ಎಂ. ಗೋವಿಂದ ಪೈ ( ಮಾರ್ಚ್ ೨೩, ೧೮೮೩ – ಸೆಪ್ಟೆಂಬರ್ ೬, ೧೯೬೩) ಕನ್ನಡದ ಪ್ರಪ್ರಥಮ "ರಾಷ್ಟ್ರಕವಿ"ಗಳಾಗಿ ಪ್ರಸಿದ್ಧರಾಗಿದ್ದಾರೆ. ಮಂಜೇಶ್ವರಕ್ಕೆ ಭಾರತದ ಸಾಂಸ್ಕೃತಿಕ ಭೂಪಟದಲ್ಲಿ ಸ್ಥಾನ ಒದಗಿಸಿಕೊಟ್ಟವರು ಗೋವಿಂದ ಪೈ. [೨] ೧೯೫೬ರಲ್ಲಿ ರಾಜ್ಯ ಪುನರ್‌ವಿಂಗಡಣೆಯಾದಾಗ ಕಾಸರಗೊಡು ಕೇರಳದ ಪಾಲಾಯಿತು. ಆಗ ಅವರು ಬಹಳ ಹಳಹಳಿಸಿದರು. ಗೋವಿಂದ ಪೈಗಳು ಕೊನೆಯ ತನಕ ತಮ್ಮ ಹೆಸರಿನೊಂದಿಗೆ ಮಂಜೇಶ್ವರ ವನ್ನು ಜೊತೆಗೂಡಿಸಿಕೊಂಡಿದ್ದರು. ಅವರ ಪಾಲಿಗೆ ಕಾಸರಗೋಡು ಕರ್ನಾಟಕದ ಅವಿಭಾಜ್ಯ ಅಂಗವಾಗಿತ್ತು.

ಬಾಲ್ಯ ಮತ್ತು ವ್ಯಾಸಂಗ

   ಗೋವಿಂದ ಪೈಗಳು ಮೂಲತಃ ಮಂಗಳೂರಿನವರು. ತಂದೆ ಮಂಗಳೂರು ತಿಮ್ಮಪೈಗಳು ಮತ್ತು ತಾಯಿ ದೇವಕಿಯಮ್ಮ.
ತಾಯಿಯ ತೌರುಮನೆ ಮಂಜೇಶ್ವರ. ಅವರು ಕಾಸರಗೋಡು ತಾಲೂಕಿನ ಮಂಜೇಶ್ವರದ ಅಜ್ಜನ ಮನೆಯಲ್ಲಿ ಮಾರ್ಚ್ ೨೩, 

೧೮೮೩ ರಂದು ಜನಿಸಿ ದರು.[೧][೩] ಅವರ ತಂದೆ ತುಂಬ ಸ್ಥಿತಿವಂತರು. ಆಗಿನ ಕಾಲಕ್ಕೆ ಸಾವಿರಾರು ರೂಪಾಯಿ ವಾರ್ಷಿಕ ಕಂದಾಯ ಕಟ್ಟುತಿದ್ದವರು.

   ಗೋವಿಂದ ಪೈಗಳ ಪ್ರಾಥಮಿಕ ಶಿಕ್ಷಣ ಮಂಗಳೂರಿನಲ್ಲಿಯೇ ಆಯಿತು. ಅವರು ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ 

ಇಂಟರ್‍ಮೀಡಿಯೆಟ್ಟಿನವರೆಗೆ ಶಿಕ್ಷಣ ಪಡೆದರು. ಖ್ಯಾತ ನವೋದಯ ಸಾಹಿತ್ಯದ ಆಚಾರ್ಯ ಪುರುಷರಾಗಿದ್ದ ಪಂಜೆ ಮಂಗೇಶರಾಯರು ಇವರಿಗೆ ಕನ್ನಡದ ಅಧ್ಯಾಪಕ ರಾಗಿದ್ದ ರು. ಹೆಚ್ಚಿನ ವ್ಯಾಸಂಗಕ್ಕಾಗಿ ಮದರಾಸಿಗೆ ( ಈಗಿನ ಚೆನ್ನೈಗೆ) ತೆರಳಿದರು. ನಂತರ ಪೈಯವರು ಮದ್ರಾಸಿನ ಕ್ರಿಶ್ಚಿಯನ್ ಕಾಲೇಜು ಸೇರಿದರು. ಅಲ್ಲಿ ಡಾ.ಎಸ್. ರಾಧಾಕೃಷ್ಣನ್ ಅವರು ಇವರ ಸಹಪಾಠಿಯಾಗಿದ್ದರು.

   ಬಿ.ಎ ತರಗತಿ ಕೊನೇ ವರ್ಷದ ಪರೀಕ್ಷೆ ನಡೆದಾಗಲೇ ತಂದೆಯ ಅನಾರೋಗ್ಯದ ಸುದ್ದಿ ತಿಳಿದು,ವ್ಯಾಸಂಗವನ್ನು ಬಿಟ್ಟು ಬಂದರು.
ಅವರ ತಂದೆಯ ಮರಣದ ನಂತರ ಪದವಿ ಪಡೆಯುವ ಗೋಜಿಗೆ ಹೋಗಲೇ ಇಲ್ಲ. ಬರೆದಿದ್ದ ಒಂದೇ ಪ್ರಶ್ನೆಪತ್ರಿಕೆ ಇಂಗ್ಲೀಷಿನಲ್ಲಿ 

ಪ್ರಥಮಸ್ಥಾನ ಪಡೆದು ಬಂಗಾರದ ಪದಕ ಪಡೆದರು. [೪]ಆದರೂ ಕೂತಿದ್ದ ಪ್ರಥಮ ಭಾಗ ಇಂಗ್ಲಿಷಿನಲ್ಲಿ ವಿಶ್ವವಿದ್ಯಾನಿಲಯದ ಸುವರ್ಣ ಪದಕ ಅವರಿಗೆ ದೊರೆಯಿತು. ಆದರೆ ಅವರ ಸಾಹಿತ್ಯದ ಅಧ್ಯಯನ ಜೀವನಪರ್ಯಂತ ನಿರಂತರವಾಗಿ ಮುಂದುವರೆಯಿತು.[

ಕೃತಿಗಳು

   ಗೊಲ್ಗೋಥಾ ಅಥವಾ ಯೇಸುವಿನ ಕಡೆಯ ದಿನ
   ವೈಶಾಖಿ ಅಥವಾ ಬುದ್ಧನ ಕೊನೆಯ ದಿನ (ಖಂಡ ಕಾವ್ಯ)
   ಹೆಬ್ಬೆರಳು
   Indiana
   ವಿಟಂಕ
   ಇಂಗಡಲು (ಆಯ್ದ ಕವನಗಳು)
   ಶ್ರೀಕೃಷ್ಣ ಚರಿತ್ರೆ
   ಕನ್ನಡದ ಮೊರೆ (ಭಾಷಣಗಳು ಮತ್ತು ಲೇಖನಗಳು)
   ತಾಯಿ ಮತ್ತು ನೋ ನಾಟಕಗಳು
       ಕುಮಸಾಕಾ
       ಕಾಯೊಮ್ ಕೋಮಾಚಿ
       ಸೊತೋಬಾ ಕೊಮಾಚಿ
       ಹಾಗೊರೋವೊ
       ತ್ಸುನೆಮಾಸ
       ಸೊಮಾಗೆಮಂಜಿ
       ಚೊರಿಯೊ
       ಶೋಜೊ
   ಗಿಳಿವಿಂಡು (ಕವನ ಸಂಕಲನ)
   ಗೀತಾಂಜಲಿ (ರವೀಂದ್ರನಾಥ ಠಾಗೋರರ ಗೀತಾಂಜಲಿಯ ಕನ್ನಡ ಅನುವಾದ)
   ಗೋವಿಂದ ಪೈ ಅವರ ಲೇಖನಗಳು ಮತ್ತು ಪ್ರಬಂಧಗಳು
   ಗೋವಿಂದ ಪೈ ಅವರ ಕೆಲವು ಪತ್ರಗಳು
   ಚಿತ್ರಭಾನು ಅಥವಾ ೧೯೪೨
   ಗೋವಿಂದ ಪೈ ಸಂಶೋಧನಾ ಸಂಪುಟ
   ನಂದಾದೀಪ (ಕವನ ಸಂಕಲನ)
   ಹೃದಯರಂಗ (ಕವನ ಸಂಕಲನ)