ಬಹೂಪಯೋಗಿ ಈಚಲ ಮರ

ಬಾಗಲಕೋಟೆ ಜಿಲ್ಲೆಯ ಹುನಗುಂದದ ಕೆಲವು ಹಳ್ಳಿಗಳ ಸಮೀಪದ ಹಳ್ಳಗಳ ದಂಡೆಯಲ್ಲಿ ಸಾಲಾಗಿ ಬೆಳೆಯುತ್ತಿದ್ದ ಈಚಲ ಗಿಡಗಳು ಇಂದು ಪರಿಸರದಿಂದ ಕಣ್ಮರೆಯಾಗುತ್ತಿವೆ. ಈ ಭಾಗದ 'ನಿಡಸನೂರು ನೀರ'ಒಂದು ಕಾಲದಲ್ಲಿ ಅತ್ಯಂತ ಪ್ರಸಿದ್ದಿ ಹೊಂದಿತ್ತು. ಲಾಟಪ್ಪ ಸಾಹುಕಾರ ಎಂದೇ ಪ್ರಸಿದ್ದಿ ಪಡೆದಿದ್ದ ಕರಡಿ ಸಮೀಪದ ಅಂಕಣಳ ಹಳ್ಳಿಯವರು ಹಿಂದೆ ಒಂಟೆಯ ಮೇಲೆ ಹಳ್ಳಿಗಳಲ್ಲಿ ಉಸುಕಿನ ಪ್ರಮಾಣವು ಕಡಿಮೆಯಾಗಿದೆ. ಅಲ್ಲಲ್ಲಿ ಇರುವ ಉಸುಕು ಕೂಡ ರಾತ್ರಿ ಬೆಳಗಾಗುವಷ್ಟರಲ್ಲಿ ಬರಿದಾಗಿ, ಹಳ್ಳಗಳು ನೀರಿನ ತೇವಾಂಶ ಕಳೆದುಕೊಳ್ಳುತ್ತಿವೆ. ಹೀಗಾಗಿ ಈಚಲ ಗಿಡಗಳು ಬೆಳೆಯುವುದು ಕಡಿಮೆಯಾಗಿದೆ. ಶೇಂದಿಯ ಕಾರಣದಿಂದಾಗಿ ಈಚಲ ಮರವನ್ನು ಕೆಟ್ಟ ದ್ರಷ್ಟಿಯಲ್ಲಿ ನೋಡುವವರೇ ಹೆಚ್ಚು. ಆದರೆ ಈಚಲ ಹಣ್ಣಿನಲ್ಲಿ ವಿಟಮಿನ್ ಪ್ರಮಾಣ ಜಾಸ್ತಿ ಇದೆ. ಈಚಲ ಗಿಡದ ನೀರವನ್ನು ಔಷಧಿಯಾಗಿ ಕ್ಷಯ ರೋಗದಿಂದ ಬಳಲುವವರಿಗೆ ಕುಡಿಸುವವರಿದ್ದಾರೆ. ಸೌಂದರ್ಯಕ್ಕೆ ಗಿಡದಿಂದ ಇಳಿಸಿದ ನೀರವನ್ನು ಸತತ ಒಂದು ವರುಷದವರೆಗೆ ಕುಡಿದರೆ ಕ್ಷಯ ರೋಗ ಕಡಿಮೆಯಾಗುತ್ತದೆ ಎಂದು ಹಳ್ಳಿಗಳಲ್ಲಿ ಈಗಲೂ ಹೇಳುತ್ತಾರೆ. ಈಚಲ ಖಜೂರದ ಜಾತಿಗೆ ಸೇರಿದ ಗಿಡವಾಗಿದ್ದು ಇದರ ಹಣ್ಣುಗಳನ್ನು ತಿಂದವರಿಗೇ ಇದರ ಅದ್ಬತ ರುಚಿ ಗೊತ್ತು. ಇದರ ಸಳಿಯಲ್ಲಿ ಬಹು ಸ್ವಾಧಷ್ಟವಾದ ಕೊಬ್ಬರಿಯು ತಿನ್ನಲು ಸಿಗುತ್ತದೆ. ಹಳ್ಳಿಗರಿಗೆ ಈಚಲ ಹಲವು ಬಾಲ್ಯದ ನೆನಪುಗಳನ್ನು ಉಕ್ಕಿಸುತ್ತದೆ. ಬೇಸಿಗೆಯ ರಜೆಯ ದಿನಗಳಲ್ಲಿ ಹಳ್ಳ ಹಳ್ಳ ತಿರುಗುವ ಪುಡಾರಿಗಳಿಗೆ ತಿನ್ನಲು ಈಚಲ ಹಣ್ಣುಗಳ ಸುಗ್ಗಿ. ಕೆಲವು ಹಳ್ಳಿಗಳಲ್ಲಿ ಇದರ ಹಣ್ಣುಗಳನ್ನು ಕೆಲವೇ ಜಾತಿಯವರು ತಿನ್ನಬೆಕು, ಉಳಿದವರು ತಿಂದರೆ ಶಿಕ್ಷೆ ವಿಧಿಸಬೇಕು ಎನ್ನುವ ನಿಯಮಗಳಿದ್ದವು.ಈಚಲ ಹಣ್ಣಿನ ಸುಳಿಯಲ್ಲಿರುವ ಕೊಬ್ಬರಿ ತಿಂದು ಮನೆಗೆ ಬರುವಷ್ಟರಲ್ಲಿ ಹಿರಿಯರಿಗೆ ಸುದ್ದಿ ಗೊತ್ತಾಗಿ ಗುರುಗಳ ಕ್ಐಯಿಂದ ನಾಲಗೆ ಸುಡಿಸಿಕೋಂಡ ನೆನಪುಗಳುಂಟು. ಈಚಲು ಬಹು ಉಪಯೋಗಿ. ಹಲಳ್ಳಿಗಳಲ್ಲಿ ಇಂದಿಗೂ ಈಚಲ ಬಾರಿಗೆ, ಚಪ್ಪರ, ಚಾಪೆ,ಗರಿಯಿಂದ ಹೆಣೆದ ಬುಟ್ಟಿ ಮತ್ತು ಅದರ ಗರಿಗಳನ್ನು ಬಳಸುತ್ತಾರೆ. ಇತ್ತೀಚೆಗೆ ಪ್ಲಾಸ್ಟಿಕ್ ಬಳಕೆ ಅತಿಯಾಗಿದೆ. ಹಾಗಾಗಿ ಈಚಲ ಗಿಡದಿಂದ ತಯಾರಿಸುವ ಸಾಮಾಗ್ರಿಗಳ ಬಳಕೆ ಕಡಿಮೆಯಾಗಿದೆ. ಆದುದರಿಂದ ಈಚಲ ಮರದ ಸಂಪೂಣ‌f ಉಪಯೋಗವನ್ನು ಮಾಡಿ ಪ್ಲಾಸ್ಟಿಕ್ ಮುಕ್ತ ಪರಿಸರವನ್ನು ಸ್ರಷ್ಟಿಸೋಣ.