ಸದಸ್ಯ:Turuvekere Ravishankar/sandbox
ತುರುವೇಕೆರೆ ರವಿಶಂಕರ್ ಇವರು ಕನಾಟಕ ಸಕಾರದ ಪೊಲೀಸ್ ಇಲಾಖೆಯಲ್ಲಿ ಸಬ್ಇನ್ಸ್ಪೆಕ್ಟರ್ ಆಗಿ ನೇಮಕಗೊಂಡು ಸದ್ಯ ಕನಾಟಕ ಲೋಕಾಯುಕ್ತದಲ್ಲಿ ಇನ್ಸ್ ಪೆಕ್ಟರ್ ಆಗಿ ಕೆಲಸ ನಿವಹಿಸುತ್ತಿದ್ದಾರೆ. ಮೂಲತಃ ಕೆಮಿಕಲ್ ಎಂಜಿನಿಯರಿಂಗ್ ಪದವೀಧರರಾದ ಿವರು ತುಮಕೂರಿನ ಸಿದ್ಧಗಂಗಾ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಪದವಿಯನ್ನು ಪೂರೈಸಿದ ನಂತರ ಕೆಲಕಾಲ ಉಪನ್ಯಾಸಕ ವೃತ್ತಿಯನ್ನು ನಿವಹಿಸಿ ತದನಂತರ ಪೊಲೀಸ್ ಇಲಾಖೆಗೆ ಸೇಪಡೆಗೊಂಡಿರುತ್ತಾರೆ.ಇಲಾಖೆಯಲ್ಲಿ ನಿಷ್ಟೆಯಿಂದ ಕತವ್ಯ ನಿವಹಿಸುತ್ತಾ ಹಿರಿಯ ಅಧಿಕಾರಿಗಳ ಶ್ಲಾಘನೆಗೆ ಪಾತ್ರರಾಗಿ ಉತ್ತಮ ಹೆಸರು ಸಂಪಾದಿಸಿರುತ್ತಾರೆ. ವೀರಪ್ಪನ್ ಬೇಟೆಗಾಗಿ ರಚಿಸಿದ್ದ ಎಸ್ ಟಿ ಎಫ್ ಪಡೆಯಲ್ಲೂ ಕಾಯ ನಿವಹಿಸಿ ಕಠಿಣವಾದ ದುಗಮ ಪ್ರದೇಶಗಳಲ್ಲಿ ಅಲೆಯುತ್ತಾ ದಟ್ಟವಾದ ಕಾಡುಮೇಡುಗಳಲ್ಲಿ ಸುತ್ತಿ ಅವನನ್ನು ಮಟ್ಟಹಾಕುವಲ್ಲಿ ಯಶಸ್ಸು ಕಂಡಿದ್ದು ಈ ಸಾಧನೆಗೆ ಸಕಾರದಿಂದ ನಗದು ಬಹುಮಾನ ಹಾಗೂ ಪುರಸ್ಕಾರಗಳನ್ನು ಪಡೆದಿರುತ್ತಾರೆ. ಇವರ ಮತ್ತೊಂದು ಹವ್ಯಾಸವೆಂದರೆ ಸಾಹಿತ್ಯ ರಚನೆ. 'ತುರುವೇಕೆರೆ ರವಿಶಂಕರ್'ಎಂಬ ಹೆಸರಿನಲ್ಲಿ ಇವರ ಹಲವಾರು ಪ್ರಬಂಧಗಳು ನಾಡಿನ ಅನೇಕ ದಿನಪತ್ರಿಕೆ,ವಾರಪತ್ರಿಕೆಗಳಲ್ಲಿ ಪ್ರಕಟಗೊಂಡು ಜನಮನ್ನಣೆ ಗಳಿಸಿವೆ.