ಸದಸ್ಯ:YADAVALLI GADILINGAPPA/ನನ್ನ ಪ್ರಯೋಗಪುಟ
ಬುಡಕಟ್ಟು ಹಕ್ಕುಗಳ ಪ್ರತಿಪಾದಕ ಬಿರ್ಸಾ ಮುಂಡಾ
ಬದಲಾಯಿಸಿಬುಡಕಟ್ಟು ಹಕ್ಕುಗಳ ಪ್ರತಿಪಾದಕ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ 'ಧರತಿ ಆಬಾ' 'ಭೂಮಿಯ ತಂದೆ' ಎಂದೇ ಪ್ರಖ್ಯಾತರು. ಬಿರ್ಸಾ ಭಾರತದ ಪ್ರಮುಖ ಬುಡಕಟ್ಟು ಸಮುದಾಯದಗಳಲ್ಲಿ ಒಂದಾದ ಮುಂಡಾ ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಇವರು ಅಂದಿನ ಬೆಂಗಾಲ್ ಪ್ರಾಂತ್ಯದ ಜಾರ್ಖಂಡ್ ಪ್ರದೇಶದಲ್ಲಿ ನವೆಂಬರ್ 15, 1875ರಲ್ಲಿ ಜನಿಸಿದರು. ಬುಡಕಟ್ಟು ಸಮುದಾಯದ ಮೂಲ ಪರಂಪರೆ ಮತ್ತು ಬುಡಕಟ್ಟು ಅನನ್ಯತೆ ಸಂರಕ್ಷಿಸುವಲ್ಲಿ ಬಿರ್ಸಾ ಮುಂಡಾಪಾತ್ರ ಮಹತ್ವವಾದುದು.
ಬುಡಕಟ್ಟು ಸಮುದಾಯಗಳ ಹಕ್ಕುಗಳ ಸಂರಕ್ಷಣೆ ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ಬಿರ್ಸಾ ಮುಂಡಾ ನೀಡಿದ ಕೊಡುಗೆಯನ್ನು ಪರಿಗಣಿಸಿ ಬಿರ್ಸಾ ಮುಂಡಾರವರ ಜನ್ಮ ದಿನವನ್ನು "ಜನ್‌ಜಾತೀಯ ಗೌರವ್ ದಿವಸ್'' (ಬುಡಕಟ್ಟು ಗೌರವ ದಿನ) ಎಂದು ಆಚರಿಸಲಾಗುತ್ತಿದೆ. ಅಲ್ಲದೇ ಬಿರ್ಸಾ ಮುಂಡಾರವರ ಗೌರವಾರ್ಥ ಜನ್ಮ ವಾರ್ಷಿಕೋತ್ಸವದಂದು 2000ನೇ ಇಸವಿಯಲ್ಲಿ ಜಾಖರ್ಂಡ್ ರಾಜ್ಯವನ್ನು ರಚಿಸಲಾಯಿತು. ಬ್ರಿಟಿಷ್ ಇಂಡಿಯಾದ ಬಹುತೇಕ ಬುಡಕಟ್ಟು ಪ್ರದೇಶಗಳಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಕಾರ್ಯ ನಿರ್ವಹಿಸುತ್ತಿದ್ದವು. ಆ ಕಾರಣದಿಂದ ಮಿಷನರಿಗಳು ನಡೆಸುತ್ತಿದ್ದ ಶಾಲೆಯಲ್ಲಿ ಬಿರ್ಸಾ ಮುಂಡಾ ಕೂಡ ಅಧ್ಯಯನ ಮಾಡುತ್ತಿದ್ದರು.
ಶಾಲೆಯಲ್ಲಿ ಬಿರ್ಸಾಮುಂಡಾರವರದು ತುಂಬಾ ಚುರುಕುತನದಿಂದ ಕೂಡಿದ್ದಂತಹ ಕ್ರಿಯಾಶೀಲ ವ್ಯಕ್ತಿತ್ವ, ಇದನ್ನು ಗಮನಿಸಿದಂತಹ ಜೈಪಾಲ್‌ನಾಗ್ ಎಂಬ ಶಿಕ್ಷಕ ಹೆಚ್ಚಿನ ವ್ಯಾಸಂಗಕ್ಕಾಗಿ ಜರ್ಮನ್ ಮಿಷನ್ ಶಾಲೆಗೆ ಸೇರಿಸಲು ಪ್ರೋತ್ಸಾಹಿಸಿದರು. ಬಿರ್ಸಾ ಮತ್ತು ಅವರ ಅನುಯಾಯಿಗಳು ಬ್ರಿಟಿಷರ ವಿರುದ್ದ ವಿವಿಧ ಸ್ಥಳಗಳಲ್ಲಿ ಅನೇಕ ಗೆರಿಲ್ಲಾ ದಾಳಿಗಳನ್ನು ನಡೆಸಿದರು ಇದು ಭಾರತದ ಇತಿಹಾಸದಲ್ಲಿ ಮುಂಡರ ದಂಗೆ ಎಂದೆ ಹೆಸರಾಯಿತು.
ಇದರಿಂದ ಕುಪಿತಗೊಂಡ ಬ್ರಿಟಿಷರು ಬಿರ್ಸಾ ಮುಂಡಾರ ವಿರುದ್ಧ ಸಮರ ಸಾರಿ ಅವರನ್ನು ಬಂಧಿಸಲು ಸಹಾಯ ಮಾಡಿದವರಿಗೆ 500 ರೂಪಾಯಿಗಳ ಬಹುಮಾನವನ್ನು ಘೋಷಿಸಿದರು. ಬಿರ್ಸಾಕಾಡಿನೊಳಗೆ ತನ್ನ ಗೆರಿಲ್ಲಾ ಸೈನ್ಯದೊಂದಿಗೆ ಮಲಗಿದ್ದಾಗ ಅವರನ್ನು ಸುತ್ತುವರೆದ ಬ್ರಿಟಿಷ್ ಸೈನಿಕರು ಮಾರ್ಚ್ 3, 1900ರಂದು ಬಂಧಿಸಿದರು.
ಬಂಧನಕ್ಕೊಳಗಾದ ಮೂರೇ ತಿಂಗಳಲ್ಲಿ ಅಂದರೆ ಜೂನ್ 9, 1900 ರಂದು ತಮ್ಮ 25ನೇ ವಯಸ್ಸಿಗೆ ರಾಂಚಿ ಜೈಲಿನಲ್ಲಿ ಅಸ್ತಂಗತರಾದರು. ಅವರ ಬಂಧನ ಮತ್ತು ಮರಣದ ನಂತರ ಬುಡಕಟ್ಟು ಹೋರಾಟ ಮಸುಕಾಯಿತು ಎಂದರೆ ತಪ್ಪಾಗಲಾರದು.