸಿದ್ದಾರೆ. ನಾನು ನನ್ನ ತಂದೆಯ ಮುದ್ದಿನ ಮಗಳು. ನನ್ನ ತಂದೆಯ ಹೆಸರು ನಂಜುಂಡ ಮತ್ತು ತಾಯಿಯ ಹೆಸರು ಮಹಾದೇವಮ್ಮ. ನನ್ನ ತಂದೆ ಒಬ್ಬರು ಆಟೋ ಚಾಲಕ ಮತ್ತು ತಾಯಿ ಗೃಹಿಣಿಯಾಗಿದ್ದಾರೆ. ನನಗೆ ಒಬ್ಬಳು ಸುಂದರವಾದ ತಂಗಿಯೂ ಇದ್ದಾಳೆ. ಆಕೆಯ ಹೆಸರು ತೇಜಸ್ವಿನಿ. ಅವಳು ಪ್ರಸ್ತುತ ಕೃಪಾನಿಧಿ ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ ವ್ಯಾಸಂಗವನ್ನು ಮಾಡುತ್ತಿದ್ದಾಳೆ.                                                                                                                                                                    ನನಗೆ ಅಬ್ದುಲ್ ಕಲಾಂರವರೆಂದರೆ ತುಂಬಾ ಇಷ್ಟ. ಇವರು ನನ್ನಂತಹ ಹಲವಾರು ಜನರಿಗೆ ತಮ್ಮ ಒಳ್ಳೆ-ಒಳ್ಳೆಯ ಕೆಲಸಗಳು, ನಡೆ-ನುಡಿಗಳಿಂದ ಸ್ಫೂರ್ತಿ ಆಗಿದ್ದಾರೆ. "ಫೈರ್ ಆಫ್ ವಿಂಗ್ಸ್" ಎಂಬ ಹೆಸರಿನಲ್ಲಿ ಬರೆದಿರುವ ಇವರ ಆತ್ಮಚರಿತ್ರೆಯ ಪುಸ್ತಕವೆಂದರೆ ನನಗೆ ತುಂಬಾ ಇಷ್ಟ. 

ಹವ್ಯಾಸಗಳು ಬದಲಾಯಿಸಿ

ನಾನು ನನ್ನ  ಬಿಡುವಿನ ಸಮಯದಲ್ಲಿ ಆತ್ಮಚರಿತ್ರೆಯ ಪುಸ್ತಕಗಳನ್ನು, ಕಥೆ ಪುಸ್ತಕಗಳನ್ನು ಓದುತ್ತೇನೆ, ಹೊಸ-ಹೊಸ ಬಗೆಯ ಅಡುಗೆಗಳನ್ನು ಮಾಡಲು ಪ್ರಯತ್ನಿಸುತ್ತೇನೆ. ಟಿ.ವಿ ನೋಡುವುದು, ಹಾಡುಗಳನ್ನು ಕೇಳುವುದು, ಅಮ್ಮನಿಗೆ ಕೆಲಸದಲ್ಲಿ ಸ್ವಲ್ಪ ಸಹಾಯ ಮಾಡುವುದು, ಇತ್ಯಾದಿಗಳು ನನ್ನ ಹವ್ಯಾಸಗಳಾಗಿವೆ.

ಶಾಲಾ ಶಿಕ್ಷಣ ಬದಲಾಯಿಸಿ

 
ಕ್ರೈಸ್ಟ್ ಯೂನಿವರ್ಸಿಟಿ
 ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬಂತೆ, ನನ್ನ ಅಕ್ಷರಾಭ್ಯಾಸವು ನನ್ನ ತಾಯಿಯಿಂದ ಶುರು ದೇವಸ್ಥಾನಗಳನ್ನು , ಅಲ್ಲಿನ ಪರಿಸರದ ಸೌಂದರ್ಯವನ್ನು ನೋಡಿ ಬಹಳ  ಆನಂದಿಸಿದ್ದೆವು. ನಂತರ ನಾನು ನನ್ನ ಶಾಲಾ ಸ್ನೇಹಿತರೊಂದಿಗೆ  ಬಿಡದಿಯ ಬಳಿ ಇರುವ  ವಂಡರ್ ಲಾವಾಯಿತು. ಅನಂತರ ನಾನು ನನ್ನ ವಿದ್ಯಾಭ್ಯಾಸವನ್ನು ಮಡಿವಾಳದಲ್ಲಿರುವ ಅವರ್ ಲೇಡಿ ಆಫ್ ಫಾತಿಮಾ ಹೈ ಸ್ಕೂಲ್ ಮುಂದುವರಿಸಿದೆನು. ನನಗೆ ಭಾಗ್ಯ ಟೀಚರ್ ಎಂದರೆ  ತುಂಬಾ ಇಷ್ಟ ಏಕೆಂದರೆ ಅವರು ಶಾಲೆಯಲ್ಲಿರುವ ಎಲ್ಲಾ ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಮಕ್ಕಳಂತೆ ಬಹಳ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು. ಪ್ರಿನ್ಸಿ, ನಿಖಿತಾ, ಭೂಮಿಕಾ, ಬಾಲಾಜಿ, ಅಕ್ಷಯ್ ಇವರೆಲ್ಲರು ನನ್ನ ಬಾಲ್ಯದ ಗೆಳಯ, ಗೆಳತಿಯರು. ಮೊದಮೊದಲು ನಾನು ಅಷ್ಟು ಚೆನ್ನಾಗಿ ಓದುತ್ತಿರಲಿಲ್ಲ, ಆದರೆ ನಾನು ಬೆಳೆದು ದೊಡ್ಡವಳಾಗುತ್ತಿದಂತೆ ನನ್ನ ತಂದೆ-ತಾಯಿ ನಮಗೋಸ್ಕರ ಪಡುವ ಕಷ್ಟ ಮತ್ತು ನಾವು ಚೆನ್ನಾಗಿ ಓದಿ ಒಂದು ಒಳ್ಳೆಯ ಪಡೆಯಬೇಕೆಂಬ ಅವರ ಆಸೆ ನನಗೆ ಅರ್ಥವಾಯಿತು. ಅದ್ದಲ್ಲದೇ ನನಗೆ ನಾನೊಬ್ಬಳು ಪ್ರಾಮಣಿಕ ಐ.ಎ.ಎಸ್ ಅಧಿಕಾರಿಯಾಗಬೇಕೆಂಬ ಆಸೆಯಿದೆ. ಆದ್ದರಿಂದ ನಾನು ತುಂಬಾ ಕಷ್ಟಪಟ್ಟು ಓದಲು ಆರಂಭಿಸಿದೆನು. ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳು ಬರುತ್ತಿತ್ತು. ಶಾಲೆಯಲ್ಲಿ ಶಿಕ್ಷಕ,ಶಿಕ್ಷಕಿಯರು ನನ್ನನ್ನು ಹೊಗಳಬೇಕಾದರೆ ನಾನು ನನ್ನ ತಂದೆ-ತಾಯಿಯ ಮುಖದಲ್ಲಿ ಖುಷಿಯನ್ನು ನೋಡುತ್ತಿದ್ದೆ. ಅವರ ಆ ಖುಷಿಯನ್ನು ನೋಡಿ ನನಗೆ ಓದುವುದರಲ್ಲಿ ಇನ್ನೂ ಆಸಕ್ತಿ ಹೆಚ್ಚಾಯಿತು. ಈ ಕಾರಣದಿಂದಲೇ ೧೦ನೇ ತರಗತಿಯ ದೊಡ್ಡ ಪರೀಕ್ಷೆಯಲ್ಲಿ ನಾನು ೯೨%  ಗಳಿಸುವ ಮೂಲಕ ಉತೀರ್ಣಳಾದೆನು.
                               ನಾನು ನನ್ನ ಪಿ.ಯು.ಸಿ ವ್ಯಾಸಂಗವನ್ನು ಕೋರಮಂಗಲದಲ್ಲಿರುವ ಕೃಪನಿಧಿ ಕಾಲೇಜಿನಲ್ಲಿ ಮುಗಿಸಿದ್ದೇನೆ. ಇಲ್ಲಿಯೂ ಸಹ ನಾನು ತುಂಬಾ ಚೆನ್ನಾಗಿಯೇ ಓದುತ್ತಿದ್ದೆ. ನಾನು ಈ ಕಾಲೇಜಿನಲ್ಲಿ ಕಳೆದಿರುವ ಪ್ರತಿಯೊಂದು ಕ್ಷಣವನ್ನು ಕೂಡ ನನ್ನ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ಇಲ್ಲಿ ಮೊದಲು ನನಗೆ ಹರ್ಷಿಣಿ, ಅನುಷ, ಲಕ್ಷಿ, ಧನಲಕ್ಷ್ಮಿ, ಯೋಗೇಶ್, ಧನು, ಅನುಷ್ ಇವರೆಲ್ಲರ ಪರಿಚಯವಾಯಿತು, ಪರಿಚಯ ಸ್ನೇಹವಾಯಿತು, ಸನ್ನಿವೇಶಗಳು ಇವರೆಲ್ಲರನ್ನು ನನ್ನ ಪ್ರಾಣ ಸ್ನೇಹಿತರರನ್ನಾಗಿ ಮಾಡಿತ್ತು. ಇವರೆಲ್ಲರು ನನ್ನ ಜೀವನದ ಒಂದು ಭಾಗವಾಗಿ ಹೋಗಿದ್ದಾರೆ. ಕಾಲೇಜಿನಲ್ಲಿ ನನಗೆ "ಸ್ನೇಹ" ಎಂಬ ಪದದ ಅರ್ಥ ಗೊತ್ತಾಯಿತು. ಇಲ್ಲಿ ನಾನು ಸ್ವಲ್ಪ ತರ್ಲೆಯಾಗಿದ್ದರು, ಪರೀಕ್ಷೆಗಳಲ್ಲಿ ನಾನೇ ಎಲ್ಲರಿಗಿಂತ ಹೆಚ್ಚಿನ ಅಂಕಗಳನ್ನು ಪಡೆಯುತ್ತಿದ್ದೆನು. ದ್ವಿತೀಯ ಪಿ.ಯು.ಸಿಯಲ್ಲಿಯೂ ಸಹ ೯೨% ಗಳಿಸಿದ್ದೇನೆ.
                           ಪಿ.ಯು.ಸಿ ಮುಗಿದ ನಂತರ ಪ್ರಸ್ತುತ ನಾನು ನನ್ನ ಬಿ.ಕಾಂ ವ್ಯಾಸಂಗವನ್ನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಮಾಡುತ್ತಿದ್ದೇನೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನಗೆ ಈ ಕಾಲೇಜಿಗೆ ಸೇರಬೇಕೆಂಬ ಆಸೆಯೇ ಇರಲಿಲ್ಲ . ಮನೆಯವರ ಒತ್ತಾಯದಿಂದ ನಾನು ಇಲ್ಲೆಯೇ ಸೇರಿಕೊಂಡೆನು. ಪ್ರಾರಂಭದಲ್ಲಿ ನನಗೆ ಓದಲು ಸ್ವಲ್ಪ ಕಷ್ಟವೆನ್ನಿಸಿತ್ತು.  ಆದರೆ ಕಾಲ ಕಳೆಯುತ್ತಿದ್ದಂತೆ ನಾನ್ನು ಈ ವಾತಾವರಣಕ್ಕೆ ಹೊಂದುಕೊಂಡು ಹೋಗುತ್ತಿದ್ದೇನೆ. ಏನೇ ಕಷ್ಟ ಬಂದರು ಅಂಜದೇ ಧೈರ್ಯದಿಂದ ಹೆದರಿಸಬೇಕೆಂಬ ಪಾಠವನ್ನು ನಾನು ಈ ಕಾಲೇಜಿನಲ್ಲಿ ಕಲಿತ್ತಿದ್ದೇನೆ. ಇದೇ ರೀತಿ ಇನ್ನೂ ಹಲವಾರು ಒಳ್ಳೆಯ ವಿಷಯಗಳನ್ನು ಕಲಿಯುತ್ತೇನೆಂಬ ನಂಬಿಕೆಯಿದೆ. ಇಲ್ಲಿಯೂ ಸಹ ನಾನು ಚೆನ್ನಾಗಿ ಓದಿ , ನನ್ನ ಗುರಿ ತಲುಪಿ, ನನ್ನ ತಂದೆ-ತಾಯಿಗೆ ಒಳ್ಳೆಯ ಹೆಸರನ್ನು ತಂದುಕೊಂಡುತ್ತೇನೆಂಬ ಭರವಸೆ ನನ್ನಲ್ಲಿದೆ .

ಪ್ರವಾಸಗಳು ಬದಲಾಯಿಸಿ

 
ಧರ್ಮಸ್ಥಳ
೫ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗ ,ನಾನು ನನ್ನ ಕುಟುಂಬದವರೊಂದಿಗೆ  ೨ ವಾರಗಳ ಕಾಲ ಕರ್ನಾಟಕದ ಕೆಲವು  ಪ್ರಸಿದ್ದ ಸ್ಥಳಗಳಿಗೆ ಹೋಗಿದ್ದೆನು. ಅವುಗಳು ಯಾವುವೆಂದರೆ ಮಂಗಳೂರು ,ಉಡುಪಿ ,ಅಗೊಂಬೆ ,ಚಿಕ್ಕಮಗಳೂರು ,ಹಳೆಬೀಡು ,ಇನ್ನೂ ಮುಂತಾದ ಸ್ಥಳಗಳಿಗೆ ಹೋಗಿ ನಾವು ಅಲ್ಲಿರುವ ಪ್ರಸಿದ್ದ ದೇವಸ್ಥಾನಗಳನ್ನು , ಅಲ್ಲಿನ ಪರಿಸರದ ಸೌಂದರ್ಯವನ್ನು ನೋಡಿ ಬಹಳ  ಆನಂದಿಸಿದ್ದೆವು. ನಂತರ ನಾನು ನನ್ನ ಶಾಲಾ ಸ್ನೇಹಿತರೊಂದಿಗೆ  ಬಿಡದಿಯ ಬಳಿ ಇರುವ  ವಂಡರ್ ಲಾಗೆ ಹೋಗಿದ್ದೆನು. ಅಲ್ಲಿ ನಾನು ಬಗೆ-ಬಗೆಯ ಆಟಗಳನ್ನು ಆಡಿ ,ನೃತ್ಯವನ್ನು ಮಾಡಿ ಬಹಳ ಖುಷಿಪಟ್ಟಿದ್ದೆವು. ಇದದ ನಂತರ ೨ ತಿಂಗಳ ಹಿಂದೆ ಅಷ್ಟೇ ಮತ್ತೆ ನನ್ನ ಪರಿವಾರದವರೊಂದಿಗೆ ನಾನು ಧರ್ಮಸ್ಥಳಕ್ಕೆ ಹೋಗಿದ್ದೆವು. ಮುಂದಿನ ಬೇಸಿಗೆ ರಜೆಯಂದು ಮೈಸೂರಿಗೆ ಹೋಗಲು ನಿರ್ಧರಿಸಿದ್ದೇವೆ.