-ಸಾಪೇಕ್ಷ ವೆಚ್ಚದ ಸಿದ್ಧಾಂತ

ಈ ಸಿದ್ಧಾಂತವು ಡೇವಿಡ್ ರಿಕಾರ್ಡೊನಿಂದ ಮಂಡಿಸಲ್ಪಟ್ಟಿದೆ .ಎರಡು ದೇಶಗಳು ಬೇರೆ ಬೇರೆ ಸರಕುಗಳ ಉತ್ಪದನೆಯಲ್ಲಿ ನಿರಪೇಕ್ಷ ಅನುಕೂಲತೆಯನ್ನು ಹೊಂದಿದ್ದಾಗ ಆಂತಾರಾಷ್ಟೀಯ ವ್ಯಾಪರದಿಂದ ಎರಡು ದೇಶಗಳಿಗೂ ಪ್ರಯೋಜನಗಳು ಲಭಿಸುತ್ಥವೆ ಎಂಬ ಆಡಮ್ ಸ್ಮಿತ್ತಿನ ಅಭಿಪ್ರಾಯವನ್ನು ರಿಕಾರ್ಡೊ ಒಪ್ಪಿಕೊಂಡಿದ್ದಾನೆ .ಆದರೆ ರಿಕಾರ್ಡೊ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಯಾವುದೇ ಒಂದು ದೇಶಕ್ಕೆ ಎರಡು ಸರಕುಗಳ ಉತ್ಪದನೆಯಲ್ಲಿ ನಿರಪೇಕ್ಷ ಅನುಕೂಲ ಎಲ್ಲಾವಿದ್ದಾಗಲೂ ವ್ಯಾಪಾರವು ಪ್ರಯೋಜನಕಾರಿಯಾಗಿರುತ್ತದೆ ಎಂದು ವಾದಿಸಿದ್ದಾನೆ .೧೮೧೭ರಲ್ಲಿ ಪ್ರಕಟೊಸಿದ ' ರಾಜಕೀಯ ಅರ್ಥಶಾಸ್ತ್ರ ಮತ್ತು ತೆರಿಗೆಯ ತತ್ವಗಳು ' ಎಂಬ ತನ್ನ ಮಹತ್ವದ ಕೃತಿಯಲ್ಲಿ ಡೇವಿಡ್ ರಿಕಾರ್ಡೊ ಸಾಪೇಕ್ಷ ವೆಚ್ಚದ ಸಿದ್ಧಾಂತವನ್ನು ನಿರೂಪಿಸಿದ್ಧಾರನೆ.ತಮಗೆ ವಿಶೇಷ ಅನುಕೂಲತೆ ಇರುವ ಸರಕುಗಳ ಉತ್ಪಾದನೆಯಲ್ಲಿ ವೈಶಿಷ್ಟ್ಯತೆಯನ್ನು ಸಾದಿಸುವಿಕೆಯು ಎಲ್ಲ ದೇಶಗಳಿಗೂ ಪ್ರಯೋಜನಕಾರಿ ಎಂಬ ಭಾವನೆಯು ಇಂದಿಗೂ ಮನ್ನಣೆ ಪಡೆದಿದೆ .ರಿಕಾರ್ಡೊನ ಈ ಕೆಳಗಿನ ಹೇಳಿಕೆಯು ಈ ಈ ಅಂಶವನ್ನು ಸ್ಪಷ್ಟಪಡಿಸುತ್ತದೆ. "ಶ್ರಮವನ್ನು ಉತ್ತಮ ರೀತಿಯಲ್ಲಿ ವಿತರಣೆ ಮಾಡುವ ಮೂಲಕ ,ಪ್ರತಿಯೊಂದು ದೇಶವು ತನ್ನ ನೆಲೆ ,ಹವಾಗುಣ ,ಅದರ ಪ್ರಾಕೃತಿಕ ಅಥವಾ ಕೃತಕ ಅನುಕೂಲತೆಗಳಿಗೆ ಅನುಗುಣವಾದಂತಹ ಸರಕುಗಳನ್ನು ಉತ್ಪದಿಸುವ ಮೂಲಕ .ಮತ್ತು  ಆ ಸರಕುಗಳನ್ನು ಇತರ ದೇಶಗಳ ಸರಕುಗಳೊಡನೆ ವಿನಿಮಯಮಾಡಿಕೊಳ್ಳುವ  ಮೂಲಕ ನಮ್ಮ ಸುಖಾನುಭವಗಳನ್ನು ಹೆಚ್ಚಿಸಿ ಕೊಳ್ಳಬಹುದೆಂಬುದು ಮಾನವಕುಲದ ಸಂತೋಷಕ್ಕೆ ಮುಖ್ಯವಾದುದು."

ತನ್ನದೇ ಆದ ಪ್ರತಿಪಾದನೆಯಿಂದ ಶ್ರಮದ ಮೌಲ್ಯ ಸಿದ್ಧಾಂತದ ಮುಖಾಂತರ ರಿಕಾರ್ಡೊ ಸಾಪೇಕ್ಷ ವೆಚ್ಚ ಅನುಕೂಲತೆಯ ತತ್ವವನ್ನು ಅಭಿವೃದ್ಧಿ ಪಡಿಸಿದ್ದಾನೆ .ಈ ಸಿದ್ಧಾಂತದ ಪ್ರಕಾರ ಯಾವುದೇ ಸರಕಿನ ಮೌಲ್ಯವು ಅದರ ಶ್ರಮ ವೆಚ್ಚದ ಮೂಲಕ ನಿರ್ಧರಿಸಲ್ಪಡುತ್ತದೆ .ಅಂದರೆ ಪ್ರತಿಯೊಂಡಿಯು ವಸ್ತುವಿನ ಉತ್ಪದನೆಗೆ ಎಷ್ಟು ಶ್ರಮ ವೆಚ್ಚ ಆಗಿದೆಯೋ ಅದರ ಮೂಲಕ ಆ ವಸ್ತುವಿನ ಮೌಲ್ಯವನ್ನು ಅಳೆಯಲಾಗುತ್ತದೆ .

ಸಾಪೇಕ್ಷ ವೆಚ್ಚ ಅನುಕೂಲತೆ ಎಂದರೆ ಹೋಲಿಕೆಯಿಂದ ವ್ಯಕ್ತವಾಗುವ ವೆಚ್ಚದ ಅನುಕೂಲತೆ ಎಂದರ್ಥ .

ಸಾಪೇಕ್ಷ ವೆಚ್ಚದ ಸಿದ್ಧಾಂತದ ಕಲ್ಪನೆಗಳು :

೧. ಈ ಸಿದ್ಧಾಂತವು ಶ್ರಮದ ಮೌಲ್ಯ ಸಿದ್ಧಾಂತವನ್ನು ಆಧರಿದೆ.

೨. ಸಾಪೇಕ್ಷ ವೆಚ್ಚದ ಸಿದ್ಧಾಂತವು  ಎರಡು ದೇಶಗಳು ಮತ್ತು ಎರಡು ಸರಕುಗಳ ಮಾದರಿಯಾಗಿದೆ.

೩.ಉತ್ತ್ಪಾದನಾಂಗಗಳು ದೇಶದ ಒಳಗಡೆ ಚಲಿಸುತ್ತವೆ ಮತ್ತು ಅಂತರಾಷ್ಟ್ರೀಯವಾಗಿ ಸಂಪೂರ್ಣವಾಗಿ ಅಚಲನೆಯ ಗುಣವನ್ನು ಹೊಂದಿದೆ .

೪. ಅಂತರಾಷ್ಟ್ರೀಯ ವ್ಯಾಪಾರಕ್ಕೆ ಯಾವುದೇ ರೀತಿಯ ನಿರ್ಬಂಧಗಳಿರುವುದಿಲ್ಲ .

೫.ಉತ್ಪದನೆಯಲ್ಲಿ ಸ್ಥಿರ ವೆಚ್ಚದ ನಿಯಮವನ್ನು ಆಚರಣೆಯಲ್ಲಿರುತದೆ .

ಉದಾಹರಣೆ :ಭಾರತವು  ಒಂದು ಗಂಟೆಯಲ್ಲಿ ೬ ಕ್ವಿಂಟಲ್  ಗೋಧಿ ಉತ್ಪಾದಿಸುತ್ತದೆ ಅಥವಾ ೪ ಕ್ವಿಂಟಲ್ ಹತ್ತಿ  ಉತ್ಪಾದಿಸುತ್ತದೆ.ಶ್ರೀಲಂಕಾ ಒಂದು ಗಂಟೆಯಲ್ಲಿ ೧ ಕ್ವಿಂಟಲ್  ಗೋಧಿ ಉತ್ಪಾದಿಸುತ್ತದೆ ಅಥವಾ ೨ ಕ್ವಿಂಟಲ್ ಹತ್ತಿ  ಉತ್ಪಾದಿಸುತ್ತದೆ.ಭಾರತವು  ಒಂದು ಗಂಟೆಯಲ್ಲಿ ೬ ಕ್ವಿಂಟಲ್  ಗೋಧಿ ಉತ್ಪಾದಿಸುತ್ತದೆ ಅಥವಾ ೪ ಕ್ವಿಂಟಲ್ ಹತ್ತಿ  ಉತ್ಪಾದಿಸುತ್ತದೆ.ಶ್ರೀಲಂಕಾ ಒಂದು ಗಂಟೆಯಲ್ಲಿ ೧ ಕ್ವಿಂಟಲ್  ಗೋಧಿ ಉತ್ಪಾದಿಸುತ್ತದೆ ಅಥವಾ ೨ ಕ್ವಿಂಟಲ್ ಹತ್ತಿ  ಉತ್ಪಾದಿಸುತ್ತದೆ. ಈ ಉದಾಹರೆಣೆಯಲ್ಲಿ ಭಾರತವು ಗೋಧಿ ಹಾಗು ಹತ್ತಿ ಎರಡು ಸರಕುಗಳನ್ನು ಶ್ರೀಲಂಕಕ್ಕಿಂತ ಕಡಿಮೆ ವೆಚ್ಚದಲ್ಲಿ ಉತ್ಪಾದಿಸಲು ಶಕ್ತವಾಗಿದೆ..ಭಾರತಕ್ಕೆ ಹಾಗು ಶ್ರೀಲಂಕಾಗೆ ೧೨ ಗಂಟೆ ಒಟ್ಟು ಸಮಯವಿದೆ. ಇರುವ ೧೨ ಗಂಟೆಯಲ್ಲಿ ಎರಡು ದೇಶಗಳು ಗೋಧಿ ಮತ್ತು  ಹತ್ತಿ ಉತ್ಪಾದಿಸಲು ೬ ಗಂಟೆಗಳನ್ನು ಅನುಕ್ರಮವಾಗಿ ಬೆಳೆಸುತ್ತಾರೆ.ಒಟ್ಟು ೧೨ ಗಂಟೆಗಳನ್ನು ಉಪಯೋಗಿಸುತ್ತಾರೆ.ಭಾರತವು ೩೬ ಕ್ವಿಂಟಲ್ ಗೋಧಿ ಹಾಗು ೨೪ ಕ್ವಿಂಟಲ್ ಹತ್ತಿ ಉತ್ಪಾದಿಸುತ್ತದೆ. ಶ್ರೀಲಂಕಾ ೬ ಕ್ವಿಂಟಲ್ ಗೋಧಿ ಹಾಗು ೧೨ ಕ್ವಿಂಟಲ್ ಹತ್ತಿ ಉತ್ಪಾದಿಸುತ್ತದೆ. ಒಟ್ಟು ಲೋಕದಲ್ಲಿ ೪೨ ಕ್ವಿಂಟಲ್ ಗೋಧಿ ಮತ್ತು ೩೬ ಕ್ವಿಂಟಲ್ ಹತ್ತಿ  ಉತ್ಪಾದನೆಗೊಂಡಿತು.ಭಾರತವು ಗೋಧಿ ಮತ್ತು ಹತ್ತಿ ಎರಡನ್ನು ಕಡಿಮೆ ವೆಚ್ಚದಲ್ಲಿ ಶ್ರೀಲಂಕಕ್ಕಿಂತ ಉತ್ಪಾದಿಸಬಲ್ಲವಾಗಿದೆ. ಅಂತರಾಷ್ಟ್ರೀಯ ವ್ಯಾಪಾರವು ಇಲ್ಲದಿದ್ದ ಪಕ್ಷದಲ್ಲಿ ಅದು ಎರಡು ಸರಕುಗಳನ್ನು ಉತ್ಪಾದಿಸುತಿತ್ತು. ಉತ್ಪಾದನ ವೆಚ್ಚದ ದೃಷ್ಟಿಯಿಂದ ಎರಡು ಸರಕುಗಳ ಉತ್ಪಾದನೆಯಲ್ಲಿ ಭಾರತಕ್ಕೆ ಶ್ರೀಲಂಕಕ್ಕಿಂತ ಹೆಚ್ಚಿನ ಅನುಕೂಲತೆ ಇರುವುದಾದರು ಶ್ರೀಲಂಕಕ್ಕೆ ಹತ್ತಿಯ ಉತ್ಪಾದನೆಯಲ್ಲಿ ಸಾಪೇಕ್ಷ ಅನುಕೂಲತೆ ಹೆಚ್ಚಾಗಿದೆ.

ಅಂತರಾಷ್ಟ್ರೀಯ ವ್ಯಾಪಾರದಿಂದ ಬರುವ ಲಾಭಕ್ಕಾಗಿ ಶ್ರೀಲಂಕಾ ಸಂಪೂರ್ಣವಾಗಿ ೧೨ ಗಂಟೆಯನ್ನು ಹತ್ತಿ ಉತ್ಪಾದಿಸಲು  ಬೆಳಸುತ್ತದೆ .ಅಂತರಾಷ್ಟ್ರೀಯ ವ್ಯಾಪಾರದಿಂದ  ಬರಬಹುದಾದ ಲಾಭಕ್ಕಾಗಿ ಭಾರತವು ೮ ಗಂಟೆ ಬೆಳಸಿಕೊಂಡು ಗೋಧಿಯನ್ನು ಹಾಗು ೪ ಗಂಟೆ ಬೆಳಸಿಕೊಂಡು ಹತ್ತಿಯನ್ನು ಉತ್ಪಾದಿಸುತ್ತೆದೆ.ಇದರಿಂದ ಭಾರತ ೪೮ ಕ್ವಿಂಟಲ್ ಗೋಧಿ ಮತ್ತು ೧೬ ಕ್ವಿಂಟಲ್ ಹತ್ತಿಯನ್ನು ಉತ್ಪಾದಿಸುತ್ತೆದೆ .ಶ್ರೀಲಂಕಾ ೦ ಕ್ವಿಂಟಲ್ ಗೋಧಿಯನ್ನು ಮತ್ತು ೨೪ ಕ್ವಿಂಟಲ್ ಹತ್ತಿಯನ್ನು ಉತ್ಪಾದಿಸುತ್ತೆದೆ.ಲೋಕದಲ್ಲಿ ಒಟ್ಟು ೪೮ ಕ್ವಿಂಟಲ್ ಗೋಧಿ ಹಾಗು ೪೦ ಕ್ವಿಂಟಲ್ ಹತ್ತಿ ಉತ್ಪಾದಿಸಲಾಗಿದೆ.ಒಟ್ಟು ಗೋಧಿ ಹಾಗು ಹತ್ತಿಯ ಉತ್ಪಾದನೆ ಹೆಚ್ಚಿದೆ.

ವ್ಯಾಪಾರದ ಲಾಭ ನಷ್ಟ ಗಣಿತವನ್ನು ಮಾಡಿದಾಗ ತಿಳಿಯುವುದೇನೆಂದರೆ ೩ ಕ್ವಿಂಟಲ್ ಗೋಧಿಯನ್ನು ೨ ಕ್ವಿಂಟಲ್ ಹತ್ತಿಗಿಂತ ಹೆಚ್ಚು ಹಾಗು ೬ ಕ್ವಿಂಟಲ್ ಹತ್ತಿಗಿ೦ತ ಕೆಳಗೆ ವ್ಯಾಪಾರ ಮಾಡಿದರೆ ,ಭಾರತಕ್ಕೂ ಹಾಗು ಶ್ರೀಲಂಕಾಗೂ ಲಾಭ ದೊರಕುತ್ತದೆ .