ಸದಸ್ಯ:Vibha Patrada Ramesh/sandbox
ನನ್ನ ಹೆಸರು ವಿಭಾ ರಮೇಶ್. ನನ್ನ ತಂದೆಯ ಹೆಸರು ಪಿ.ಸಿ ರಮೇಶ್, ತಾಯಿ ಲತಾ, ನನ್ನ ಹುಟ್ಟಿದ ದಿನ ೦೬.೦೯.೧೯೯೬. ನಾನು ಮೂಲತಹ ಕೊಡಗು ಜಿಲ್ಲೆಯ ಗೋಣಿಕೊಪ್ಪಲು ಎಂಬ್ರ ಗ್ರಾಮದವಳು. ನಾನು ನನ್ನ ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಗೋಣಿಕೊಪ್ಪಲಿನ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ ಮುಗಿಸಿ ನನ್ನ ಪದವಿ ಪೂರ್ವ ಶಿಕ್ಷಣಕ್ಕೆಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿಗೆ ಸೇರಿದೆ. ಅನಂತರ ಇದೀಗ ನನ್ನ ಬಿಕಾಂ ಪದವಿಯನ್ನು ಅದೇ ಕಾಲೇಜಿನಲ್ಲಿ ಮುಂದುವರಿಸುತ್ತಿದ್ದೇನೆ. ನನಗೆ ಓದುವುದರ ಜೊತೆಗೆ ಇನ್ನಿತರ ಹವ್ಯಾಸಗಳು ಮತ್ತು ಕ್ರೀಡೆಯಲ್ಲಿಯೂ ಬಹಳ ಆಸಕ್ತಿ ಹೊಂದಿದ್ದೇನೆ. ನನಗೆ ಜಿ.ಕೆ ಪುಸ್ತಕ ಓದುವುದು, ಹಾಡು ಕೇಳುವುದು ನನ್ನ ಹವ್ಯಾಸ. ನಾನು ಒಬ್ಬ ಹಾಕಿ ಆಟಗಾರ್ತಿ. ಎರಡು ಬಾರಿ ರಾಜ್ಯ ಮಟ್ಟದ ಕ್ರೀಡೆಗೆ ಆಯ್ಕೆ ಆಗಿದ್ದೇನೆ. ನೃತ್ಯ ಎಂದರೆ ನನಗೆ ಬಹಳ ಇಷ್ಟ ಎಲ್ಲಾ ನೃತ್ಯ ಸ್ಪರ್ಧೆಯಲ್ಲೂ ಭಾಗವಹಿಸಿದ್ದೇನೆ.
ನನ್ನಲ್ಲಿರುವ ಒಂದು ಒಳ್ಳೆಯದೇನೆಂದರೆ ನಾನು ಎಲ್ಲರ ಜೊತೆಗೆ ಹೊಂದಿಕೊಂಡು ಹೋಗುತ್ತೇನೆ ಮತ್ತು ಸಹನೆ ಕಳೆದುಕೊಳ್ಳುವುದಿಲ್ಲ. ನನಗೆ ನಗಾಡುವುದೆಂದರೆ ಬಹಳ ಇಷ್ಟ. ನಾನು ಮುಂದೆ ಬಿಕಾಂ ಮುಗಿಸಿ ಟ್ಯಾಕ್ಸ್ ಅಥವಾ ಫಿನಾನ್ಸ್ ನಲ್ಲಿ ಸಾಧನೆ ಮಾಡಬೇಕು ಎಂಬುದು ನನ್ನ ಆಸೆ. ಇದಷ್ಟೇ ಅಲ್ಲದೆ ನನಗೆ ಭಾಷಣ ಮಾಡುವುದು ಇಷ್ಟ ಹಾಗೂ ಸ್ಪರ್ಧೆಗಳಲ್ಲಿ ಹಲವಾರು ಬಹುಮಾನ ಗೆದ್ದಿದ್ದೇನೆ. ನಾನು ಯಾವುದೇ ಸಂದರ್ಭದಲ್ಲಿಯೂ ಆತ್ಮ ವಿಶ್ವಾಸ ಕಳೆದುಕೊಳ್ಳುವುದಿಲ್ಲ. ಕಷ್ಟದಲ್ಲಿರುವವರಿಗೆ ನನ್ನ ಕೈಲಾದ ಸಹಾಯ ಮಾಡಲು ಬಯಸುತ್ತೇನೆ. ಮುಂದೆ ನಾನು ನನ್ನ ಗುರಿ ತಲುಪಿ ನನ್ನ ತಂದೆ ತಾಯಿಗೆ ಒಳ್ಳೆಯ ಮಗಳಾಗಿ ಹಾಗೂ ಒಳ್ಳೆಯ ಪ್ರಜೆಯಾಗಿ ಬದುಕುವ ವಿಶ್ವಾಸ ಹೊಂದಿದ್ದೇನೆ ಹಾಗೂ ಒಳ್ಳೆಯ ಹೆಸರು ಮಾಡುತ್ತೇನೆ.