ಸದಸ್ಯ:Vishwanatha Badikana/ನನ್ನ ಪ್ರಯೋಗಪುಟ1

ಉರಿಗೆದರು (ಬಸುರು ನಂಜು)- ಬಸುರಿನಲ್ಲೋ ಹೆರಿಗೆಯಲ್ಲೋ ಹೆರಿಗೆಯ ನಂತರದ 24 ಗಂಟೆಗಳಲ್ಲೋ ಕಾಣಿಸಿಕೊಳ್ಳುವ ಸೆಳವಿನ ಬಸುರು ರಕ್ತನಂಜು (ಎಕ್ಲಾಂಪ್ಸಿಯ). ಮೈಯಲ್ಲಿ ಉಬ್ಬರ ಕಾಣಿಸಿಕೊಂಡು ರಕ್ತ ಒತ್ತಡವೇರಿ ಕೋಳೆಮೂತ್ರದೊಂದಿಗೆ (ಅಲ್ಬುಮಿನೂರಿಯ) ಮುಖ್ಯವಾಗಿ ಸೆಳವು ಬರುವುದು. ಬೇಗನೆ ಚಿಕಿತ್ಸೆ ಆಗದಿದ್ದಲ್ಲಿ ಕೂಸಿಗೂ ಬಸುರಿಗೂ ಮಾರಕ. (ನೋಡಿ- ಹೆರಿಗೆ-ವಿಜ್ಞಾನ)

ಇದಕ್ಕೆ ಮುಖ್ಯ ಕಾರಣ ಜರಾಯುವಿನಲ್ಲಿರುವ ತೀವ್ರ ವ್ಯತ್ಯಾಸ. ಹೇಗೆ ಬರುತ್ತದೆ ಎಂದು ಇದುವರೆಗೂ ತಿಳಿದಿಲ್ಲ. ಸದ್ಯಕ್ಕೆ ಸಂಪೂರ್ಣ ಚಿಕಿತ್ಸೆ ಲಭ್ಯವಿಲ್ಲ. ಗರ್ಭಿಣಿಗೆ ಸಂಪೂರ್ಣ ವಿಶ್ರಾಂತಿ, ಉಪ್ಪು/ಖಾರ/ಮಸಾಲೆಯನ್ನು ಕಡಿಮೆ ಕೊಡುವುದು ಹಾಗೂ ಕೆಲವು ಔಷಧಿಗಳನ್ನು ಅನುಸರಿಸಲಾಗುತ್ತದೆ. ಆದರೂ ಬಾರದಂತೆ ತಡೆಯುವ ಅಥವಾ ಬಂದ ಮೇಲೆ ಪೂರ್ಣ ಉಪಶಮನಕ್ಕಾಗಿ ಯಾವುದೇ ಚಿಕಿತ್ಸೆ ಇಲ್ಲ.


ಪ್ರಸವಾನಂತರದ ರಕ್ತಸ್ರಾವ

ಬದಲಾಯಿಸಿ

ಪ್ರಸವಾನಂತರದ ಅವಧಿಯಲ್ಲಿಯ ಆಗುಹೋಗುಗಳು: ಹೆರಿಗೆಯಾದನಂತರ 6 ವಾರ ಪರ್ಯಂತ ಎಚ್ಚರಿಕೆಯ ಅವಧಿ ಮುಂದುವರಿಯುತ್ತದೆ. ಈ ವೇಳೆ ಎಲ್ಲ ಸಂತಾನೋತ್ಪತ್ತಿಯ ಅಂಗಾಂಗಗಳೂ ತಮ್ಮ ಮೊದಲಿನ ಗಾತ್ರಕ್ಕೆ, ಆಕಾರಕ್ಕೆ ಮರಳುತ್ತವೆ. ಮುಖ್ಯವಾಗಿ ಗಮನಿಸಬೇಕಾದ ಅಂಶಗಳಿವು:

(i) ಹೆರಿಗೆಯ ತರುವಾಯ ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ತೀವ್ರ ನಿಗಾವಹಿಸಬೇಕು. (ii) ಸ್ತನ್ಯಪಾನವನ್ನು ಪ್ರೋತ್ಸಾಹಿಸಬೇಕು. (iii) ತಾಯಿಗೆ ಪೌಷ್ಟಿಕ ಆಹಾರ ಮತ್ತು ಕುಟುಂಬ ಯೋಜನೆಯ ಬಗ್ಗೆ ಮಾಹಿತಿ ನೀಡಬೇಕು. (iv) ಮಗುವಿನ ಆರೋಗ್ಯದ ಬಗ್ಗೆ ಮತ್ತು ರೋಗನಿರೋಧಕಗಳ ಬಗ್ಗೆ ತಿಳಿವಳಿಕೆ ಮೂಡಿಸಬೇಕು. (v) ಜನನೇಂದ್ರಿಯಗಳ ಶುಚಿತ್ವದ ಬಗ್ಗೆ ಅರಿವು ನೀಡಬೇಕು. (vi) ಯಾವುದೇ ರೀತಿಯ ವ್ಯತ್ಯಯ ಕಂಡುಬಂದಲ್ಲಿ ಒಡನೆ ಯುಕ್ತ ಸಲಹೆ ಪಡೆದು ಅದರಂತೆ ನಡೆದುಕೊಳ್ಳಬೇಕು.

ಒಟ್ಟಿನಲ್ಲಿ - ಸ್ವಚ್ಛ ಕೈಗಳು, ಸ್ವಚ್ಛ ಪ್ರಸವ, ಸ್ವಚ್ಛ ದಾರ, ಸ್ವಚ್ಛ ಬ್ಲೇಡು, ಸ್ವಚ್ಛ ಹೊಕ್ಕಳು - ಈ ಎಲ್ಲಾ ಸ್ವಚ್ಛಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರಿಂದ ಸುರಕ್ಷಿತ ಹೆರಿಗೆಯಾಗಿ ಆರೋಗ್ಯವಂತ ಮಗು ಜನಿಸುತ್ತದೆ.