ಸದಸ್ಯ:Vinitha johni/sandbox
ಏರಿಕ್ ವೊನ್ ಡಾನಿಕನ್ ಮತ್ತು ಭಾರತ 1968ರಲ್ಲಿ ಪ್ರಕಟವಾದ ಡಾನಿಕನ್ ನ ಮೊದಲ ಪುಸ್ತಕ ಚಾರಿಯೆಟ್ಸ ಆಫ್ ದಿ ಗಾಡ್ಸ್? ಬಿಡುಗಡೆ ಆಗುತ್ತಿದ್ದಂತೆಯೇ ಅಮೇರಿಕ, ಯುರೋಪ್ ಹಾಗೂ ಭಾರತದಲ್ಲಿ ಯಶಸ್ಸನ್ನು ಕಂಡಿತು. ಇದೇ ಪುಸ್ತಕವನ್ನು 1970ರಲ್ಲಿ ಬಂಗಾಳಿ ಭಾಷೆಗೆ ಶ್ರೀ ಅಜೀತ್ ದತ್ತಾರವರು ಹಾಗೂ ಕನ್ನಡಕ್ಕೆ ಶ್ರೀ ಉಡುಪಿ ಅನಂತೇಶರಾಯರು ಅನುವಾದಿಸಿದ್ದಾರೆ. 70-80ರ ದಶಕದಲ್ಲಿ ಡಾನಿಕನ್ ವಿಚಾರಗಳ ನಂಬುಗರಲ್ಲಿ ಭಾರತೀಯ ವಿದ್ಯಾಥಿಗಳ ಸಂಖ್ಯೆ ಹೆಚ್ಚಾಗಿತ್ತು.
ಡಾನಿಕನ್ ತನ್ನ ಪ್ರತಿಯೊಂದು ಪುಸ್ತಕದಲ್ಲಿ ಪ್ರಸ್ತಾಪಿಸಿರುವ ವಿಚಾರಗಳಲ್ಲಿ ಪ್ರಾಗೈತಿಹಾಸಿಕ ಭಾರತದಲ್ಲಿ ಗೋಚರಿಸಿದ ಘಟನೆಗಳನ್ನು ಆದ್ಯ ಭಾರತದ ಋಷಿ - ಮುನಿಗಳು, ವಿಜ್ಞಾನಿಗಳು, ಶಾಸ್ತ್ರಜ್ಞರು ನಮಗೆ ಒದಗಿಸಿಕೊಟ್ಟಂತಹ ಅನೇಕ ಶಾಸ್ತ್ರಗಳನ್ನು, ರಾಮಾಯಣ-ಮಹಾಭಾರತದಲ್ಲಿ ಬರುವ ಪ್ರಸಂಗಗಳನ್ನು ಪೂಜ್ಯಭಾವನೆಯಿಂದ ಸಾಕ್ಷ್ಯಾಧಾರವಾಗಿ ಅರ್ಪಿಸಿದ್ದಾನೆ. ಡಾನಿಕನ್್ಗೆ ಪ್ರಾಚೀನ ಹಾಗೂ ಪೌರಾಣಿಕ ಐತಿಹ್ಯ ರಹಸ್ಯಗಳ ಪದರಗಳನ್ನು ಸುಲಿದು ಸತ್ಯವನ್ನು ಬಯಲು ಮಾಡಬೇಕೆಂಬ ಉದ್ದೇಶದಲ್ಲಿ ಭಾರತದ ಪ್ರಾಮುಖ್ಯತೆ ಹಾಗೂ ಅನೇಕ ವಿಚಾರಗಳಲ್ಲಿ ಪ್ರಾಚೀನ ಭಾರತದ ಸಾಧನೆಗಳು ಹಾಗೂ ಇಲ್ಲಿಯ ಗಣ್ಯರ ಕೊಡುಗೆಯ ಮೇಲೆ ತನಗಿರುವ ಭಕ್ತಿಯನ್ನು ವ್ಯಕ್ತಪಡಿಸಿದ್ದಾನೆ.
ಡಾನಿಕನ್ ಭಾರತಕ್ಕೆ ಭೇಟಿ ಕೂಡ ನೀಡಿದ್ದ ಕಾಶ್ಮೀರದಲ್ಲಿರುವ ಪ್ರಾಚೀನ ಮಾರ್ತಾಂಡ ದೇಗುಲದಲ್ಲಿ ಅಕ್ಷರಿಕ್ಷಯಾನವೊಂದು ಹಿಂದೆ ಬಂದಿಳಿದ ಸಂಗತಿಯನ್ನು ಪ್ರಮಾಣಿಸಲು ಅಲ್ಲಿ ' ಪರಮಾಣುವಿಕಿರಣವನ್ನು ' ಶೋಧಿಸಿ ಪರಮಾಣು ವಿಕಿರಣದ ಮಟ್ಟವನ್ನು ಅಳೆಯಲು ಬಂದಿದ್ದನು. ಈ ವಿಷಯವನ್ನು ಹಾಗೂ ಡಾನಿಕನ್ ಭಾರತದ ಪತ್ರಿಕೆಗಳು ಕಟುವಾಗಿ ಟೀಕಿಸಿದ್ದವು. ದುರಾದೃಷ್ಠವಶಾತ್ ಡಾನಿಕನ್ ಗೆ ತನ್ನ ುದ್ದೇಶವನ್ನು ಸಂಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ದೇಗುಲದ ಬಳಿ ಪರಮಾಣು ವಿಕಿರಣ ಕಂಡುಬಂದ ಕಾರಣ ಿವನ ಭೇಟಿ ನಿಷ್ಫಲವಾಯಿತು. ಏನೆ ಇರಲಿ, ಆಸಕ್ತಿಕರವಾದ ವಿಷಯವೇನೆಂದರೆ,ಡಾನಿಕನ್ ವಿವಾದಾಸ್ಪದ ಹಾಗೂ ನವೀನ ವಿಚಾರಗಳನ್ನು ಇಡೀ ವಿಶ್ವದಲ್ಲಿ ಬಿಚ್ಚುಮನಸ್ಸಿನಿಂದ ಸ್ವೀಕರಿಸಿದಂತಹ ಸಂಸ್ಕ್ತ್ಗಗಳಲ್ಲ್ಲಿ ಭಾರತವು ಮೊದಲನೆಯದಾಗಿತ್ತು. ಅಂದು ನಮ್ಮ ಜನರ ವಿಚಾರಧಾರೆಯು ಎಷ್ಟು ಮುಕ್ತವಾಗಿತ್ತು. ಎಷ್ಟು ಶೋಧಕವಾಗಿತ್ತು ಎಂದು ತಿಳಿದುಬರುತ್ತದೆ. ಇಂದು , ಡಾನಿಕನ್ ನ ವಿಚಾರಗಳನ್ನು ಒಪ್ಪುವುದಿರಲಿ , ಇಂತಹ ಒರ್ವ ವ್ತಕ್ತಿ ಇರುವನೆಂಬ ವಿಚಾರವನ್ನು ಅರಿತಿರುವವರೇ ವಿರಳವೆನ್ನಬಹುದು.