ಸದಸ್ಯ:Veenavadivya/ನನ್ನ ಪ್ರಯೋಗಪುಟ

ಹಾನುಬಾಳು ಗ್ರಾಮದ ವಿಶೇಷತೆ ಬದಲಾಯಿಸಿ

         ಮಲೆನಾಡಿನ  ಮಡಿಲಲ್ಲಿ ಸಕಲ ಐಶ್ವರ್ಯಾಗಳಿಂದ  ಕೂಡಿದ ಹೇಮಾವತಿ ನದಿಯ ದಡದಲ್ಲಿರುವುದೇ  ನಮ್ಮ ಸಕಲೇಶಪುರ .ಸಕಲೇಶಪುರ ತಾಲ್ಲೂಕಿನಲ್ಲಿರುವ ಒಂದು ಪುಟ್ಟ ಹೋಬಳಿ ಗ್ರಾಮವೇ ಹಾನುಬಾಳು.ಹಾನುಬಾಳು ಹಚ್ಚ ಹಸಿರಿನ ವನ ಸಿರಿಯನ್ನು ಹೊಂದಿರುವ ಗ್ರಾಮವಾಗಿದೆ. ಪ್ರವಾಸಿಗರನ್ನು ವಾರದ ಅಂತ್ಯದಲ್ಲಿ & ರಜ ದಿನಗಳಲ್ಲಿ ಪ್ರವಾಸಿಗರನ್ನು ತನ್ನತ್ತಾ ಕೈ ಬೀಸಿ ಕರೆಯುತ್ತದೆ.
     ಗ್ರಾಮವು ಬಹು ಸಂಸ್ಕೃತಿಯನ್ನು  ಹೊಂದಿರುವ ಗ್ರಾಮವಾಗಿದೆ.ಇಲ್ಲಿ  ಹಲವಾರು ಹಬ್ಬಗಳ ಆಚರಣೆಯನ್ನು  ಕಾಣಬಹುದಾಗಿದೆ.ನಮ್ಮ ಗ್ರಾಮದಲ್ಲಿ  ಆಚರಿಸುವ ಹಬ್ಬಗಳಲ್ಲಿ ದೀಪಾವಳಿಯು  ಪ್ರಮುಖವಾಗಿದ್ದು, ಈ ಸಂಧರ್ಭದಲ್ಲಿ  ಜಾತ್ರಾ ಮಹೋತ್ಸವ ನಡೆಯುವುದನ್ನು ಕಾಣಬಹುದಾಗಿದೆ. ಈ ಜಾತ್ರೆಯನ್ನು ಗುಂಡು ಬ್ರಹ್ಮ ಜಾತ್ರಾ ಮಹೋತ್ಸವವೆಂದು ಕರೆಯುತ್ತೇವೆ. ಈ ಜಾತ್ರೆಯು ಉದ್ದಿ ಗುಡ್ಡ ಎಂಬ ಜಾಗದಲ್ಲಿ ನಡೆಯುತ್ತದೆ. ಈ ಸ್ಥಳದಲ್ಲಿ ಮೂರು ಗ್ರಾಮದ ದೇವರ ಮೂರ್ತಿಗಳು ಸೇರುತ್ತವೆ. ಮಕ್ಕಿಹಳ್ಳಿ, ಅಗನಿ & ಹಾನುಬಾಳು ಗ್ರಾಮದ ದೇವರುಗಳು ಸೇರುತ್ತವೆ. ಈ ಜಾತ್ರೆಯಲ್ಲಿ ಬಿದಿರಿನಿಂದ ಮಾಡಿದ "ಸತ್ತಿಗೆ" ಎಂಬುದು ವಿಶೇಷವಾಗಿದೆ.
    ಹಾನುಬಾಳು  ಗ್ರಾಮದಲ್ಲಿರುವ ಸರ್ಕಾರಿ  ಪ್ರಾಥಮಿಕ ಶಾಲೆಯು ತನ್ನ  ಶತಮಾನೋತ್ಸವವನ್ನು ಆಚರಿಸಿದೆ.ಹಳೆಯ  ಕಟ್ಟಡವು ಉತ್ತಮವಾಗಿಲ್ಲದೆ  ಇರುವುದರಿಂದ ನೂತನ ಕಟ್ಟಡದ  ಕಾರ್ಯರಂಭದಲ್ಲಿ ಸಾಗುತ್ತಿದೆ. ಈ ಕಟ್ಟಡದ ಕಾರ್ಯರಂಭದಲ್ಲಿ  ಗ್ರಾಮಸ್ಥರು ,ದಾನಿಗಳು, ಹಳೆ  ವಿದ್ಯಾರ್ಥಿಗಳ ಸಂಘದ ಕೊಡುಗೆಯಾಗಿದೆ. ಈ ಗ್ರಾಮದಲ್ಲಿರುವ ಪದವಿಪೂರ್ವ ಕಾಲೇಜು ಕಲಾ & ವಾಣಿಜ್ಯ ವಿಭಾಗವನ್ನು ಹೊಂದಿದೆ. ಈ ಕಾಲೇಜಿನ ವಿದ್ಯಾರ್ಥಿಗಳು ಒಳ್ಳೆ ಕೊಡುಗೆ ನೀಡಿದ್ದಾರೆ. ಈ ಕಾಲೇಜಿನ ದ್ವಿತೀಯ ಪಿ.ಯು.ಸಿ.ಪಲಿತಾಂಶದಲ್ಲಿ ಕಲಾ ವಿಭಾಗದಲ್ಲಿ ೯೮% ಮತ್ತು ವಾಣಿಜ್ಯ ವಿಭಾಗದಲ್ಲಿ ೧೦೦%  ಫಲತಾಂಶ ನೀಡಿದೆ. ಈ ಕಾಲೇಜು ಉತ್ತಮ ಕ್ರೀಡಾಪಟುಗಳನ್ನು ಹೊಂದ್ಧಿದ್ದು,ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸತತವಾಗಿ ಎರಡು ಬಾರಿ ಸಮಗ್ರ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಈ ಕಾಲೇಜಿನಲ್ಲಿ ಉತ್ತಮ ಬೋಧಕ ವರ್ಗವನ್ನು ಕಾಣಬಹುದಾಗಿದೆ