ಸದಸ್ಯ:Venugopalkshetty/sandbox
ಡಾ. ಎಂ. ಮೋಹನ ಆಳ್ವ
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಪ್ರತಿಷ್ಠಿತ ಮಿಜಾರುಗುತ್ತು ಮನೆತನದಲ್ಲಿ ೩೧-೫-೧೯೫೨ ರಲ್ಲಿ ಜನಿಸಿದ ಡಾ. ಮೋಹನ ಆಳ್ವರದು ಜನ್ಮಜಾತ ಪ್ರತಿಭೆ. ಅವರ ಬಹುಮುಖ ಪ್ರತಿಭೆಗೆ ತಿಲಕ ಪ್ರಾಯವೆಂಬಂತೆ ಮೂಡಿಬಂದುದು ಇಂಗ್ಲೆಂಡಿನ ಆಕ್ಸ್‍ಫರ್ಡ್ ಯುನಿರ್ವಸಿಟಿ ಕೊಡಮಾಡುವ 1980 ರ ‘ಬೆಸ್ಟ್ ಟ್ಯಾಲೆಂಟೆಡ್ ಯೂತ್ ಇನ್ ದಿ ವಲ್ಡ್’ ಪ್ರಶಸ್ತಿ.
ಡಾ. ಮೋಹನ ಆಳ್ವರು ತಮ್ಮ ವಿದ್ಯಾರ್ಥಿ ಬದುಕಿನಲ್ಲಿ ಒಂದೇ ವರ್ಷದ ಅವಧಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಜಿಲ್ಲೆ, ರಾಜ್ಯ, ದಕ್ಷಿಣ ಭಾರತ, ರಾಷ್ಟ್ರ ಮತ್ತು ಅಂತರ ವಿಶ್ವ ವಿದ್ಯಾನಿಲಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪಡೆದ 123 ಪ್ರಶಸ್ತಿಗಳನ್ನು ಗೌರವಿಸಿ ಇಂಗ್ಲೆಂಡಿನ ಆಕ್ಸ್‍ಫಡ್ಸ್ ವಿಶ್ವವಿದ್ಯಾನಿಲಯವು ಈ ಪ್ರಶಸ್ತಿಯನ್ನು ನೀಡಿತು.
ಉಡುಪಿಯ ಆಯರ್ವೇದ ವೈದ್ಯಕೀಯ ಕಾಲೇಜಿನಲ್ಲಿ ತಮ್ಮ ವೈದ್ಯಕೀಯ ವಿದ್ಯಾಭ್ಯಾಸವನ್ನು ಪೂರೈಸಿದ ಡಾ. ಮೋಹನ ಆಳ್ವರು ಆಧುನಿಕ ಸೌಲಭ್ಯಗಳಿಲ್ಲದ ಮೂಡಬಿದಿರೆಯಲ್ಲಿ 1980ರಲ್ಲಿ ಮೊತ್ತ ಮೊದಲನೆಯದಾಗಿ ಸಣ್ಣದೊಂದು ಕ್ಲಿನಿಕ್‍ನೊಂದಿಗೆ ತನ್ನ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಆಮೇಲೆ ತನ್ನ ವೃತ್ತಿ ಕ್ಷೇತ್ರವನ್ನು ವಿಸ್ತರಿಸಿ 1982ರಲ್ಲಿ ಔಷಧಿ ತಯಾರಿಕ ಘಟಕವಾದ ಆಳ್ವಾಸ್ ಫಾರ್ಮಸಿಯನ್ನು ತಮ್ಮದೇ ಆದ ಯೋಗರಾಜ ಎಸ್ಟೇಟ್‍ನಲ್ಲಿ ಹುಟ್ಟುಹಾಕಿದರು. ಇಂದು ಈ ಫಾರ್ಮಸಿಯಲ್ಲಿ ತಯಾರಾದ ಔಷಧಿಗಳು ಮೂಡುಬಿದಿರೆಯ ಬಡ ಜನರ ಆರೋಗ್ಯದ ಅವಶ್ಯಕತೆಗಳನ್ನು ಪೂರೈಸುವುದರ ಜೊತೆಗೆ ಸುಮಾರು 2000 ವೈದ್ಯರಿಗೆ ಅವಶ್ಯಕವಾದ 500ಕ್ಕಿಂತಲೂ ಹೆಚ್ಚಿನ ಔಷಧಿಗಳನ್ನು ಪೂರೈಸುತ್ತಿದೆ. ವಿದೇಶಗಳಿಗೂ ಔಷಧಿಗಳು ರಫ್ತಾಗುತ್ತಿವೆ.
ತಮ್ಮ ರಕ್ತಗತ ಗುಣವಾದ ಗ್ರಾಮೀಣ ಬಡ ಜನರ ಅವಶ್ಯಕತೆಗಳಿಗೆ ಸ್ಪಂದಿಸುವ ಮಾನವೀಯ ಮನೋಭಾವದ ಡಾ| ಆಳ್ವರು ಮೂಡುಬಿದಿರೆಯ ಆಸುಪಾಸಿನ 28 ಹಳ್ಳಿಗಳ ಜನಸಾಮಾನ್ಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಆರಂಭಿಸಿದ ಆರೋಗ್ಯಧಾಮವೇ ಇಂದಿನ ಬಹುಪ್ರಸಿದ್ಧವಾದ ಆಳ್ವಾಸ್ ಹೆಲ್ತ್ ಸೆಂಟರ್. ಸುಮಾರು 300 ಹಾಸಿಗೆಯುಳ್ಳ ಅತ್ಯಂತ ಕಡಿಮೆ ಖರ್ಚಿನಲ್ಲಿ ಹೆಚ್ಚು ಸುಸಜ್ಜಿತವಾದ, ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ಆಳ್ವಾಸ್ ಹೆಲ್ತ್ ಸೆಂಟರ್‍ಗೆ ಬಡ ಗ್ರಾಮೀಣ ಜನರಿಗೆ ದೈಹಿಕ ಮತ್ತು ಮಾನಸಿಕ ನೆಮ್ಮದಿಯನ್ನು ಕಲ್ಪಿಸುವುದೇ ಧ್ಯೇಯವಾಗಿದೆ. ಇದಲ್ಲದೆ ಡಾ|ನಾಗಪ್ಪ ಆಳ್ವ ಸ್ಮರಣಾರ್ಥ ನಿರ್ಮಿಸಿದ ಆಯುರ್ವೇದ ಆಸ್ಪತ್ರೆಯಲ್ಲಿ 100 ಹಾಸಿಗೆ ಮತ್ತು ಆನಂದಮಯ ಆರೋಗ್ಯಧಾಮದಲ್ಲಿ 50 ಹಾಸಿಗೆಯುಳ್ಳ ಆಸ್ಪತ್ರೆಗಳು ಆರೋಗ್ಯ ಸೇವೆಯಲ್ಲಿ ತೊಡಗಿಕೊಂಡಿವೆ. ಇಲ್ಲಿ ಅಲೋಪತಿ, ಆಯುರ್ವೇದ, ಹೋಮಿಯೋಪತಿ, ನ್ಯಾಚುರೋಪತಿ, ಫಿಸಿಯೋಥೆರಪಿ ಮೊದಲಾದ ಎಲ್ಲಾ ರೀತಿಯ ಆರೋಗ್ಯ ಸೌಲಭ್ಯಗಳು ಲಭ್ಯ ಇವೆ.
ಡಾ. ಮೋಹನ ಆಳ್ವರು ಸ್ವತಃ ಕ್ರೀಡಾಪಟುವೂ ಹೌದು, ಕ್ರೀಡಾ ಪ್ರೇಮಿಯೂ ಹೌದು. ತನ್ನ ವಿದ್ಯಾರ್ಥಿ ದೆಸೆಯಲ್ಲಿ ಕ್ರೀಡಾಕ್ಷೇತ್ರದಲ್ಲಿ ಅನೇಕಾನೇಕ ಪ್ರಶಸ್ತಿಗಳನ್ನು ಬಾಚಿಕೊಂಡ ಇವರು, ಪ್ರೋತ್ಸಾಹವಿಲ್ಲದೆ ನಲುಗುತ್ತಿರುವ ರಾಜ್ಯಮಟ್ಟದ ಕ್ರೀಡಾಪ್ರತಿಭೆಗಳಿಗಾಗಿ 1984ರಲ್ಲಿ ‘ಏಕಲವ್ಯ’ ಎಂಬ ಹೆಸರಿನ ಕ್ರೀಡಾ ಸಂಸ್ಥೆಯೊಂದನ್ನು ಹುಟ್ಟುಹಾಕಿ ಕ್ರೀಡಾರಂಗದಲ್ಲಿ ಕ್ರಾಂತಿ ಮಾಡಿದ್ದಾರೆ. ಕ್ರೀಡಾಪಟುಗಳನ್ನು ದತ್ತು ಸ್ವೀಕಾರದ ಮೂಲಕ ತೆಗೆದುಕೊಂಡು ಅವರಿಗೆ ಉಚಿತ ಕ್ರೀಡಾ ಸೌಲಭ್ಯ, ಊಟ, ವಸತಿ, ತರಬೇತಿಗಳನ್ನು ನೀಡಿದ್ದಾರೆ. ಪ್ರಸ್ತುತ 600 ವಿದ್ಯಾರ್ಥಿಗಳು ಈ ಸೌಲಭ್ಯದಡಿ ಓದುತ್ತಿದ್ದು ಈವರೆಗೆ 8,000ಕ್ಕೂ ಅಧಿಕ ವಿದ್ಯಾರ್ಥಿಗಳು ದತ್ತು ಸ್ವೀಕಾರದ ಪ್ರಯೋಜನವನ್ನು ಪಡೆದಿದ್ದಾರೆ. ಆ ಮೂಲಕ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದ ಕ್ರೀಡಾಪಟುಗಳನ್ನು ತಯಾರು ಮಾಡಿದ ಕೀರ್ತಿ ಈ ಸಂಸ್ಥೆಯದು. ಒಲಿಂಪಿಕ್‍ನಲ್ಲಿ ಭಾರ ಎತ್ತುವ ಸ್ಪರ್ಧೆಯಲ್ಲಿ ಪಾಲ್ಗೊಂಡ ಏಕಲವ್ಯದ ವಿದ್ಯಾರ್ಥಿಗಳಾದ ಅರ್ಜುನ ಪ್ರಶಸ್ತಿ ವಿಜೇತ ಸತೀಶ್ ರೈ, ಒಲಂಪಿಯನ್ ಪೂವಮ್ಮ ಮತ್ತು ಅಶ್ವಿನಿ ಅಕ್ಕುಂಜೆ ಮೊದಲಾದ ನೂರಕ್ಕೂ ಅಧಿಕ ಕ್ರೀಡಾಪಟುಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ದಾರೆ. 1995ರಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವನ್ನು ಆರಂಭಿಸಿದ ಡಾ. ಆಳ್ವ ಮೂಡುಬಿದಿರೆಯಂತಹ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ದಾಹವನ್ನು ತೀರಿಸಿಕೊಳ್ಳಲು ದೂರದ ಊರಾದ ಮಂಗಳೂರು, ಉಡುಪಿಗಳನ್ನು ಆಶ್ರಯಿಸುವುದನ್ನು ತಪ್ಪಿಸಿದರು. 19 ಸಂವತ್ಸರಗಳನ್ನು ಪೂರೈಸಿರುವ ಈ ಸಂಸ್ಥೆಯಲ್ಲಿ ಇಂದು ಎಲ್‍ಕೆಜಿಯಿಂದ ತೊಡಗಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆ, ಪದವಿಪೂರ್ವ, ಪದವಿ ಹಾಗೂ ಅರೆ ವೈದ್ಯಕೀಯ, ವೈದ್ಯಕೀಯ, ತಾಂತ್ರಿಕ ಶಿಕ್ಷಣಗಳನ್ನು ಒಳಗೊಂಡಿರುವ 19 ಕಾಲೇಜುಗಳು ಕಾರ್ಯಾಚರಿಸುತ್ತಿವೆ. ಕಳೆದ ಹನ್ನೆರಡು ವರ್ಷಗಳಿಂದಲೂ ಶೇಕಡಾ 100 ಫಲಿತಾಂಶ, ಅಂತಿಮ ಪದವಿಯ ಪರೀಕ್ಷೆಗಳಲ್ಲಿ ಪಡೆದಿರುವ ನೂರಾರು ರ್ಯಾಂಕ್‍ಗಳು ಈ ಸಂಸ್ಥೆಯ ಶೈಕ್ಷಣಿಕ ಗುಣಮಟ್ಟಕ್ಕೆ ಸಾಕ್ಷಿ. ಇದೀಗ 22,000 ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆಗೈಯುತ್ತಿದ್ದಾರೆ.
1997ರಿಂದ ರಾಜ್ಯದ ಪ್ರತಿಷ್ಠಿತ ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಸೆನೆಟ್ ಹಾಗೂ ಸಿಂಡಿಕೇಟ್ ಸದಸ್ಯರಾಗಿ ರಾಜ್ಯದ ವೈದ್ಯಕೀಯ ಶಿಕ್ಷಣದ ಸುಧಾರಣೆಗೆ ನಿರಂತರವಾಗಿ ಶ್ರಮಿಸುತ್ತಿರುವ ಡಾ. ಮೋಹನ ಆಳ್ವರವರು ತಮ್ಮ ಆಳ್ವಾಸ್ ಹೆಲ್ತ್ ಸೆಂಟರ್, ಆಳ್ವಾಸ್ ಆಯುರ್ವೇದ ಫಾರ್ಮಸಿ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮುಖಾಂತರ ರಾಜ್ಯದ ಆಯುರ್ವೇದ ವೈದ್ಯಕೀಯ ಕ್ಷೇತ್ರಕ್ಕೆ ತನ್ನದೇ ಆದ ಶ್ರೇಷ್ಠ ಕೊಡುಗೆಯನ್ನು ನೀಡಿರುತ್ತಾರೆ. ಡಾ. ಮೋಹನ ಆಳ್ವರು ನಿರ್ಮಿಸಿದ ಶೋಭಾವನ ಎಂಬ ಹೆಸರಿನ ಆಯುರ್ವೇದ ವನದಲ್ಲಿ 2,000 ಜಾತಿಯ ಔಷಧಿಯ ಸಸ್ಯಗಳಿದ್ದು ಇದು ದೇಶದಲ್ಲಿಯೇ ಅತಿದೊಡ್ಡ ಆಯುರ್ವೇದ ವನವಾಗಿದ್ದು ರಾಜ್ಯದ ಎಲ್ಲಾ ಆಯುರ್ವೇದವಿದ್ಯಾರ್ಥಿಗಳು ಮಾತ್ರವಲ್ಲ ಸಸ್ಯಶಾಸ್ತ್ರ, ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಸುಸಜ್ಜಿತ ಆಯುರ್ವೇದ ಫಾರ್ಮಸಿಯು ಇದೇ ಆವರಣದಲ್ಲಿದೆ.
ಕಲಾವಿದ ಮೋಹನ ಆಳ್ವರು ಸಂಸ್ಕøತಿ ಕಲೆಗಾಗಿ ತನ್ನ ಬದುಕನ್ನು ಮುಡಿಪಾಗಿ ಇಟ್ಟವರು, ನಶಿಸಿ ಹೋಗುತ್ತಿರುವ ಭಾರತೀಯ ಸಂಸ್ಕøತಿಯ, ಕಲೆಗಳ ಪುನರುತ್ಥಾನಕ್ಕಾಗಿ ಅವಿರತ ಶ್ರಮಿಸುತ್ತಿರುವವರು. ಇದರಿಂದಾಗಿಯೇ ಸುಮಾರು 4 ಕೋಟಿ ರೂಪಾಯಿಯ ಮೌಲ್ಯಕ್ಕಿಂತಲೂ ಮಿಗಿಲಾದ ಜನಪದ, ಶಾಸ್ತ್ರೀಯ ಕಲೆಗಳಿಗೆ ಸಂಬಂಧಿಸಿದ ವಸ್ತುಗಳ ಸಂಗ್ರಹ ಅವರಲ್ಲಿದೆ. ಮಾತ್ರವಲ್ಲದೇ, “ಆಳ್ವಾಸ್ ವಿರಾಸತ್” ಎಂಬ ಹೆಸರಿನಲ್ಲಿ ವರ್ಷಂಪ್ರತಿ ದೇಶದಾದ್ಯಂತ ಪ್ರಸಿದ್ಧರಾಗಿರುವ ಕಲಾವಿದರನ್ನು ಕರೆಸಿ, ಕಾರ್ಯಕ್ರಮಗಳನ್ನು ನಡೆಸಿ ಈ ಉತ್ಸವದ ಮೂಲಕ ಮೂಡುಬಿದಿರೆಯನ್ನು ಕಲಾಲೋಕವನ್ನಾಗಿ ಪರಿವರ್ತಿಸಿರುತ್ತಾರೆ. ಕಲಾವಿದರನ್ನು ಗೌರವಿಸಿ ಪ್ರೋತ್ಸಾಹಿಸುತ್ತಾರೆ. ಡಾ. ಮೋಹನ ಆಳ್ವರ ಕಾರ್ಯಾಧ್ಯಕ್ಷತೆಯ ಮುಂದಾಳುತನದಲ್ಲಿ ನಡೆದ 71ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ನಭೂತೋ....ನ ಭವಿಷ್ಯತಿ.... ಎಂದು ಜನಮಾನಸದಲ್ಲಿ ಇನ್ನೂ ಹಚ್ಚಹಸುರಾಗಿ ಉಳಿದಿದೆ. ಇದೇ ಸ್ಫೂರ್ತಿಯಿಂದ ಆಳ್ವಾಸ್ ನುಡಿಸಿರಿ – ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನವನ್ನು ಪ್ರತೀವರ್ಷ ಮೂಡುಬಿದಿರೆಯಲ್ಲಿ ನಡೆಸಿಕೊಂಡು ಬರುತ್ತಿರುವ ಆಳ್ವರು ಕನ್ನಡ ಭಾಷೆ ಮತ್ತು ಸಂಸ್ಕøತಿಯ ಕುರಿತ ಮಹೋನ್ನತ ಕೆಲಸವನ್ನೇ ಮಾಡುತ್ತಿದ್ದಾರೆ. ಆಳ್ವಾಸ್ ವಿರಾಸತ್ ತನ್ನ ಇಪ್ಪತ್ತನೆ ವರ್ಷವನ್ನು ಹಾಗೂ ಆಳ್ವಾಸ್ ನುಡಿಸಿರಿ ಹತ್ತನೇ ವರ್ಷವನ್ನು ಬಹಳ ಯಶಸ್ವಿಯಾಗಿ ಪೂರೈಸಿದ ಸಂದರ್ಭದ ಸವಿನೆನಪಿಗಾಗಿ 2013ರ ಡಿಸೆಂಬರ್ 19ರಿಂದ 22ರವರೆಗೆ ಅಂತಾರಾಷ್ಟ್ರೀಯ ಮಟ್ಟದ ‘ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ’ನ್ನು ಬಹಳ ವೈಭವದಿಂದ ಲಕ್ಷಾಂತರ ಕಲಾಸಕ್ತರ ಸೇರುವಿಕೆಯಲ್ಲಿ ವಿಜೃಂಭಣೆಯಿಂದ ನೆರವೇರಿಸಲಾಯಿತು. ತನ್ನ ಶಿಕ್ಷಣ ಸಂಸ್ಥೆಯಲ್ಲಿ ಕ್ರೀಡೆ, ಕಲೆ - ಸಂಸ್ಕøತಿ ಮತ್ತು ಶಿಕ್ಷಣ ಈ ಮೂರು ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಹಾಗೂ ದೈಹಿಕ ವೈಕಲ್ಯವುಳ್ಳ ಸುಮಾರು 3000 ವಿದ್ಯಾರ್ಥಿ – ವಿದ್ಯಾರ್ಥಿನಿಯರನ್ನು ದತ್ತು ತೆಗೆದುಕೊಂಡು ಅವರಿಗೆ ಉಚಿತ ವಿದ್ಯಾಭ್ಯಾಸ, ಊಟ – ವಸತಿ ವ್ಯವಸ್ಥೆಯನ್ನು ಮಾಡಿದ್ದಾರೆ. ಮನುಕುಲದ ಮಾರಕ ರೋಗವಾದ ಏಡ್ಸ್ ಪೀಡಿತರಾದ 200 ರೋಗಿಗಳಿಗೆ ಪ್ರತೀತಿಂಗಳೂ ಸ್ವತಃ ತಾನೇ ಚಿಕಿತ್ಸೆ
ನಡೆಸುವುದಲ್ಲದೆ ಅವರ ಸಂಪೂರ್ಣ ವೈದ್ಯಕೀಯ ಮತ್ತು ಕೌಟುಂಬಿಕ ವೆಚ್ಚವನ್ನು ಸ್ವತಃ ತಾವೇ ಭರಿಸುತ್ತಿದ್ದಾರೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಡೆಸುತ್ತಿರುವ ಕಾಲೇಜುಗಳು
ಬದಲಾಯಿಸಿ- ಆಳ್ವಾಸ್ ಕಾಲೇಜ್ ಆಫ್ ಫಿಸಿಯೊಥೆರಪಿ
- ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸಾಯನ್ಸ್
- ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು
- ಆಳ್ವಾಸ್ ಕಾಲೇಜ್ ಆಫ್ ನರ್ಸಿಂಗ್
- ಆಳ್ವಾಸ್ ಪದವಿ ಕಾಲೇಜು
- ಆಳ್ವಾಸ್ ಕಾಲೇಜ್ ಆಫ್ ನ್ಯಾಚುರೋಪಥಿ ಮತ್ತು ಯೋಗಿಕ್ ಸಾಯನ್ಸ್
- ಆಳ್ವಾಸ್ ಪ್ರಿಯುನಿವರ್ಸಿಟಿ ಕಾಲೇಜು
- ಆಳ್ವಾಸ್ ಕಾಲೇಜ್ ಆಫ್ ಸೊಶಿಯಲ್ ವರ್ಕ್
- ಆಳ್ವಾಸ್ ಕಾಲೇಜ್ ಆಫ್ ಮೆಡಿಕಲ್ ಲ್ಯಾಬ್ ಟೆಕ್ನಾಲಜಿ
- ಆಳ್ವಾಸ್ ಬಿ.ಪಿ.ಎಡ್. ಕಾಲೇಜು
- ಆಳ್ವಾಸ್ ಹೋಮಿಯೋಪಥಿ ಮೆಡಿಕಲ್ ಕಾಲೇಜು
- ಆಳ್ವಾಸ್ ಕಾಲೇಜ್ ಆಫ್ ಎಜುಕೇಶನ್
- ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್
- ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಗ್ ಎಂಡ್ ಟೆಕ್ನಾಲಜಿ
- ಆಳ್ವಾಸ್ ಕಾಲೇಜ್ ಆಫ್ ಹಾಸ್ಪಿಟಲ್ ಎಡ್ಮಿನಿಸ್ಟ್ರೇಶನ್
- ಆಳ್ವಾಸ್ ಸ್ಪೆಷಶ್ ಸ್ಕೂಲ್
- ಆಳ್ವಾಸ್ ಪ್ರಾಥಮಿಕ ಮತ್ತು ಪ್ರೌಢಶಾಲೆ (ಕನ್ನಡ ಮತ್ತು ಆಂಗ್ಲಮಾಧ್ಯಮ)
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿನ ಸ್ನಾತಕೋತ್ತರ ಕೋರ್ಸುಗಳು
ಬದಲಾಯಿಸಿ- ಎಂ.ಎಸ್ಸಿ. ಅನಾಲಿಟಿಕಲ್ ಕೆಮಿಸ್ಟ್ರಿ
- ಎಂ.ಎಸ್ಸಿ. ಬಯೋಟೆಕ್ನಾಲಜಿ
- ಎಂ.ಎಸ್ಸಿ. ಮಾತಮ್ಯಾಟಿಕ್ಸ್
- ಎಂ.ಎಸ್ಸಿ. ಸ್ಟ್ಯಾಟಿಸ್ಟಿಕ್ಸ್
- ಎಂ.ಎಸ್ಸಿ. ಸೈಕಾಲಜಿ
- ಎಂ.ಎಸ್ಸಿ. ಕೆಮಿಸ್ಟ್ರಿ
- ಎಂ.ಎಸ್ಸಿ. ಕಂಪ್ಯೂಟರ್ ಸೈನ್ಸ್
- ಎಂ.ಎಸ್ಸಿ. ಹಾಸ್ಪಿಟಲ್ ಆಡ್ಮಿನೀಸ್ಟರೇಶನ್
- ಎಂ.ಎಸ್ಸಿ. ಫಿಸಿಕ್ಸ್
- ಎಂ.ಎಸ್ಸಿ. ಆರ್ಗನಿಕ್ ಕೆಮಿಸ್ಟ್ರಿ
- ಮಾಸ್ಟರ್ ಡಿಗ್ರಿ - ನ್ಯಾಚುರೋಪತಿ
- ಮಾಸ್ಟರ್ ಡಿಗ್ರಿ - ಯೋಗ
- ಎಂ.ಎ. ಎಕನಾಮಿಕ್ಸ್
- ಎಂ.ಎ. ಇಂಗ್ಲೀಷ್
- ಎಂ.ಎಸ್.ಡಬ್ಲ್ಯ
- ಎಂ.ಎಚ್.ಆರ್.ಡಿ
- ಎಂ. ಕಾಂ
- ಪಿ.ಜಿ.ಡಿ.ಸಿ.ಎ
- ಪಿ.ಜಿ.ಡಿ.ಬಿ.ಎಂ
ದೊರಕಿರುವ ಕೆಲವು ಪ್ರಶಸ್ತಿಗಳು ಮತ್ತು ಗೌರವಗಳು
ಬದಲಾಯಿಸಿ- ಬೆಸ್ಟ್ ಟ್ಯಾಲೆಂಟೆಡ್ ಯೂತ್ ಇನ್ ದ ವಲ್ಡ್ ಪ್ರಶಸ್ತಿ – ಒಕ್ಸ್‍ಫಡ್ಸ್ ಯುನಿವರ್ಸಿಟಿ – ಯು.ಕೆ. - 1980
- ಕರ್ನಾಟಕ ನಾಟಕ ಅಕಾಡೆಮಿ ಎವಾರ್ಡ್ – 1998
- ಸ್ಟೇಟ್ ಲೆವೆಲ್ ಆರ್ಯಭಟ ರಜತ ಪ್ರಶಸ್ತಿ – 2000
- ಶ್ರೀ ಎಂ. ವಿಶ್ವೇಶ್ವರಯ್ಯ ಎವಾರ್ಡ್ – 2001
- ರಾಜೀವ ಗಾಂಧಿ ಆರೋಗ್ಯ ಮತ್ತು ವಿಜ್ಞಾನ ವಿದ್ಯಾನಿಲಯ, ಬೆಂಗಳೂರು ಇದರಲ್ಲಿ 1997ರಿಂದ ಇವತ್ತಿನವರೆಗೆ
ಸಿಂಡಿಕೇಟ್ ಸದಸ್ಯರಾಗಿ, ಸೆನೆಟ್ ಸದಸ್ಯರಾಗಿ ರಾಜ್ಯಪಾಲರಿಂದ ನಾಮಕರಣಗೊಂಡ ಏಕೈಕ ಪ್ರತಿನಿಧಿ
- ಮಂಗಳೂರು ಮ್ಯಾನೇಜ್‍ಮೆಂಟ್ ಎಸೋಶಿಯೇಶನ್£ಂದ ಬೆಸ್ಟ್ ಮ್ಯಾನೇಜರ್ ಎವಾರ್ಡ್ – 2003
- ಕರ್ನಾಟಕ ಸರಕಾರದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ – 2005
- ಸಿ.ಸಿ.ಐ.ಎಂ. ನವದೆಹಲಿ ಇದರ ಸದಸ್ಯರಾಗಿ ನೇಮಕ – 2007 ರಿಂದ 2017 ರ ವರೆಗೆ
- 2008 ರ ಎಪ್ರಿಲ್‍ನಲ್ಲಿ ಶ್ರೀ ಶ್ರೀ ತೋಂಟದಾರ್ಯ ಸ್ವಾಮೀಜಿಯವರಿಂದ “ಬಸವ ಶ್ರೀ” ಪ್ರಶಸ್ತಿ ಪ್ರದಾನ, ಮೇ ಯಲ್ಲಿ ಉಡುಪಿಯ ಪೂಜ್ಯ ಪೇಜಾವರರ ಶ್ರೀಗಳಿಂದ “ವಿಜಯಶ್ರೀ” ಪ್ರಶಸ್ತಿ ಪ್ರದಾನ ಮತ್ತು ಜೂನ್‍ನಲ್ಲಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮೀಜಿಯವರಿಂದ “ಶ್ರೀ ಶ್ರೀ ವಿಜಯೀಂದ್ರ” ಪುರಸ್ಕಾರ ಪ್ರದಾನ.
- 2009 ರಲ್ಲಿ ಸುಕ್ಷೇತ್ರ ಗೋಕರ್ಣದಿಂದ ‘ಸಾರ್ವಭೌಮ ಪ್ರಶಸ್ತಿ’
- 2010 ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ‘ಗೌರವ ಡಾಕ್ಟರೇಟ್’ ಪದವಿ ಪ್ರದಾನ
- 2011 ರಲ್ಲಿ ಗುಲ್ಬರ್ಗಾದ ಡಾ. ಪಿ.ಎಸ್. ಶಂಕರ ಪ್ರತಿಷ್ಠಾನದಿಂದ ಡಾ. ಪಿ. ಎಸ್. ಶಂಕರ ವೈದ್ಯಶ್ರೀ ಪ್ರಶಸ್ತಿ
- ಕರ್ನಾಟಕ ಜಾನಪದ ಪರಿಷತ್ ಪ್ರಶಸ್ತಿ
- ಕನ್ನಡ ಸಾಹಿತ್ಯ ಪರಿಷತ್ ನೀಡುವ ಕನ್ನಡಶ್ರೀ ಪ್ರಶಸ್ತಿ
- ಡಾ. ಕಸ್ತೂರಿ ರಂಗನ್ ನೇತೃತ್ವದ 25 ಸದಸ್ಯರನ್ನು ಒಳಗೊಂಡ ಕರ್ನಾಟಕ ಸರಕಾರದ ಪ್ರತಿಷ್ಠಿತ ‘ಕರ್ನಾಟಕ ಜ್ಞಾನ
ಆಯೋಗ’ದ ಸದಸ್ಯರಾಗಿ ಮೂರು ವರ್ಷದ ಅವಧಿಗೆ 2013ರ ಡಿಸೆಂಬರ್‍ನಲ್ಲಿ ನೇಮಕ.
ಸುಂದರಿ ಆನಂದ ಆಳ್ವ ಕ್ಯಾಂಪಸ್, ವಿದ್ಯಾಗಿರಿ
ಬದಲಾಯಿಸಿಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು (ರಿ) ವು ಶೈಕ್ಷಣಿಕ ಕ್ಷೇತ್ರದಲ್ಲಿ ದೇಶಕ್ಕೆ ಮಾದರಿಯಾಗುವ ಶಿಕ್ಷಣ ಸಂಸ್ಥೆಯಾಗಿದೆ.
ಮೂಡುಬಿದಿರೆಯಿಂದ 1 ಕಿಲೋಮೀಟರ್ ದೂರದ ವಿದ್ಯಾಗಿರಿಯ ಶ್ರೀಮತಿ ಸುಂದರಿ ಆನಂದ ಆಳ್ವ ಕ್ಯಾಂಪಸ್‍ನಲ್ಲಿ 75ಎಕ್ರೆ ವಿಸ್ತೀರ್ಣದ ಬಹು ವಿಶಾಲವಾದ
ಪ್ರಶಾಂತವಾದ ಎತ್ತರದ ಸ್ಥಳದಲ್ಲಿ 5 ಅಂತಸ್ತುಗಳ ಭವ್ಯವಾದ, ಸುಸಜ್ಜಿತವಾದ ಕಾಲೇಜು ಕಟ್ಟಡ ಸುತ್ತಲಿನ ಸುಂದರ ಪರಿಸರದ ನಡುವೆ ನಯನ ಮನೋಹರವಾಗಿ ಕಂಗೊಳಿಸುತ್ತಿದೆ.
ಈ ಕಾಲೇಜು ಕಟ್ಟಡದಲ್ಲಿ ಆಧುನಿಕ, ಶೈಕ್ಷಣಿಕ ಅಗತ್ಯಗಳಿಗೆ ತಕ್ಕುದಾದ ಬಹು ವಿಸ್ತೀರ್ಣವಾದ ಸುಸಜ್ಜಿತ ಪ್ರಯೋಗಾಲಯಗಳು, ವಿದ್ಯಾರ್ಥಿಗಳ ಜ್ಞಾನದ ಹಸಿವನ್ನು ಹಿಂಗಿಸುವ ಗ್ರಂಥಾಲಯ, ಭವ್ಯ ಕಟ್ಟಡ, ಬಹು ವಿಸ್ತೀರ್ಣವಾದ ಒಳಾಂಗಣ ಸಭಾಂಗಣಗಳ ಜೊತೆಗೆ ಗಾಳಿ, ಬೆಳಕುಗಳು ಚೆನ್ನಾಗಿರುವ ತರಗತಿ ಕೋಣೆಗಳು ಶ್ರೇಷ್ಠ ಉಪನ್ಯಾಸಕರುಗಳು, ಅಲ್ಲದೆ ಹದಿನೈದು ಸಾವಿರದÀಷ್ಟು ವಿದ್ಯಾರ್ಥಿಗಳ ವಸತಿಗೆ ಅನುಕೂಲವಾದ 25 ಪ್ರತ್ಯೇಕ ವಿದ್ಯಾರ್ಥಿನಿಲಯಗಳು ಇಲ್ಲಿವೆ.
ಶಿಕ್ಷಣದ ಜೊತೆಗೇ ವಿದ್ಯಾರ್ಥಿಗಳ ಬಹುಮುಖೀ ಪ್ರತಿಭೆಯ ವಿಕಾಸಕ್ಕೆ ಅನುಕೂಲ ಕಲ್ಪಿಸುವ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ಪರಿಣತರಿಂದ, ವಿದ್ಯಾರ್ಥಿಗಳಿಂದ ನಿರಂತರವಾಗಿ ನಡೆಯುತ್ತಿರುತ್ತದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಎಲ್ಲಾ ವಿದ್ಯಾರ್ಥಿಗಳೂ ಪಾಲ್ಗೊಳ್ಳಬಹುದಾದ ಬಹು ವಿಸ್ತೀರ್ಣದ ಬಯಲು ಕ್ರೀಡಾಂಗಣ 400 ಮೀಟರ್ ಸುಸಜ್ಜಿತ ಸಿಂಥೆಟಿಕ್ ಟ್ರ್ಯಾಕ್‍ನೊಂದಿಗೆ ಸಜ್ಜುಗೊಂಡಿದ್ದು ವಿದ್ಯಾರ್ಥಿಗಳು ಇದರಲ್ಲಿ ನಿರಂತರವಾಗಿ ತೊಡಗುವಂತಾಗಿದೆ. ಇಂತಹ ಕ್ರೀಡಾಳುಗಳಿಗೆ ಅಗತ್ಯವಾದ, ತರಬೇತಿಯನ್ನು ಶೇಷ್ಠ ತರಬೇತುದಾರರಿಂದ ನೀಡುವ ವ್ಯವಸ್ಥೆ ಈ ಸುಂದರಿ ಆನಂದ ಆಳ್ವ ಕ್ಯಾಂಪಸ್‍ನಲ್ಲಿದೆ. ಆಳ್ವಾಸ್ ಆಯುರ್ವೇದಿಕ್ ಫಾರ್ಮಸಿ - ಮಿಜಾರು
1981ರಲ್ಲಿ ಮಿಜಾರಿನಲ್ಲಿ ಆರಂಭಗೊಂಡ ಫಾರ್ಮಸಿಯು ಈಗ ಪೂರ್ಣ ಪ್ರಮಾಣದಲ್ಲಿ ಬೆಳೆದು ನಿಂತಿದೆ. ಸುಮಾರು 300ಕ್ಕಿಂತಲೂ ಹೆಚ್ಚು ಆಯುರ್ವೇದೀಯ ಔಷಧಿಗಳನ್ನು ತಯಾರಿಸುತ್ತಿದ್ದು ದ.ಕ., ಉಡುಪಿ ಮತ್ತು ಆಸುಪಾಸಿನ ಜಿಲ್ಲೆಗಳ ಸುಮಾರು 2000ಕ್ಕಿಂತಲೂ ಮಿಕ್ಕಿ ವೈದ್ಯರು ಇದರ ಲಾಭವನ್ನು ಪಡೆಯುತ್ತಿದ್ದಾರೆ. ಈ ಫಾರ್ಮಸಿ ಕರ್ನಾಟಕದಾದ್ಯಂತ ಪ್ರಸಿದ್ಧಿ ಪಡೆದಿದೆ. ಈಗ ಫಾರ್ಮಸಿಯು ಭಾರತೀಯ ಪದ್ಧತಿಯ ಔಷದಿಗಳನ್ನು ವಿದೇಶಗಳಿಗೂ ರಫ್ತು ಮಾಡಲಾರಂಭಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಶೋಭಾವನ:
ಮಿಜಾರಿನ ಗುಡ್ಡಪ್ರದೇಶದಲ್ಲಿ ಸುಮಾರು 100 ಎಕ್ರೆ ಜಾಗದಲ್ಲಿ ಪಸರಿಸಿರುವ ಆಯುರ್ವೇದ ಔಷಧಿಯ ಸಸ್ಯಗಳ ವನ ಶೋಭಾವನ. ಕಣ್ಣು ಮತ್ತು ಮನಸ್ಸು ಎರಡಕ್ಕೂ ಅದ್ಭುತ ಅನುಭವ ನೀಡುವ ಸುಮಾರು 2000 ವಿವಿಧ ಔಷಧಿ ಸಸ್ಯಗಳಿರುವ ಮೂಲಿಕಾ ವನ ಇದಾಗಿದೆ. 58 ವನಗಳು ಅಂದರೆ - ನಕ್ಷತ್ರ ವನ, ರಾಶಿ ವನ, ಗಣಪತಿ ವನ, ಶಿವ ಪಂಚಕ್ಷಾರಿ ವನ, ಅಶೋಕ ವನ, ನವಗ್ರಹ ಮುಂತಾದ ವನಗಳನ್ನು ಒಳಗೊಂಡು ಕಂಗೊಳಿಸುತ್ತಿದೆ.
ಆಳ್ವಾಸ್ ವಿರಾಸತ್
ಬದಲಾಯಿಸಿಭಾರತೀಯ ಸಂಸ್ಕøತಿ ಹಾಗೂ ಪರಂಪರೆಯನ್ನು ಬಿಂಬಿಸುವ ಶಾಸ್ತ್ರೀಯ ಸಂಗೀತ, ನೃತ್ಯ, ಕಲೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಆಸಕ್ತಿ ಮೂಡಿಸುವ ಕಾರ್ಯವನ್ನು ಆಳ್ವಾಸ್ ವಿರಾಸತ್ ಅಮೋಘ ರೀತಿಯಲ್ಲಿ ಸಾಧಿಸಿದೆ. ದೇಶದ ಉದ್ದಗಲಕ್ಕೂ ಪ್ರತಿಭಾನ್ವಿತ ಕಲಾಕಾರರನ್ನು ಅಹ್ವಾನಿಸಿ, ಮೂಡುಬಿದಿರೆಯಲ್ಲಿ ಅಮೋಘ ಕಾರ್ಯಕ್ರಮಗಳನ್ನು ಏರ್ಪಡಿಸಿದ ಕೀರ್ತಿ “ಆಳ್ವಾಸ್ ವಿರಾಸತ್” ಇದರದ್ದು. ಈ ರಾಷ್ಟ್ರೀಯ ಸಾಂಸ್ಕøತಿಕ ಉತ್ಸವ ಒಂದು ವಾರ ನಡೆಯುತ್ತದೆ. ಈ ಅವಧಿಯಲ್ಲಿ ಪ್ರತೀದಿನ ಒಂದು ಶಾಸ್ತ್ರೀಯ ಸಂಗೀತ ಕಛೇರಿ ಮತ್ತು ಒಂದು ಶಾಸ್ತ್ರೀಯ ನೃತ್ಯ ಕಾರ್ಯಕ್ರಮವಿರುತ್ತದೆ. ಜಿಲ್ಲೆಯಾದ್ಯಂತ ಜನರು ಈ ಕಾರ್ಯಕ್ರಮವನ್ನು ನೋಡಿ ಆನಂದಿಸುತ್ತಾರೆ. ಈ ಕಾರ್ಯಕ್ರಮದ ಪ್ರೇಕ್ಷಕರಲ್ಲಿ ಕೇವಲ ಭಾರತೀಯ ಸಂಗೀತ ಪ್ರಿಯರಷ್ಟೆ ಅಲ್ಲ, ಪಾಶ್ಚಿಮಾತ್ಯ ಕಲಾಪ್ರೇಮಿಗಳೂ ಇರುತ್ತಾರೆ. ಪ್ರತಿದಿನ ಸುಮಾರು 35,000 ದಿಂದ 45,000 ಪ್ರೇಕ್ಷಕರು ಕಾರ್ಯಕ್ರಮ ನೋಡಲು ನೆರೆಯುತ್ತಾರೆ.
ಏಕಲವ್ಯ ಸ್ಪೋಟ್ರ್ಸ್ ಕ್ಲಬ್
ಬದಲಾಯಿಸಿನಾಡಿನ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಗುರುತಿಸಿ, ಅವರಿಗೆ ಬೇಕಾಗುವ ಎಲ್ಲಾ ತರಬೇತಿಗಳನ್ನು ನೀಡಿ ಅವರನ್ನು ಬೆಳಕಿಗೆ ತರುವ ಮಹಾತ್ಕಾರ್ಯವನ್ನು ಏಕಲವ್ಯ ಸ್ಟೋಟ್ಸ್ ಕ್ಲಬ್ ಮಾಡಿದೆ. ಇಲ್ಲಿ ತರಬೇತಿ ಹೊಂದಿದ, ಒಲಂಪಿಕ್ ಗೇಮ್ಸ್‍ನಲ್ಲಿ ಭಾಗವಹಿಸಿದ ಶ್ರೀ ಸತೀಶ್ ರೈ, ಪೂವಮ್ಮ, ಅಶ್ವಿನಿ ಅಕ್ಕುಂಜೆ ಮೊದಲಾದವರು ಈ ಕ್ಲಬ್ಬಿನ ಹೆಮ್ಮೆಯ ಕೊಡುಗೆ. ಇಲ್ಲಿ ತರಬೇತಿ ಹೊಂದಿದ ಬಹಳಷ್ಟು ಕ್ರೀಡಾಪಟುಗಳು ಅಂತರ್ ವಿಶ್ವವಿದ್ಯಾಲಯ ಸ್ಪರ್ಧೆಗಳಲ್ಲಿ ಮತ್ತು ರಾಜ್ಯಮಟ್ಟ ಹಾಗೂ ರಾಷ್ಟ್ರ ಮಟ್ಟದ, ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಆಳ್ವಾರವರ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಸ್ಟೋಟ್ಸ್ ಕೋಟಾದಡಿ ಕೆಲವು ಸೀಟುಗಳನ್ನು ಕಾದಿರಿಸಲಾಗುತ್ತದೆ. ಈ ಕ್ಲಬ್ಬಿನ ಸಾವಿರಕ್ಕೂ ಹೆಚ್ಚಿನವರು ಪೋಲಿಸ್, ಬ್ಯಾಂಕಿಂಗ್, ವಿಮಾ, ರೈಲ್ವೇ ಇಲಾಖೆಗಳಲ್ಲಿ ನೌಕರಿಯನ್ನು ಹೊಂದಿರುತ್ತಾರೆಂಬುದು ನಮ್ಮ ಸಂಸ್ಥೆಗೆ ಹೆಮ್ಮೆಯ ಸಂಗತಿಯಾಗಿದೆ.
ವಿದ್ಯಾರ್ಥಿಗಳ ದತ್ತು ಸ್ವೀಕಾರ
ಬದಲಾಯಿಸಿನಾಲ್ಕು ವಿಧಗಳ ‘ದತ್ತು ಸ್ವೀಕಾರ’ ಕಾರ್ಯಕ್ರಮಗಳು ಇರುತ್ತವೆ. 1. ಅತ್ಯುನ್ನತ ಅಂಕಪಡೆದ ವಿಭಾಗ: ಅರ್ಹತಾ ಪರೀಕ್ಷೆಯಲ್ಲಿ 95% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳು. 2. ಕ್ರೀಡಾಳು ವಿಭಾಗ: ತಾಲೂಕು, ಜಿಲ್ಲೆ, ವಿಶ್ವ ವಿದ್ಯಾ£ಲಯ ಮಟ್ಟ ಹಾಗೂ ಅವುಗಳಿಗಿಂತಲೂ ಉನ್ನತ ಸಾಧನೆಗೈದ ವಿದ್ಯಾರ್ಥಿಗಳನ್ನು ಈ ವಿಭಾಗಕ್ಕೆ ದತ್ತು ಸ್ವೀಕರಿಸಲಾಗುತ್ತದೆ. 3. ಸಾಂಸ್ಕøತಿಕ ವಿಭಾಗ: ಸಂಗೀತ, ನೃತ್ಯ, ಚಿತ್ರ ಮತ್ತು ಕಲಾ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಈ ವಿಭಾಗಕ್ಕೆ ದತ್ತು ಸ್ವೀಕರಿಸಲಾಗುತ್ತದೆ. 4. ವಿಕಲಾಂಗ ವಿಭಾಗ: ದೇಹದ ಭಾಗಗಳಲ್ಲಿ ಯಾವುದೇ ರೀತಿಯ ನ್ಯೂನತೆವುಳ್ಳವರನ್ನು ಈ ವಿಭಾಗಕ್ಕೆ ದತ್ತು ಸ್ವೀಕರಿಸಲಾಗುತ್ತದೆ.
ಮೋಹಿನಿ ಅಪ್ಪಾಜಿ ನಾಯಕ್ ಸ್ಮಾರಕ ಬುದ್ಧಿಮಾಂದ್ಯ ಮಕ್ಕಳಿಗಾಗಿ ವಿಶೇಷ ಶಾಲೆ
ಬದಲಾಯಿಸಿಸಮಾಜ ಸೇವೆಗಾಗಿಯೇ ತನ್ನ ಜೀವನವನ್ನು ಮುಡಿಪಿಟ್ಟ ಶ್ರೀಮತಿ ದಿ| ಮೋಹಿನಿ ಅಪ್ಪಾಜಿ ನಾಯಕ್ ಇವರ ಸ್ಮರಣಾರ್ಥವಾಗಿ ಡಾ. ಮೋಹನ ಆಳ್ವರವರು ಬುದ್ಧಿಮಾಂದ್ಯ ಮಕ್ಕಳಿಗಾಗಿಯೇ ಈ ವಿಶೇಷ ಶಾಲೆಯನ್ನು ಆರಂಭಿಸಿರುತ್ತಾರೆ. ಮನುಷ್ಯನ ಪ್ರತಿಯೊಂದು ಕಾರ್ಯವು ಕೊನೆಯ ಹಂತದಲ್ಲಿ ಸಮಾಜೋಪಕಾರಿಯಾಗಿ ಸಮಾಜಕ್ಕೆ ತಲುಪಬೇಕೆಂಬುದು ಡಾ. ಆಳ್ವರವರ ಇಚ್ಛೆ. ಈ ದೃಷ್ಠಿಯಿಂದ ಅವರು ತನ್ನನ್ನು ತೊಡಗಿಸಿಕೊಂಡು ಬುದ್ಧಿಮಾಂದ್ಯ ಮಕ್ಕಳಿಗಾಗಿ 2008 ರಲ್ಲಿ ಈ ವಿಶೇಷ ಶಾಲೆಯನ್ನು ಆರಂಭಿಸಿರುತ್ತಾರೆ. ಪ್ರಸ್ತುತ ಈ ಶಾಲೆಯಲ್ಲಿ 25 ಬುದ್ಧಿಮಾಂದ್ಯ ಮಕ್ಕಳಿದ್ದು ಇದಕ್ಕಾಗಿಯೇ ಈ ಶಾಲೆಯಲ್ಲಿ ವಿಶೇಷ ಪರಿಣತಿ ಪಡೆದ ಅಧ್ಯಾಪಕರನ್ನು ನೇಮಿಸಲಾಗಿದೆ. ಹೊರಗಿನ ಯಾವ ಆರ್ಥಿಕ ಸಹಾಯವೂ ಇಲ್ಲದೆ ಡಾ. ಆಳ್ವರವರು ತನ್ನ ಸ್ವಂತ ಖರ್ಚಿನಿಂದಲೇ ಈ ಶಾಲೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಏಯ್ಡ್ಸ್ ಪೀಡಿತರಿಗೆ ಶೂಶ್ರುಷೆ
ಬದಲಾಯಿಸಿಸಮಾಜದಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ದಮನೀಯ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವ ಏಯ್ಡ್ಸ್ ಪೀಡಿತರನ್ನು ಕಂಡ ಡಾ. ಆಳ್ವರವರು ಅಂಥವರ ಸಹಾಯಕ್ಕಾಗಿ ವಿಶೇಷ ಘಟಕವನ್ನು ಆರಂಭಿಸಿ ಸುಮಾರು 300ಕ್ಕೂ ಮಿಕ್ಕಿದ ಏಯ್ಡ್ಸ್ ಪೀಡಿತರಿಗೆ ಪ್ರತಿ ತಿಂಗಳಿಗೊಮ್ಮೆ ಸೇರಿಸಿ ಅವರಲ್ಲಿ ಮನೋಸ್ಥೈರ್ಯ ತುಂಬಿ ರೋಗ ಶಮನಕ್ಕೆ ಬೇಕಾದ ಸಲಹೆ ಸೂಚನೆಗಳನ್ನು ನೀಡುವುದರೊಂದಿಗೆ ಅಂತಹ ಜನರಿಗೆ ಧರ್ಮಾರ್ಥವಾಗಿ ಬೇಕಾದ ಔಷಧಿಗಳನ್ನು ಕೊಟ್ಟು ಅವರನ್ನು ರೋಗ ಮುಕ್ತರನ್ನಾಗಿ ಮಾಡಿ ಸಮಾಜದಲ್ಲಿ ನೆಮ್ಮದಿಯ ಬಾಳನ್ನು ನಡೆಸುವಲ್ಲಿ ನಿರಂತರ ಸಹಕರಿಸುತ್ತಿದ್ದಾರೆ.
ವಿಶೇಷ ದತ್ತು ಸ್ವೀಕಾರ
ಬದಲಾಯಿಸಿದತ್ತು ಸ್ವೀಕಾರ ಯೋಜನೆಯಡಿ ಪರಿಶಿಷ್ಟ ಜಾತಿ, ಪಂಗಡಗಳ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಕೊರಗ, ಸಿದ್ಧಿ, ಕುಡುಬಿ, ಮಲೆಕುಡಿಯ, ಜೇನು ಕುರುಬ, ಸೋಲಿಗ, ಹಕ್ಕಿಪಿಕ್ಕೆ ಮೊದಲಾದ ಜನಾಂಗಗಳ 250 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ವಸತಿ, ಊಟೋಪಚಾರದ ವ್ಯವಸ್ಥೆಯನ್ನು ಮಾಡಿದ್ದಾರೆ.
ಕನ್ನಡ ಮಾದ್ಯಮ ಶಾಲೆ
ಬದಲಾಯಿಸಿಕನ್ನಡ ನಾಡು ನುಡಿಯ ಕುರಿತ ವಿಶೇಷ ಸಮ್ಮೇಳನಗಳನ್ನು ನಡೆಸುತ್ತಾ ಬಂದಿರುವ ಇವರು 6ರಿಂದ 10ನೇ ತರಗತಿಯವರೆಗಿನ ಕನ್ನಡ ಮಾದ್ಯಮ ಪ್ರೌಢಶಾಲೆಯನ್ನು ಆರಂಭಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ವಸತಿ, ಊಟ, ಸಮವಸ್ತ್ರ, ಪುಸ್ತಕ ಎಲ್ಲವನ್ನು ಉಚಿತವಾಗಿ ನೀಡುತ್ತಿದ್ದಾರೆ. ಸುಮಾರು 300ಕ್ಕೂ ಅಧಿಕ ವಿದ್ಯಾರ್ಥಿಗಳು ಇದರ ಫಲಾನುಭವಿಗಳು.
ಭಾಷ ಅಧ್ಯಯನ ಕೇಂದ್ರಗಳು
ಬದಲಾಯಿಸಿಪ್ರಾದೇಶಿಕ ಭಾಷೆಗಳನ್ನು ಕುರಿತ ಅಧ್ಯಯನದ ಉದ್ದೇಶದಿಂದ ಕನ್ನಡ, ತುಳು, ಕೊಂಕಣಿ, ಬ್ಯಾರಿ, ಕೊಡವ, ಮಣಿಪುರಿ ಭಾಷೆಯ ಅಧ್ಯಯನ ಕೇಂದ್ರಗಳನ್ನು ಆರಂಭಿಸಿದ್ದಾರೆ. ಅಲ್ಲದೇ ಜಾನಪದ ಕಲೆಗಳಾದ ಯಕ್ಷಗಾನದ ತೆಂಕು ಬಡಗು, ಮಣಿಪುರದ ಸ್ಟಿಕ್‍ಡ್ಯಾನ್ಸ್, ಒರಿಸ್ಸಾದ ಗೋಟಿಪುವ ಮೊದಲಾದ ಹಲವು ಜಾನಪದ ನೃತ್ಯಗಳಿಗೂ ಹಲವು ಶಾಸ್ತ್ರೀಯ ಸಂಗೀತ ಮತ್ತು ನೃತ್ಯಕ್ಕೆ ಸಂಬಂಧಿಸಿದ ತರಬೇತುಗಳನ್ನು ತಜ್ಞರಿಂದ ನೀಡುತ್ತಾ ಬಂದಿದ್ದಾರೆ.