ಸದಸ್ಯ:VICTORIA JACOB/ನನ್ನ ಪ್ರಯೋಗಪುಟ

ಸಾಂಪ್ರದಾಯಿಕ ವ್ಯಾಕರಣಗಳು

ಇದೊಂದು ಬಗೆಯ ವ್ಯಾಕರಣ ಇದು ಹೆಚ್ಚು ಪ್ರಾಚೀನವಾದದ್ದು ಮಾತ್ರವಲ್ಲದೆ ಇದು ಪರಂಪರಾಗತವಾಗಿ ಹಾಗೂ ಸಾಂಪ್ರದಾಯಿಕವಾಗಿ ಬೆಳೆದುಬಂದದ್ದು. ಈ ಬಗೆಯ ವ್ಯಾಕರಣಗಳಲ್ಲಿ ಪಾಣಿನಿಯ ಅಷ್ಟಾಧ್ಯಾಯಿ ಎಂಬ ವ್ಯಾಕರಣವೇ ಮೊತ್ತ ಮೊದಲನೆಯದು. ಪತಂಜಲಿಯ ಮಹಾಭಾಷ್ಯ ಎಂಬ ವ್ಯಾಕರಣ ಇವುಗಳಲ್ಲಿ ಎರಡನೆಯದು. ಈ ಎರಡು ವ್ಯಾಕರಣ ಗ್ರಂಥಗಳು ಅತಿ ಹೆಚ್ಚು ಪ್ರಾಚೀನವಾಗಿವೆ ಮಾತ್ರವಲ್ಲದೆ ಎವನ್ನು ಅನುಸರಿಸಿ ಜಗತ್ತಿನ ಬೇರೆ ಬೇರೆ ವ್ಯಾಕರಣ ಗ್ರಂಥಗಳು ರಚನೆಯಾಗಿವೆ. ಹೀಗೆ ಒಂದು ಇನ್ನೊಂದನ್ನು ಅನುಸರಿಸಿ ಬೆಳೆದುಬಂದ ವ್ಯಾಕರಣ ಸಂಪ್ರದಾಯ ಜಗತ್ತಿನಾದ್ಯಂತ ವ್ಯಾಪಿಸಿಕೊಂಡಿತು. ಈ ಸಂಪ್ರದಾಯವೇ ಬಹಳ ಕಾಲ ಮುಂದುವರಿಯಿತು. ಪಾಣಿನಿ ಮತ್ತು ಪತಂಜಲಿಯವರ ವ್ಯಾಕರಣ ಸಂಪ್ರದಾಯವನ್ನು ಅನುಸರಿಸಿ ವಾಮನ, ಜಯಾದಿತ್ಯ, ಜಿನೇಂದ್ರಬುದ್ಧಿ, ಹರದತ್ತ, ಭತ್ರಹರಿ, ವಿವಲಸರಸ್ವತಿ, ಕಯ್ಯಟ, ರಾಮಚಂದ್ರ, ಹೇಮಚಂದ್ರ, ಭಟ್ಟೋಜಿ ದೀಕ್ಷಿತ್ ಮುಂತಾದವರು ಅದೇ ಮಾದರಿಯಲ್ಲಿ ಸಂಸ್ಕ್ರತ ಮತ್ತು ಪ್ರಾಕ್ರತ ಭಾಷೆಗಳ ಬೇರೆ ಬೇರೆವ್ಯಾಕರಣಗಳನ್ನು ರೂಢಿಬದ್ಧ ಶ್ರಲಿಗಳಲ್ಲಿ ಪರಂಪರಾಗತವಾಗಿ ಹಾಗೂ ಸಾಂಪ್ರದಾಯಿಕವಾಗಿ ರಚಿಸಿಕೊಂಡರು. ಇದರಿಂದ ಅನೇಕ ಸಾಂಪ್ರದಾಯಿಕ ವ್ಯಾಕರಣಗಳು ಹೊರಬರಲಾರಂಭಿಸಿದವು. ಪ್ರಾಚೀನ ಗ್ರೀಕರು, ರೋಮನರು, ಅರಬ್ಬರು ಮುಂತಾದವರು ಈ ವ್ಯಾಕರಣ ಸಂಪ್ರದಾಯವನ್ನೇ ಅನುಸರಿಸಿ ತಮ್ಮ ತಮ್ಮ ಭಾಷೆಗಳ ವ್ಯಾಕರಣ ಗ್ರಂಥಗಳನ್ನು ರಚಿಸಿಕೊಂಡರು. ಇವರೆಲ್ಲರಿಗೂ ಆ ಪ್ರಾಚೀನ ಭಾರತೀಯ ವೆಯಾಕರಣರ ವ್ಯಾಕರಣ ಗ್ರಂಥಗಳು ಮೂಲವಾಗಿ ಉಳಿದವು. ಅನಂತರ ಈ ಸಂಪ್ರದಾಯ ಪಾಶ್ಚಾತ್ಯರನ್ನು ಆಕಷಿ‌ಸಿತು. ಈ ಸಂಪ್ರದಾಯ ಪಾಶ್ಚಾತ್ಯರಲ್ಲಿ ಹನ್ನೆರಡನೆಯ ಶತಮಾನದಿಂದ ಆರಂಭಗೊಂಡು ಅದು ಹದಿನೆಂಟನೆಯ ಶತಮಾನದವರೆಗೆ ಮುಂದುವರಿಯಿತು. ಪಾಶ್ಚಾತ್ಯರೂ ತಮ್ಮ ತಮ್ಮ ವ್ಯಾಕರಣಗಳನ್ನು ಈ ಸಂಪ್ರದಾಯವನ್ನು ಅನುಸರಿಸಿಯೇ ರಚಿಸಿಕೊಂಡರು. ರೋಜರ್ ಬೇಕನ್, ಸ್ಕಲಿಗರ್, ಬುಲುಕೆರ್, ಜಾನ್ ವ್ಯಾಲೀಸ್, ಕೂಪರ್, ಕೊವ್ತ್, ಸಿಮನ್ ಪಲ್ಲಾಸ್, ವಾಡ್, ಜಾಜ್ ಕ್ಯಾಂಬೆಲ್ ಮುಂತಾದ ಪಾಶ್ಚಾತ್ಯರು ಈ ವ್ಯಾಕರಣ ಸಂಪ್ರದಾಯದ ಮುನ್ನಡೆಗೆ ಶ್ರಮಿಸಿದವರಲ್ಲಿ ಮುಖ್ಯರೆನಿಸಿಕೊಂಡಿದ್ದಾರೆ. ಇವರ ಪರಿಶ್ರಮದ ಫಲವಾಗಿ ಸಾಂಪ್ರದಾಯಿಕ ವ್ಯಾಕರಣ ಜಗತ್ತಿನಾದ್ಯಂತ ನಾನಾ ಮುಖಗಳಲ್ಲಿ ಬೆಳೆದು ಬರಲು ಸಹಾಯಕವಾಯಿತು. ಎಂದರೆ ಅತಿಶೋಯುಕ್ತಿಯಾಗಲಾರದು. ವ್ಯಾಕರಣ ವಿಚಾರಗಳು ತಮ್ಮ ಭಾಷೆಗೆ ಅನ್ವಯವಾಗಲಿ, ಅಥವಾ ಆಗದಿರಲಿ ಅವನ್ನೇ ಸಾಂಪ್ರದಾಯಿಕವಾಗಿ ಮುಂದುವರಿಸಿಕೊಂಡು ಹೋಗುವುದು ಈ ವ್ಯಾಕರಣಗಳ ಮುಖ್ಯ ಉದ್ದೇಶ. ಭಾಷಾ ವಿಜ್ಞಾನ ಕ್ಷೇತ್ರದಲ್ಲಿ ಆಡುಭಾಷೆಗಳ ಅಧ್ಯಯನ ಆರಂಭಗೊಂಡಮೇಲೆ ಈ ಸಾಂಪ್ರದಾಯಿಕ ವ್ಯಾಕರಣದ ಮುನ್ನೆಡೆಗೆ ಅಡ್ಡಿಯುಂಟಾಯಿತು. ಆಧುನಿಕ ಭಾಷಾ ವಿಜ್ಞಾನಿಗಳು ಆಡುಭಾಷೆ ಮತ್ತು ಬರಹದ ಭಾಷೆಗಳಿಗೆ ತಮ್ಮದೆ ಆದ ವಿವರಣಾತ್ಮಕ ವ್ಯಾಕರಣಗಳನ್ನು ರೂಪಿಸಿಕೊಂಡರು. ಇದರಿಂದಾಗಿ ಸಾಂಪ್ರದಾಯಿಕ ವ್ಯಾಕರಣ ಮತ್ತು ವಿವಣ‍ನಾತ್ಮಕ ವ್ಯಾಕರಣಗಳು ಬೇರೆ ಬೇರೆಯಾಗಿ ಕಾಣಿಸಿಕೊಂಡವು. ಈ ವಿವರಣಾತ್ಮಕ ವ್ಯಾಕರಣವು ಭಾಷಾವಿಜ್ಞಾನಿಗಳು ವಿಶ್ಲೇಷಾಣಾತ್ಮಕ ವ್ಯಾಕರಣವೆಂದೂ, ರಚನಾತ್ಮಕ ವ್ಯಾಕರಣವೆಂದೂ ಬೇರೆ ಬೇರೆ ಹೆಸರಿನಿಂದ ಕರೆದುಕೊಂಡರು. ಅಂತೆಯೇ ಎಲ್ಲ ಸಾಂಪ್ರದಾಯಿಕ ವ್ಯಾಕರಣಗಳನ್ನು ಪರಂಪರಾಗತ ವ್ಯಯಾಕರಣರು, ನಿದೇಶಾತ್ಮಕ ವ್ಯಾಕರಣ (Prescriptive grammar) ಎಂದೂ, ರೂಢಿಗತ ವ್ಯಾಕರಣ (Conventional grammar) ಎಂದೂ ಹೆಸರಿಸಿಕೊಂಡರು.

ಈ ಎಲ್ಲಾ ಸಾಂಪ್ರದಾಯಿಕ ವ್ಯಾಕರಣಗಳನ್ನು ನಿದೇಶಾತ್ಮಕ ವ್ಯಾಕರಣಗಳು ಎಂದೇ ಕರೆಯಲಾಗುತ್ತಿದೆ. ಕಾರಣವೇನೆಂದರೆ ಈ ಬಗೆಯ ವ್ಯಾಕರಣಗಳು ಭಾಷೆಯ ವಿವಿಧ ವ್ಯಾಕರಣ ವಿಚಾರಗಳನ್ನು ಅವುಗಳ ಕಾಯ‍ವನ್ನು ನಿದೇಶಿಸುವ ಉದ್ದೇಶದಿಂದ ರಚಿಸಿಕೊಂಡ ವ್ಯಾಕರಣಗಳಾಗಿವೆ. ವಿವರಣಾತ್ಮಕ ವ್ಯಾಕರಣಗಳು ಆ ಭಾಷೆಯ ವಿವಿಧ ಅಂಶಗಳ ವಿಶ್ಲೇಷಣೆ ಮತ್ತು ವಿವರಣೆಗೆ ಸಂಬಂಧಿಸಿದುವುಗಳಾಗಿದ್ದರೆ, ನಿದೇಶಾತ್ಮಕ ವ್ಯಾಕರಣವು ವ್ಯಾಕರಣ ವಿಚಾರಗಳ ನಿದೇಶನಕ್ಕೆ ಸಂಬಂಧಿಸಿದ್ದಾಗಿದೆ. ಇದರಲ್ಲಿ ವ್ಯಾಕರಣ ವಿಚಾರಗಳನ್ನು ವಿವರಣಾತ್ಮಕವಾಗಿ ವಿವರಿಸಿಕೊಳ್ಳುವಂತೆಯೇ ವ್ಯಾಕರಣ ವಿಚಾರಗಳ ವಿವಿಧ ಕಾಯ‍ಗಳನ್ನು ನಿದೇಶಾತ್ಮಕವಾಗಿ ವಿವರಿಸಿ ತೋರಿಸಲು ಸಾಧ್ಯವಿದೆ. ಈ ದ್ರಷ್ಟಿಯಿಂದಲೇ ಕೆಲವು ವಿದ್ವಾಂಸರು ಎಲ್ಲಾ ಸಾಂಪ್ರದಾಯಿಕ ವ್ಯಾಕರಣಗಳು ನಿದೇಶಾತ್ಮಕ ವ್ಯಾಕರಣಗಳನ್ನು ಹೆಚ್ಚು ಹೋಲುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.