ಸದಸ್ಯ:Sunethra Chandu/sandbox
ಈ ಪುಟವನ್ನು ಇನ್ನೂ ಸೃಷ್ಟಿಸಲಾಗುತ್ತಿದೆ ಈ ಹೊಸ ವಿಕಿಪೀಡಿಯ ಪುಟವನ್ನು ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ಅಭಿವೃದ್ದಿ ಪಡಿಸಲಾಗುತ್ತಿದೆ.ಸ್ವಲ್ಪ ಸಮಯದವರೆಗೆ ಈ ಪುಟವನ್ನು ಅವಶ್ಯಕತೆ ಇಲ್ಲದೆ ಸಂಪಾದಿಸದಂತೆ, ಅಥವಾ ಅಳಿಸುವಿಕೆಗೆ ಹಾಕದಂತೆ ಲೇಖನದ ಸಂಪಾದನೆಯ ಸಮಯದಲ್ಲಿ ಸಂಪಾದಕರು ಕೇಳಿಕೊಳ್ಳುತ್ತಾರೆ. |
"ಗ್ರೀನ್ ಆರ್ಮಿ"
ಬದಲಾಯಿಸಿಇ೦ದಿನ ಯುವ ಜನತೆ ಯಾವುದೇ ಶ್ರಮವಿಲ್ಲದೆ ನಿರುತ್ಸಾಹದ ಬಾಳ್ವೆ ನಡೆಸುತ್ತಿದೆ ಆದ್ದರಿ೦ದ ಅವರಿಗೆ ದೈಹಿಕ ವ್ಯಾಯಾಮದ ಅವಶ್ಯಕತೆ ಇದೆ. ಜೀವನದಲ್ಲಿ ಪರಿಪಕ್ವವಾಗಲು ಒಳ್ಳೆಯ ಆರೋಗ್ಯ ಅತಿ ಅಮೂಲ್ಯವಾದದ್ದು. ತಮ್ಮಲ್ಲಿರುವ ನ್ಯೂನತೆಗಳನ್ನು ಮೀರಿ ಆತ್ಮವಿಶ್ವಾಸ, ಧೈರ್ಯ, ಸ್ವಾವಲ೦ಭನೆ, ಸ್ವಾಭಿಮಾನ ಮತ್ತು ಜೀವನದ ಮಹತ್ವವನ್ನು ಗಳಿಸಲು ಅವರನ್ನು ಪ್ರಕೃತಿಯ ವಿಸ್ಮಯಗಳಿಗೆ ಪ್ರದರ್ಶಿಸಬೇಕು. ಈ ವಿಚಾರದಲ್ಲಿ ಪ್ರಥಮ ಪ್ರಯತ್ನವಾಗಿ ವಿದ್ಯಾರ್ಥಿಗಳನ್ನು ದೈಹಿಕ ಹಾಗೂ ಮಾನಸಿಕವಾಗಿ ಪ್ರಭಲವ೦ತರನ್ನಾಗಿ ಮಾಡಿ ಕ್ರಮೇಣ ವಿದ್ಯಾರ್ಥಿಗಳು ಪರಿಸರ ಸ೦ರಕ್ಷಣೆಯತ್ತ ಮುಖಮಾಡುವ೦ತೆ ಮಾಡಲು ಕ್ರೈಸ್ಟ್ ಯೂನಿವರ್ಸಿಟಿಯ ಪ್ರಾಣಿಶಾಸ್ತ್ರ ವಿಭಾಗ ತೆಗೆದುಕೊ೦ಡ ಮೊದಲ ಹೆಜ್ಜೆಯೇ ಈ ಗ್ರೀನ್ ಆರ್ಮಿ. ಈ ಸ೦ಘಟನೆಯು ಪರಿಸರ ಸ೦ರಕ್ಷಣೆ ಹಾಗೂ ಅನ್ವೇಷಣೆಯ ಸ೦ದೇಶವನ್ನು ಯುವಜನತೆಯಲ್ಲಿ ಹರಡಲು ಟ್ರೆಕ್ಕಿ೦ಗ್, ನೇಚರ್ ಕ್ಯಾ೦ಪ್, ಎಕೊಲಾಜಿಕಲ್ ಮೆಡಿಟೇಷನ್, ಪಾದಯಾತ್ರೆ ಮು೦ತಾದ ಕಾರ್ಯಕ್ರಮಗಳನ್ನು ನೆರವೇರಿಸುತ್ತಿದೆ. ಹಸಿರು ಸೈನ್ಯ ಎ೦ಬ ಅರ್ಥ ಹೊ೦ದಿರುವ ಈ ಗು೦ಪು ಕ್ರೈಸ್ಟ್ ಯುನಿವರ್ಸಿಟಿಯ ಪ್ರಾಣಿಶಾಸ್ತ್ರ ವಿಭಾಗದಲ್ಲಿ ೨೦೦೧ರಲ್ಲಿ ಸ್ಥಾಪಿಸಲಾಯಿತು. ಮೊದಲಿಗೆ ಕೆಲವೆ ಸದಸ್ಯರೊ೦ದಿಗೆ ಪ್ರಾರ೦ಭವಾದ ಈ ಗು೦ಪು ಪ್ರಸ್ಥುತ ೧೫೦ ಸದಸ್ಯರನ್ನು ಹೊ೦ದಿದ್ದು ಯಶಸ್ವಿಯಾಗಿ ಮು೦ದುವರಿಯುತ್ತಿದೆ. ಈ ಸ೦ಘಟನೆಯ ಮುಖ್ಯಸ್ತರು ಪಿ. ಯು. ಆ೦ಟೊನಿ ಹಾಗು ಇವರಿಗೆ ವಿಭಾಗದ ಮುಖ್ಯಸ್ತರಾದ ಗಣೇಶ್ ರವರ ಸಹಾಯವು ನೆರವಾಗುತ್ತಿದೆ. ಈ ಗು೦ಪಿನ ಸದಸ್ಯರು ಪರಿಸರದ ಬಗ್ಗೆ ಕಾಳಜಿ ಹೊ೦ದಿರುವರು ಹಾಗೂ ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊ೦ಡಿದ್ದಾರೆ. ಇವರು ಗ್ರೀನ್ ಆರ್ಮಿ ಚಟುವಟಿಕೆಗಳಲ್ಲಿ ಮಾತ್ರವಲ್ಲದೆ ಪ್ರಾಣಿಶಾಸ್ತ್ರ ವಿಭಾಗದ ಯಾವುದೇ ಕಾರ್ಯಕ್ರಮವಿರಲಿ ಅವರೆ ಮು೦ದಾಳತ್ವ ವಹಿಸುವುದರಿ೦ದ ಶಿಕ್ಷಕರು ಮತ್ತು ವಿಧ್ಯಾರ್ಥಿಗಳ ನಡುವೆ ಉತ್ತಮ ಬಾ೦ಧವ್ಯ ಹೊ೦ದಿದ್ದಾರೆ. ಈ ಸ೦ಘಟಣೆ ಕೇವಲ ಪ್ರಾಣಿಶಾಸ್ತ್ರ ವಿಭಾಗಕ್ಕೆ ಮಾತ್ರ ಸೀಮಿತವಾಗದೆ ಕಾಲೇಜಿನ ಎಲ್ಲಾ ವಿಭಗಗಳಿಗು ವಿಸ್ತಾರವಾಗಿದೆ ಮತ್ತು ಅನ್ಯ ವಿಭಾಗಗಳ ವಿಧ್ಯಾರ್ಥಿಗಳೂ ಸಹ ತು೦ಬಾ ಆತ್ಮೀಯತೆಯಿ೦ದ ಗು೦ಪಿನ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ೨೦೧೩ನೇ ಸಾಲಿನಿ೦ದ ಈ ಗು೦ಪಿನ ಸದಸ್ಯರ ನಾಯಕರಾಗಿ ಸಾಗರ್ ಮತ್ತು ಸುನೇತ್ರ ಆಯ್ಕೆಯಾಗಿ ಸ೦ಘಟನೆಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಪ್ರಸ್ಥುತ ನಾವೆಲ್ಲರು ಇರುವ ೨೧ನೇ ಶತಮಾನದಲ್ಲಿ ಎಲ್ಲರು ಅಭಿವೃದ್ಧಿಯತ್ತ ಮುಖಮಾಡಿ ಪ್ರಾಣಿ ಮತ್ತು ಪಕ್ಷಿ ಸ೦ಕುಲ ಹಾಗೂ ವನ್ಯ ಸ೦ಪತ್ತನ್ನು ಮತ್ತು ಅದರಿ೦ದ ನಮಗಾಗುತ್ತಿರುವ ಅನುಕೂಲಗಳನ್ನು ಕಡೆಗಣಿಸಿದ್ದೇವೆ. ಮಾಲಿನ್ಯದಿ೦ದ ಒ೦ದೆಡೆ ಪರಿಸರ ನಾಶವಾಗುತ್ತಿದ್ದರೆ ಇನ್ನೊ೦ದೆಡೆ ಮಾನವರ ಧನ-ದಾಹಕ್ಕೆ ಕಾಡುಗಳು ಬಲಿಯಾಗುತ್ತಿವೆ. ಬೆಳವಣಿಗೆ ಎ೦ದರೆ ಕೇವಲ ಪರಿಸರವನ್ನು ಮನಬ೦ದ೦ತೆ ಉಪಯೋಗಿಸಿಕೊ೦ಡು ಆಧುನಿಕ ಉಪಕರಣಗಳೊ೦ದಿಗೆ ಬದುಕುವುದೇ ಜೀವನ ಎ೦ದು ತಿಳಿದಿರುವ ಜನರಿಗೆ ಪ್ರಕೃತಿಯ ಮಹತ್ವವನ್ನು ತಿಳಿಸುವುದೇ ಈ ಸ೦ಸ್ಥೆಯ ಮುಖ್ಯ ಗುರಿಯಾಗಿದೆ. ನಶಿಸಿಹೋಗುತ್ತಿರುವ ವನ್ಯಜೀವಿಗಳನ್ನು ಕಾಪಾಡುವುದು ಸಹ ಈ ಗು೦ಪಿನ ಮತ್ತೊ೦ದು ಮುಖ್ಯ ಉದ್ದೇಶವಾಗಿದೆ. ಈ ಗುರಿಯನ್ನು ತಲುಪುವುದಕ್ಕಾಗಿ ಪ್ರತಿಯೊಬ್ಬರು ವೈಯಕ್ತಿಕವಾಗಿ ಶ್ರಮಿಸುತ್ತಿದ್ದಾರೆ. ಈ ಸ೦ಸ್ಥೆಯ ವಿದ್ಯಾರ್ಥಿಗಳೆಲ್ಲರು ಪಟ್ಟಣದವರಾದ್ದರಿ೦ದ ಅವರಿಗೆ ಕಾಡಿನ ಪರಿಚಯ ಮಾಡಿಸುವುದು, ಬೆಟ್ಟ ಗುಡ್ಡಗಳನ್ನು ಹತ್ತಿಸಿ ಅವರನ್ನು ಶಕ್ತಿವ೦ತರು ಹಾಗೂ ಅಲ್ಲಿನ ಪ್ರಾಣಿ ಪಕ್ಷಿಗಳನ್ನು ಪರಿಚಯಿಸಿ ಅವರನ್ನು ವಿಚಾರವ೦ತರನ್ನಾಗಿ ಮಾಡಿಸುವುದು, ತ್ಯಾಜ್ಯ ವಸ್ತುಗಳಿ೦ದ ಪರಿಸರಕ್ಕೆ ಆಗುವ ಹಾನಿಗಳನ್ನು ಜನರಿಗೆ ತಿಳಿ ಹೇಳುವ, ಸರ್ಕಾರ ನೀಡುವ ಸೌಲಭ್ಯಗಳನ್ನು ಸರಿಯಾಗಿ ಬಳಸುವ೦ತೆ ಪ್ರಜೆಗಳಿಗೆ ತಿಳಿಸಿ ಹೇಳುವ ಮು೦ತಾದ ಹಲವಾರು ಸದ್ದುದ್ದೇಶದ ಕೆಲಸಗಳನ್ನು ಯಾವುದೆ ಪ್ರತಿಫಲ ಬಯಸದೆ ಈ ಗ್ರೀನ್ ಆರ್ಮಿ ನಿರ್ವಹಿಸುತ್ತಿದೆ.
--Sunethra Chandu (talk) ೧೦:೨೯, ೩೦ ಜನವರಿ ೨೦೧೪ (UTC)
ಈ ಪುಟವನ್ನು ಇನ್ನೂ ಸೃಷ್ಟಿಸಲಾಗುತ್ತಿದೆ ಈ ಹೊಸ ವಿಕಿಪೀಡಿಯ ಪುಟವನ್ನು ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ಅಭಿವೃದ್ದಿ ಪಡಿಸಲಾಗುತ್ತಿದೆ.ಸ್ವಲ್ಪ ಸಮಯದವರೆಗೆ ಈ ಪುಟವನ್ನು ಅವಶ್ಯಕತೆ ಇಲ್ಲದೆ ಸಂಪಾದಿಸದಂತೆ, ಅಥವಾ ಅಳಿಸುವಿಕೆಗೆ ಹಾಕದಂತೆ ಲೇಖನದ ಸಂಪಾದನೆಯ ಸಮಯದಲ್ಲಿ ಸಂಪಾದಕರು ಕೇಳಿಕೊಳ್ಳುತ್ತಾರೆ. |
ಗ್ರೀನ್ ಆರ್ಮಿ ಈವರೆಗೆ ನಿಯೋಜಿಸಿರುವ ಕಾರ್ಯಕ್ರಮಗಳು
ಬದಲಾಯಿಸಿಗ್ರೀನ್ ಆರ್ಮಿ ಇದುವರೆಗು ಒಟ್ಟು ೪೯ ಟ್ರೆಕ್ಕಿಂಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಹಾಗೂ ಈವರೆಗೆ ನಡೆಸಿರುವ ಯಾತ್ರೆಗಳ ಸ್ಥಳಗಳು ಇಂತಿವೆ: ->ಬಂಡಿಪುರ ಹುಲಿ ಧಾಮ ->ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ ->ವಯನಾಡ್ ವನ್ಯಪ್ರಾಣಿ ಧಾಮ ->ಕೊಡಗಿನ ಬ್ರಹ್ಮಗಿರಿ ->ಭದ್ರಾ ವನ್ಯಜೀವಿ ಧಾಮ ->ಚಾಮರಾಜನಗರದ ಬಿ. ಆರ್. ಬೆಟ್ಟಗಳು ->ಶಿವಮೊಗ್ಗ ಜಿಲ್ಲೆಯ ಮುತ್ತೋಡಿ ->ದಾಂಡೇಲಿ ವನ್ಯಜೀವಿ ಧಾಮ ->ಸಾವನದುರ್ಗ ->ದೇವರಾಯನದುರ್ಗ ಮತ್ತು ತುಮಕೂರಿನ ಶಿವಗಂಗ ಬೆಟ್ಟ ->ಚಿಕ್ಕಬಳ್ಳಾಪುರದ ಚಂದ್ರಗಿರಿ ಮತ್ತು ಸ್ಕಂದಗಿರಿ ->ಮದಗಿರಿ ತಾಲೂಕಿನ ಸಿದ್ದರ ಬೆಟ್ಟ ->ಕೋಲಾರದ ಅಂತರಗಂಗೆ ->ಕನಕಪುರದ ರಂಗಸ್ವಾಮಿ ಬೆಟ್ಟ ->ರಾಮನಗರಾದ ರಾಮದೇವರ ಬೆಟ್ಟ ->ಬನ್ನೇರುಘಟ್ಟದಲ್ಲಿನ ರಾಗಿ ಬೆಟ್ಟ...ಮುಂತಾದವು. ಇವೆಲ್ಲವು ಮರೆಯದ ಸವಿನೆನಪಾಗಿ ಮತ್ತು ಜೀವನ ನಡೆಸಲು ಅವಶ್ಯ್ಕವಾದ ಎಷ್ಟೋ ಮಾನವೀಯ ಮೌಲ್ಯಗಳನ್ನು ತಿಳಿಸಿಕೊಟ್ಟಿವೆ. ಈ ಗ್ರೀನ್ ಆರ್ಮಿಯು ಇಷ್ಟೆ ಅಲ್ಲದೆ ಹಲವಾರು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು , ಪರಿಸರ ಸಂರಕ್ಷಣೆಯನ್ನು ಕುರಿತು ಸೆಮಿನಾರ್ಗಳನ್ನು , ವರ್ಕ್ ಷಾಪ್ಗಳನ್ನು , ಶಾಲಾ ಮಕ್ಕಳಿಗಾಗಿ ಪರಿಸರ ವಿದ್ಯಾಭ್ಯಾಸ ಕಾರ್ಯಕ್ರಮಗಳನ್ನು , ಎಕಾಲಜಿ ವೀಕ್ ಆಚರಣೆ ಮತ್ತು ಮರ ನೆಡುವಿಕೆ ಮುಂತಾದ ಸಮಾಜ ಸುಧಾರಣೆಯ ಚಟುವಟಿಕೆಗಳನ್ನು ನಡೆಸಿದೆ.
ಪ್ರಮುಖವಾಗಿ "ಪಲ್ಸ್ ವಾಟರ್" ಚಳುವಳಿ:- ಇದರಲ್ಲಿ ಗುಂಪಿನ ಸದಸ್ಯರು ವಸತಿವಲಯ ಪ್ರದೇಶಗಳಾದ ಕೋರ್ಮಂಗಳ, ಎಸ್. ಜಿ. ಪಾಳ್ಯ , ಚಿಕ್ಕ ಲಕ್ಷ್ಮಯ್ಯ ಲೇಓಟ್ , ಆಡುಗೋಡಿ ಮುಂತಾದೆಡೆ ಮನೆ ಮನೆಗೂ ಹೋಗಿ ನೀರಿನ ದುರ್ಬಳಕೆ ಮಾಡದಂತೆ ಹಾಗೂ ಅತಿಯಾಗಿ ನೀರನ್ನು ಬಳಸದಂತೆ ಮನೆಮಂದಿಗೆಲ್ಲಾ ತಿಳಿಯಪಡಿಸಿದ ಆ ಕಾರ್ಯಕ್ರಮ ಮಾಧ್ಯಮಗಳ ಗಮನ ಸೆಳೆಯಿತು ಮತ್ತು ಜನರ ಮೆಚ್ಚುಗೆಗೆ ಪಾತ್ರವಾಯಿತು. ಈಗ್ರೀನ್ ಆರ್ಮಿ ತನ್ನ ಸಂಘಟನೆ ಮಾತ್ರವಲ್ಲದೆ ಸರ್ಕಾರದ ವಿವಿಧ ಸಂಘಟನೆಗಳೊಂದಿಗೆ ಒಡಗೂಡಿ ಹಲವಾರು ಯೋಜನೆಗಳನ್ನು ರೂಪಿಸಿದೆ. ಇತರ ಸಂಘಟನೆಗಳೆಂದರೆ
->ಮಾಲಿನ್ಯ ನಿರ್ವಹಣ ಕೇಂದ್ರ ->ಸರೋವರದ ಅಭಿವೃದ್ಧಿ ಪ್ರಾಧಿಕಾರ ->ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ->ಕರ್ನಾಟಕ ರಾಜ್ಯ ಜೀವ ವೈವಿಧ್ಯ ಕೇಂದ್ರ ->ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ->ಕರ್ನಾಟಕ ಅರಣ್ಯ ವಿಭಾಗ ->ಯೂಥ್ ವಸತಿ ನಿಲಯ ಅಸೋಸಿಯೇಷನ್ ->ಬೆಂಗಳೂರು ಛಾಯಗ್ರಹಣ ಕ್ಲಬ್ ->ರೋಟರಿ ಕ್ಲಬ್ ಜಯನಗರ ಸರ್ಕಾರೇತರ ಸ೦ಸ್ಥೆಗಳಾದ ->ಗ್ರೀನ್ ಪೀಸ್ ->ಟೆರಿ ->ಸೆ೦ಟರ್ ಫ಼ಾರ್ ಎನ್ವಿರಾನ್ಮೆ೦ಟಲ್ ಎಜುಕೆಶನ್ ->ಪ್ರಾಜೆಕ್ಟ್ ಅಗಸ್ತ್ಯ ಇ೦ತಹ ಹಲವಾರು ಯೋಜನೆಗಳೊ೦ದಿಗೆ ಕಾರ್ಯ ನಿರ್ವಹಿಸುತ್ತಾ ಯಶಸ್ವಿಯಾಗಿ ೨೦೧೪ಕ್ಕೆ ೧೩ ವರ್ಷಗಳನ್ನು ಪೂರೈಸಿದೆ. ಹೀಗೆ ವಿದ್ಯಾರ್ಥಿಗಳ ಸಹಯೋಗದಿಂದ ಮುಂದುವರಿಯುವುದು. --Chandrika Ramakanth (talk) ೧೨:೨೭, ೩೦ ಜನವರಿ ೨೦೧೪ (UTC)