ಸದಸ್ಯ:Yashas k/ನನ್ನ ಪ್ರಯೋಗಪುಟ

ಚಂದ್ರಕವಿ

ಬದಲಾಯಿಸಿ

ಚಂದ್ರಶೇಕಖರ ಎಂಬ ಮತ್ತೊಂದು ಹೆಸರು ಇರುವ ಈ ಕವಿ "ವಿರೂಪಾಕ್ಷಾಸ್ಥಾನವರ್ಣನಂ" ಮತ್ತು "ಗುರುಮೂರ್ತಿಶಂಕರಶತಕ" ಎಂಬ ಈ ಎರಡು ಕೃತಿಗಳ ಕರ್ತೃ. ಪ್ರೌಢದೇವರಾಯನ ಆಸ್ಥಾನದಲ್ಲಿ ಮಹಾಪ್ರದಾನಿಯಾಗಿದ್ದ ಗುರುರಾಯನೆಂಬುವನು, ಇವನ ಆಶ್ರಯಧಾತನೆಂದು ಇವನೆ ಹೇಳಿಕೊಂಡಿದ್ದರಿಂದ ಇವನ ಕಾಲವು ಸುಮಾರು ೧೪೩೦ ಇರಬಹುದೆಂದು ಊಹಿಸಲಾಗಿದೆ. ಆಶ್ರಯದಾತನ ಆದಾರದ ಮೇಲೆ ಇವನು ವಿಜಯನಗರದವನೆಂದು ಊಹಿಸಲಾಗಿದೆ. ಇವನ ತಂದೆ, ತಾಯಿಯರ ಸುಳಿವಿಲ್ಲ. ಜೀವನದ ಅಂತ್ಯದಲ್ಲಿ ಸಂಸಾರದಲ್ಲಿ ಜಿಗುಪ್ಸೆಹೊಂದಿ ಈತನು ವೈರಾಗ್ಯ ಹೊಂದಿದಂತೆ ಕಾಣುತ್ತದೆ. ಇವನನ್ನು ವೀರಶೈವಕವಿಯೆಂದು ಭಾವಿಸಲಾಗುತ್ತದೆದು.

'ವಿರುಪಾಕ್ಷಾಸ್ಥಾನ ವಣ್ರನ'

ಬದಲಾಯಿಸಿ

ಇದೊಂದು ಗದ್ಯಪ್ರಚುರವಾದ ಚಿಕ್ಕ ಚಂಪೂ ಕೃತಿ; ಒಡ್ಡು ೩೬ವಚನಗಳು, ೩೩ವೃತ್ತಗಳು, ೨೮ಕಂದಗಳೂಇವೆ. ಈ ಕೃತಿಯನ್ನು ರಚಿಸಲು ಕಾರಣವಾದ ಸನ್ನಿವೇಶವನ್ನು ಹೀಗೆ ತಾನೆ ವರ್ಣಿಸಿದ್ದಾನೆ. ಆ ಗುರುರಾಯನೆನ್ನನೊಲವಿಂ ನಡೆ ನೋಡುತ ಬಾ ವಚಸ್ಸುಧಾ ಸಾಗರ ಚಂದ್ರಶೇಖರ ಕನೀಶ್ವರ ನೀಂ ನೆಗೆಳ್ದಷ್ಟಭಾಷೆಗಳ್ಆಗರಮಾದೆ ಕನ್ನಡದ ಬಿನ್ನಣಮಂ ತೋರವೇಳ್ಪುದಿಂ.


'ಗುರುಮೂರ್ತಿ ಶಂಕರಶತಕ'

ಬದಲಾಯಿಸಿ

ವಿವಿದ ವೃತ್ತಗಳಿಂದಾದ ನೂರೊಂದು ಪದ್ಯಗಳಿಂದ ಕೂಡಿದ ಒಂದು ಶತಕಕೃತಿ ಇದು. ಗುರುಮೂರ್ತಿಶಂಕರಾ ಎಂಬುದು ಉದ್ದಕ್ಕೂ ಅಂಕಿತವಾಗಿ ಬಳಕೆಯಾಗಿದೆ. ಕವಿಯೇ ಮತ್ತೊಂದೆಡೆ ಈ ಕೃತಿಯು ಶಿವಭಕ್ತಿಯುಳ್ಳವರಿಗೆ, ಸಂಸಾರವು ಹೇಯವೆಂದು ಬಗೆದವರಿಗೆ ಮತ್ತು ಮೋಕ್ಷಾಕಾಂಕ್ಷಿಗಳಿಗೆ ಮಾತ್ರ ರಚಿಸುತ್ತದೆ ಎಂದು ಹೇಳಿದ್ದಾನೆ.

ಉಲ್ಲೇಖ

ಬದಲಾಯಿಸಿ

[]

  1. ಕನ್ನಡ ಸಾಹಿತ್ಯ ಚರಿತ್ರೆ, ಡಾ. ಆರ್.ವಿಎಸ್.ಸುಂದರಂ, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು. ಮುದ್ರಕರು, ಮೈಸೂರು ವಿಶ್ವವಿದ್ಯಾನಿಲಯ ಮಾನಸಗಂಗೋತ್ರಿ ಮೈಸೂರು. ಈದನೆಯ ಸಂಪುಟ, ಎರಡನೆ ಭಾಗ, ಪುಟ-[೧೮೭-೧೯೩]