ಮಾಹಿತಿ ಸಂವಹನ ಕ್ರಾಂತಿ

ಕಾಲಾಂತರದಲ್ಲಿ, ತಂತ್ರಜ್ಞಾನವು ಅಭಿವೃದ್ಧಿಯಾದಂತೆ ಸಂವಹನದ ಹೊಸ ಪ್ರಕಾರಗಳು ಹುಟ್ಟಿಕೊಂಡವಲ್ಲದೆ, ಅದರ ಕುರಿತಂತೆ ಹೊಸ ಚಿಂತನಾ ಲಹರಿ,ಆಲೋಚನೆಗಳು ವಿನ್ಯಾಸಗೊಂಡವು. ತಂತ್ರಜ್ಞಾನದ ಪ್ರಗತಿಯ ವೇಗವು ಸಂವಹನದ ಪ್ರಕ್ರಿಯೆಗಳನ್ನು ಕ್ರಾಂತಿಕಾರಕ ರೀತಿಯಲ್ಲಿ ಅಭಿವೃದ್ಧಿ ಹೊಂದುವಂತೆ ಮಾಡಿತು. ಸಂವಹನವು ಈ ಕೆಳಗಿನ ಮೂರು ಕ್ರಾಂತಿಕಾರಕ ಹಂತಗಳ ಮೂಲಕ ಹೇಗೆ ರೂಪಾಂತರಗೊಂಡಿತು ಎನ್ನುವುದನ್ನು ಸಂಶೋಧಕರು ಹೀಗೆ ವಿಭಜಿಸಿದ್ದಾರೆ:


1ನೇ ಹಂತದ ಮಾಹಿತಿ ಸಂವಹನ ಕ್ರಾಂತಿಯ ಅವಧಿಯಲ್ಲಿ, ಚಿತ್ರಸಂಕೇತಗಳೊಂದಿಗೆ ಮೊದಲ ಬರಹದ ಸಂವಹನ ಪ್ರಾರಂಭವಾಯಿತು. ಈ ಬರಹಗಳನ್ನು ಕಲ್ಲಿನಲ್ಲಿ ಕೆತ್ತಲಾಗಿತ್ತು, ಅವುಗಳನ್ನು ವರ್ಗಾಯಿಸಲು/ಬೇರೆಡೆಗೆ ಸಾಗಿಸಲು ತುಂಬಾ ಪ್ರಯಾಸದಾಯಕವಾಗಿತ್ತು. ಆ ಯುಗದಲ್ಲಿನ ಬರಹದ ಈ ಸಂವಹನವನ್ನು ಸುಲಭವಾಗಿ ಸಾಗಿಸುವಂತಿರಲಿಲ್ಲ, ಆದರೂ ಅವುಗಳು ಬಳಕೆಯಲ್ಲಿದ್ದವು.


2ನೇ ಹಂತದ ಮಾಹಿತಿ ಸಂವಹನ ಕ್ರಾಂತಿಯಲ್ಲಿ, ಕಾಗದ, ಪಪೈರಸ್‍‌, ಜೇಡಿಮಣ್ಣು, ಮೇಣ ಇತ್ಯಾದಿಗಳ ಮೇಲೆ ಬರೆಯಲು ಪ್ರಾರಂಭಿಸಿದರು. ಸಮಾನ ರೂಪದ ಅಕ್ಷರಗಳ ಬಳಕೆಯಿಂದ, ದೂರ ದೂರದ ಪ್ರದೇಶಗಳವರೆಗೂ ಈ ಭಾಷೆಯ ಏಕರೂಪತೆಯನ್ನು ಅಂಗೀಕರಿಸಲಾಯಿತು. ಇದಾದ ಸ್ವಲ್ಪ ಸಮಯದ ನಂತರ ಗುಟನ್ಬರ್ಗ್‌ ಮುದ್ರಣ ಯಂತ್ರದ ಬಳಕೆಗೆ ಕಾರಣನಾದನು. ಅದನ್ನು ಬಳಸಿ ಗುಟನ್ಬರ್ಗ್‌, ಮೊದಲು ಬೈಬಲ್‌ ಗ್ರಂಥ ಮುದ್ರಿಸಿದನು. ಆ ಸಮಯದಲ್ಲಿ ವಿಶ್ವದೆಲ್ಲೆಡೆ ಬರಹಗಳನ್ನು ಇತರರು ವೀಕ್ಷಿಸಲು/ಓದಲು ವರ್ಗಾಯಿಸಬಹುದಾಗಿತ್ತು. ಈಗ ಬರಹ ಸಂವಹನವನ್ನು ದಾಖಲಿಸಬಹುದಾಗಿದೆ ಮತ್ತು ವರ್ಗಾಯಿಸಬಹುದಾಗಿದೆ.