ಸದಸ್ಯ:Vidyashree k karadiguddi/ನನ್ನ ಪ್ರಯೋಗಪುಟ

ವಿಜ್ಞಾನಿ ಫ್ರೆಡರಿಕ್ ಜ್ಯೂಲಿಯಟ್ ಅವರು ಜ್ಯೂಲಿಯಟ್ ನೊಬೆಲ್ ಪ್ರಶಸ್ತಿ ವಿಜೇತ ದಂಪತಿಗಳಾದ ಮೇಡಂ ಕ್ಯೂರಿ ಮತ್ತು ಪಿಯರಿ ಕ್ಯೂರಿಯರ ಪ್ರತಿಭಾನ್ವಿತ ಅಳಿಯ.[೧] ಇವರ ಹೆಂಡತಿ ‍‍‌‌‌ಐರೀನ್ ಕ್ಯೂರಿ ಸಹಿತ ನೊಬೆಲ್ ಪ್ರಶಸ್ತಿ ವಿಜೇತೆ. ಪತ್ನಿ ಐರೀನ್ ಕ್ಯೂರಿಯೊಂದಿಗೆ ಕೃತಕ ವಿಕಿರಣಶೀಲ ಪದಾರ್ಥಗಳನ್ನು ಕಂಡು ಹಿಡಿಯುವುದರ ಮೂಲಕ ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಂಡರು. ಜಗತ್ಪ್ರಸಿದ್ಧ ವಿಜ್ಞಾನಿಗಳ ಪಂಕ್ತಿಯಲ್ಲಿ ಫ್ರೆಡರಿಕ್ ಜ್ಯೂಲಿಯಟ್‍ರಿಗೆ ಅವರದೆ ಆದ ವಿಶಿಷ್ಟ ಸ್ಥಾನವಿದೆ. ಆಧುನಿಕ ವಿಜ್ಞಾನ ಪ್ರಪಂಚಕ್ಕೆ ಅವರು ನೀಡಿದ ಕೊಡುಗೆ ಅವಿಸ್ಮರಣೀಯವಾದುದು.

ವಿಜ್ಞಾನ ಪ್ರಪಂಚದಲ್ಲಿ ಫ್ರೆಡರಿಕ್ ಜ್ಯೂಲಿಯಟ್‌ರ ಮಹತ್ವದ ಸಾಧನೆಯೆಂದರೆ ಕೃತಕ ವಿಕಿರಣಶೀಲ ಪದಾರ್ಥಗಳ ಸಂಶ್ಲೇಷಣೆ. ಫ್ರೆಡರಿಕ್ ಜ್ಯೂಲಿಯಟ್‌ನಿಗೆ ವಿಜ್ಞಾನದಲ್ಲಿ ವಿಶೇಷ ಆಸಕ್ತಿ. ಜ್ಯೂಲಿಯಟ್ ಬಾಲ್ಯದಿಂದಲೇ ಸಂಶೋಧನಾತ್ಮಕ ಪ್ರವೃತ್ತಿಯುಳ್ಳವನಾಗಿದ್ದ. ಅವರು ತಮ್ಮ ಪ್ರತಿಭೆಗೆ ತಕ್ಕ ಐರೀನ್ ಕ್ಯೂರಿಯನ್ನು ಪತ್ನಿಯನ್ನಾಗಿ ಪಡೆದ ಜ್ಯೂಲಿಯಟ್ ಅವಳೊಂದಿಗೆ ಸಂಶೋಧನೆ ಮುಂದುವರಿಸಿದ. ೧೯೨೬ ರಲ್ಲಿ ಐರೀನ್ ಕ್ಯೂರಿಯನ್ನು ಮದುವೆಯಾದ ಫ್ರೆಡರಿಕ್ ಜ್ಯೂಲಿಯಟ್ ಹೆಂಡತಿಯೊಂದಿಗೆ ಕೃತಕ ವಿಕಿರಣ ಪದಾರ್ಥಗಳನ್ನು ಸಂಶೇಷಿಸಿದ. ಈ ಶೋಧನೆಗಾಗಿ ಆತನಿಗೆ ೧೯೩೫ ರಲ್ಲಿ ರಸಾಯನಶಾಸ್ತ್ರಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ.

ಪತ್ನಿ ಐರೀನ್ ಕ್ಯೂರಿಯೊಂದಿಗೆ ಜಂಟಿಯಾಗಿ ನೊಬೆಲ್ ಪ್ರಶಸ್ತಿಯನ್ನು ಹಂಚಿಕೊಂಡ ಫ್ರೆಡರಿಕ್ ಜ್ಯೂಲಿಯಟ್‌ರದು ಕೃತಕ ವಿಕಿರಣಶೀಲ ಪದಾರ್ಥಗಳಿಗೆ ಪೂರ್ತಿ ತೆರೆದಿಟ್ಟ ಬದುಕು. ಆತ ಶೋಧಿಸಿದ ಶೋಧನೆ ನಮ್ಮೆಲ್ಲರಿಗೂ ಒಂದು ಅತ್ಯುಪಯುಕ್ತ ಶೋಧನೆಯಾಗಿದೆ.

ಉಲ್ಲೇಖ

ಬದಲಾಯಿಸಿ

<referance />

  1. ನೊಬೆಲ್ ಪ್ರಶಸ್ತಿ ವಿಜೇತ ಮೇಧಾವಿಗಳು, ಎಮ್.ಎಸ್.ಶಾಬಾದಿಮಠ ಬುಕ್-ಡಿಪೋ, ಗದಗ ಪು.ಸಂ:೭೧