ಗ್ರಂಥಗಳ ಮಹತ್ವ


ಪುಸ್ತಕಗಳು ನಮ್ಮ ಬದುಕನ್ನು ಬೆಳಗಬಲ್ಲ ದೀವಿಗೆಗಳು. ಮನುಷ್ಯ ಪುಸ್ತಕಗಳಿಂದ ತನ್ನದಲ್ಲದ ಅನುಭವಗಳನ್ನು ತನ್ನದಾಗಿಸಿಕೊಳ್ಳುತ್ತಾನೆ. ಆ ಮೂಲಕ ತನ್ನ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಾನೆ, ವ್ಯಕ್ತಿತ್ವವನ್ನು ಅರಿತುಕೊಳ್ಳುತ್ತಾನೆ. ಪುಸ್ತಕಗಳ ಓದು ಮನುಷ್ಯನನ್ನು ವಜ್ರವಾಗಿಸುತ್ತದೆ , ಬೆಳಕು ಅಲ್ಲಿ ಪ್ರತಿಫಲಿಸುತ್ತದೆ.

  ಪುಸ್ತಕಗಳನ್ನು ಓದುವುದು ,ಸಂಗ್ರಹಿಸುವುದು ನಮ್ಮ ಅತ್ಯುತಮ ಹವ್ಯಾಸಗಳಲ್ಲಿ ಒಂಧು. ತಾನಿರುವ ಸ್ತಳಾದಲ್ಲಿಯೇ ಲೋಕದ ಅನುಭವಗಳನ್ನು ಪಡೆಯುವ ಅವಕಾಶ ಲಭಿಸುತ್ತದೆ. 

ಬೇಕಾದ ವಿಚಾರವನ್ನು ,ಆಸಕ್ತಿ ಇರುವ ಸಂಗತಿಗಳನ್ನು ಪುಸ್ತಕಗಳಿಂದ ಪಡೆಯಬಹುದು. ಮನುಷ್ಯ ಪುಸ್ತಕಗಳ ಲೋಕದ ಮೂಲಕವೇ ಉಳಿದ ಲೋಕಗಳನ್ನು ಅರಿಯಲು ಸಾಧ್ಯ. ಪುರಾಣದ ಸಂಗತಿಗಳಿರಲಿ, ಪುರಾತನರ ಸಂಗೀತ-ಸಾಹಿತ್ಯ ವಿಚಾರಗಳಿರಲಿ, ಆಕಾಶದ ವಿಚಾರವಿರಲಿ,ಗ್ರಹ ನಕ್ಷತ್ರಗಳ ವಿಚಾರವಿರಲಿ ,ಜ್ಯೋತಿಷ್ಯವಾಗಲಿ ಎಲ್ಲವನ್ನೂ ಪುಸ್ತಕಗಳೇ ಒದಗಿಸುವುದು. ಪುಸ್ತಕಗಳು ಎರದಿದ್ಧರೆ ಮನುಷ್ಯ ಮೃಗದಂತಾಗುತ್ತಿದ್ದ.

ಪುಸ್ತಕಗಳು ನಮಗೆ ಬದುಕುವುದನ್ನು ,ವಿಚಾರ ಮಾಡುವುದನ್ನು ,ಆಲೋಚಿಸುವುದನ್ನು ಕಲಿಸುತ್ತವೆ. ಪುಸ್ತಕಗಳು ಓದುಗರಿಗೆ ಗುರುವಿದಾಂತೆ..ಸರಿಯಾದ ರೀತಿಯಲ್ಲಿ ವಿಚಾರಗಲ್ಲನ್ನು ತಿಳಿಸುತ್ತದೆ. ಏಕಾಂಗಿಯಾಗಿ ಕೊರಗುವವರಿಗೆ ಪುಸ್ತಕಗಳ ಮಹತ್ವ ಅರಿವಾದರೆ ಏಕಾಣ್ತದ ಭಯ ವಾಗದು.