ಸದಸ್ಯ:Vinu Sujitha Michael/ನನ್ನ ಪ್ರಯೋಗಪುಟ/2
ಮಾನವ ಸಂತಾನೋತ್ಪತ್ತಿ
ಬದಲಾಯಿಸಿಮಾನವ ಸಂತಾನೋತ್ಪತ್ತಿ ಲೈಂಗಿಕ ಸಂತಾನೋತ್ಪತ್ತಿಯ ಉದಾಹರಣೆ. ಇದು ಲೈಂಗಿಕ ಸಂಭೋಗ, ಫಲೀಕರಣ, ಗರ್ಭಧಾರಣೆ ಮತ್ತು ಹೆರಿಗೆಯನ್ನು ಒಳಗೊಂಡಿದೆ. ಭಿನ್ನ ಲಿಂಗದ ಜೀವಾಣುವಿನೊಡನೆ ಸಂಯೋಗ ಹೊಂದಿ ಗರ್ಭೋತ್ಪತ್ಥಿ ಮಾಡುವ ಗಂಡು ಅಥವಾ ಹೆಣ್ಣು ಜೀವಾಣುಗಳನ್ನು ಗ್ಯಾಮೀಟುಗಳು ಎಂದು ಕರೆಯಲಾಗುತ್ತದೆ. ಪುರುಷ ಗ್ಯಾಮೀಟುಗಳು ಪುರುಷ ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿ ರೂಪುಗೊಳ್ಳುತ್ತದೆ. ಸ್ತ್ರೀ ಗ್ಯಾಮೀಟುಗಳು ಸ್ತ್ರೀ ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿ ರೂಪುಗೊಳ್ಳುತ್ತದೆ. ಪುರುಷ ಗ್ಯಮೀಟುಗಳನ್ನು ವೀರ್ಯ ಹಾಗೂ ಸ್ತ್ರೀ ಗ್ಯಮೀಟುಗಳನ್ನು ಅಂಡಕೋಶ ಎಂದು ಕರೆಯಲಾಗುತ್ತದೆ. ಗ್ಯಾಮೀತುಗಳು ಅರೆವಿದಳನ (ಮೀಯಾಸಿಸ್)ಎಂಬ ಕೋಶ ವಿಭಜನೆಯ ಮೂಲಕ ರೂಪುಗೊಳ್ಳುತ್ತದೆ. ವೀರ್ಯ ಮತ್ತು ಅಂಡಕೋಶ ಮಿಶ್ರಣದ ಪರಿಣಾಮವೇ ಫಲೀಕರಣ. ಸಾಮನ್ಯ ಮಾನವ ಕೋಶದಲ್ಲಿ ೪೬ ವರ್ಣತಂತುಗಳು (ಕ್ರೋಮೊಸೊಮ್) ಇವೆ. ಆದರೆ ಗ್ಯಾಮೀಟುಗಳಲ್ಲಿ ೨೩ ಮಾತ್ರ ಇವೆ. ಪುರುಶ ಮತ್ತು ಸ್ರ್ತೀ ಗ್ಯಾಮೀಟುಗಳ ಬೆರೆಸುವಿಕೆಯಿಂದ ಯುಗ್ಮ ಎಂಬ ಡಿಪ್ಲಾಯ್ಡ್ ಕೋಶ ರೂಪುಗೊಳ್ಳುತ್ತದೆ. ಇದರಲ್ಲಿ ೪೬ ವರ್ಣತಂತುಗಳು ಇರುತ್ತದೆ, ತಂದೆಯಿಂದ ೨೩, ತಾಯಿಯಿಂದ ೨೩ ನೀಡಲಾಗಿದೆ. ಈ ಯುಗ್ಮ ಕೋಶ ಭಾಗಿಸಿ ಬ್ಲಾಸ್ಟೋಸಿಸ್ಟ್ ಎಂಬ ಕೋಶದ ಗುಂಪಾಗಿ ಪರಿಣಾಮಗೊಂಡು ಗರ್ಭಾಶಯ ಎಂಬ ಅಂಗದಲ್ಲಿ ಒಳಸೇರಿಸಿಕೊಳ್ಳುತ್ತದೆ. ೯ ತಿಂಗಳ ಗರ್ಭಾವಸ್ಥೆಯ ನಂತರ ಹೆರಿಗೆ.
ಪುರುಷ ಸಂತಾನೋತ್ಪತ್ತಿ ವ್ಯವಸ್ಥೆ
ಬದಲಾಯಿಸಿಪುರುಷ ಸಂತಾನೋತ್ಪತ್ತಿ ವ್ಯವಸ್ಥೆ ಪ್ರಧಾನವಾಗಿ ವೃಷಣ (ಟೆಸ್ಟಿಸ್) , ವಾಸ್ ಡೆಫರನ್ಸ್, ವಾಸ್ ಎಫೆರೆನ್ಸ್ , ಎಪಿಡೈಡಿಮಿಸ್, ಶಿಶ್ನ ಮತ್ತು ಇತರ ಪರಿಕರ ಗ್ರಂಥಿಗಳನ್ನು ಒಳಗೊಂಡಿದೆ. ಶಿಶ್ನ ಹೆಣ್ಣಿನೊಡನೆ ಸಂಭೋಗ ಮಾಡುವುದಕ್ಕಾಗಿರುವ ಅಂಗ, ಸ್ತ್ರೀಯ ದೇಹದಲ್ಲಿ ವೀರ್ಯದಾನ ಮಾಡುತ್ತದೆ. ವೃಷಣಕೋಶ (ಸ್ಕ್ರೊಟಮ್ ) ಎಂಬ ಚೀಲದಂತಹ ರಚನೆಯಲ್ಲಿ ಇದೆ. ಇದರಿಂದ ದೇಹದ ಶಾಖಕ್ಕಿಂತ ೨-೩ ಡಿಗ್ರೀ ಸೆಲ್ಸಿಯಸ್ ತಾಪಮಾನ ಕಡಿಮೆ ಇರುತ್ತದೆ. ಇದು ಪುರುಷ ಗ್ಯಮೀಟುಗಳ ರೂಪುಗೊಳ್ಳುವಿಕೆಗೆ ಅಗತ್ಯವಾಗಿದೆ. ಪುರುಷ ಗ್ಯಮೀಟುಗಳ ಉತ್ಪಾದನೆಗೆ ಆಂಡ್ರೋಜನ್ ಹಾರ್ಮೋನುಗಳು ಬೇಕಾಗಿದೆ. ಟೆಸ್ಟಿಸ್ನ ಕ್ರಿಯಾತ್ಮಕ ಘಟಕಗಳು ಸೆಮಿನಿಫರಸ್ ಟ್ಯುಬ್ಯುಲ್. ಇದು ಸೆರ್ಟೋಲಿ ಕೋಶಗಳು ಮತ್ತು ಜೀವಾಣುಕೋಶಗಳನ್ನು ಒಳಗೊಂಡಿದೆ. ಜೀವಾಣುಕೋಶಗಳು ಅರೆವಿದಳನ ವಿಭಜನೆಯನ್ನು ಒಳಗೊಂಡು ವೀರ್ಯಾ ರೂಪುಗೊಳ್ಳುತ್ತದೆ. ಸೆರ್ಟೋಲಿ ಕೋಶಗಳು ವೀರ್ಯಾ ಬೆಳವಣಿಗೆಗೆ ಬೇಕಾದ ಪೋಷಕಾಂಶಗಳನ್ನು ನೀಡುತ್ತದೆ.ಈ ಪ್ರಕ್ರಿಯೆಯನ್ನು ವೀರ್ಯರೇತ್ರೋತ್ಪತ್ತಿ ಎಂದು ಕರೆಯಲಾಗುತ್ತದೆ.
ಸ್ತ್ರೀ ಸಂತಾನೋತ್ಪತ್ತಿ ವ್ಯವಸ್ಥೆ
ಬದಲಾಯಿಸಿಸ್ತ್ರೀ ಸಂತಾನೋತ್ಪತ್ತಿ ವ್ಯವಸ್ಥೆ ಅಂಡಾಶಯ, ಡಿಂಬನಾಳ, ಗರ್ಭಾಶಯ , ಗರ್ಭಕಂಠ (ಸೆರ್ವಿಕ್ಸ್), ವಜೈನ(ಜನನದ್ವಾರ)ಗಳನ್ನು ಒಳಗೊಂಡಿದೆ. ಅಂಡಾಶದಿಂದ ಪ್ರತಿ ತಿಂಗಳು ಒಂದು ಅಂಡಾಕೋಶ ಬಿಡುಗಡೆಯಾಗುತ್ತದೆ. ಫಲೀಕರಣ ಡಿಂಬನಾಳದ ಆಮ್ಫ್ಯುಲ್ಲ-ಇಸ್ತ್ಮಸ್ ಸಂಗಮದಲ್ಲಿ ಸಂಭವಿಸುತ್ತದೆ. ಇದ್ದರಿಂದಲೇ ಎಲ್ಲಾ ಲೈಂಗಿಕ ಸಂಭೋಗಗಳು ಗರ್ಭಧಾರಣೆಯಲ್ಲಿ ಮುಗಿಯುವುದಿಲ್ಲ. ಪುರುಶ ಮತ್ತು ಸ್ರ್ತೀ ಗ್ಯಾಮೀಟುಗಳ ಬೆರೆಸುವಿಕೆಯಿಂದ ಯುಗ್ಮ ಎಂಬ ಡಿಪ್ಲಾಯ್ಡ್ ಕೋಶ ರೂಪುಗೊಳ್ಳುತ್ತದೆ. ಈ ಯುಗ್ಮ ಕೋಶ ಭಾಗಿಸಿ ಬ್ಲಾಸ್ಟೋಸಿಸ್ಟ್ ಎಂಬ ಕೋಶದ ಗುಂಪಾಗಿ ಪರಿಣಾಮಗೊಂಡು ಗರ್ಭಾಶಯ ಎಂಬ ಅಂಗದಲ್ಲಿ ಒಳಸೇರಿಸಿಕೊಳ್ಳುತ್ತದೆ. ಭ್ರೂಣಸೃಷ್ಟಿ ಮತ್ತು ಅಂಗಸೃಷ್ಟಿ ಪ್ರಾರಂಭವಾಹುತ್ತದೆ. ಭ್ರೂಣ ೯ ತಿಂಗಳು ಬೆಳೆದ ನಂತರ ಹೆರಿಗೆ ನಡೆಯುತ್ತದೆ. ಸ್ರ್ತೀ ಗ್ಯಮೀಟುಗಳ ಉತ್ಪಾದನೆಗೆ ಈಸ್ಟೋಜನ್ ಎಂಬ ಹಾರ್ಮೋನುಗಳ ಅಗತ್ವಿದೆ. ಆದರೆ ಅಂಡಾಕೋಶ ಫಲೀಕರಣ ಆಗದೆ ಇದ್ದರೆ, ಮುಟ್ಟಾಗುವಿಕೆ(ಮೆನ್ಸ್ಟ್ರುವೆಶನ್) ಸಂಭವಿಸುತ್ತದೆ. ಹೆಣ್ಣು ಭ್ರೂಣ ತನ್ನ ತಾಯಿಯ ಗರ್ಭಾಶಯದಲ್ಲಿ ಇರುವಾಗಲೇ ಅಂಡಕೋಶಗಳು ಅದರ ದೇಹದಲ್ಲಿ ರೂಪುಗೊಳ್ಳುತ್ತದೆ. ಅಂಡಾಶಯದಲ್ಲಿ ಜೀವಾಣುಕೋಶಗಳು ಮೀಯಾಸಿಸ್ ವಿಭಜನೆಯನ್ನು ಒಳಗೊಂಡು ಅಂಡಕೋಶವಾಗುತ್ತದೆ.ಈ ಪ್ರಕ್ರಿಯೆಯನ್ನು ಅಂಡೋತ್ಪತ್ತಿ ಎಂದು ಕರೆಯಲಾಗುತ್ತದೆ.
ಫಲೀಕರಣ
ಬದಲಾಯಿಸಿಮಾನವ ಸಂತಾನೋತ್ಪತ್ತಿಯಲ್ಲಿ ಫಲೀಕರಣ ಆಂತರಿಕವಾಗಿದೆ. ಸ್ರ್ತೀಯ ದೇಹದಲ್ಲಿ ಸಂಭವಿಸುತ್ತದೆ. ಶಿಶ್ನ ಸ್ರ್ತೀಯ ದೇಹದ ವಜೈನದಲ್ಲಿ ವೀರ್ಯದಾನ ಮಾಡುತ್ತದೆ. ಪ್ರತಿ ಒಂದು ವೀರ್ಯದಾನದಲ್ಲಿ ೨೫೦ ಮಿಲ್ಲಿಯನ್ ವೀರ್ಯಾವನ್ನು ಬಿಡುಗಡೆ ಮಾಡಲಾಗುತ್ತದೆ. ಬಿಡುಗಡೆಯಾದ ವೀರ್ಯಗಳು ಸ್ತ್ರೀಯ ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿ ಚಲಿಸಿ ಡಿಂಬನಾಳದ ಆಮ್ಫ್ಯುಲ್ಲ-ಇಸ್ತ್ಮಸ್ ಸಂಗಮವನ್ನು ಸೇರುತ್ತದೆ. ಅದೇ ಸಮಯದಲ್ಲಿ, ಅಂಡಾಶಯದಿಂದ ಬಿಡುಗಡೆಯಾದ ಅಂಡಕೋಶ ಡಿಂಬನಾಳದ ಕಡೆ ಚಲಿಸುತ್ತದೆ. ಬಿಡುಗಡೆಯಾದ ಸಾವಿರಾರು ಪುರುಷ ಗ್ಯಾಮೀಟುಗಳಲ್ಲಿ ಒಂದೇ ಒಂದು ಮಾತ್ರ ಅಂಡಕೋಶದ ಜೊತೆ ಬೆರೆಸುತ್ತದೆ. ಫಲೀಕರಣ ಆದ ನಂತರ ಯುಗ್ಮ ರೂಪುಗೊಳ್ಳುತ್ತದೆ, ಗರ್ಭಾಶಯದಲ್ಲಿ ಸೇರಿ ಗರ್ಭಾವಸ್ಥೆ ನಡೆಯುತ್ತದೆ.
ಗರ್ಭಧಾರಣೆ
ಬದಲಾಯಿಸಿಭ್ರೂಣ ತಾಯಿಯ ದೇಹದಿಂದ ಪೋಷಕಾಂಶಗಳನ್ನು ಪಡೆದು, ಪೋಷಿಸಿಕೊಂಡು ಬೆಳೆಯುವ ಸಮಯವೇ ಗರ್ಭಧಾರಣೆ. ಈ ಸಮಯದಲ್ಲಿ ಭ್ರೂಣ ಬೆಳೆದು ಅಭಿವೃದ್ಧಿಗೊಂಡು ಹೊರ ಜಗತ್ತನ್ನು ಎದುರಿಸಲು ಸಿದ್ಧವಾಗುತ್ತದೆ. ಪ್ಲಸೆಂಟ ಎಂಬ ಸಾವಯಕ ರಾಚನಿಕ ಹಾಗೂ ಕ್ರಿಯಾತ್ಮಕ ಸಂಪರ್ಕವನ್ನು ಸ್ಥಾಪಿಸುತ್ತದೆ. ಪ್ಲಸೆಂಟ ಎಂದರೆ ಹೊಕ್ಕುಳುಬಳ್ಳಿಯ ಮೂಲಕ ಭ್ರೂಣದ ಪೋಷಣ ನೀಡಿ, ಹೆರಿಗೆಯಲ್ಲಿ ಹೊರಕ್ಕೆ ದೂಡಲ್ಪಡುವ, ರಕ್ತ ನಾಳಗಳು ತುಂಬಿದ, ಚಪ್ಪಟೆಯಾದ, ಸ್ಪಂಜಿನಂತಹ ಅಂಗ. ಮಗುವಿಗೆ ಬೇಕಾದ ಪೋಷಕಾಂಶ, ಅನಿಲ , ರಕ್ತ ಸಂಬಂಧ ವಿಷಯಗಳು, ರೋಗನಿರೋಧಕ, ವಿನಾಯಿತಿ ಮುಂತಾದವುಗಳನ್ನು ಪಡೆದುಕೊಳ್ಳುತ್ತದೆ. ಅಂಗಸೃಷ್ಟಿ ಮತ್ತು ಬೆಳವಣಿಗೆಗಳು ನಡೆಯುತ್ತದೆ. ಮನುಷ್ಯರಲ್ಲಿ ಗರ್ಭಾವಸ್ಥೆಯ ಅವಧಿ ಸುಮಾರು ೨೬೬ ದಿನಗಳು.
ಹೆರಿಗೆ
ಬದಲಾಯಿಸಿಮಗು ಸಾಕಷ್ಟು ಬೆಳೆದ ನಂತರ ಹೆರಿಗೆಗೆ ಕೆಲವು ರಾಸಾಯನಿಕ ಪ್ರಚೋದಕಗಳನ್ನು ಸಂಕೇತಗಳಾಗಿ ನೀಡಲಾಗುತ್ತದೆ. ಇದರಿಂದಾಗಿ ಆಕ್ಸಿಟೋಕ್ಸಿನ್ ಹಾರ್ಮೋನಿನ ಉತ್ಪಾದನೆ ಹೆಚ್ಚಾಗುತ್ತದೆ. ಇದು ಗರ್ಭಾಶಯದ ಕುಗ್ಗುವಿಕೆಯನ್ನು ಪ್ರಾರಂಭಿಸುತ್ತದೆ. ಇದರಿಂದಾಗಿ ಕಾರ್ಮಿಕ ನೋವು ಉಂಟಾಗುತ್ತದೆ. ಗರ್ಭಾಶಯದ ಕುಗ್ಗುವಿಕೆಯಿಂದ ಮಗು ಜನನದ್ವಾರದ ಕಡೆ ತಳ್ಳಲ್ಪಟ್ಟು ಹೊರಹಾಕಲಾಗುತ್ತದೆ. ಮಗು ಜನಿಸಿದ ನಂತರ ಪ್ಲಸೆಂಟನೂ ಹೊರಹಾಕಲಾಗುತ್ತದೆ.