ಸದಸ್ಯ:Usha Gowda P/ನನ್ನ ಪ್ರಯೋಗಪುಟ

ವೈವಿಧ್ಯಮಯ ಸ್ಕಾರ್ಫ್‍ಗಳು ಮತ್ತು ಸಾಕ್ಸ್ ಸ್ಟಾಕಿಂಗ್

ಬೇಸಿಗೆಯ ಬೇಗೆಯಲ್ಲಿ ಹವಾಮಾನುಕೂಲಿಯಾಗಿ ನೆರವಾಗುವಟ್ರೆಂಡಿ ಉಡುಪುಗಳು ಚಳಿಗಾಲಕ್ಕೆ ಒಗ್ಗುವುದಿಲ್ಲ. ದೇಹಥಂಡಿಯಾದಷ್ಟೂ ಚಳಿಗಾಲದ ಹವಾಮಾನದಿಂದ ಬರುವ ಆರೋಗ್ಯ ಸಮಸ್ಯೆಗಳು ಇರುತ್ತವೆ.ಅದಲ್ಲದಿದ್ದರೆ ಚಳಿಯಂತೂ ಕಾಡದೇ ಬಿಡದು.ಹಾಗಾಗಿ ಚಳಿಗಾಲಕ್ಕೆ ಮೈ ಮುಚ್ಚುವ ಬಟ್ಟೆಗಳನ್ನು ಆಯ್ದಕೊಳ್ಳುವುದು ಸಹಜ.

ಸಾಕ್ಸ್ ಸ್ಟಾಕಿಂಗ್:

ತುಡುಗೆಧರಿಸಿದರು ಚಳಿಗಾಲದಲ್ಲಿ ಕಾಲು ಬೊಳಾಗಿ ಕಾಣಬಾರದುಎಂದು ಬಯಸುವರಿಗೆಉದ್ದದ ಸಾಕ್ಸ್ ವರದಾನ. ಬೇಸಿಗೆಯಲ್ಲಿ ಝಳದಿಂದ ಕಾಲುಗಳ ಅಂದಕೆಡದಂತೆಕಾಪಾಡುವಲ್ಲಿಯೂಉದ್ದದ ಸಾಕ್ಸ್‍ಗಳು ಮತ್ತು ಸ್ಟಾಕಿಂಗ್‍ಗಳು ಬಳಕೆಯಾಗುತ್ತಿವೆ. ಆದರೆ ಚಳಿಗಾಲದ ಒಣ ಹವೆಗೆ ಮೈಯನ್ನುತೆರೆದುಕೊಂಡಷ್ಟುಚರ್ಮದ ಸಮಸ್ಯೆಗೆಕಟ್ಟಿಟ್ಟ ಬುತ್ತಿ.

ಅಂದಕೆಟ್ಟ ಮೇಲೆ ಚರ್ಮದ ನಿರ್ವಹಣೆ ಸವಾಲಾಗಿ ಪರಿಣಮಿಸುತ್ತದೆ.ಅದಕ್ಕಿಂತ ಫ್ಯಾಷನ್‍ಜಗತ್ತಿನಲ್ಲಿಅಪ್‍ಡೇಟ್‍ಆಗಿದ್ದುಕೊಂಡೇಟ್ರೆಂಡಿ ಉಡುಪುಗಳನ್ನು ಧರಿಸುವುದು ಒಳ್ಳೆಯದು.ಚಳಿಗಾಲದಲ್ಲಿ ಶುದ್ಧ ಹತ್ತಿ, ರೇಷ್ಮೆ, ಉಣ್ಣೆ ಮತ್ತುಉಲಾನ್ ಬಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಸಹಜ.ಮಂಡಿಯವರೆಗೆಅಥವಾತೊಡೆಯವರೆಗಿನಸಾಕ್ಸ್‍ಗಳು ಹತ್ತಿಯಿಂದ ಮಾಡಿದಂತಹಉಡುಪು ಸಿಗುತ್ತದೆ.ತೊಡೆಯವರೆಗೆ ಆವರಿಸಿಕೊಳ್ಳುವ ಹತ್ತಿಯ ಸ್ಟಾಕಿಂಗ್‍ಗಳು ಮಾರುಕಟ್ಟೆಯಲ್ಲಿ ಲಭ್ಯ.ಆನ್‍ಲೈನ್ ತಾಣಗಳಲ್ಲಿಯೂ ಥೈ ಹೈ ಸಾಕ್ಸ್, ಮಂಡಿಯವರೆಗಿನ ಲಾಂಗ್ ಸಾಕ್ಸ್ ಮತ್ತು ಸ್ಟಾಕಿಂಗ್‍ಗಳು ಅತಿ ಹೆಚ್ಚು ಬಿಕರಿಯಾಗುತ್ತದೆ.ಮಕ್ಕಳು ಮತ್ತುದೊಡ್ಡವರ ಅಳತೆಯಲ್ಲಿ ಸಿಗುವ  ಉತ್ತಮಗುಣಮಟ್ಟದ ಲಾಂಗ್ ಸಾಕ್ಸ್‍ಗಳು ಮತ್ತು ಸ್ಟಾಕಿಂಗ್‍ಗಳು ಆರಂಭಿಕ  ಬೆಲೆ ರೂಪಾಯಿ500ಕ್ಕೂ ಹೆಚ್ಚು ಇರುತ್ತದೆ.

ಸಾಮಾನ್ಯವಾಗಿಯುವತಿಯರ ಸ್ಟಾಕಿಂಗ್‍ಗಳು ಕಪ್ಪು, ಬಿಳಿ, ಕೆನೆಬಣ್ಣ, ಮರೂನ್, ಕೆಂಪು, ಕಾಫಿ ಬಣ್ಣ ಮತ್ತುಚರ್ಮದ ಬಣ್ಣಗಳಲ್ಲಿ ಹೆಚ್ಚಾಗಿ ಸಿಗುತ್ತದೆ. ಹೆಚ್ಚು ಬೇಡಿಕೆಇರುವುದು ಈ ಬಣ್ಣಗಳಿಗೇ. ಮೋಜಿನಕೂಟಗಳಿಗೆ ಹೋಗುವ ಮಹಿಳೆಯರು ಚರ್ಮದ ಬಣ್ಣ, ಇಲ್ಲವೇಕಪ್ಪು ಬಣ್ಣದ ಲಾಂಗ್ ಸಾಕ್ಸ್ ಸ್ಟಾಕಿಂಗ್‍ಆರಿಸುತ್ತಾರೆ.ಆದರೆ ಮಕ್ಕಳು ಮತ್ತು ಹುಡುಗಿಯರಿಗೆಉಡುಪಿಗೆ ಹೊಂದುವಅಥವಾ ವಿರುದ್ದ ಬಣ್ಣದ ಕಣ್ಸೆಳೆಯುವ ವಿನ್ಯಾಸದವುಗಳನ್ನುಧರಿಸಿದರೆ ಮುದ್ದಾಗಿಕಾಣುತ್ತಾರೆ.ಅವರಿಗೂ ಬೇಸಿಗೆ ಮತ್ತು ಮಳೆಗಾಲದಲ್ಲಿ ಬಳಸಿದ ಪಾರದರ್ಶಕಅಥವಾ ನೆಟ್ಟೆಡ್ ಸಾಕ್ಸ್‍ಗಳು, ಸ್ಟಾಕಿಂಗ್‍ಗಳು ಚಳಿಗಾಲಕ್ಕೆ ಬಿಲ್‍ಕುಲ್ ಬೇಡ.ಅವರಿಗೆಉಲ್ಲನ್‍ಅಥವಾ ಶುದ್ದ ಹತ್ತಿಯ ಸಾಕ್ಸ್‍ಧರಿಸುವುದುಉತ್ತಮ.ಆನ್‍ಲೈನ್ ಮಾರಾಟ ತಾಣಗಳಲ್ಲಿ ಲಾಂಗ್ ಸಾಕ್ಸ್, ಥೈ ಹೈ ಸ್ಟಾಕಿಂಗ್ ಫಾರ್ ವಿಂಟರ್‍ಎಂದು ನಮೂದಿಸಿದರೆ ನೂರಾರು ಬಗೆಯಲ್ಲಿ ಸಿಗುತ್ತದೆ.ಆದರೆ ಇವು ಅತಿ ಬಿಗಿಯಾಗಿರದಂತೆಎಚ್ಚರವಹಿಸಬೇಕು.ವಿಶೇಷವಾಗಿ ಪುಟ್ಟ ಮಕ್ಕಳಿಗೆ ಮತ್ತು ಹುಡುಗಿಯರಿಗೆಆಯ್ಕೆ ಮಾಡುವಾಗಲೇ ಸರಿಯಾದ ಅಳತೆಯ ಸಾಕ್ಸ್, ಸ್ಟಾಕಿಂಗ್‍ಗಳನ್ನು ವಯಸ್ಸಿನ ಮಾನದಂಡದಲ್ಲಿಆರಿಸುವುದುಸೂಕ್ತ.ಬಿಗಿಯಾಗಿದ್ದರೆ ಮಂಡಿ ನೋವು ತೊಡೆಯ ಮಾಂಸಖಂಡಗಳಿಗೆ ಹಾಗೂ ನರಗಳಿಗೆ ಹಾನಿಯಾಗುವಅಪಾಯವಿದೆ.ಜಾಗ್ರತೆಯಿಂದಆಯ್ಕೆ ಮಾಡಿ, ಸಾಕ್ಸ್, ಸ್ಟಾಕಿಂಗ್‍ಗಳ ಆನಂದ ನಿಮ್ಮದಾಗಲಿ.

ಸ್ಕಾರ್ಫ್‍ಗಳು:

ರಭಸದಿಂದ ಬೀಸುವ ಶೀತಲ ಗಾಳಿಯಿಂದ ತಪ್ಪಿಸಿಕೊಳ್ಳುವ ಬಗೆ ಹೇಗೆ?ಸ್ವೆಟರ್ ಆಲುಗಳ ಅಪ್ಪುಗೆಯಲ್ಲಿ ಮನೆಯಿಂದ ಹೊರಗಡಿಇಟ್ಟರೂ ಸೂರ್ಯ ನೆತ್ತಿಗೇರುತ್ತಿದ್ದಂತೆಅಪ್ಪುಗೆಅಷ್ಟೊಂದು ಹಿತವೇನಿಸುವುದಿಲ್ಲ. ಹಾಗೆಂದುಅವನ್ನುತೆಗೆದುಇಡುವುದಾದರೂಎಲ್ಲಿ?ಧರಿಸಲೂ ಹೊರಲೂ ಭಾರವೆನಿಸದೇ?ಧರಿಸಲು, ಹಗುರ, ಚಳಿಯಿಂದ ರಕ್ಷಣೆ, ಇಂತಹ ಸಮಯದಲ್ಲಿ ನೆರವಿಗೆ ಬರುವುದು ಸ್ಕಾರ್ಫ್‍ಗಳು.ಇವುಗಳ ಬಳಕೆ ಇದೀಗ ಜನಪ್ರಿಯವಾಗುತ್ತಿದೆ.ಚಳಿಯಿಂದ ಸಂಪೂರ್ಣರಕ್ಷಣೆದೊರಕದಾದರೂ, ಬಹುಮಟ್ಟಿಗೆ ಇವು ಉತ್ತಮಕಾರ್ಯನಿರ್ವಹಣೆಯಲ್ಲಿರುತ್ತವೆ. ಅಲ್ಲದೆ ಫ್ಯಾಷನ್ ಪ್ರಿಯರಿಗೂಇದರಕೊಡುಗೆಅಪಾರ.

ಸದಾ-ಗಾಢ ಬಣ್ಣಗಳು, ವಿಧವಿಧದ ಪ್ರಿಂಟ್ಸ್‍ಗಳು, ತ್ರಿಕೋನಾಕಾರ, ಕೈ ಹೆಣಿಗೆ ಮುಂತಾದವುಗಳಿಂದ ತಯಾರಾದ ಸ್ಟೋಲ್ಸ್ ಫೋಚೋಗಳು ಇಂದು ಮಾರುಕಟ್ಟೆಯಲ್ಲಿತುಂಬಿ ತುಳುಕುತ್ತಿವೆ. ತಲೆ-ಕುತ್ತಿಗೆಯನ್ನು ಆವರಿಸಿದಂತೆ ಇರುವ ಇವುಗಳು ಸಾಮಾನ್ಯವಾಗಿಯಾವುದೇಉಡುಪಿನೊಂದಿಗೆ ಹೊಂದಿಕೊಳ್ಳುವವು.ಪಷ್ಮೀನಾ ಸಿಲ್ಕ್, ಷಿಫಾನ್, ಕಾಟನ್‍ಯಾವುದೇಇರಲಿ, ನೋಡಲು, ಧರಿಸಲು ಸುಂದರ, ಹಿತಕರ.ಅಂತೆಯೇ ಸರಿಯಾದರೀತಿಯಲ್ಲಿ ಧರಿಸಿದರೆ ಯಾವುದೇಉಡುಗೆಎದ್ದುಕಾಣುವುದರಲ್ಲಿ ಸಂದೇಹವಿಲ್ಲ. ಉಡುಗೆ-ತೊಡುಗೆಯಲ್ಲಿ ನಾವೀನ್ಯತೆ, ವೈವಿಧ್ಯತೆ ಬಯಸುವ ಇಂದಿನ ಯುವತಿಯರಿಗೆ ಈ ಸ್ಕಾರ್ಫ್‍ಗಳು ಒಂದು ವರದಾನವೇ ಸರಿ.ಅಲ್ಲದೇಇಂದು ಹೆಚ್ಚಾಗಿ ಟೂ-ವಿಲರ್‍ಗಳಲ್ಲಿ ಓಡಾಡುತ್ತಿರುವವರಿಗೆ ಇದು ಅನುಕೂಲವೆಂದೆನಿಸಿದರೂ ಉಳಿದವರೂ ಇದರ ಸಂಪೂರ್ಣ ಪ್ರಯೋಜನ ಪಡೆಯುತ್ತಿದ್ದಾರೆ.ಅಭಿರುಚಿಗೆತಕ್ಕಂತೆದೊರಕುವುದರಿಂದ ಇದರಜನಪ್ರಿಯತೆ ಎಂದಿಗೂ ಇದೆ.ಚಳಿಗಾಲದಲ್ಲಿ ಚಳಿಯಿಂದ ರಕ್ಷಿಸಿದರೆ, ಬೇಸಿಗೆಯಲ್ಲಿ ಬಿಸಿಲಿನಿಂದರಕ್ಷಿಸುವುದುಇನ್ನೊಂದು ಲಾಭ.

ಕಾಲೇಜು ಹುಡುಗಿಯರಿಗೂ ಸ್ಕಾರ್ಫ್ ಮತ್ತು ಸಾಕ್ಸ್ ಸ್ಟಾಕಿಂಗ್‍ಗಳು ಪ್ಯಾಷನ್‍ಆಗಿದೆ.ಯಾವುದೇ ಬಟ್ಟೆಯಜೊತೆಗೆತೊಟ್ಟರೆ ಅವು ವಿಶೇಷವಾದಂತಹ ಲುಕ್‍ನ್ನು ನೀಡುತ್ತದೆ.ತುಂಬ ಕಡಿಮೆ ಬೆಲೆಗೆ ಸಿಗುವ ಸ್ಕಾರ್ಫ್‍ಗಳ ಪ್ರಾರಂಭಿಕ ಬೆಲೆಯು 100 ರಿಂದ 150 ರೂಪಾಯಿಗಳಾಗಿರುತ್ತದೆ. ಆನ್‍ಲೈನ್ ತಾಣಗಳಲ್ಲಿಯೂ ವಿವಿಧ ವಿನ್ಯಾಸಗಳಲ್ಲಿ ಸಿಗುತ್ತದೆ.ಗಿಡ್ಡ ಸ್ಕಾರ್ಫ್‍ಗಳ ಜೊತೆಗೆಉದ್ದ, ಅಗಲ, ಮುಂತಾದ ಸೈಜ್‍ಗಳಲ್ಲಿ ದೊರೆಯುತ್ತದೆ.

ಸಾವಿತ್ರಮ್ಮ ಕೆ. ವಿಭೂತಿ, ಮಂಗಳ ಮ್ಯಾಗಜೀನ್ 24 ಜನವರಿ 2018

ದೀಪಾ ಡಿ. ಹೆಗೆಡೆ , ಮಂಗಳ ಮ್ಯಾಗಜೀನ್