ಸದಸ್ಯ:Tejaswini.rao/sandbox
ಕರೀಶಕ: ಕರೂಷ ದೇಶಕ್ಕೆ ಇನ್ನೊಂದು ಹೆಸರು. ಇಂದ್ರ ವೃತ್ತನನ್ನು ಕೊಂದು ಬ್ರಹ್ಮಹತ್ಯೆಗೆ ಗುರಿಯಾದಾಗ ಋಷಿಗಳು, ದೇವತೆಗಳು ಒಟ್ಟುಗೂಡಿ ಇಂದ್ರನ ದೇಹದಲ್ಲಿದ್ದ ಬ್ರಹ್ಮಹತ್ಯಾ ಪಾತಕವನ್ನು ಹೊರಕ್ಕೆ ತಳ್ಳಿದರು. ಆ ಪಾತಕ ಬಿದ್ದ ಭೂಮಿಗೆ ಕರೀಷಕ ಅಠವಾ ಕರೂಷ ಎಂದು ಹೆಸರಾಯಿತು. ಇದು ಈಗಿನ ಬಿಹಾರ್ ಪ್ರಾಂತ್ಯಕ್ಕೆ ಸೇರಿದ ಷಹಾಬಾದ್ ಜಿಲ್ಲೆಯ ಪೂರ್ವ ಭಾಗವೆಂದು ಹೇಳಲಾಗಿದೆ. ಪಾಂಡವರ ಕಾಲದಲ್ಲಿ ದಂತವಕ್ರ ಇಲ್ಲಿ ರಾಜ್ಯಭಾರ ಮಾಡುತ್ತಿದ್ದನೆಂದು ಮಹಾಭಾರತದಿಂದ ತಿಳಿದುಬರುತ್ತದೆ.
ಕರುಂ:ಅಸ್ಸೀರಿಯಕ್ಕೂ ಅನಟೋಲಿಯದ ನಗರಗಳಿಗೂ ನದುವಣ ವ್ಯಾಪಾರವನ್ನು ನಿಯಂತ್ರಿಸುತ್ತಿದ್ದ ವಾಣಿಜ್ಯ ಸಂಸ್ಥೆ. ಸರಕುಗಳ ಸಾಗಣೆ, ಹಾದಿಯಲ್ಲಿ ಅವುಗಳ ರಕ್ಷಣೆ,ವರ್ತಕರಿಗೆ ಬರಬೇಕಾದ ಬಾಕಿಗಳ ಮೇಲ್ವಿಛಾರಣೆ-ಇವು ಈ ಸಂಸ್ಥೆಯ ಮುಖ್ಯ ಹೊಣೆಗಳಾಗಿದ್ದವು. ನಗದು ಹಣ ರವಾನೆಯ ಅಪಾಯಗಳನ್ನು ತಪ್ಪಿಸಲು ಉದ್ದರಿ ಪತ್ರದ ಸರಳ ವ್ಯವಸ್ಥೆಯೊಂದನ್ನು ಇದು ನಿರ್ವಹಿಸುತ್ತಿತ್ತು. ಬೆಲೆಗಳ ನಿಗದಿ, ವ್ಯಾಪಾರ ಸಂಬಂಧವಾದ ವ್ಯಾಜ್ಯಗಳ ತೀರ್ಮಾನ-ಇವು ಸಹ ಇದರ ಪರಿಮಿತಿಗೊಳಪಟ್ಟಿತ್ತು. ಸಾಲಕ್ಕೆ ಅಗತ್ಯವಾದ ಆಧಾರಗಳನ್ನು ದೊರಕಿಸಿ ಕೊಡುವ, ಸಾಲ ತೀರಿಸಲು ಋಣೆಗೆ ಶಕ್ತಿಯುಂಟೆ ಎಂಬುದುನ್ನು ಪರಿಶೀಲಿಸುವ ಹೊಣೆಯೂ ಈ ಸಂಸ್ಥೆಯದಗಿತ್ತು. ಈ ಸಂಸ್ಥೆಯ ಮುಖ್ಯಾಧಿಕಾರಿಗೆ ಲಿಮ್ಮು ಎನ್ದು ಹೆಸರು. ಅವನ ಅಧಿಕಾರಾವಧಿ ಒಂದು ವರ್ಷ. ಪ್ರತಿಯೊಬ್ಬ ಲಿಮ್ಮುವೂ ಯಾವ ವರ್ಷ ಅಧಿಕಾರದಲ್ಲಿದ್ದನೋ ಆ ವರ್ಷಕ್ಕೆ ಅನಂತರ ಆತನ ಹೆಸರನ್ನೆ ಇಡುವುದು ಅಸ್ಸೀರಿಯದ ಸಂಪ್ರದಾಯವಾಗಿತ್ತು. ಅನಟೋಲಿಯದ ಒಂದು ನಗರದಲ್ಲಿ ಲಿಮ್ಮುವಾಗಿ ಅಧಿಕಾರ ನದೆಸಿದವರ ಪೈಕಿ ೮೦ ರಿಂದ ೧೦೦ರ ವರೆಗೆ ಹೆಸರುಗಳನ್ನು ಗುರುತಿಸುವುದು ಸಾಧ್ಯವಾಗಿದೆ. ಭಾರತದಲ್ಲಿ ವಿಷೇಶವಾಗಿ ಕರ್ನಾಟಕದಲ್ಲಿ ಐಹೊಳೆಯಿಂದ 'ಅಯ್ಯಾವೊಳೆ ಐನೂರ್ವರು' ಎಂಬ ವೃತ್ತಿ ಸಂಘ ಈ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದುದನ್ನು ಇಲ್ಲಿ ನೆನೆಯಬಹುದು.
ಕರುಗಳ ಪಾಲನೆ: ಕರುವಿನ ಪಾಲನೆ ಪ್ರಾಯಶಃ ಹಸು ಗಬ್ಬವಾದೊಡನೆಯೇ ಆರಂಭವಾಗುವುದು. ಗಬ್ಬದ ಹಸುವಿಗೆ ಸಮತೂಕದ ಆಹಾರ ಗರ್ಭಾವಧಿಯಲ್ಲಿ ದೊರೆಯಬೇಕು; ಅದಕ್ಕೆ ವ್ಯಾಧಿಗಳು ಬರದಂತೆ ಎಚ್ಚರ ವಹಿಸಬೇಕು; ಸಾಕಷ್ಟು ವಿಶ್ರಾಂತಿಯೂ ದೊರೆಯಬೇಕು. ಇವುಗಳ ಪರಿಣಾಮವಾಗಿ ಹುಟ್ಟುವ ಎಳೆಗರು ದೃಢಕಾಯದ್ದಾಗಿದ್ದು. ಆರೋಗ್ಯ ಪೂರ್ಣವಾಗಿರುವುದು. ಕರು ಹುಟ್ಟುವುದು ತಾಯಿ ಹಸುವಿಗೆ ಗರ್ಭಮೂಡಿ ಒಂಭತ್ತು ತಿಂಗಳ ತರುವಾಯ. ಹುಟ್ಟಿದ ಕರುವಿನ ಮೂಗು ಬಾಯಿಯಲ್ಲಿರುವ ಶ್ಲೇಷ್ಮ