ಆದಿನಾಥ ಸ್ವಾಮಿ ಬಸದಿ, ಕಣಿಯೂರು

(ಸದಸ್ಯ:Vani Bhat manjalli/ನನ್ನ ಪ್ರಯೋಗಪುಟ೬ ಇಂದ ಪುನರ್ನಿರ್ದೇಶಿತ)

ಭಗವಾನ್ ಶ್ರೀ ಆದಿನಾಥ ಸ್ವಾಮಿ ಬಸದಿ, ಕಣಿಯೂರು

ಶ್ರೀ ಆದಿನಾಥ ಸ್ವಾಮಿ ಬಸದಿಯು ಬೆಳ್ತಂಗಡಿಯಿಂದ ಸುಮಾರು ೨೫ ಕಿ.ಮೀ ದೂರದಲ್ಲಿದೆ.

ಬಸದಿಗೆ ಬೆಳ್ತಂಗಡಿ, ಉಪ್ಪಿನಂಗಡಿ ಮಾರ್ಗವಾಗಿ ಹೋಗುವಾಗ ಕುಪ್ಪೆಟ್ಟಿ ಎಂಬಲ್ಲಿ ತಿರುಗಿ ಪದ್ಮುಂಜ ಎಂಬ ಪೇಟೆ ಮೂಲಕ ಬಸದಿಯನ್ನು ತಲುಪ ಬಹುದಾಗಿದೆ. ಈ ಬಸದಿಯು ಕಣಿಯೂರು ಗ್ರಾಮಕ್ಕೆ ಸೇರಿದೆ.

ಮೂರ್ತಿ/[]ಶಿಲಾನ್ಯಾಸ

ಬದಲಾಯಿಸಿ

ಬಸದಿಯಲ್ಲಿ ಪೂಜೆಗೊಳ್ಳುವ ತೀರ್ಥಂಕರರು ಭಗವಾನ್ ಆದಿನಾಥ ಸ್ವಾಮಿ. ಮೂರ್ತಿಯು ಪಂಚಲೋಹದ್ದಾಗಿದ್ದು ಸುಂದರವಾಗಿದೆ. ಚಿತ್ರಿಕೆಗಳೊಂದಿಗೆ ಸುತ್ತಲೂ ೨೪ ತೀರ್ಥಂಕರರ ಚಿಕ್ಕ ಚಿಕ್ಕ ಬಿಂಬಗಳನ್ನೊಳಗೊಂಡ ಪ್ರಭಾವಳಿ ಇದೆ. ಸುತ್ತಲೂ ಮಕರ ತೋರಣ ಹಾಗೂ ತೀರ್ಥಂಕರರ ಮೂರ್ತಿ ಖಡ್ಗಾಸನ ಭಂಗಿಯಲ್ಲಿದೆ. ಪದ್ಮಪೀಠ ಶಿಲೆಯದ್ದಾಗಿದೆ. ಗೋಮುಖ ಯಕ್ಷ ಹಾಗೂ ಚಕ್ರೇಶ್ವರಿ ಯಕ್ಷೆಯರು ವಿರಾಜಮಾನರಾಗಿದ್ದಾರೆ. ಅವರು ನಿಂತ ಭಂಗಿಯಲ್ಲಿದ್ದು ಆಯುಧಧಾರಿಗಳಾಗಿದ್ದಾರೆ. ಗೋಮುಖ ಯಕ್ಷ ೪ ಕೈಗಳಿಂದ ಕೂಡಿದ್ದು ಪರಶು, ಬೀಜಫಲ, ಅಶ್ವಸೂತ್ರ, ಮತ್ತು ವರದ ಮುದ್ರೆ ಹೊಂದಿದ್ದಾರೆ. ಅದೇ ರೀತಿಯಲ್ಲಿ ಚಕ್ರೇಶ್ವರಿ ಯಕ್ಷಿಗೆ ೪ ಕೈಗಳಿದ್ದು ೮ ಕೈಯಲ್ಲಿ ಚಕ್ರ, ಮತ್ತಿತ್ತರ ಆಯುಧಗಳು, ೨ ಕೈಗಳಲ್ಲಿ ವಜ್ರ, ಇನ್ನೊಂದು ಕೈಯಲ್ಲಿ ವರದ ಮುದ್ರೆ ಮತ್ತು ಒಂದು ಕೈಯಲ್ಲಿ ಫಲ ಧರಿಸಿದ್ದಾರೆ.ತೀರ್ಥಂಕರರ ಮೂರ್ತಿಯ ಕೆಳಗೆ ವೃಷಭ ಲಾಂಛನವಿದೆ. ಅಷ್ಟಮಹಾಪ್ರಾತಿಹಾರಗಳನ್ನು ಹೊಂದಿದೆ. ಪ್ರಾರ್ಥನಾ ಮಂಟಪ, ಘಂಟಾ ಮಂಟಪ, ಗಂಧಕುಟಿಗಳು ಇವೆ.ಗಂಧಕುಟಿಯುಲ್ಲಿ ಶ್ರುತ ಹಾಗೂ ಗಣಧರ ಮೂರ್ತಿಗಳಿವೆ. ಪ್ರಾಂಗಣದ ಆಗ್ನೇಯ ಮೂಲೆಯಲ್ಲಿ ಅಶ್ವತ್ಥ ಮರ ಇದೆ.ಬಸದಿಯು ಸುತ್ತಲೂ ಪ್ರದಕ್ಷಿಣಾ ಪಥದ ಜಗಲಿಯಿಂದ ಕೂಡಿದೆ. ಬಸದಿಯ ಸುತ್ತಲೂ ಅಂಗಳ ಇದೆ.ಕ್ಷೇತ್ರಪಾಲನ ಸನ್ನಿಧಾನ ಹಾಗೂ ನಾಗನ ಸನ್ನಿಧಾನವೂ ಇದೆ. ಅಲ್ಲಿ ತ್ರಿಶೂಲ, ಕಲ್ಲು ಮುಂತಾದ ಪೂಜನೀಯ ವಸ್ತುಗಳ ಜೊತೆ ಪ್ರಧಾನ ಬಲಿಪೀಟ ಇದೆ.

ಪೂಜಾ ವಿಧಾನ

ಬದಲಾಯಿಸಿ

ಬಸದಿಯಲ್ಲಿ ಮಧ್ಯಾಹ್ನ ಹಾಗೂ ಸಾಯಂಕಾಲ ೨ ಹೊತ್ತುಗಳ ಪೂಜೆ ನಡೆಯುತ್ತದೆ. ಶ್ರುತ ಹಾಗೂ ಗಣಧರಗಳಿಗೆ ಪೂಜೆ ಮಾಡಲಾಗುತ್ತದೆ. ನೋಂಪಿ ಉದ್ಯಾಪನೆ ಮಾಡಲಾಗಿದೆ. ಶ್ರೀ ಪದ್ಮಾವತಿ ಅಮ್ಮನವರ ಸಾನಿಧ್ಯವಿದ್ದು, ಅದು ದೇವಕೋಷ್ಠದಲ್ಲಿದ್ದು ಉತ್ತರಕ್ಕೆ ಮುಖ ಮಾಡಿದೆ. ಅಮ್ಮನವರಿಗೆ ಸೀರೆ ಬಳೆ ಇತ್ಯಾದಿಗಳನ್ನು ತೊಡಿಸಿ ಸಿಂಗರಿಸಲಾಗುತ್ತದೆ. ಶುಕ್ರವಾರದಂದು ವಿಶೇಷ ಪೂಜೆಯು ನಡೆಯುತ್ತದೆ. ದೇವರ ಎದುರು ಹೂವು ಹಾಕಿ ನೋಡುವ ಕ್ರಮವಿದೆ. ನೈವೇದ್ಯವನ್ನು ಮಾಡುತ್ತಾರೆ. ಹರಕೆಗಳನ್ನು ಹೇಳಲಾಗುತ್ತದೆ. ಬಸದಿಯಲ್ಲಿ ನಡೆಯುವ ವಿಶೇಷಗಳೆಂದರೆ ಕ್ಷೀರಾಭಿಷೇಕ, ವರಾಹ ಪೂಜೆ, ಧನುಪೂಜೆ, ಅಪ್ಪದ ಪೂಜೆ, ನವರಾತ್ರಿ ಪೂಜೆ, ನವರಾಥ್ರಿ ಪೂಜೆ, ದೀಪಾವಳಿ, ನೂಲಹುಣ್ಣಿಮೆ, ಇತ್ಯಾದಿ ದಿನಗಳಲ್ಲಿ ವಿಶೇಷ ಪೂಜೆ, ಆರಾಧನೆಗಳಿರುತ್ತವೆ.

ಉಲ್ಲೇಖ

ಬದಲಾಯಿಸಿ
  1. ಶೆಣೈ, ಉಮಾನಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಮಂಜೂಶ್ರೀ ಪ್ರಿಂಟರ್ಸ್‌. p. ೨೩೦-೨೩೧.