ಎಲ್ಲಾ ಹಾವುಗಳು ಮುಖ್ಹ್ಯವಾಗಿ ಬೇಟೆಯಾಡುವ ಪ್ರಾಣಿಗಳು ಮತ್ತು ಬೇಟೆ ಅವರಿಗೆ ನೇರವಾಗಲು ವಿಶೇಷ ಉಪಕರಣಗಳು ವಿಕಸನಗೊಂಡಿದೆ. ಎಲ್ಲಾ ಹಾವುಗಳು ತಮ್ಮ ಬೇಟೆ ತಪ್ಪಿಸಿಕೊಳ್ಳಬಾರದೆಂದು ಅವು ತಮ್ಮ ಹಿಂದೆ ಬಾಗಿರುವ ಹಲ್ಲುಗಳನ್ನು ಉಪಯೋಗಿಸುತ್ತವೆ .ಬೇರೆ ಜಾತಿಯ ಹಾವುಗಳು ವಿಷಪೂರಿತ ಅಲ್ಲದಿದ್ದರೂ ತಮ್ಮ ಕಣ್ಣ ಹಿಂದೆ ಇರುವ ಗ್ರಂಥಿಯಲ್ಲಿ ವಿಷವಿರುವ ಲಾಲಾರಸವಿರುತದೆ. ಕೆಲವು ಹಾವುಗಳು ತಮ್ಮ ವಿಸ್ತ್ರತ ಹಲ್ಲುಗಳಿಂದ ಬೇಟೆಯನ್ನು ತೂತು ಮಾಡಿ ತಮ್ಮ ವಿಷವಿರುವ ಲಾಲಾರಸವನ್ನು ಹಾಕುತ್ತವೆ. ಈ ಹಾವುಗಳ ಕಡಿತದಿಂದ ಆ ಪ್ರಾಣಿಗೆ ತೀವ್ರ ಊತ, ನೋವು ಮತ್ತು ರಕ್ತಸ್ರಾವ ಆಗಿ ಸಾವು ಉಂಟಾಗುತ್ತದೆ.

ಹಾವಿನ ವಿಷ ಅತೀವವಾಗಿ ಮಾರ್ಪಾಡುಗೊಂಡಿರುವ ಲಾಲಾರಸ. ಇದು ಕೆಲವು ಹಾವಿನ ಜಾತಿಗಳಲ್ಲಿ ಇರುತದೆ.ಹಾವಿನ ವಿಷ ಹಲವು ಪ್ರೊಟೀನ್ಗಳು ಮತ್ತು ಕಿಣ್ವಗಳ ಸಂಯೋಜನೆ.ಕೆಲವು ಪ್ರೊಟೀನ್ಗಳು ಮಾನವರಿಗೆ ನಿರುಪ್ರದವಿ, ಆದರೆ ಕೆಲವು ಸೇವಿಸಿದಾಗ ,ಅವು ಪ್ರಾಣಕ್ಕೆ ಅಪಾಯಕಾರಿ. ಎಲ್ಲಾ ಹಾವುಗಳ ಜೇವನಮಾನದುದಕ್ಕೂ ಹಲ್ಲುಗಳು ನಿಯಮಿತವಾಗಿ ಬದಲಾಗುತ್ತದೆ. ಇದು ಹಾವಿನ ಆರೋಗ್ಯದ ಮೇಲೆ ಅವಲಂಬಿಸಿರುತದೆ. ಅದರ ಹಲ್ಲುಗಳು ಕೇವಲ ವಿಷವನ್ನು ಹಾಕುವುದಕ್ಕೆ ಮಾತ್ರ ಅಲ್ಲ, ಅವು ವಿಷವನ್ನು ಸಿಂಪಡಿಸುವುದಕ್ಕೂ ಉಪಯೋಗಿಸುತ್ತವೆ.ಕೆಲವು ಆಫ಼್ರಿಕನ್ ಮತ್ತು ಏಷ್ಯನ್ ಕೋಬ್ರಾಗಳು ೨.೫ಮೀ ವರೆಗೆ ವಿಷವನ್ನು ಸಿಂಪಡಿಸುತ್ತವೆ. ಸಿಂಪಡಿಸುವುದು ಹಾವಿನ ರಕ್ಷಣಾತ್ಮಕ ನಡವಳಿಕೆ ಮಾತ್ರವೇ ಹೊರೆತು ಕೊಲ್ಲುವುದಕ್ಕೆ ಅಲ್ಲ.ಈ ಹವುಗಳು ಸಸ್ಯಹಾರಿಗಳು ವಾಸಿಸುವ ವಲಯಗಳಲ್ಲಿ ಇರುತ್ತದೆ, ಆದುದರಿಂದ ಅವು ತಮ್ಮ ವಿಷವನ್ನು ರಕ್ಷಣಾತ್ಮಕ್ಕಾಗಿ ಬಳಿಸುತ್ತದೆ. ನಾವು ತಿಳಿದಿರುವಂತೆ ಭಾರತೀಯ ಕೋಬ್ರಾಗಳು ತಮ್ಮ ವಿಷವನ್ನು ಸಿಂಪಡಿಸುವುದಿಲ್ಲ. ಹಾವಿನ ವಿಷದ ಸಂಯೊಜನೆ ಮತ್ತು ರಸಾಯನಶಾಸ್ತ್ರ ಬಹಳ ಸಂಕೀರ್ಣವಾಗಿದೆ,ಆದರೆ ವಿಜ್ಯಾನಿಗಳು ಈ ವಿಷದಲ್ಲಿ ಕಿಣ್ವಗಳು, ಪ್ರೋಟೀನ್ ಮತ್ತು ಜೀವಾಣುಗಳ ಮಿಶ್ರಣವಿದೆ ಎಂದು ಗುರುತಿಸಿದ್ದಾರೆ.ಹಾವಿನ ವಿಷವನ್ನು ಎರಡು ರೀತಿಗಳಲ್ಲಿ ವರ್ಗೀಕರಿಸಲಾಗಿದೆ: ನರ ವಿಷಕಾರಿ(ನರಮಂಡಲದ ಸೋಂಕು)ಹಾಗು ರಕ್ತ ವಿಷಕಾರಿ(ರಕ್ತಪರಿಚಲನಾ ವ್ಯವಸ್ಥೆಯ ಸೋಂಕು).

ರಕ್ತ ವಿಷಕಾರಿ ಬದಲಾಯಿಸಿ

ಟಾಕ್ಸಿನ್ ಕೆಂಪು ರಕ್ತ ಜೇವಕೋಶಗಳನ್ನು ನಾಶಪಡಿಸುತ್ತದೆ. ಎದನ್ನು ಹೀಮೊಲೈಸಿಸ್ ಎಂದು ಕರೆಯುತ್ತಾರೆ.ಇದು ಬಹಳ ನಿಧಾನಗತಿಯಲ್ಲಿ ಬೆಳವಣಿಗೆಯಾದುದರಿಂದ ಇದು ಮಾನವನನ್ನು ಕೊಲ್ಲುವುದಿಲ್ಲ.

ನರ ವಿಷಕಾರಿ ಬದಲಾಯಿಸಿ

ಇವು ನರ ಜೇವಕೋಶಗಳ ಮೇಲೆ ದಾಳಿ ಮಾಡುತ್ತವೆ. ಇವು ಪಾರ್ಶ್ವವಾಯು ಮತ್ತು ಜೋಮಕ್ಕೆ ಕಾರಣವಾಗಬಹುದು.

ಕಚ್ಚಿರುವ ಜಾಗ ಮೊದಲು ನೋವಿನಿಂದ ಉರಿಯಲು ಪ್ರಾರಂಭವಾಗುತ್ತದೆ. ನಂತರ ಊತ ಆರಂಭವಾಗುತ್ತದೆ ಮತ್ತು ೩ ಘಂಟೆಗಳ ನಂತರ ವಾಂತಿ.ನಾಡಿ ಅತ್ಯಂತ ವೇಗವಾಗಿ ಓಡಿ ಚಡಪಡಿಕೆಯಿಂದ ಆ ಜೀವಿಗೆ ಸಾವನ್ನು ಉಂಟು ಮಾಡುತ್ತದೆ.

ವಿಷದ ಉಪಯೋಗಗಳು ಬದಲಾಯಿಸಿ

ನೋವು ಮತ್ತು ಇತರ ಸ್ನಾಯುಗಳ ನೋವು ನಿವಾರಿಸುವುದಕ್ಕೆ ಹಾವಿನ ವಿಷ ವಿಶಾಲವಾದ ರೀತಿಯಲ್ಲಿ ಬಳಸಲಾಗುತ್ತದೆ.ಪ್ರಯೋಗಗಳನ್ನು ಅದರ ಬಳಕೆಯ ಬಗ್ಗೆ ಮಾಡಲಾಗಿದೆ. ನರವ್ಯೂಹದ ಕುಷ್ಠರೋಗದಿಂದ ನರಳುತ್ತಿರುವ ಮನುಷ್ಯನಿಗೆ ಈ ವಿಷವನ್ನು ಕೊಟ್ಟರೆ ಅವನಿಗೆ ಪರಿಹಾರ ದೊರೆಯುತ್ತದೆ. ಪರಿಹಾರಗಳನ್ನು ಅಪಸ್ಮಾರ ಚಿಕಿತ್ಸೆಯಲ್ಲಿ ಶಿಫಾರಸು ಮಾಡಲಾಗಿದೆ. ನಾಗರ ಹಾವಿನ ವಿಷ ಕ್ಯಾನ್ಸರ್ , ಮೈಗ್ರೇನ್ ಮತ್ತು ನರ ಕುಷ್ಠರೋಗ ಗುಣಪಡಿಸುತ್ತದೆ ಎಂದು ಅಮೆರಿಕನ್ ಮೆಡಿಕಲ್ ಪ್ರಯೋಗಗಳು ಹೇಳುತ್ತದೆ.ಈ ವಿಷವನ್ನು ರಕ್ತಸ್ರಾವ ನಿಲ್ಲಿಸಲು ದಂತವೈದ್ಯರು ಉಪಯೋಗಿಸುತ್ತಾರೆ .

ಕಿಣ್ವಗಳು ಬದಲಾಯಿಸಿ

ವಿಷಗಳಲ್ಲಿ ಕಿಣ್ವಗಳು ಹೆಚ್ಚು ಸಾಂದ್ರತೆಯಲ್ಲಿ ಇದೆ.ಹಲವಾರು ಕಿಣ್ವಗಳು ಹಾವಿನಿಂದ ಪಡೆಯಲಾಗಿದೆ.

ತಡೆಗಟ್ಟುವಿಕೆ ಮತ್ತು ನಿಯಂತ್ರಣ ಬದಲಾಯಿಸಿ

ನಾವು ನೇರವಾಗಿ ಹಾವುಗಳನ್ನು ತೊಡೆದುಹಾಕಲು ಸಾಧ್ಯವಿಲ್ಲ.ಇದರಿಂದ ಇಲಿಗಳ ಸಂಖ್ಯೆ ಹೆಚ್ಚಗಬಹದು. ನಮ್ಮ ಮನೆಯಿಂದ ಇಲಿ ಮತ್ತು ಕಪ್ಪೆಗಳನ್ನು ದೂರವಿಡುವುದರಿಂದ ಹಾವುಗಳನ್ನು ದೂರವಿಡಬಹುದು. ಯಾರಾದರು ಹಾವಿರುವ ಜಾಗಕ್ಕೆ ಹೊಗಬೆಕೆಂದರೆ ಪಾದರಕ್ಷೆಗಳನ್ನು ಉಪಯೋಗಿಸಬೇಕು. ಮುಂಗುಸಿಯನ್ನು ಸಾಕದು, ಮತ್ತು ಅಕ್ಕ ಪಕ್ಕ ಪ್ರದೇಶದಲ್ಲಿ ಗೂಬೆಗಳು ಹಾಗು ಹದ್ದುಗಳು ಇದ್ದರೆ ಹಾವುಗಳ ಸಂಖ್ಯೆ ಕಮ್ಮಿಯಾಗುತ್ತದೆ. ಜನರು ಹಾವುಗಳನ್ನು ದೂರವಿಡುವುದಕ್ಕೆ ಈರುಳ್ಳಿಯ ತುಂಡುಗಳನ್ನು ಅವರವರ ಮನೆಗಳಲ್ಲಿ ಹಾಕುತ್ತಿದ್ದರು. ಹಾವುಗಳನ್ನು ತ್ಯಜಿಸುವುದಕ್ಕೆ ಕೇಂದ್ರೀಕೃತ ಫಿನೈಲನ್ನು ಉಪಯೊಗಿಸಬಹುದು. ಹಾವುಗಳನ್ನು ರಂಧ್ರಗಳಿಂದ ಹೊರಗಾಕುವುದಕ್ಕೆ ಹೊಗೆಯನ್ನು ಉಪಯೋಗಿಸಬಹುದು.

ಕಡಿತವನ್ನು ಗುರುತಿಸುವುದು ಬದಲಾಯಿಸಿ

ಒಂದು ಹಾವು ಕಡಿತವನ್ನು ಗುರುತಿಸಬೇಕೆಂದರೆ ಮುಂದಿನ ಸಾಮಾನ್ಯ ಲಕ್ಷಣಗಳು ಪರಿಗಣಿಸಬೇಕು:

  1. ಎರಡು ರಂಧ್ರ ಗಾಯಗಳು
  2. ಗಾಯದ ಸುತ್ತ ಬಾವು ಮತ್ತು ಕೆಂಪು
  3. ನೋವು
  4. ಉಸಿರಾಟದ ತೊಂದರೆ
  5. ವಾಂತಿ
  6. ಮಂದ ದೃಷ್ಟಿ
  7. ಬೆವರು ಮತ್ತು ಜೊಲ್ಲು ಸುರಿಸುವಿಕೆ
  8. ಮುಖ ಮತ್ತು ಅಂಗಗಳು ಮರಗಟ್ಟುವಿಕೆ

ಚಿಕಿತ್ಸೆ ಬದಲಾಯಿಸಿ

  1. ಹಾವಿನ ಗಮನಾರ್ಹ ಅಂತರದ ಮೀರಿ ವ್ಯಕ್ತಿಯನ್ನು ಸರಿಸಿ .
  2. ವಿಷ ಹರಡದಂತೆ ಇರಲು ವ್ಯಕ್ತಿಯನ್ನು ಅಲ್ಲಾಡಿಸಬೇಡಿ
  3. ಬಟ್ಟೆಯಿಂದ ಗಾಯವನ್ನು ಮುಚ್ಚಿ
  4. ಆರೋಗ್ಯ ರಕ್ಷಣೆಗೆ ಸಂಪರ್ಕಿಸಿ
  5. ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು

ಮಾಡಬಾರದು ಬದಲಾಯಿಸಿ

  1. ವಿಷವನ್ನು ಹೀರುವಂತೆ ಮಾಡಲು ಪ್ರಯತ್ನ
  2. ಐಸ್ , ಅಥವಾ ನೀರಿನ ಅರ್ಜಿ