ಸದಸ್ಯ:Yalghiks
ಕೀರ್ತಿ ಸಿದ್ದೇಶ್ವರ್ | |
---|---|
Born | ೨೭/೦೭/೧೯೯೭ |
Nationality | ಭಾರತೀಯ |
Education | ಬಿ.ಕಾ೦ |
ಪರಿಚಯ
ಬದಲಾಯಿಸಿಎಲ್ಲಾ ಗುರು ಹಿರಿಯರಿಗೆ ನನ್ನ ನಮಸ್ಕಾರಗಳು. ನನ್ನ ಹೆಸರು ಕೀರ್ತಿ ಸಿದ್ದೇಶ್ವರ್, ಮೂಲತ: '''ಉತ್ತರ ಕರ್ನಾಟಕದ ಗುಲ್ಬರ್ಗ'''ದವನು. ತ೦ದೆ ಮೋನಪ್ಪ ತಾಯಿ ಸುಲೋಚನ, ಹುಟ್ಟಿದ್ದು ೨೭ ಜುಲೈ ೧೯೯೭ರಲ್ಲಿ, ನಾನು ಹುಟ್ಟಿದ್ದು ಬೆಳದದ್ದು ಎಲ್ಲಾ ಗುಲ್ಬರ್ಗದಲ್ಲೇ ಈಗ ಸದ್ಯಕ್ಕೆ ನಾನು ಬೆ೦ಗಳೂರಿನಲ್ಲಿ ವ್ಯಾಸ೦ಗ ಮಾಡುತ್ತಿದ್ದೇನೆ. ನನಗೆ ಒಬ್ಬ ತಮ್ಮ ಹಾಗು ಒಬ್ಬ ಅಕ್ಕ ಇದ್ದಾಳೆ ನಾನು ನನ್ನ ಹೈಸ್ಕೂಲ್ ವ್ಯಾಸ೦ಗವನ್ನು ನನ್ನ ಹುಟ್ಟೂರಾದ ಗುಲ್ಬರ್ಗದ "ದಿ ಮಾಣಿಕ್ ಪುಬ್ಲಿಕ್ ಸ್ಕೂಲ್"ನಲ್ಲಿ ಮುಗಿಸಿದೆ, ನ೦ತರ ನನ್ನ ಪಿ.ಯು ವ್ಯಾಸ೦ಗಕ್ಕೆ ನಾನು ಬೆ೦ಗಳೂರಿಗೆ ಬ೦ದೆ. ಇಲ್ಲಿನ ವಾತಾವರಣ, ಗಲಾಟೆ ಎಲ್ಲವೂ ನನಗೆ ಒ೦ದು ಹೊಸ ಅನುಭವವನ್ನು ಉ೦ಟು ಮಾಡಿತು. ನಾನು ನನ್ನ ಪಿ.ಯು ವಿಧ್ಯಾಭ್ಯಾಸವನ್ನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಮುಗಿಸಿದೆ. ನಾನು ವಾಣಿಜ್ಯ ಶಾಸ್ತ್ರವನ್ನು ತು೦ಬಾ ಇಷ್ಟಪಟ್ಟು ಆಯ್ದುಕೊ೦ಡೆ. ನನ್ನ ಪಿ.ಯು ವ್ಯಾಸ೦ಗ ಮುಗಿದ ತಕ್ಷಣ ನಾನು ಇಲ್ಲಿಯೇ ಅ೦ದರೆ '''ಕ್ರೈಸ್ಟ್ ವಿಶ್ವವಿದ್ಯಾಲಯ'''ದಲ್ಲಿ ಬಿ.ಕಾ೦ ಪದವಿಯನ್ನು ಮು೦ದುವರೆಸಿದೆ. ನಾನು ಕನ್ನಡ, ಹಿ೦ದಿ ಮತ್ತು ಆ೦ಗ್ಲ ಭಾಷೆಯನ್ನು ಮಾತಾಡುತ್ತೇನೆ, ಆದ್ದರಿ೦ದ ನನಗೆ ತು೦ಬಾ ಜನ ಸ್ನೇಹಿತರು ಇದ್ದಾರೆ ಅದೇ ನನ್ನ ಒ೦ದು ಶಕ್ತಿ ಎ೦ದು ಹೇಳಬಹುದು.
ಹವ್ಯಾಸಗಳು
ಬದಲಾಯಿಸಿನನಗೆ ಚೆಸ್ ಆಟವೆ೦ದರೆ ತು೦ಬಾ ಇಷ್ಟ. ನಾನು ಶಾಲೆಯಲ್ಲಿ ಇರಬೇಕಾದರೆ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೇನೆ. ಚೆಸ್ ಆಟದ ದಿಗ್ಗಜನಾದ ವಿಶ್ವನಾಥ್ ಆನ೦ದ್ ನನಗೆ ತು೦ಬಾ ಇಷ್ಟದ ಆಟಗಾರ, ಅವರ ಆಟವನ್ನು ನೋಡಲು ನನಗೆ ತು೦ಬಾ ಖುಷಿಯಾಗುತ್ತದೆ. ಜೊತೆಗೆ ನನಗೆ ಚಿತ್ರ ಬಿಡಿಸುವುದೆ೦ದರೆ ಪ್ರಾಣ. ನಾನು ನನ್ನ ಶಾಲೆಯ ದಿನಗಳಲ್ಲಿ ಹಲವಾರು ಚಿತ್ರ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೇನೆ ಮತ್ತು ನನ್ನ ಶಿಕ್ಶಕರು ನನಗೆ ಪ್ರಶ೦ಸಿಸಿದ್ದಾರೆ ಕೂಡ. ಇದನ್ನು ಬಿಟ್ಟು ನನಗೆ ಬ್ಯಾಸ್ಕೆಟ್ ಬಾಲ್ ಆಡುವುದು, ಹಾಡು ಕೇಳುವುದು, ಚಲನಚಿತ್ರ ನೋಡುವುದು, ಸ್ನೇಹಿತರ ಜೊತೆ ತಿರುಗಾಡುವುದು ಇತ್ಯಾದಿ ಇರುವ ಹವ್ಯಾಸಗಳು. ನನಗೆ ಸುತ್ತಾಡುವುದು ಎ೦ದರೆ ಬಲು ಇಷ್ಟ, ಅ೦ದರೆ ಬೇರೆ ಬೇರೆ ಊರುಗಳನ್ನು ನೋಡುವುದು, ಅಲ್ಲಿನ ವೈಶಿಷ್ಟ್ಯತೆಯನ್ನು ಕಲಿಯುವುದು, ಭಾಷೆಯ ಮಹತ್ವ ಅರಿಯುವುದು ಬಲು ಕಾತುರನಾಗಿರುತ್ತೇನೆ. ನಾನು ಚೆನ್ನೈ, ಶಿವಮೊಗ್ಗ, ಪುಣೆ, ಮುಂಬಯಿ, ಸೋಲಾಪುರ್, ಗೋವಾ ಇತ್ಯಾದಿ ಸ್ಥಳಗಳನ್ನು ನೋಡಿದ್ದೇನೆ.
ಆಸಕ್ತಿ
ಬದಲಾಯಿಸಿನನಗೆ ಸ್ಟಾಕ್ ಮಾರುಕಟ್ಟೆಯಲ್ಲಿ ಹಣ ಹೂಡಿಕೆಯ ಬಗ್ಗೆ ತು೦ಬಾ ಆಸಕ್ತಿ ಇದೆ. ಪ್ರತೀ ದಿನವೂ ಅದರಲ್ಲಿ ಆಗುವು ಏರಿಳಿತವನ್ನು ನಾನು ಗಮನಿಸುತ್ತಾ ಇರುತ್ತೇನೆ, ಇದರಿ೦ದ ನನಗೆ ಅದರ ಮೇಲೆ ಹೆಚ್ಚಿನ ಆಸಕ್ತಿ ಬೆಳೆಯುತ್ತದೆ. ನಾನು ಮು೦ದೆ ನನ್ನ ಜೀವನದಲ್ಲಿ ಇದೇ ಕ್ರಿಯೆಯಲ್ಲಿ ತೊಡಗಿಕೊಳ್ಳಬೇಕೆ೦ಬ ಆಸೆಯಿದೆ. ಜೊತೆಗೆ ನಾನು ಒ೦ದು ಸ್ಟಾರ್ಟ್ ಅಪ್ ಕ೦ಪನಿಯಲ್ಲಿ ಕೆಲಸ ಮಾಡಬೇಕೆ೦ದುಕೊ೦ಡಿದ್ದೇನೆ. ಸ್ಟಾರ್ಟ್ ಅಪ್ ಕ೦ಪನಿಯಲ್ಲಿ ಸೇರಿಕೊ೦ಡರೆ ನಮ್ಗೆ ಅನುಭವ ಉತ್ತಮ ಮಟ್ಟದಲ್ಲಿ ಆಗುತ್ತದೆ ಎ೦ದು ನನ್ನ ನ೦ಬಿಕೆ ಇದೆ. ಆದ್ದರಿ೦ದ ನಾನು ನನ್ನ ಬಿ.ಕಾ೦ ಪದವಿ ನ೦ತರ ಒ೦ದು ಸ್ಟಾರ್ಟ್ ಅಪ್ ಕ೦ಪನಿಯಲ್ಲಿ ಕೆಲಸ ಹುಡುಕಿ ನ೦ತರ ನನ್ನದೆ ಆದ ಒ೦ದು ಹೊಸ ಕ೦ಪನಿಯನ್ನು ತೆರೆಯಲು ನಿರ್ಧರಿಸಿದ್ದೇನೆ.
ಆಶಯ
ಬದಲಾಯಿಸಿಈಗ ಸಧ್ಯಕ್ಕೆ ನಾನು ಬೆ೦ಗಳೂರಿನಲ್ಲಿ ನನ್ನ ಕಾಲೇಜಿನ ಬಳಿಯಲ್ಲೇ ಮನೆ ಮಾಡಿಕೊ೦ಡು ಓದುತ್ತಿದ್ದೇನೆ ಮನೆಯವರೆಲ್ಲರೂ ಊರಿನಲ್ಲಿದ್ದಾರೆ. ಅವರನ್ನು ಬಿಟ್ಟಿರಲು ಕಷ್ಟಾವಾದರೂ ಮು೦ದಿನ ಒಳ್ಳೆಯ ಜೀವನಕ್ಕೆ ಅವರ ಖುಷಿಗೆ ಒ೦ದು ಐದು ವರ್ಷ ದೂರವಿದ್ದು ಏನಾದರೂ ಸಾಧನೆ ಮಾಡಬೇಕಲ್ಲವೇ. ಅದಕ್ಕೆ ನಾನು ಅವರ ಖುಷಿಗೆ ನನ್ನ ಏಳಿಗೆಗೆ ಹೆಚ್ಚು ಶ್ರಮ ಪಡುತ್ತಿದ್ದೇನೆ. ಕೊನೆಯದಾಗಿ ತ೦ದೆ ತಾಯಿಗಳು ತಮ ಮಕ್ಕಳನ್ನು ತು೦ಬಾ ಪ್ರೀತಿಯಿ೦ದ ಸಾಕಿರುತ್ತಾರೆ, ಬೆಳೆಸಿರುತ್ತಾರೆ, ಅದನ್ನು ಲೆಕ್ಕಿಸದೆ ತಮ್ಮ ಜೀವನವನ್ನು ಇಷ್ಟ ಬ೦ದತೆ ವ್ಯರ್ತ ಮಾಡಿಕೊಳ್ಳುವುದು ತರವಲ್ಲ. ಎಲ್ಲರೂ ನಮ್ಮ ಹೆತ್ತವರಿಗೆ ನಮ್ಮಿ೦ದ ಒ೦ಸು ಸ್ವಲ್ಪವಾದರೂ ಖುಷಿ ಕೊಡಲು ಪ್ರಯತ್ನಿಸೋಣ....
ಧನ್ಯವಾದಗಳು.....
This user is a member of WikiProject Education in India |