ಸದಸ್ಯ:T Archana/ನನ್ನ ಪ್ರಯೋಗಪುಟ

ಬಾಗುರುಂಬಾ

ಬಾಗುರುಂಬಾ ನೃತ್ಯವು ಭಾರತದ ಅಸ್ಸಾಂ ರಾಜ್ಯದಲ್ಲಿ ಅಭ್ಯಾಸ ಮಾಡುವ ಮಹಿಳಾ ಜಾನಪದ ನೃತ್ಯವಾಗಿದೆ. ಈ ನೃತ್ಯವನ್ನು ಸ್ತ್ರೀಯರಿಂದ ಪ್ರದರ್ಶಿಸಲಾಗುತ್ತದೆ ಮತ್ತು ವರ್ಣರಂಜಿತ ವೇಷಭೂಷಣಗಳನ್ನು ಒಳಗೊಂಡಿದೆ. ಬಾಗುರುಂಬಾ ನೃತ್ಯವು ಚಿಟ್ಟೆಗಳನ್ನು ಹೋಲುವ ಚಲನೆಯನ್ನು ಹೊಂದಿದೆ, ಆದುದರಿಂದ ಬಾಗುರುಂಬಾ ನೃತ್ಯವನ್ನು ಚಿಟ್ಟೆ ನೃತ್ಯ ಎಂದೂ ಕರೆಯಲಾಗುತ್ತದೆ. ಈ ನೃತ್ಯ ಪ್ರಕಾರವು ಬೋಡೋ ಎಂದು ಕರೆಯಲ್ಪಡುವ ಭಾರತೀಯ ಬುಡಕಟ್ಟು ಜನಾಂಗಕ್ಕೆ ಸೇರಿದೆ ಮತ್ತು ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರಿಸಲಾಗಿದೆ. ಬಾಗುರುಂಬಾ ನೃತ್ಯವನ್ನು ಸಾಮಾನ್ಯವಾಗಿ ಬಿಡುಬಾ ಸಂಕ್ರಾಂತಿಯಲ್ಲಿ ಅಥವಾ ಏಪ್ರಿಲ್ ಮಧ್ಯದಲ್ಲಿ ಬೋಡೋಸ್ ನ ಬಿವಿಶಾಗು ಹಬ್ಬದ ಸಮಯದಲ್ಲಿ ನಡೆಸಲಾಗುತ್ತದೆ. ಬಾಗುರುಂಬಾ ನೃತ್ಯವನ್ನು ಎಲ್ಲಾ ನೃತ್ಯಗಳ ಪೈಕಿಯಲ್ಲಿ ಅಸ್ಸಾಂನ ಅತ್ಯುತ್ತಮ ಮತ್ತು ಆಕರ್ಷಕ ನೃತ್ಯವೆಂದು ಪರಿಗಣಿಸಲಾಗುತ್ತದೆ. ಬೋಡೋ ಬುಡಕಟ್ಟು ಜನಾಂಗದವರು ಸಾವಿರಾರು ವರ್ಷಗಳಿಂದ ಹಸಿರು ಪರಿಸರದಲ್ಲಿಯೇ ವಾಸಿಸುತ್ತಿದ್ದಾರೆ ಆದುದರಿಂದ ಈ ಜಾನಪದ ನೃತ್ಯದ ಸಾರವು ಪ್ರಕೃತಿಯಿಂದ ಹುಟ್ಟಿಕೊಂಡಿದೆ ಎಂದು ಹೇಳಲಾಗುತ್ತದೆ. ಮಹಿಳೆಯರು ಡೊಖ್ನಾ,ಅರೋನೈ ಮತ್ತು ಫ಼ಸ್ರಾ ಕರೆಯಲ್ಪಡುವ ಸಾಂಪ್ರದಾಯಿಕ ವರ್ಣರಂಜಿತ ಉಡುಪನ್ನು ಧರಿಸಿ ನೃತ್ಯವನ್ನು ಪ್ರದರ್ಶಿಸುತ್ತಾರೆ.

ಬೋಡೋ ಪುರಾಣದ ಪ್ರಕಾರ, ಯುಫ಼ೋರ್ಬಿಯಾ ಕುಲಕ್ಕೆ ಸೇರಿದ ಸಿಜು ಸಸ್ಯದಿಂದ ಪ್ರತಿನಿಧಿಸಲ್ಪಡುವ 'ಭಾಥೌ' ಎಂದು ಕರೆಯಲ್ಪಡುವ ಸರ್ವೋಚ್ಛ ದೇವತೆಯ ಒಲವನ್ನು ಬಾಗುರುಂಬಾ ನೃತ್ಯವು ಹೊಂದಿದೆ.ಶಾಂತಿಯುತವಾದ ಸ್ವರೂಪವನ್ನು ಈ ನೃತ್ಯವು ಹೊಂದಿದೆ ಮತ್ತು ಇದು ವಸಂತಕಾಲದ ಚೈತನ್ಯವನ್ನು ಪ್ರತಿನಿಧಿಸುತ್ತದೆ. ಬೋಡೋ ಬುಡಕಟ್ಟು ಜನಾಂಗದವರ ಮೂಲ ನೈಸರ್ಗಿಕ ನಂಬಿಕೆಗಳಲ್ಲಿ ಬಾಗುರುಂಬಾದ ಮೂಲವು ಕಂಡುಬರಬಹುದು,ಯಾಕೆಂದರೆ ಅದರ ಕೆಲವು ಹಾಡುಗಳು ಪ್ರಕೃತಿಯ ಸರಳ ಚಿತ್ರಗಳಾಗಿವೆ.

ಸಂಗೀತ ಉಪಕರಣಗಳು

ಬದಲಾಯಿಸಿ

ಪಿಟೀಲು ತರಹದ ಸೆರ್ಜಾ,ಉತ್ತರ ಭಾರತದ ಬಾನ್ಸೂರಿಯಂತಿರುವ ಸಿಫ಼ುಂಗ್,