ಅಮೂಲ್ಯವಾದ ಆತ್ಮದ ಹತ್ಯೆ ಏಕೆ?

ಸಾವು ಯಾರಿಗೆ ಇಲ್ಲ ಹೇಳಿ. ಪ್ರತಿಯೊಬ್ಬರಿಗೆ ಸಾವು ಬಂದೆ ಬರುತ್ತೆ ಅದಕ್ಕೆ ಒಂದು ಗಾದೆ ಮಾತು ಸಹ ಇದೆ. "ಹುಟ್ಟು ಉಚಿತ ಸಾವು ಖಚಿತ" ಎಂದು ಈಗಿನ ಯುವಪೀಳಿಗೆಯು ಹಲವಾರು ಸಣ್ಣ ಕಾರಣಗಳಿಂದ ಆತ್ಯಹತ್ಯೆಗೆ ಶರಣಾಗುತ್ತಿದ್ದಾರೆ. ಮಾನವ ಎಂದ ಮೇಲೆ ಸುಖ ದುಖ: ಎಲ್ಲರಿಗೂ ಜೀವನದಲ್ಲಿ ಸಹಜ, ಹಾಗದರೆ ಯಾಕೇ ಯುವಜನಾಂಗವು ಆತ್ಯಹತ್ಯೆ ಎಂಬ ಗೂಡಿಗೆ ಸೇರುತ್ತಿದ್ದಾರೆ.

ತಂದೆ ತಾಯಿ ನನ್ನ ಮಗಳು, ಮಗ ಏನಾದರು ಜೀವನದಲ್ಲಿ ಸಾಧನೆ ಮಾಡುತ್ತಾರೆ ಎಂದು ಕನಸುಗಳ ಮಹಾಪೂರವೇ ಕಟ್ಟಿಕೊಂಡಿರುತ್ತಾರೆ.ಅದರೆ ಅವರ ಕನಸುಗಳನ್ನು ನನಸು ಮಾಡುವ ಮೋದಲೆ ತಪ್ಪು ತಿಮರ್ಾನ ತಗೆದುಕೊಂಡರೇ? ಈ ಒಂದು ಚಿಕ್ಕ ತಪ್ಪು ತಿಮರ್ಾನದಿಂದ ನಮ್ಮ ಪೋಷಕರ ಮನಸ್ಸು ಎಷ್ಟು ನೊಂದಿರಬಾರದು. ಕಳೆದ ಒಂದು ವಾರದ ಹಿಂದೆ ಒಬ್ಬ ಮಗ ಸತ್ತಿದ್ದರಿಂದ ತಂದೆ ತಾಯಿ ಆತ್ಮಹತ್ಯೆ ಮಾಡಿಕೊಂಡರು ಏಕೇ? ಕಷ್ಟಗಳನ್ನು ಎದುರಿಸಿ ಮುಂದೆ ಬಂದವಲ್ಲಿ ನಮ್ಮ ದೇಶದಲ್ಲಿ ಬಹಳ ಜನರು ಇದ್ದಾರೆ.

ರೈಲ್ವೆ ಸ್ಟೇಷನ್ನಲ್ಲಿ ಟೀ ವ್ಯಾಪರ ಮಾಡಿಕೊಂಡು ಇದ್ದ ಒಬ್ಬ ವ್ಯಕ್ತಿ ಈಗ ನಮ್ಮ ದೇಶದ ಪ್ರಧಾನಿ, ಅದೇ ರೀತಿಯಾಗಿ ನಮ್ಮ ದೇಶದ ಒಬ್ಬ ಸೈನಿಕ ಯುದ್ದ ಶುರುವಾದಗ ಅವರ ಗೆಳಿಯರು 6 ಜನ ಸತ್ತು ಹೋದಾಗ, ಆ ಸಂಧರ್ಭದಲ್ಲಿ ನಾನು ಏಕೇ ಬದಕಲಿ ಎಂದು ರೈಲ್ವೆ ಹಳಿಯ ಮೇಲೆ ಸಾಯುವುದಕ್ಕೆ ಹೋದಾಗ ಸ್ವಲ್ಪ ಹೊತ್ತು ರೈಲು ತಡವಾಗಿ ಬಂತು. ಪಕ್ಕದಲ್ಲಿ ಒಂದು ಪುಸ್ತಕ ಮಳಿಗೆಯಲ್ಲಿ ಸ್ವಾಮಿ ವೀವೆಕನಾಂದರು ಬರೆದ ಪುಸ್ತಕವನ್ನು ಓದಿದ ಮೇಲೆ ನಾನು ಯಾಕೇ ಸಾಯಬೇಕು,

ನನ್ನ ಗುರಿಯನ್ನು ತಿಳಿದುಕೊಂಡಿಲ್ಲ ಎಂದು ತಮ್ಮ ಹಳ್ಳಿಗೆ ಬಂದು ಆ ಗ್ರಾಮದಲ್ಲಿ ಹೆಚ್ಚಿನ ಮದ್ಯ ಮಾರಟ ಮಾಡುವದನ್ನು ತಡೆಗಟ್ಟಿ ತನ್ನ ಹೊಲದಲ್ಲಿ ಬಂಗಾರದ ಬೆಳೆ ಬೆಳೆದು ಒಂದು ಗ್ರಾಮವನ್ನು ಮಾದರಿ ಗ್ರಾಮವಾಗಿ ಮಾಡಿದ ಒಬ್ಬ ಸಮಾನ್ಯ ವ್ಯಕ್ತಿಯನ್ನು ಇಂದು ಗಾಂಧಿವಾದಿ ಎಂದು ಇಡಿ ದೇಶವೇ ಬಿಂಬಿಸಿತು. ಅವರೇ ಅಣ್ಣಾ ಹಜಾರೆ. ಹೀಗಿರುವಾಗ ಒಂದೇ ಭಾರಿ ಸೀಗುವ ಈ ಅಪರೂಪ ಮನಷ್ಯ ಜೀವನ ಬಲಿ ಕೊಡುವುದು ಎಷ್ಟು ಸರಿ? ಅಪ್ಪ ಆಮ್ಮ ನಮ್ಮ ಮೇಲೆ ಕಟ್ಟಿಕೊಂಡಿರುವ ಕನಸುಗಳನ್ನು ನನಸುಮಾಡಿ ಸಮಾಜದಲ್ಲಿ ಸತ್ಪ್ರಜೆಯಾಗಿ ಬಿಂಬಿಸಿಕೊಳ್ಳಿ. ನಮ್ಮ ಜೀವನಶೈಲಿ ಇತರರಿಗೆ ದಾರಿ ದೀಪವಾಗಲಿ. ಆತ್ಯಹತ್ಯೆ ಎಂಬ ಆತುರ ನಿಧರ್ಾರ ಕೈಬಿಡಿ. ಜೀವನದಲ್ಲಿ ಪ್ರಾಣ ಅಮೂಲ್ಯವಾದದ್ದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.