ಸದಸ್ಯ:Vaishali M/ನನ್ನ ಪ್ರಯೋಗಪುಟ
ಶಾರದಾ ಶಾಸ್ತ್ರಿಯವರು ನಾಟಕ ಕರ್ತೃ ಮತ್ತು ನಿರ್ದೇಶಕಿಯಾಗಿದ್ದವರು. ಹಳೆಯ ತಲೆಮಾರಿನ ಲೇಖಕಿಯರಲ್ಲಿ ಒಬ್ಬರಾದ ಇವರು ಸಂಪ್ರದಾಯಸ್ಥ ಬ್ರಾಹ್ಮಣರ ಕುಟುಂಬದಲ್ಲಿ ಹುಟ್ಟಿ ಬೆಳೆದವರು.ಇವರು ನಲುವತ್ತನೆ ವಯಸ್ಸಿಗೆ ಬರವಣಿಗೆಯನ್ನು ಪ್ರಾರಂಭಿಸಿದರು. ಆಗಿನ ಕಾಲದಲ್ಲಿ ಹೆಣ್ಣುಮಗುವಿನ ಪರಿಸ್ಥಿತಿ ತುಂಬಾನೇ ಕಷ್ಟಕರದಾಯಕವಾಗಿತ್ತು. ಆ ಶತಮಾನಗಳಲ್ಲಿ ಮೊದಲನೆ ಇಪ್ಪತೈದು ವರ್ಷಗಳವರೆಗೆ ಹೆಣ್ಣುಮಕ್ಕಳಿಗೆ ವಿವಾಹವನ್ನು ಮಾಡಿಸುತ್ತಿದ್ದರು.ಅದಲ್ಲದೆ ವಿದ್ಯಾಭ್ಯಾಸ ಸಹ ದೊರೆಯುತ್ತಿರಲಿಲ್ಲ. ಸ್ವಾತಂತ್ರ್ಯವಿಲ್ಲದ ಜೀವನ ಹೆಣ್ಣುಮಕ್ಕಳದಾಗಿತ್ತು. ಇಂಥ ಸಂದರ್ಭದಲ್ಲೂ ಶಾರದಾ ಶಾಸ್ತ್ರಿಯವರು ನಾಟಕಗಳನ್ನು ನಿರ್ದೇಶಿಸಿ ಪಾತ್ರಗಳನ್ನು ರಂಗ ಪ್ರಯೋಗಕ್ಕೆ ತರುವುದರಲ್ಲಿ ಸಫಲರಾದರು.
ಜನನ ಮತ್ತು ಜೀವನ
ಬದಲಾಯಿಸಿ- ಇವರು ೧೯-೩-೧೯೨೫ರಲ್ಲಿ ದಕ್ಷಿಣ ಕನ್ನಡದಲ್ಲಿ ಜನಿಸಿದರು.
- ತಂದೆ ಶ್ರೀ ಕೃಷ್ಣ ಎಳಚಿತ್ತಾಯ.ತಾಯಿ ಜಲಜಾಕ್ಷಿ
- ಇವರಿಗೆ ಮಂಗಳೂರು ನ್ಯಾಯವಾದಿಯಾದ ಅನಂತ ಶಾಸ್ತ್ರಿ ಅವರ ಜೊತೆ ವಿವಾಹವಾಯಿತು.ಅವರು ತಂಗಿಯ ಮಗ ರಾಧಾಕೃಷ್ಣವರನ್ನು ಸ್ವಂತ ಮಗನಂತೆ ಸಲಹಿದರು.
- ಇವರು ಬಾಲಕಲಾ ಕಲ್ಪ ಎಂಬ ನಾಟಕ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.ಮತ್ತು ವರ್ಣಶ್ರೀಕಲಾರಂಗ ಸ್ಥಾಪಕ ಅಧ್ಯಕ್ಷೆಯಾಗಿದ್ದರು.
ಕೃತಿಗಳು
ಬದಲಾಯಿಸಿಕವನ ಸಂಕಲನ
ಬದಲಾಯಿಸಿ- ನಾಟ್ಯ ರಾಣಿ ಶಾಂತಲಾ
ನಾಟಕಗಳು
ಬದಲಾಯಿಸಿ- ರುಕ್ಮಿಣಿ ಸ್ವಯಂವರ
- ಬೇಡರ ಕಣ್ಣಪ್ಪ
- ಅಮರ ಅಭಿಮನ್ಯು
- ಸುಧನ್ವ ಕಾಳಗ
- ಏಕಲವ್ಯ
- ಲವಕುಶ
- ಹತಭಾಗ್ಯ ಕರ್ಣ
- ಸೀತಾಪರಿತ್ಯಾಗ
- ವಿಜಯ ಕೇಸರಿ ಎಚ್ಚಮ್ಮ
- ಭಕ್ತ ಪ್ರಹ್ಲಾದ
- ಶರವು ಮಹಾತ್ಮೆ
- ರಕ್ತ ಸಂಬಂಧ
- ನಾಟ್ಯ ರಾಣಿ ಶಾಂತಲಾ
- ವೀರ ಬಭ್ರುವಾಹನ
- ಸತ್ಯ ಪ್ರೇಮಿ ಹರಿಶ್ಚಂದ್ರ
- ವೀರಪಾಂಡ್ಯ ಕಟ್ಟಬೊಮ್ಮನ್
- ಹತಭಾಗ್ಯೆ ಕುಂತಿ
- ವಿಕ್ಷಿಪ್ತ
ಶಾರದಾ ಶಾಸ್ತ್ರಿ ನಾಟಕ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ಅವರಿಗೆ ಗೌರವ ಮಾಸಾಶನವನ್ನು ನೀಡಿ ಗೌರವಿಸುತ್ತದೆ. ಇವರ ಮೊದಲ ಕೃತಿ ನಾಟ್ಯ ರಾಣಿ ಶಾಂತಲಾ ಸಂದೀಪ ಸಾಹಿತ್ಯ ಮಾಲೆಯ ೩೫ನೇ ಪುಸ್ತಕವಾಗಿ ಮುದ್ರಣಗೊಂಡಿದೆ.