ಸದಸ್ಯ:VICTORIA JACOB/sandbox2
ಮುಂಡರಗಿಯ ಭೀಮರಾಯ
ಬದಲಾಯಿಸಿಕೋಟೆಯ ಬಾಗಿಲು ತೆರೆದಿತ್ತು....ಶತ್ರುಗಳು ನುಗ್ಗಿ ಬರುತ್ತಿದ್ದರು... ಅವರು ಹಾರಿಸಿದ ಗುಂಡುಗಳು ಇತ್ತ ಕಡೆಯ ಸೆನಿಕರ ಬಲಿ ತೆಗೆದುಕೊಳ್ಳುತ್ತಿದ್ದವು. ಧೀರನೊಬ್ಬ ಬಂದೂಕು ಹಿಡಿದು ಮುಂದೆ ಮುಂದೆ ಸಾಗಿದ ಹೋರಾಟ, ಇಲ್ಲವೇ ಸಾವು ಎರಡೇ ದಾರಿ ಇತ್ತು ಅವನಿಗೆ. ಅವನ ರೋಷಾವೇಷದ ಹೋರಾಟಕ್ಕೆ ಶತ್ರುಗಳ ಹೆಣಗಳು ಮಲಗುತ್ತಿದ್ದವು. ಆದರೆ ಏಕಾಂಗಿಯಾಗಿ ಬಹಳ ಕಾಲ ಹೋರಾಡಲಾರದಾದ. ಅವನ ಬಂದೂಕಿನ ಗುಂಡುಗಳು ಮುಗಿಯುತ್ತ ಬಂದವು...ಇನ್ನು ಒಂದೇ ಗುಂಡು ಉಳಿದಿತ್ತು. ಆ ಧೀರ ತನ್ನೆದೆಗೆ ತಾನೇ ಗುಂಡು ಹಾರಿಸಿಕೊಂಡ ಶತ್ರುಗಳ ಕೆಗೆ ಜೀವಂತ ಸಿಗದೆ, ಅವರಿಂದ ಸಾಯದೆ, ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತ ಮಡಿದ ಆ ವೀರ ಆತನೇ ಮುಂಡರಗಿಯ ಭೀವರಾಯ. ಭೀವರಾಯ ಅರಸನಲ್ಲ ದೇಸಾಯಿಯಲ್ಲ, ಅವನೊಬ್ಬ ಸಾಮಾನ್ಯ ಪ್ರಜೆ. ಸಹಸ್ರಾರು ದೇಶಭಕ್ತರನ್ನು ಸಂಘಟಿಸಿ ತನ್ನ ಜನ್ಮ ಭೂಮಿಯ ಸಂಪತ್ತು. ಧಮ, ಸಂಸ್ಕ್ರತಿಗಳು ಅನ್ಯರ ಪಾಲಾಗುವುದನ್ನು ತಡೆಯಲು ಬ್ರಿಟಿಷರ ವಿರುದ್ಧ ಬಂಡೆದ್ದ ದೇಶಪ್ರೇಮಿ ಭೀಮರಾಯ.ಧಾರವಾಡ ಜಿಲ್ಲೆಯ ಬಳಿ ಇರುವ ತಾಲ್ಲೂಕು ಕೇಂದ್ರ ಮುಂಡರಗಿ. 'ಮುರುಡಗಿ' ಇದರ ಪ್ರಾಚೀನ ಹೆಸರು. ಭೀವರಾಯನ ತಾತ ಬೇಟೆಯಲ್ಲಿ ಚತುರರು. ಅನ್ಯಾಯ, ವಂಚನೆ ಸಹಿಸುತ್ತಿರಲಿಲ್ಲ. ಅಂಥವರ ಮೊಮ್ಮಗ ಭೀವರಾಯನೂ ಅಷ್ಟೇ ಸ್ವಾಭಿಮಾನಿ. ಭೀವರಾಯನ ತಂದೆ ರಂಗರಾಯರು ಪೇಷ್ವೆಗಳ ನ್ಯಾಯಾಧೀಶರಾಗಿದ್ದರು. ತಂದೆ ಈತನಿಗೆ ಕನ್ನಡ, ಮರಾಠಿ, ಇಂಗ್ಲೀಷ್ ಕಲಿಸಿದ್ದರು. ಶಸ್ತ್ರ ಪರಿಣತಿಯೂ ಇತ್ತು. ಬೇಟೆಯಲ್ಲಿ ಮಹಾ ಗುರಿಕಾರ ಹುಲಿಯ ದವಡೆಗೆ ಸಿಕ್ಕ ಬ್ರಿಟಿಷ್ ಅಧಿಕಾರಿಯೊಬ್ಬರನ್ನು ಒಮ್ಮೆ ರಕ್ಷಿಸಿದ್ದನು. ಆತ ಭೀವರಾಯನಿಗೆ ಕೊಪ್ಪಳದ ತಹಶೀಲ್ದಾರಿಕೆಯ ಹುದ್ದೆ ಕೊಟ್ಟನು. ದಕ್ಷ ಭೀವರಾಯ ಬಳ್ಳಾರಿಯ ಮಾಮಲೇದಾರನೂ ಆದ. ಮೊಟ್ಟ ಮೊದಲ ಬಾರಿ ಇಂಥ ಹುದ್ದೆಯೊಂದು ಭಾರತೀಯನಿಗೆ ಸಿಕ್ಕಿತ್ತು.. ಭೀವರಾಯನು ಸ್ನೇಹಿತರಲ್ಲಿ ಕೆಲವರಿಗೆ ಬ್ರಿಟಿಷ್ ಸಕಾರ ತೀರ ಅನ್ಯಾಯ ಮಾಡಿತು. ಮಕ್ಕಳಿಲ್ಲದ ನರಗುಂದದ ಬಾಬಾಸಾಹೇಬ ದತ್ತು ತೆಗೆದುಕೊಂಡರೆ ದತ್ತು ಮಗನಿಗೆ ರಾಜ್ಯವಿಲ್ಲ ಎಂದಿತು. ಹಮ್ಮಿಗೆಯ ಕೆಂಚನಗ್ಔಡ ಎನ್ನುವವನು ದತ್ತು ಮಗ, ಅವನಿಗೆ ಆಸ್ತಿಯನ್ನು ಕೊಡಲಿಲ್ಲ. ಸೊರಟೂರಿನ ದೇಸಾಯಿ, ಮಳೆಯಾಗಿಲ್ಲ ಆದುದರಿಂದ ಬೆಳೆಯಾಗಿಲ್ಲ, ಕಂದಾಯ ಕೊಡಲು ಸಾಧ್ಯವಾಗುವುದಿಲ್ದ ಎಂದು ಪ್ರಾಮಾಣಿಕವಾಗಿ ಹೇಳಿದರೆ ಅವನ ಆಸ್ತಿಯನ್ನು ಕಿತ್ತುಕೊಂಡಿತು, ಅಲ್ಲದೆ ಅವನಿಗೆ ಛಡಿ ಏಟು ಕೊಟ್ಟು ಜೆಲಿಗೆ ಹಾಕಿತು. ಇವೆಲ್ಲ ಕಂಡಾಗ ಸಿಡಿದೆದ್ದು ಕೆಲಸಕ್ಕೆ ರಾಜೀನಾಮೆ ಕೊಟ್ಟು ಹೊರಬಂದ ಭೀವರಾಯ ಸಂಸಾರ ಸಮೇತ ಕೊಪ್ಪಳದ ಸಮೀಪದ ಬೆಣ್ಣೆ ಹಳ್ಳಿಯಲ್ಲಿ ನೆಲೆಸಿದ. ಬ್ರಿಟಿಷರ ವಿರುದ್ದ ಸಮರ ತಂತ್ರಗಳನ್ನು ರೂಪಿಸತೊಡಗಿದ. ೧೮೫೭ರಲ್ಲಿ ಉತ್ತರ ಭಾರತ ಬ್ರಿಟಿಷರ ವಿರುದ್ಧ ರಣಕಹಳೆ ಮೊಳಗಿಸಿತ್ತು. ಇದರ ಪ್ರಭಾವ ಕನಾಟಕಕ್ಕೂ ಆಯಿತು. ಆಗ ಕ್ರಾಂತಿ ಮಾಡಲು ಹವಣಿಸಿದ ಬಾಬಾಸಾಹೇಬನಿಗೆ ಭೀವರಾಯನ ಬೆಂಬಲವೂ ಸಿಕ್ಕಿತ್ತು. ಜನರನ್ನ ಸೇರಿಸಿದರು. ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದರು. ಬಾಬಾಸಾಹೇಬ, ಭೀವರಾಯ ಡಂಬಳದ ದೇಸಾಯಿ ಸಮರ ಸಿದ್ಧತೆ ನಡೆಸಿದರು. ಈ ಮಧ್ಯೆ ಹಲಗಲಿಯ ಬೇಡರು ಆಂಗ್ಲರ ವಿರುದ್ಧ ದಂಗೆ ಎದ್ದರು. ಅವರನ್ನು ಆಂಗ್ಲರ ಸ್ರನ್ಯ ಸೋಲಿಸಿತು. ತಪ್ಪಿಸಿಕೊಂಡು ಬಂದ ಬೇಡರಿಗೆ ಬಾಬಾಸಾಹೇಬ, ಭೀವರಾಯ ಆಶ್ರಯ ಕೊಟ್ಟರು. ಎಲ್ಲವನ್ನೂ ತಿಳಿದ ಆಂಗ್ಲರು ಭೀವರಾಯನಿಗೆ ಎಚ್ಚರಿಕೆ ಕೊಟ್ಟರು. ಭೀವರಾಯ ಮನಸ್ಸು ಬದಲಾಯಿಸಲಿಲ್ಲ. ಇನ್ನೂ ಹಲವು ದೇಸಾಯರು, ಸಂಸ್ಥಾನಿಕರು ತಮ್ಮೊಂದಿಗೆ ಸೇರುವಂತೆ ಮನ ಒಲಿಸಿದ. ಭೀವರಾಯನೊಟ್ಟಿಗೆ ಹಲವು ಮುಸ್ಲಿಮ್ ರಾಜ ಮನೆತನಸ್ಥರೂ ಸೇರಿದರು. ಸುರಕ್ಷತೆಗಾಗಿ ಗೆಳೆಯರ ಬಳಿಗೆ ಹೆಂಡತಿ, ಮಕ್ಕಳನ್ನು ಕಳಿಸಿದ. ಭೀವರಾಯನ ಜಾಡನ್ನು ತಿಳಿದು ಅವನ ಕುಟುಂಬದವರನ್ನೆಲ್ಲ ಸೆರೆ ಹಿಡಿಯಿತು ಆಂಗ್ಲ ಸಕ್ರಾರ. ಸೆರೆಯಲ್ಲಿದ್ದವರನ್ನು ಬಿಡಿಸಲು ಕೊಪ್ಪಳದ ಕೋಟೆಯನ್ನು ಮುತ್ತಿ ವಶಪಡಿಸಿಕೊಂಡ ಭೀವರಾಯ.
ಒಳಗೇ ಇದ್ದ ವಂಚಕರು ಬ್ರಿಟಿಷರಿಗೆ ಎಲ್ಲ ಸುಳಿವೂ ಕೊಡುತ್ತಿದ್ದುದರಿಂದಾಗಿ ತಂತ್ರಗಳು ವಿಫಲವಾಗತೊಡಗಿದವು. ಭೀವರಾಯ ಶಸ್ತ್ರಾಸ್ತ್ರ ಸಂಗ್ರಹಿಸಿದ್ದ ಸ್ಥಳಗಳನ್ನೆಲ್ಲ ಗೊತ್ತುಹಚ್ಚಿ ಎಲ್ಲವನ್ನೂ ಆಂಗ್ಲರು ವಶಕ್ಕೆ ತೆಗೆದುಕೊಂಡರು. ಭೀವರಾಯನನ್ನು ಜೀವಸಹಿತ ಹಿಡಿದುಕೊಟ್ಟವರಿಗೆ ಐದು ಸಹಸ್ರ ರೂಪಾಯಿಗಳ ಬಹುಮಾನ ಘೋಷಿಸಲಾಗಿತ್ತು. ಭೀವರಾಯನ ಜೋಡಿ ನಳಿಕೆಯ ಬಂದೂಕಿನ ತಪ್ಪದ ಗುರಿಯ ಭಯ ಬ್ರಟಿಷರಿಗೆ.
ಮೇಜರ್ ಹ್ಯೂಸ್ ಎಂಬುವನ ನೇತ್ರತ್ವದಲ್ಲಿ ಭಾರೀ ಸ್ರನ್ಯ ಕೋಟೆಯನ್ನು ಸುತ್ತುವರಿಯಿತು. 'ಶರಣಾದರೆ ಪ್ರಾಣದಾನವುಂಟು' ಎಂಬ ಪತ್ರಕ್ಕೆ ಭೀವರಾಯ ಬತೇರಿಯ ಮೇಲಿದ್ದ ತೋಪಿನಿಂದ ಗುಂಡು ಹಾರಿಸಿ ಉತ್ತರಿಸಿದ. ಯುದ್ಧ ನಡೆಯಿತು. ಶತ್ರು ಸ್ರನ್ಯ ದೊಡ್ಡದು, ಸಾಲದ್ದಕ್ಕೆ ನಮ್ಮವರೇ ವಿಶ್ವಾಸ ಘಾತಕರಾಗಿ ಕೋಟೆಯ ಬಾಗಿಲು ತೆಗೆದು ಶತ್ರುಗಳು ಒಳನುಗ್ಗಲು ಕಾರಣರಾದರು. ಭೀವರಾಯನ ಹೋರಾಟ, ಅನ್ಯಾಯದ ವಿರುದ್ಧ ಸೆಟೆದು ನಿಂತ ದೇಶಪ್ರೇಮ ಆತನ ಆತ್ಮಾಪಣೆಯಲ್ಲಿ ಅಂತ್ಯವಾಯಿತು. ಬ್ರಿಟಿಷರು ಭೀವರಾಯನ ಆಸ್ತಿ ಸ್ವಾಧೀನ ಮಾಡಿಕೊಂಡರು. ಕುಟುಂಬದವರು ನಿಗತಿಕರಾದರು. ಮೂವತ್ತು ರೂಪಾಯಿ ಮಾಸಾಶನದ ಭಿಕ್ಷೆ ನೀಡಿತು ಬ್ರಿಟಿಷ್ ಸಕ್ರಾರ. ಸೆರೆ ಸಿಕ್ಕ ಕ್ರಾಂತಿಕಾರಿಗಳನ್ನು ಗುಂಡಿಕ್ಕಿ ಕೊಲ್ಲಲಾಯಿತು. ಭೀವರಾಯನಿಗೆ ನೆರವಾಗಿದ್ದ ಎಲ್ಲ ದೇಸಾಯಿಯರಿಗೂ ಶಿಕ್ಷೆಯಾಯಿತು. ಸುಳಿವು ಕೊಟ್ಟ ವಂಚರನ್ನೂ ಶಿಕ್ಷಿಸಿತ್ತು ಬ್ರಟಿಷ್ ಸಕ್ರಾರ. ಜನಸಾಮಾನ್ಯರ ನಾಯಕ, ಹೋರಾಟಗಾರ, ದೇಶಪ್ರೇಮಿ ಮುಂಡರಗಿಯ ಭೀವರಾಯನ ಆತ್ಮಾಪಣೆ....ಮುಂದೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ದೇಶಭಕ್ತರ ಸಂಘಟನೆಗೆ, ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂತಿಯಾಯಿತು.