ಸದಸ್ಯ:Vidyashree k karadiguddi/sandbox2
ಲೀಲಾವತಿ ಬೈಪಾಡಿತ್ತಾಯ ಗಂಡು ಮೆಟ್ಟಿನ ಕಲೆ ಎಂಬ ಹೆಗ್ಗಳಿಕೆಯುಳ್ಳ ಯಕ್ಷಗಾನದಲ್ಲಿ ಮಹಿಳೆಯರ ಪದಾರ್ಪಣೆಗೆ ನಾಂದಿ ಹಾಡಿದವರು ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರು. ನಾಲ್ಕು ದಶಕಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡವರು
ಜನನ, ಜೀವನ
ಬದಲಾಯಿಸಿ- ೨೩ ಮೇ ೧೯೪೭ರಲ್ಲಿ ಕಾಸರಗೋಡಿನ ಮಧೂರು ಅಲ್ಲಿ ಜನಿಸಿದರು. ಇವರು ಮಧುರಿನ ಪಡುಕಕ್ಕೆಪ್ಪಾಡಿ ಎಂಬಲ್ಲಿ ತಮ್ಮ ಸೋದರ ಮಾವನ ಮನೆಯಲ್ಲೇ ಬೆಳೆದವರು.
- ಮಾವ ರಾಮಕೃಷ್ಣ ಭಟ್ ಅವರು ಮಧೂರು ದೇವಸ್ಥಾನ ಸೆರಿದಂತೆ ಹಲವು ದೇವಸ್ಥಾನಗಳಲ್ಲಿ ದೇವ ನೃತ್ತ (ಉತ್ಸವ ಸಂದರ್ಭ ಉತ್ಸವ ಮೂರ್ತಿಯನ್ನು ಹೊತ್ತು ನರ್ತಿಸುವ ವಿಶಿಷ್ಟ ನೃತ್ಯ ಪ್ರಕಾರ)ದಲ್ಲಿ ಪ್ರಸಿದ್ದರು. ಇದೇ ಕಲೆಯಲ್ಲಿ ಅವರಿಗೆ ಕೂಡಾ ಕೇರಳ ರಾಜ್ಯ ಪ್ರಶಸ್ತಿಯೂ ಬಂದಿತ್ತು.
- ಇವರು ಕೇರಳದಲ್ಲೇ ಸರಳಾಯರ ಮನೆತನದಲ್ಲಿ ಸಂಗೀತಾಭ್ಯಾಸ ಮಾದಿದ್ದರು.
- ಇವರು ಶಾಲೆಗೆ ಹೋಗದೆಯೇ, ಅಣ್ಣನಿಂದ ಮತ್ತು ಅಕ್ಕಪಕ್ಕದವರಿಂದ ಅಕ್ಷರಾಭ್ಯಾಸ ಮಾಡಿದವರು. ನಡುವೆಯೇ, ಮದ್ರಾಸ್ ಹಿಂದಿ ಪ್ರಚಾರ ಸಭಾದಿಂದ ಹಿಂದಿ ವಿಶಾರದ (ಸ್ನಾತಕ ಪದವಿಗೆ ಸಮ) ಪಡೆದಿದ್ದರೆ.
ಸಂಗೀತದಿಂದ ಯಕ್ಷಗಾನಕ್ಕೆ...
ಯಕ್ಷಗಾನ ಭಾಗವತರು; ವೃತ್ತಿ ಮೇಳಗಳಲ್ಲಿ ತಿರುಗಾಟ ಮಾಡಿದ ಏಕೈಕ ಮಹಿಳೆ ಸಂಗೀತದಿಂದ ಯಕ್ಷಗಾನಕ್ಕೆ… ಈಗ ತೆಂಕುತಿಟ್ಟಿನ ಅಗ್ರಮಾನ್ಯ ಹಿಮ್ಮೇಳ ಗುರುಗಳು ಎಂದೇ ಪರಿಗಣಿಸಲ್ಪಟ್ಟಿರುವ ಹರಿನಾರಾಯಣ ಬೈಪಾಡಿತ್ತಾಯರ ಕೈಹಿಡಿದ ಬಳಿಕವಷ್ಟೇ ಅವರು ಸಂಗೀತದಿಂದ ಯಕ್ಷಗಾನಕ್ಕೆ ಹೊರಳಿದ್ದರು. ಪತಿಯೇ ಗುರು. ಅವರು ಮದುವೆಯಾಗಿ ಬಂದದ್ದು ಪತಿಯ ಊರಾದ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಕ್ಷೇತ್ರದ ಸಮೀಪದ ಕಡಬ ಎಂಬಲ್ಲಿಗೆ. ಆ ಪರಿಸರದ ಮನೆಯಲ್ಲಿ ಏನಾದರೂ ವಿಶೇಷ ಕಾರ್ಯಕ್ರಮವಿದೆ ಎಂದಾದರೆ, ಅಲ್ಲೊಂದು ತಾಳಮದ್ದಳೆ ಕೂಟ ಇದ್ದೇ ಇರುತ್ತಿದ್ದ ಕಾಲವದು. ಹೀಗಾಗಿ ಲೀಲಾವತಿ ಅವರು 1970ರಲ್ಲೇ ಯಕ್ಷಗಾನ ತಾಳಮದ್ದಳೆಗಳಲ್ಲಿ ಹಾಡಲಾರಂಭಿಸಿದ್ದರು. ಸಂಗೀತದ ರಾಗಗಳ ಪರಿಚಯವಿದ್ದುದರಿಂದ ಯಕ್ಷಗಾನ ಭಾಗವತಿಕೆ ಸುಲಭವಾಗಿತ್ತು. ಯಕ್ಷಗಾನ ನೋಡಿದರೆ ಏಳು ರಂಗ ಪೂಜೆ ನೋಡಬೇಕು ಅನ್ನುವ ಸಂಪ್ರದಾಯದ ಕಾಲವಾಗಿತ್ತದು. ಅಂಥ ಕಾಲದಲ್ಲಿ ಯಕ್ಷಗಾನಕ್ಕೆ ಪದಾರ್ಪಣೆ ಮಾಡಿ, ತೆಂಕು ತಿಟ್ಟು ಯಕ್ಷಗಾನದ ಅಗ್ರಮಾನ್ಯ ಭಾಗವತರ ಮಟ್ಟಕ್ಕೆ ಲೀಲಾವತಿ ಬೈಪಾಡಿತ್ತಾಯ ಬೆಳೆದರು. ಡೇರೆ ಮೇಳಗಳಲ್ಲಿ, ಬಯಲಾಟ ಮೇಳಗಳಲ್ಲಿ ವೃತ್ತಿಪರ ತಿರುಗಾಟ ಮಾಡಿದ ಏಕೈಕ ಮಹಿಳೆ ಎಂಬ ಹೆಗ್ಗಳಿಕೆ ಪಾತ್ರರಾದರು. ಅಂದಿನ ಸುಬ್ರಹ್ಮಣ್ಯ ಮೇಳ, ಪುತ್ತೂರು ಮೇಳ, ಕದ್ರಿ ಮೇಳ, ಕರ್ನಾಟಕ ಮೇಳ, ಅರುವ (ಅಳದಂಗಡಿ) ಮೇಳ, ಬಪ್ಪನಾಡು ಮೇಳ, ಕುಂಬಳೆ, ತಲಕಳ ಮೇಳ ಮುಂತಾಗಿ ಸತತವಾಗಿ ಇಪ್ಪತ್ತು ವರ್ಷಗಳ ಕಾಲ ಡೇರೆ ಮೇಳಗಳಲ್ಲಿಯೂ, ಬಯಲಾಟದ ಮೇಳಗಳಲ್ಲಿಯೂ ಪತಿಯೊಂದಿಗೆ ವೃತ್ತಿಪರರಾಗಿ ಊರಿಂದೂರಿಗೆ ತಿರುಗಾಟ ಮಾಡಿರು. ಅದಕ್ಕೆ ಮೊದಲು ಹಾಗೂ ನಂತರ ಅತಿಥಿ ಕಲಾವಿದರಾಗಿಯೂ ಯಕ್ಷಗಾನಕ್ಕೆ ಸೇವೆ ಸಲ್ಲಿಸಿದ್ದಾರೆ, ಸಲ್ಲಿಸುತ್ತಿದ್ದಾರೆ.