ಸದಸ್ಯ:Vandana moji/ನನ್ನ ಪ್ರಯೋಗಪುಟ

ಅತಿಮಧುರ ಒಂದು ಔಷಧೀಯ ಸಸ್ಯ. ಇದರ ಸಸ್ಯನಾಮ ಗ್ಲೈಸಿರೈಸಿಕ್ ಗ್ಲಾಬ್ರ (glycyrrhiza-glabra). ಜೇಷ್ಠಮಧು, ಯಷ್ಠಿಮಧುಕ (ಸಂಸ್ಕೃತ : यष्टी) ಎಂದು ಕರೆಯಲ್ಪಟ್ಟಿದೆ. ಇದಕ್ಕೆ ಮಧುರ ಕಪ್ಪು ಮತ್ತು ಗಂಟಲು ಕೆಟ್ಟಾಗ ಸಿಹಿಯುಕ್ತ ಮತ್ತು ತಂಪುಕಾರಕ ಗುಣಬರಲು ಅದರಲ್ಲಿರುವ ಗ್ಲೈಸಿರೈಸಿನ್ ಕಾರಣ. ಇದರ ಮೂಲ ಸ್ಥಾನ ಯುರೇಶ್ಯ. ಇದನ್ನು ಮುಖ್ಯವಾಗಿ ಸ್ಪೈನ್, ಇಟಲಿ, ಫ್ರಾನ್ಸ್, ರಷ್ಯಾ, ಸಿರಿಯಾ, ಇರಾನ್, ಇರಾಕ್, ಟರ್ಕಿ, ಉತ್ತರ ಆಫ್ರಿಕಾ ಮತ್ತು ಚೈನಾ ದೇಶಗಳಲ್ಲಿ ಬೆಳೆಯಲಾಗುತ್ತದೆ. ಭಾರತಕ್ಕೆ ಇದನ್ನು ಇರಾಕ್, ಪರ್ಶಿಯಾ ಮತ್ತು ಏಷಿಯಾದ ಇತರ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಶೀತಕರವಾದ ಹವಾಗುಣವಿರುವ ಹಿಮಾಲಯ ಮತ್ತು ದಕ್ಷಿಣ ಭಾರತದ ಬೆಟ್ಟ ಪ್ರದೇಶಗಳಲ್ಲಿ ಶ್ರೀನಗರ, ಕಾಶ್ಮೀರ, ಉತ್ತರಾಖಂಡ, ಗುಜರಾತ್ ರಾಜ್ಯಗಳಲ್ಲಿ ಬೆಳೆಯಲಾಗುತ್ತದೆ.[೨]

ಬೇಸಾಯ ಕ್ರಮಗಳು

ಬದಲಾಯಿಸಿ