ಸದಸ್ಯ:Thripura V R/ನನ್ನ ಪ್ರಯೋಗಪುಟ
ಸಾಸಿವೆ
ಬದಲಾಯಿಸಿಹೆಸರು: ಬ್ರಾಸಿಕ ನೈಗ್ರ ಕಾಕ್
ಬದಲಾಯಿಸಿಸಾಸಿವೆಯನ್ನು ಬ್ರಾಸಿಕ ನೈಗ್ರ ಕಾಕ್ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಇದು ಕ್ರುಸಿಫೆರಿ ವಂಶಕ್ಕೆ ಸೇರಿದೆ.
ವಿವರಣೆ ಮತ್ತು ವ್ಯಾಪ್ತಿ
ಬದಲಾಯಿಸಿಬ್ರಾಸಿಕ ಜಾತಿಯಲ್ಲಿ ೧೫೦ಕ್ಕೂ ಹೆಚ್ಚು ಉಪಜಾತಿಗಳಿವೆ. ವಾರ್ಷಿಕ ಅಥವಾ ದ್ವೈವಾರ್ಷಿಕ ಗಿಡಗಳು ಇವುಗಳಲ್ಲಿ ಕೆಲವನ್ನು ಎಣ್ಣೆ ಬೀಜದ ಬೆಳೆಯಾಗಿ ಮತ್ತು ತರಕಾರಿ ಮತ್ತು ದನದ ಮೇವಿನ ಬೆಳೆಯಾಗಿ ತೆಗೆಯುತ್ತಾರೆ. ಇದರ ಉಪಜಾತಿಗಳನ್ನು ಮಾತ್ರ ರುಚಿಕರ ಪದಾರ್ಥಗಳಿಗಾಗಿ ಬಳಸುತ್ತಾರೆ. ಸಾಂಬಾರ ದಿನಸಿಗಳ ಆಮದಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾಸಿವೆಯನ್ನು ಭಾರತ ಆಮದಮಾಡಿಕೊಳ್ಳುತ್ತಿತ್ತು. ಇದು ಒಟ್ಟು ಸಾಂಬಾರ ದಿನಸಿಗಳ ದಿನ ಆಮದಿನ ೮೧.೬% ಆಗುತ್ತದೆ. ವಿದೇಶಿ ವಿನಿಮಯದ ಈ ಹೆಚ್ಚಿನ ಖರ್ಚನ್ನು ತಪ್ಪಿಸಲು ಸಾಂಬಾರ ದಿನಸಿಯಾಗಿ ಉಪಯೋಗಿಸುವ ಸಾಸಿವೆಗಳ ಬೆಳೆಯ ವಿಸ್ತರಣೆಯನ್ನು ಹೆಚ್ಚಿಸಲು ಒಳ್ಳೆ ಅವಕಾಶವಿದೆ.
ಎಣ್ಣೆ ಕೊಡುವ ಬ್ರಾಸಿಕ ಜಾತಿಗಳು ವಿಶಿಷ್ಟ ಗುಂಪಿಗೆ ಸೇರುತ್ತವೆ. ಇವುಗಳನ್ನು ಗುರುತಿಸುವ ಮತ್ತು ಹೆಸರಿಸುವ ಕೆಲಸದಲ್ಲಿ ಹೆಚ್ಚಿನ ಗೊಂದಲವಿದೆ. ಭಾರತದಲ್ಲಿ ಮುಖ್ಯವಾದ ಎಣ್ಣೆ ಬೀಜದ ಬೆಳೆಗಳೆಂದರೆ ಹಳದಿ ಸರ್ಸೋನ್, ಕಂದು ಸರ್ಸೋನ್ ತೋರಿಯಾ ಮತ್ತು ಪಂಜಾಬಿ ರಾಯ್ ಅನ್ನು ಕೆಲಮಟ್ಟಿಗೆ ಪಂಜಾಬಿನ ಮಧ್ಯಪ್ರದೇಶದ ಜಿಲ್ಲೆಗಳಲ್ಲಿ ಬೆಳೆಯುತ್ತಾರೆ. ಈ ಎರಡು ಉಪಜಾತಿಯ ಬೀಜಗಳನ್ನು’ ಟೇಬಲ್ ಮಸ್ಟಡ್’ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ವ್ಯಾಪಾರದ ‘ಮಸ್ಟರ್ ಫ್ಲೋರ್’ ಸಾಸಿವೆ ಹಿಟ್ಟು ಎರಡು ಜಾತಿಗಳ ಸಾಸಿವೆ ಬೀಜಗಳ ಹಿಟ್ಟಿನ ಮಿಶ್ರಣವಾಗಿದೆ. ಮುಖ್ಯ ಘಟಕ ಅಥವಾ ಚಂಚಲ ತೈಲವು ಅಲ್ಲೆಲ್ ಐಸೋತಯೋಸಯನೇಟ್ ಆಗಿರುತ್ತವೆ. ಇವು ಅವುಗಳಲ್ಲಿರುವ ಗೈಕೊಸಯ್ಡ್ ಸಿನಿಗ್ರೀನ್ ಮತ್ತು ಸಿನಾಲ್‌ಬಿಲ್ ಎಂಬ ಪದಾರ್ಥಗಳು ನೀರಿನ ಮತ್ತು ಮೈರೋಸಿನ್ ಎಂಬ ಕಿಣ್ವದ ಚಟುವಟಿಕೆಯಿಂದ ಸೂಕ್ತ ಪರಿಸ್ಥಿತಿಯಲ್ಲಿ ಜಲವಿಶ್ಲೇಷಣ ಉತ್ಪತ್ತಿಯಾಗುತ್ತದೆ.
೧.ಬಿಳಿ ಸಾಸಿವೆ:
ಬದಲಾಯಿಸಿಬಿಳಿ ಸಾಸಿವೆ ಅಥವಾ ಸಫೆದ್ ರಾಯ್ ಎನ್ನುವುದು ಸ್ವಯಂ ಬರಡಾದ ಜಾತಿ ಹೂವಿಲ್ಲದ ರೋಮ ದಂತಹ ಎಳೆಗಳಿರುವ ಗಂಟೆಯಿಂದ ಇದನ್ನು ಸುಲಭವಾಗಿ ಗುರುತಿಸಬಹುದು. ಇದಕ್ಕೆ ಗಳಂತಹ ಎಲೆಗಳು ದೊಡ್ಡ ಹಳದಿ ಹೂವುಗಳು ಮತ್ತು ಕೆಲವೇ ಬೀಜ ಗಳಿರುವ ಮೈ ಮೇಲೆ ರೋಮಗಳಿಂದ ಇರುವ ಎಲೆಗಳಿರುವ ಕಾಯಿಗಳು ಇರುತ್ತವೆ. ಇದಕ್ಕೆ ಉದ್ದವಾದ ಪೊಳ್ಳಾದ ಕತ್ತಿಯಂತಹ ಚಂಚುಗಳಿರುತ್ತವೆ. ಬೀಜಗಳು ದೊಡ್ಡದಾಗಿ ಬಿಳಿ ಬಣ್ಣ ಅಥವಾ ಮೇಲೆ ಸಣ್ಣ ಹಳ್ಳ ಹೊಂದಿರುತ್ತದೆ. ಇವು ತಣ್ಣೀರಲ್ಲಿ ಹೆಚ್ಚಾದ ಅಂಟು ಪದಾರ್ಥ ಕೊಡುತ್ತದೆ.
ಸೆ. ಆಲ್ಬ ಇದಕ್ಕೆ ದಕ್ಷಿಣ ಯೂರೋಪ್ ಮತ್ತು ಪಶ್ಚಿಮ ಏಷ್ಯಾ ತವರು. ಭಾರತದಲ್ಲಿ ಇದನ್ನು ಉತ್ತರ ಭಾರತದ ಸಮತೋಲನ ಭಾಗದಲ್ಲಿ ಮಾತ್ರ ತೆಗೆಯುತ್ತದೆ. ಇದು ಸಾಸಿವೆ ಅಥವಾ ಸಾಸಿವೆ ತೈಲ ಉತ್ಪಾದನೆಗೆ ಏನನ್ನು ನೀಡುವುದಿಲ್ಲ.
೨.ಕಪ್ಪು ಸಾಸಿವೆ ಅಥವಾ ನಿಜವಾದ ಸಾಸಿವೆ:
ಬದಲಾಯಿಸಿಕಪ್ಪು ಸಾಸಿವೆ ಅಥವಾ ಬನಾರಸಿ ರಾಯ್ ಎನ್ನುವುದು ಹೆಚ್ಚು ಸ್ವಯಂ ಬರಡಾಗಿರುತ್ತದೆ ಮತ್ತು ಬ್ರಾಸಿಕ ಜಾತಿಗಳಿಂದ ತೀರ ವಿಭಿನ್ನವಾಗಿರುತ್ತದೆ. ಬಲಿತ ಹಣ್ಣುಗಳು ಪುಷ್ಪ ಸಮುದಾಯದ ರಕ್ಷಾರೇಖೆಗೆ ಒತ್ತಾಗಿ ಅಂಟಿಕೊಂಡಿರುತ್ತವೆ. ಬೀಜದ ಸಿಪ್ಪೆಯನ್ನು ಮಸೂರದಿಂದ ನೋಡಿದಾಗ ಮೇಲೆ ಜಾಲ ರಚನೆಯು ಕಾಣುತ್ತದೆ. ಸಿಪ್ಪೆಯು ಅಂಟು ಹೊಂದಿರುತ್ತದೆ. ಹೊರಗೋಡೆಯ ಮೇಲೆ ತೆಳುವಾದ ಮತ್ತೊಂದು ಇರುತ್ತದೆ ಬ್ರಾ ದರವನ್ನು ಯುರೋಪಿನಲ್ಲಿ ೧೩ನೇ ಶತಮಾನದಿಂದ ಸಾಗುವಳಿ ಮಾಡುತ್ತಿದ್ದಾರೆ. ಈಗ ಅದು ತಾನೇ ತಾನಾಗಿ ಬೆಳೆಯುತ್ತದೆ. ಇದನ್ನು ಸ್ವಲ್ಪ ಕಾಲಕ್ಕೆ ಹಿಂದೆ ಮಾತ್ರ ಭಾರತದಲ್ಲಿ ಚಳಿಗಾಲದ ಬೆಳೆಯಾಗಿ ಬೆಳೆಯುತ್ತಿದ್ದರು .ಉತ್ತರಪ್ರದೇಶ ಪಂಜಾಬ್ ಮತ್ತು ತಮಿಳುನಾಡಿನಲ್ಲಿ ಸ್ವಲ್ಪಮಟ್ಟಿಗೆ ಬೆಳೆಯುತ್ತಿದ್ದಾರೆ. ಇದು ಸಾಸಿವೆ ಎಣ್ಣೆಯ ತಯಾರಿಕೆಗೆ ಉಪಯೋಗವಾಗುತ್ತಿಲ್ಲ.
೩.ಭಾರತೀಯ ಸಾಸಿವೆ ( ವ್ರಾ. ಜನ್ಸಿಯಾ):
ಬದಲಾಯಿಸಿಭಾರತದ ಸಾಸಿವೆ ಸ್ವಯಂ ಫಲವತ್ತಾದ ಜಾತಿ ಮತ್ತು ಇದು ಹೆಚ್ಚು ವ್ಯತ್ಯಾಸ ಹೊಂದಿರುವ ವಾರ್ಷಿಕ ಬೆಳೆ. ಬುಡದಲ್ಲಿ ಸಂಕುಚಿತವಾಗಿರುವ ಎಲೆಗಳು ಟೋರಿಯಾ ಮತ್ತು ಸರ್ಸೋಲ್‌ನಂತೆ ದಂಟಿಗೆ ಸುತ್ತುವರೆದಿರುವುದಿಲ್ಲ. ರಾಯ್ ಅವೆರಡಕ್ಕಿಂತ ನಿಧಾನವಾಗಿ ಬಲಿಯಾಗುತ್ತದೆ. ಬೀಜಗಳು ಗಾತ್ರದಲ್ಲಿ ಚಿಕ್ಕದು ಮತ್ತು ಬಣ್ಣದಲ್ಲಿ ಕೆಂಪು ಬೂದು ಬಣ್ಣ ಹೊಂದಿರುತ್ತದೆ.ಇದನ್ನು ಬಿಹಾರ ಉತ್ತರಪ್ರದೇಶ ಮತ್ತು ಬಂಗಾಳದಲ್ಲಿ ಸಾಮಾನ್ಯವಾಗಿ ಇದನ್ನು ಬೆಳೆಯುತ್ತಾರೆ ಹಾಗೂ ಅನೇಕ ಪ್ರದೇಶಗಳಲ್ಲಿಯೂ ಕೂಡ ಇದನ್ನು ಕಾಣಬಹುದು.ಭಾರತೀಯ ಬೀಜಗಳ ಅಪ್ಪಟ ನಮೂನೆಗಳಲ್ಲಿ ಕೆಲವರು ಕೇವಲ ೦.೪೨% ಚಂಚಲ ತೈಲವನ್ನು ಪಡೆದಿರುವರು. ಬೀಜಗಳ ಚಂಚಲತೆಯ ಇಳುವರಿ ಮತ್ತು ಅದರಲ್ಲಿರುವ ಘಟಕಗಳ ಬಗ್ಗೆ ಪುನಃ ಪರೀಕ್ಷೆ ನಡೆಸುವ ಅಗತ್ಯವಿದೆ.
ಸಂಯೋಜನೆ
ಬದಲಾಯಿಸಿಬೀಜಗಳಲ್ಲಿ ಇರುವುದು - ತೇವಾಂಶ ೭.೨% ಸಾರಜನಕ ಪದಾರ್ಥ ೨೭.೬ % ೨೯.೭% ಸಾರಜನಕ ರಹಿತ ಸಾರ ೩% ಮತ್ತು ಬೂದಿ ೪.೫% ಬೀಜಗಳಲ್ಲಿ ಸಿನಾಲ್ ಬಿನ್ ಎಂಬ ಗ್ಲೆಕೊಸೈಡ್ ಮತ್ತು ಮೈರೊಸಿನ್ ಎಂಬ ಕಿಣ್ವವು ಇರುತ್ತದೆ. ನೀರು ಸೇರಿದಾಗ ಕಿಣ್ವವು ಸಿನಾಲ್ ಬಿನ್ ಅನ್ನು ವಿಭಜಿಸಿ ಆಕ್ರಿನಿಲ್ ಐಸೋತಯೋಸಯನೇಟ್, ಸೈನಪಿನ್ ಆ್ಯಸಿಡ್ ಸಲ್ಫೇಟ್ ಮತ್ತು ಡೆಕ್ಸ್ಟ್ರೋಸ್ಗಳನ್ನು ಉತ್ಪತ್ತಿ ಮಾಡುತ್ತದೆ. ಚಂಚಲತೆಯ ಇಳುವರಿ ಕೇವಲ ೦.೧೬% ಆಗಿರುತ್ತದೆ
ಉಪಯೋಗಗಳು
ಬದಲಾಯಿಸಿಬ್ರಾ. ಅಲ್ಪ ಬೀಜಗಳನ್ನು ಹಾಗೆ ಉಪಯೋಗಿಸುವುದು ಅಪರೂಪ. ಅವುಗಳನ್ನು ಕಪ್ಪು ಸಾಸಿವೆಯೊಂದಿಗೆ ಬೆರೆಸಿ ಉಪಯೋಗಿಸುತ್ತಾರೆ. ಇದನ್ನು ಎಣ್ಣೆ ತೆಗೆಯಲು ಹೆಚ್ಚು ಉಪಯೋಗಿಸುವುದಿಲ್ಲ. ಎಳೆ ಎಲೆ ಮತ್ತು ದಂಟುಗಳನ್ನು ಅಡಿಗೆ ಸೊಪ್ಪಾಗಿ ಉಪಯೋಗಿಸುತ್ತಾರೆ. ಈ ಬೆಳೆಯನ್ನು ಕೆಲವು ವೇಳೆ ಹಸಿರು ಗೊಬ್ಬರಕ್ಕಾಗಿಯೂ ಬಳಸುತ್ತಾರೆ.
ಉಲ್ಲೇಖಗಳು
ಬದಲಾಯಿಸಿ#ಡಾ. ರಾಜೇಶ್ವರಿ, ಮನೆಯಲ್ಲಿ ಪ್ರಕೃತಿ ಚಿಕಿತ್ಸೆ, ಸಪ್ನ ಬುಕ್ ಹೌಸ್, ಬೆಂಗಳೂರು, ೧೯೯೮.
#ಜೆ.ಎಸ್. ಪೃಥಿ, ಸಂಬಾರ ಜಿನಸಿಗಳು ಮತ್ತು ರುಚಿಕಾರಕಗಳು, ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ, ೧೯೯೫.