ಬಂಜೆತನ ಮತ್ತು ಪುರುಷರ ವಿಫಲತೆ

ಬದಲಾಯಿಸಿ

ಬಂಜೆತನವನ್ನು ಯಾವತ್ತೀಗೂ ಮಹಿಳೆಯನ್ನೇ ಕೇಂದ್ರವಾಗಿರಿಸಿಕೊಂಡು ಹೇಳಲಾಗುತ್ತದೆ.ಅದು ಸಹಜ ಕೂಡ.ಬಂಜೆತನಕ್ಕೆ ಹೆಣ್ಣುಮಕ್ಕಳು ನೇರ ಕಾರಣ ಎಂದು ಜನರು ನಂಬಿದ್ದಾರೆ. ಆದರೆ ಬಹುತೇಕ ಜನರಿಗೆ ಅರಿಯದ ಸತ್ಯವೊಂದಿದೆ. ಬಂಜೆತನವನ್ನು ಅನುಭವಿಸುತ್ತಿರುವ ದಂಪತಿಗಳಲ್ಲಿ ಶೇ ೪೫-೫೦ ರಷ್ತು ಗಂಡಸರಲ್ಲಿಯೇ ಸಮಸ್ಯೆ ಇದೆ. ಬಂಜೆತನಕ್ಕೆ ಪುರುಷರೂ ಹೆಚ್ಚಿನ ಸಂಖ್ಯೆಯಲ್ಲಿ ಕಾರಣವಾಗುತ್ತಿದ್ದಾರೆ. ವೀರ್ಯಾಣುಗಳ ಸಂಖ್ಯೆಯಲ್ಲಿ ಕೊರತೆ, ಆರೋಗ್ಯವಂತ ವೀರ್ಯಾಣುಗಳ ಕೊರತೆ, ಗರ್ಭಧಾರಣೆಯ ಯಾನ ಸಂಪೂರ್ಣಗೊಳಿಸಲು ಅಶಕ್ತವಾಗಿರುವ ವೀರ್ಯಾಣುಗಳು ಕಾರಣವಾಗಿವೆ. ಮುಖ್ಯವಾಗಿ ವೀರ್ಯಾಣುಗಳಲ್ಲಿ ಕೊರತೆ ಇದ್ದರೆ ಫಲವಂತಿಕೆ ಹೇಗೆ ಸಧ್ಯವಾದೀತು? ಬಂಜೆತನದ ಕಾರಣ ಹಾಗು ಪರಿಹಾರ ಹುಡುಕಲು ಮೊದಲನೆಯದ್ದಾಗಿ ವೀರ್ಯಾ ಪರೀಕ್ಷೆ ನಡೆಯಬೇಕು.

 
ವೀರ್ಯಾಣು

ವೀರ್ಯಾ ಪರೀಕ್ಷೆ/ವಿಶ್ಲೇಷಣೆ ಎಂದರೇನು?

ಬದಲಾಯಿಸಿ

ವೀರ್ಯಾ ವಿಶ್ಲೇಷಣೆಯು ಮೂರು ಮುಖ್ಯ ಅಂಶಗಳನ್ನು ತಪಾಸಣೆ ಮಡುತ್ತದೆ. ವೀರ್ಯಾಣುಗಳ ಸಂಖ್ಯೆ ವೀರ್ಯಾಣುಗಳ ಸ್ವರೂಪ ವೀರ್ಯಾಣುಗಳ ಚಲನೆ

ದಂಪತಿಯ ಬಂಜೆತನಕ್ಕೆ ಪರಿಹಾರ ಹುಡುಕಲು ಇದು ಸಹಾಯ ಮಡುತ್ತದೆ. ಈ ಪರೀಕ್ಷೆಯ ಮುಲಕ ಫಲವಂತಿಕೆಯ ಪ್ರಮಾಣ ಕಡಿಮೆಯಾಗಿರಲು ನಿಕರವಾದ ಕಾರಣಗಳನ್ನು ತಿಳಿಯಬಹುದು. ಆರೋಗ್ಯವಂತ ವೀರ್ಯಾಣುಗಳ ಲಕ್ಷಣಗಳೇನು ಎಂಬುದು ನಮಗೆ ತಿಳಿಯಬೇಕು. ಅಂಡಾಣು ಸ್ವರೂಪದ ೫ ರಿಂದ ೬ ಮೈಕ್ರೊಮೀಟರ್ ಉದ್ದದ ೨.೫ ರಿಂದ ೩.೫ ಮೈಕ್ರೊಮೀಟರ್ ಸುತ್ತಳತೆಯ ಮೃದು ವೀರ್ಯಾಣು ಆಗಿರಬೇಕು. ವೀರ್ಯಾಣುವಿನ ತಲೆಭಾಗವನ್ನು ಶೇ ೪೦ ರಿಂದ ಶೇ ೭೦ರಷ್ಟು ಆವರಿಸಿಕೊಂಡಿರುವ ಆಕ್ರೊಸೋಮ್ ಇರಬೇಕು. ವೀರ್ಯಾಣುವಿನ ಕತ್ತು, ಮಧ್ಯಭಾಗ ಅಥವಾ ಬಾಲದಲ್ಲಿ ಯಾವುದೇ ದೋಷಗಳು ಕಾಣಿಸಬಾರದು. ವೀರ್ಯಾಣುವಿಣ ತಲೆಗಂಟಿಕೊಣ್ಡಿರುವ ಜೀವದ್ರವದ ಹನಿಗಳು ಕಾಣಿಸಿಕೊಳ್ಳಬಾರದು. ಸಾಮಾನ್ಯವಾಗಿ ಇವು ವೀರ್ಯಾಣುವಿನ ತಲೆಗಿಂತಲೂ ದೊಡ್ಡದಾಗಿರುತ್ತವೆ.[]


  1. ವೀರ್ಯಾದಲ್ಲಿ ಸಮಸ್ಯೆ ಇದ್ದರೆ ವೀರ್ಯಾ ವಿಶ್ಲೇಷಣೆಗೆ ಒಳಗಾಗಬೇಕು ಆದರೆ ಇದಕ್ಕು ಮುನ್ನ ವಿಶ್ಲೇಷಣೆಗೆ ಪೂರ್ವ ತಯಾರಿ ನಡಿಸಬೇಕು.
  2. ಪರೀಕ್ಷೆಗೆ ಒಳಗಾಗುವ ಮುನ್ನ ಮೂರು ದಿನಗಳಲ್ಲಿ ಸ್ಖಲನವಾಗದಂತೆ ಎಚ್ಚರವಹಿಸಬೇಕು.
  3. ಮದ್ಯಪಾನ, ಕೆಫಿನ್ ಹಾಗೂ ಕೋಕೇನ್, ಗಾಂಜಾಗಳಂಥ ಮಾದಕ ದ್ರವ್ಯಗಳನ್ನು ಪರೀಕ್ಷೆಗಿಂತ ೫ ದಿನಗಳ ಮೂದಲು ಸೇವಿಸಬಾರದು.
  4. ಯಾವುದಾದರೂ ಹರ್ಬಲ್ ಔಷಧಿಗಳನ್ನು ಸೇವಿಸುತ್ತಿದ್ದಲ್ಲಿ, ಹಾರ್ಮೋನ್ಗೆ ಸಂಬಂಧಿಸಿದ ಔಷಧಿಗಳನ್ನು ಅವನ್ನು ನಿಲ್ಲಿಸಬೇಕು.


ವೀರ್ಯ ವಿಶ್ಲೇಷಣೆ ಹೇಗೆ?

ಬದಲಾಯಿಸಿ

ಸಾಮಾನ್ಯವಾಗಿ ವೀರ್ಯಾ ಮಾದರಿಯನ್ನು ಶೇಕರಿಸುವ ಮೂರು ಮುಖ್ಯ ವಿಧಾನಗಳಿವೆ.

  • ಹಸ್ಥಮೈಥುನ
  • ಮಿಲನದಲ್ಲಿ ಸ್ಖಲನಕ್ಕೆ ಮುಂಚೆ ಹಿಂದೆಗೆದುಕೊಳ್ಳುವುದು
  • ಕೃತಕ ಸಾಧನಗಳ ಬಳಕೆಯಿಂದ ಸ್ಖಲನಕ್ಕೆ ಪ್ರಯತ್ನಿಸುವುದು
  • ಸಾಮಾನ್ಯವಾಗಿ ಹಸ್ಥಮೈಥುನ ಮೂಲಕ ವೀರ್ಯಾ ಮಾದರಿಯನ್ನು ಸಂಗ್ರಹಿಸುವುದು ಅತ್ಯುತ್ತಮ ಆಯ್ಕೆಯಾಗಿದೆ.
  • ವೀರ್ಯ ಸಂಗ್ರಹಣೆಗಾಗಿ ಸೋಪು, ಜೆಲ್ಲಿ ಅಥವಾ ತೈಲಗಳಂಥ ಜಾರಕಗಳನ್ನು ಬಳಿಸಬಾರದು.
  • ಪ್ರಯೋಗಾಲಯದಿಂದ ನೀಡುವ ಪರೀಕ್ಷೆಗಳಲ್ಲಿಯೇ ವೀರ್ಯ ಸಂಗ್ರಹಿಸುವುದು ಸುರಕ್ಷಿತ ಕ್ರಮವಾಗಿದೆ.
  • ಈ ಪರೀಕ್ಷೆ ಮಾಡಿಸುವಾಗ ಕೆಲವು ವಿಷಯಗಳು ಗಮನದಲ್ಲಿರಬೇಕು. ವೀರ್ಯಾ ಸಂಗ್ರಹದ ಪರಿಕರದಲ್ಲಿ ಸ್ಪಮಿಸೈಡ್ (ವೀರ್ಯ ನಾಶಕ ಗುಣವುಳ್ಳ ಅಂಶ) ಇರಬಾರದು.ಒಂದು ವೇಳೆ ಅನಾರೋಗ್ಯ ಪೀಡಿತರಾಗಿದ್ದರೆ ನಿರೀಕ್ಷಿತ ಮಾದರಿ ದೊರೆಯಲಿಕ್ಕಿಲ್ಲ.ತಡವಾದಷ್ಟೊ ಮಾದರಿಯ ಗುಣಮಟ್ಟಹಾಳಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಆದರೆ ವೀರ್ಯ ವಿಶ್ಲೇಷಣೆಯಿಂದ ಯಾವ ಹಾನಿಗಳೂ ಆಗುವುದಿಲ್ಲ ಎನ್ನುವುದು ನೆನಪಿರಬೇಕು.

ಸಹಜ ಪಲಿತಾಂಶಗಳೆಂದರೆ: ಪ್ರಮಾಣ: ಎಂದೂವರೆ ಎಂಎಲ್ಗಿಂತ ಹೆಚ್ಚಿರಬೇಕು. ಚಲನೆ: ಶೇ ೪೦ಕ್ಕಿಂತ ಹೆಚ್ಚಿನ ವೀರ್ಯಾಣುಗಳಲ್ಲಿ ಚಲನೆ ಕಾಣಬೇಕು ಸ್ವರೂಪ: ಶೇ ೪೦ಕ್ಕಿಂತ ಹೆಚ್ಚು ವೀರ್ಯಾಣುಗಳು ಸಹಜ ಸ್ವರೂಪದಲ್ಲಿರಬೇಕು. ಕೇವಲ ಒಂದು ಟೇಸ್ಟ್ನಿಂದ ಅಸಹಜ ಗುಣಗಳನ್ನು ಗುರುತಿಸಲಾಗದು. ಗುರುತಿಸಿದರೂ ಅದನ್ನು ಸಮಸ್ಯೆಯ ಮೂಲ ಕಾರಣವೆಂದು ಪರಿಗಣಿಸಲಾಗದು. ಹಾಗಾಗಿ ಮರುಪರೀಕ್ಷೆಗಳು ಅಗತ್ಯ.

ಅಸಹಜ ಪಲಿತಾಂಶಗಳೆಂದರೆ: ವೀರ್ಯಾಣು ಅಥವಾ ನಿಧಾನಗತಿಯಲ್ಲಿ ಚಲಿಸುವ ವೀರ್ಯಾಣುಗಳು ಅಂಡಾಣುವನ್ನು ತಲುಪುವಲ್ಲಿ ವಿಫಲವಾಗುತ್ತವೆ. ಇದರಿಂದಾಗಿ ಫಲಿತವಾಗುವುದು ತಡವಾಗುತ್ತದೆ. ಸೋಂಕು , ಹಾರ್ಮೋನಿನ ಏರುಪೇರು ಸಹ ಕಾಣಬಹುದು.

ಹಾಗಾಗಿ ದಂಪತಿಗಳಿಬ್ಬರೂ ಪರೀಕ್ಷೆಗೆ ಒಳಗಾಗಬೇಕು.[]

  1. ಭೂಮಿಕ, ಪ್ರಜಾವಾಣಿ ದಿನ ಪತ್ರಿಕೆ
  2. info@manipalankur.com