ಸದಸ್ಯ:Sunithap/sandbox
ಕಾಲದ ಮೇಲೆ ಸೂರ್ಯನ ನೆರಳು ಕಾಲದ ಮೇಲೆ ಸೂರ್ಯನ ನೆರಳು ಕಾಲ ವಿಭಜನೆಗಳು ಮೂರು ದಿನ ತಿಂಗಳು ಮತ್ತು ವರ್ಷ, ಈ ಮೂರರಲ್ಲಿದೆ. ಮಿಕ್ಕವು ನಮ್ಮ ಸೌಕರ್ಯಕ್ಕಾಗಿ ನಾವು ಕಲ್ಪಿಸಿಕೊಂಡದ್ದು ಅವುಗಳೇ ವಾರ, ಗಂಟೆ, ನಿಮಿಷ, ಸೆಕೆಂಡು, ಜಾವ, ಗಳಿಗೆ, ವಿಗಳಿಗೆ,ಕ್ಷಣಗಳು. ಕಾಲವನ್ನು ಅಳೆಯಲು ಕಾಲ ಗಮನ ಪರಿಜ್ಞಾನವನ್ನು ಪಡೆಯಲು ಒಂದು ಘಟನೆ ಇರಬೇಕು. ಎರಡು ಘಟನೆಗಳ ಮಧ್ಯದ ಅವಧಿಯನ್ನು ಇಟ್ಟುಕೊಂಡು ಕಾಲ ನಿರ್ಣಯ ಮಾಡಬಹುದು. ಆಕಾಶದ ಜೋತಿರ್ಗೋಳಗಳ ಚಲನೆಗಳು ಭೂಮಿಯ ಮೇಲಿನ ಮನುಷ್ಯನಿಗೆ ಕಾಲದ ಪರಿಜ್ಞಾನವನ್ನು ನೀಡುತ್ತದೆ. ರಾತ್ರಿಯ ನಂತರ ಹಗಲು, ಹಗಲಿನ ನಂತರ ರಾತ್ರಿ ತಪ್ಪದೆ ಬರುತ್ತದೆ. ಇದು ಮನುಷ್ಯನಿಗೆ ಕಾಳ ಗಣನೆಯನ್ನು ಮಾಡುವುದಕ್ಕೆ ಮೊದಲು ಸಹಾಯ ಮಾಡಿತು. ಇದೇ ನಿಸರ್ಗ ಗಡಿಯಾರ. ಒಂದು ಹಗಲು, ಒಂದು ರಾತ್ತಿ ಸೇರಿ ಒಂದು ದಿನವಾಯಿತು. ನಮ್ಮಂತೆಯೇ ಗ್ರೀಕರು, ರೋಮನ್ನರು ಸೂರ್ಯೋದಯವನ್ನೆ ದಿನದ ಆರಂಭವಾಗುತ್ತದೆ. ಅದಕ್ಕೊ ಒಂದು ಕಾರಣವಿದೆ.ಸೂರ್ಯೊದಯ ಸೂರ್ಯಸ್ತಮಾನಗಳು ವರ್ಷದಲ್ಲಿ ಒಂದೇ ಕಾಲಕ್ಕೆ ಬರುವುದಿಲ್ಲ. ವರ್ಷದಲ್ಲಿ 4 ದಿನಗಳು ಮಾತ್ರ 1) ಎಪ್ರಿಲ್ 15 2) ಜೂನ್ 15, 3) ಸೆಪ್ಟೆಂಬರ್ 1, 4) ಡಿಸೆಂಬರ್ 15. ಗಡಿಯಾರವು ಸೂರ್ಯ ಗತಿಯನ್ನು ಸರಿಯಾಗಿ ಅನುಸರಿಸುವುತ್ತಿರುವುದು ತಿಳಿದು ಬರುವುದು. ಈ 4 ದಿನಗಳು ಮಾತ್ರ ಗಡಿಯಾರದಲ್ಲಿ ಮಧ್ಯಾನ 12 ಗಂಟೆಯಾದಗ ಸೂರ್ಯ ಅತ್ಯುಚ್ಚ ಮಟ್ಟದಲ್ಲಿರುತ್ತಾನೆ.ಮಿಕ್ಕೆಲ್ಲಾ ದಿನಗಳಲ್ಲಿ ಗಡಿಯಾರಕ್ಕಿಂತ ಸೂರ್ಯನು ಒಂದೊಂದು ದಿನ ಮುಂದಾಗಿ ಒಂದೊಂದು ದಿನ ಹಿಂದಗಿ ಚಲಿಸುವಂತೆ ಕಾಣುತ್ತದೆ. ಈ ವ್ಯತ್ಯಸ ಫೆಬ್ರವರಿ , ನವೆಂಬರ್ ತಿಂಗಳಲ್ಲಿ ಸುಮಾರು 15 ನಿಮಿಷಗಳು ಇರುತ್ತದೆ. ಮಿಕ್ಕ ದಿನಗಳಲ್ಲಿ ಇದಕ್ಕಿಂತ ಕಡಿಮೆ ಇರುತ್ತದೆ.ಇದಕ್ಕೆ ಕಾರಣವೇನೆಂದರೆ ಸರಿಯಾಗಿ ಕ್ಲುಪ್ತ ಕಾಲವನ್ನೇ ತೋರಿಸುವ ಗಡಿಯಾರ ಇಲ್ಲ ದಿನಗಳ ನಿರ್ದಿಷ್ಟ ವೇಗದಲ್ಲಿ ತಿರುಗುತ್ತಿರುತ್ತದೆ. ಸೂರ್ಯನು ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುತ್ತಾನೆಂದು ನಾವು ಹೆಳುವುದು ನಿಜವಲ್ಲ. ವರ್ಷದಲ್ಲಿ ಎರಡು ದಿನಗಳು ಸೂರ್ಯ ಖಚಿತವಾಗಿ ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗುತ್ತಾನೆ. ಮಿಕ್ಕ ದಿನಗಳಲ್ಲಿ ಪೂರ್ವ ಪಶ್ಚಿಮ ರೇಖೆಯ ಉತ್ತರಕ್ಕೆ ಮಿಕ್ಕರ್ಥಕಾಲ ಈ ರೇಖೆಯ ದಕ್ಷಿಣಕ್ಕೆ ಉದಯಾಸ್ತಗಳಾಗುತ್ತದೆ. ಜೂನು 22 ರ ವೇಳೆಗೆ ಉತ್ತರದ ತುತ್ತ ತುದಿಯಲ್ಲಿ ಉದಯಸ್ತವಾಗುತ್ತದೆ. ಇದನ್ನು ಉತ್ತರಾಯಣದ ಅಂತ್ಯವೆನ್ನುತ್ತಾರೆ. ಸುಮಾರು ಡಿಸೆಂಬರ್ 22 ನೇ ತಾರಿಖು ದಕ್ಷಿಣದ ತುತ್ತ ತುದಿಯಲ್ಲಿ ಉದಯಸ್ತಗಳು ಆಗುತ್ತದೆ. ಅದನ್ನು ದಕ್ಷಿಣದ ಅಂತ್ಯವೆಂದು ಕರೆಯುತ್ತಾರೆ. ಮಾರ್ಚ್ ಸೆಪ್ಟೆಂಬರ್ 22 ನೇ ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗುತ್ತಾನೆ. ಇದನ್ನು ವಿಘವತ್ ಎನ್ನುತ್ತಾರೆ. ಇದೇ ಬಾನ ಭಾಸ್ಕರನೋಂದಿಗೆ ಹೆಜ್ಜೆಯಿಟ್ಟ ಗಡಿಯಾರ.