ಸದಸ್ಯ:Vinutha B.S./sandbox
ಅಂಗಾಂಶ
ಬದಲಾಯಿಸಿದೇಹದಲ್ಲಿರುವ [[ಜೀವಕೋಶ|ಜೀವಕೋಶ]]ಗಳ ಸಂಖ್ಯೆಯ ಆಧಾರದ ಮೇಲೆ ಜೀವಿಗಳನ್ನು ಏಕಕೋಶೀಯ ಹಾಗೂ ಬಹುಕೋಶೀಯ ಎಂದು ವರ್ಗೀಕರಿಸಲಾಗಿದೆ. ಏಕಕೋಶ ಜೀವಿಗಳಲ್ಲಿ ದೇಹದ ಎಲ್ಲಾ ಚಟುವಟಿಕೆಗಳನ್ನು ನಿರ್ವಹಿಸುವ ಸಾಮರ್ಥ್ಯವಿರುವ ಒಂದೇ ಒಂದು ಜೀವಕೋಶವಿದೆ. ಆದರೆ ಬಹುಕೋಶೀಯ ಸಸ್ಯ ಮತ್ತು ಪ್ರಾಣಿಗಳ ರಚನೆಯು ಹೆಚ್ಚು ಸಂಕೀಣವಾಗಿದೆ. ಇವುಗಳ ದೇಹದಲ್ಲಿ ನಿರ್ದಿಷ್ಟವಾದ ಕೆಲಸವನ್ನು ನಿರ್ವಹಿಸುವ ಸಲುವಾಗಿ ವಿಶಿಷ್ಟ ಜೀವಕೋಶಗಳ ಗುಂಪುಗಳಿವೆ.
ಒಂದು ನಿರ್ದಿಷ್ಟ ಮೂಲದಿಂದ ಬಂದ, ಒಂದೇ ರೀತಿಯ ರಚನೆ ಹಾಗೂ ಕಾಯಗಳನ್ನು ಮಾಡುವ ಜೀವಕೋಶಗಳ ಗುಂಪಿಗೆ ಅಂಗಾಂಶ ಎಂದು ಹೆಸರು.
ಅಂಗಾಂಶಗಳು ತಮ್ಮ ರಚನೆಯಲ್ಲಿ ಹೆಚ್ಚಿನ ವೈವಿಧ್ಯ ತೋರುತ್ತವೆ. ವಿಶೇಷವಾಗಿ ಕೋಶದ ಆಕಾರ, ಕೋಶಭಿತ್ತಿಯ ಮಂದತ್ವ ಹಾಗೂ ಇನ್ನಿತರ ಲಕ್ಷಣಗಳಲ್ಲಿ ಈ ಭಿನ್ನತೆ ಇದೆ. ಪ್ರತಿಯೊಂದು ಅಂಗಾಂಶವು ಒಂದು ನಿರ್ದಿಷ್ಟ ಕಾರ್ಯವನ್ನು ನಿರ್ವಹಿಸುತ್ತದೆ. ನಿರ್ದಿಷ್ಟ ನಿರ್ದಿಷ್ಟ ಕಾರ್ಯವನ್ನು ನಿರ್ವಹಿಸಲು ಜೊತೆಗೂಡುವ ಅಂಗಾಂಶಗಳ ಗುಂಪಿಗೆ ಅಂಗ(organ) ಎಂದು ಹೆಸರು. ನಿರ್ದಿಷ್ಟ ಕಾರ್ಯಗಳನ್ನು ನಿರ್ವಹಿಸುವ ಅಂಗಗಳ ಗುಂಪಿಗೆ ಅಮಗ ವ್ಯವಸ್ಥೆ(organ system) ಎಂದು ಹೆಸರು.
ಸಸ್ಯ ಅಂಗಾಂಶಗಳು
ಬದಲಾಯಿಸಿಆವೃತ ಬೀಜ ಸಸ್ಯಗಳಲ್ಲಿ ಬೆಳವಣಿಗೆ, ಹೀರಿಕೆ, ದ್ಯುತಿ ಸಂಶ್ಲೇಷಣೆ, ರಕ್ಷಣೆ ಹಾಗೂ ನೀರು ಮತ್ತು ಪೋಷಕಾಂಶಗಳ ಸಾಗಾಣಿಕೆ ಮುಂತಾದ ವಿವಿಧ ಕಾರ್ಯಗಳನ್ನು ನಿರ್ವಹಿಸಲು ವಿವಿಧ ಬಗೆಯ ಅಂಗಾಂಶಗಳಿವೆ.
ಕಾರ್ಯದ ಆಧಾರದ ಮೇಲೆ ಸಸ್ಯ ಅಂಗಾಂಶಗಳನ್ನು ವರ್ಧನ ಅಂಗಾಂಶ(Meristematic Tissue) ಹಾಗೂ ಶಾಶ್ವತ ಅಂಗಾಂಶಗಳು(Permanent Tissue) ಎಂದು ವರ್ಗೀಕರಿಸಲಾಗುತ್ತದೆ.
ವರ್ಧನ ಅಂಗಾಂಶ(Meristematic Tissue)
ಬದಲಾಯಿಸಿನಮಗೆಲ್ಲಾ ತಿಳಿದಿರುವ ಹಾಗೆ ಸಸ್ಯಗಳು ಜೀವಿತಾವಧಿಯ ಕೊನೆಯವರೆಗೆ ಬೆಳೆಯುತ್ತಿರುತ್ತವೆ. ಇದಕ್ಕೆ ಕಾರಣ ಬೆಳವಣಿಗೆಗಾಗಿಯೇ ಇರುವ ವರ್ಧನ ಅಂಗಾಂಶ.
ವರ್ಧನ ಅಂಗಾಂಶ ನಿರಂತರವಾಗಿ ವಿಭಜನೆಯಾಗುತ್ತಿರುವ ಭ್ರೂಣಕೋಶಗಳಿಂದ ಕೂಡಿದೆ. ಇದಕ್ಕೆ ಬೆಳವಣಿಗೆಯ ಅಂಗಾಂಶ ಎಂಬ ಹೆಸರೂ ಸಹ ಇದೆ. ಇದು ಬೇರಿನ ತುದಿ, ಕಾಂಡದ ತುದಿ, ಮೊಗ್ಗು ಮುಂತಾದ ಬೆಳೆಯುತ್ತಿರುವ ಸಸ್ಯದ ಭಾಗಗಳಲ್ಲಿ ಕಂಡುಬರುತ್ತದೆ.
ಎರಡು ರೀತಿಯ ವರ್ಧನ ಅಂಗಾಂಶಗಳನ್ನು ಗುರುತಿಸಬಹುದು. ಅವುಗಳೆಂದರೆ, ತುದಿ ವರ್ಧನ ಅಂಗಾಂಶ((Apiical) ಹಾಗೂ ಪಾರ್ಶ್ವ (Lateral) ವರ್ಧನ ಅಂಗಾಂಶ.ತುದಿ ವರ್ಧನ ಅಂಗಾಂಶವು ಕಾಂಡದ ತುದಿಯಲ್ಲಿ ಸಕ್ರಿಯವಾಗಿದ್ದು, ಸಸ್ಯದ ಎತ್ತರ ಹೆಚ್ಚುವುದಕ್ಕೆ ಕಾರಣವಾಗಿದೆ. ಪಾರ್ಶ್ವ ವರ್ಧನ ಅಂಗಾಂಶವು ಸಸ್ಯದ ಸುತ್ತಳತೆಯ ಹೆಚ್ಚಳಕ್ಕೆ ಕಾರಣವಾಗಿದೆ.
ವರ್ಧನ ಅಂಗಾಂಶದ ಜೀವಕೋಶಗಳ ಲಕ್ಷಣಗಳು
ಬದಲಾಯಿಸಿ೧. ಕೋಶ ಭಿತ್ತಿಯು ತೆಳುವಾಗಿದೆ. ೨. ಜೀವಕೋಶಗಳು ನಿರಂತರ ವಿಭಜನೆಯಿಂದಾಗಿ ಬೆಳವಣಿಗೆಗೆ ಕಾರಣವಾಗುತ್ತವೆ. ೩. ಜೀವಕೋಶಗಳು ಒತ್ತೊತ್ತಾಗಿ ಜೋಡಣೆಯಾಗಿದ್ದು ನಡುವೆ ಅಂತರ್ ಕೋಶೀಯ ಅವಕಾಶಗಳಿರುವುದಿಲ್ಲ ೪. ದೊಡ್ಡ ಕೋಶಕೇಂದ್ರವಿರುತ್ತದೆ. ಆದರೆ ಪ್ಲಾಸ್ಟಿಡ್ ಗಳು ಇರುವುದಿಲ್ಲ ೫. ಕೋಶಾವಕಾಶಗಳು ಚಿಕ್ಕದಿರಬಹುದು ಅಥವಾ ಇಲ್ಲದಿರಬಹುದು.
== ಶಾಶ್ವತ ಅಂಗಾಂಶಗಳು==
ಈ ಅಂಗಾಂಶಗಳು ಪ್ರೌಢಜೀವಕೋಶಗಳಿಂದ ಉಂಟಾಗಿವೆ. ಜೀವಕೋಶಗಳ ಕೋಶ ಭಿತ್ತಿಯು ಸೆಲ್ಯುಲೋಸ್ ನಿಂದ ಕೂಡಿದೆ. ಜೊತೆಗೆ ಹೆಮಿಸೆಲ್ಯುಲೋಸ್, ಪೆಕ್ಟಿನ್ ಹಾಗೂ ಲಿಗ್ನಿನ್ ಎಂಬ ವಸ್ತುಗಳೂ ಇರಬಹುದು. ಪ್ಲಾಸ್ಟಿಡ್ ಗಳು ಮತ್ತಿತರ ಕಣದಂಗಗಳು ಅಭಿವೃದ್ಧಿಯಾದ ಸ್ಥಿತಿಯಲ್ಲಿರುತ್ತವೆ. ಕೋಶಾವಕಾಶಗಳು ದೊಡ್ಡದಾಗಿದ್ದು, ಪ್ರಮುಖವಾಗಿರುತ್ತವೆ. ಪ್ರೌಢ ಹಂತದಲ್ಲಿ ಕೋಶಕೇಂದ್ರ ಇರಬಹುದು ಇಲ್ಲದೆಯೂ ಇರಬಹುದು. ಶಾಶ್ವತ ಅಂಗಾಂಶಗಳಲ್ಲಿ ಎರಡು ಪ್ರಮುಖ ಗುಂಪುಗಳಿವೆ. ಅವುಗಳೆಂದರೆ ಸರಳ ಶಾಶ್ವತ ಅಂಗಾಂಶಗಳು ಮತ್ತು ಸಂಕೀಣ ಶಾಶ್ವತ ಅಂಗಾಂಶಗಳು.
ಸರಳ ಶಾಶ್ವತ ಅಂಗಾಂಶಗಳು
ಬದಲಾಯಿಸಿಸರಳ ಶಾಶ್ವತ ಅಂಗಾಂಶಗಳಲ್ಲಿ ಎಲ್ಲ ಜೀವಕೋಶಗಳು ಒಂದೇ ರೀತಿಯಲ್ಲಿದ್ದು , ಒಂದೇ ರೀತಿಯ ಕಾರ್ಯವನ್ನು ನಿರ್ವಹಿಸುತ್ತವೆ. ಸಸ್ಯ ದೇಹದ ಬಹುಭಾಗವನ್ನು ಆಕ್ರಮಿಸುವ ಈ ಅಂಗಾಂಶಗಳು ಸಂಗ್ರಹ, ಆಧಾರ ಮುಂತಾದ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತವೆ. ಮೂರು ಬಗೆಯ ಸರಳ ಶಾಶ್ವತ ಅಂಗಾಂಶಗಳನ್ನು ಗುರುತಿಸಬಹುದು. ಅವುಗಳೆಂದರೆ
- ಪೇರಂಕೈಮ
- ಕೋಲಂಕೈಮ
- ಸ್ಕ್ಲೀರೆಂಕೈಮ
ಪೇರಂಕೈಮ
ಬದಲಾಯಿಸಿಈ ಅಂಗಾಂಶವು ಸಸ್ಯದ ಬೇರು, ಕಾಂಡ, ಎಲೆ, ಹೂವು, ಹಣ್ಣು ಹಾಗೂ ಬೀಜದ ಮೃದುವಾದ ಭಾಗಗಳಲ್ಲಿ ಕಂಡು ಬರುತ್ತದೆ. ಪೇರಂಕ್ಯೆಮ ಅಂಗಾಂಶವು ತೆಳುವಾದ ಭಿತ್ತಿಯನ್ನು