ಸದಸ್ಯ:Sunaiza Sunu/sandbox
ಗೋಪಾಲಕೃಷ್ಣ ಅಡಿಗ
ಉಡುಪಿ ಜಿಲ್ಲೆಯ ಮೊಗೇರಿ ಗೋಪಾಲಕೃಷ್ಣ ಅಡಿಗರ ಹುಟ್ಟೂರು. ಜನನ 1918. ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ನಲ್ಲಿ ಎಂ.ಎ ಪದವಿ ಪಡೆದ ಅಡಿಗರು ರಾಜ್ಯದ ಅನೇಕ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರೀಯ ಪುಸ್ತಕ ಪ್ರಾಧಿಕಾರದ ನಿರ್ದೇಶಕರಾಗಿ, ಸಿಮ್ಲಾದ ಭಾರತೀಯ ಸಂಶೋಧನಾ ಸಂಸ್ಥೆಯಲ್ಲಿ ರಿಸರ್ಚ್ ಫೆಲೋ ಆಗಿದ್ದರು. ಅವರ ಮೊದಲ ಕವನಸಂಕಲನ 'ಭಾವತರಂಗ' 1946 ರಲ್ಲಿ ಪ್ರಕಟವಾಯಿತು. ಅನಂತರ 'ಕಟ್ಟುವೆವು ನಾವು', 'ನಡೆದು ಬಂದ ದಾರಿ', ಚೆಂಡೆ ಮದ್ದಳೆ', 'ಭೂಮಿಗೀತೆ','ವರ್ಧಮಾನ', 'ಇದನ್ನು ಬಯಸಿರಲ್ಲಿಲ್ಲ',ಮೂಲಕ ಮಹಾಶಯರು', 'ಬತ್ತಲಾರದ ಗಂಗೆ', 'ಚಿಂತಾಮಣಿಯಲ್ಲಿ ಕಂಡ ಮುಖ', 'ಸುವರ್ಣ ಪುಯ್ಥಳಿ', ಎಂಬ ಕವನಸಂಕಲನಗಳನ್ನು ಪ್ರಕಟಿಸಿದ್ದಾರೆ. ಎರಡು ಕಾದಂಬರಿಗಳನ್ನಲ್ಲದೆ ಮೂರು ಗದ್ಯ ಕೃತಿಗಳನ್ನು ಐದು ಅನುವಾದಿತ ಕೃತಿಗಳನ್ನೂ ಪ್ರಕಟಿಸಿದ್ದಾರೆ. 'ಸಾಕ್ಷಿ' ಎಂಬ ತ್ರೈಮಾಸಿಕ ಪತ್ರಿಕೆಗೆ ಸಂಪಾದಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ. 52ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇವರ 'ವರ್ಧಮಾನ' ಕ್ಋತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಕುಮಾರನಾಶನ್ ಮತ್ತು ಕಬೀರ್ ಸಮ್ಮಾನ್ ಪ್ರಶಸ್ತಗಳಿಂದ ಪುರಸ್ಕೃತರಾಗಿದ್ದಾರೆ. ಅವರ 'ಸುವರ್ಣ ಪುತ್ಥಳಿ' ಕೃತಿಗೆ ಮರಣೋತ್ತರ ಪಂಪ ಪ್ರಶಸ್ತಿ ನೀಡಲಾಗಿದೆ. ನವ್ಯ ಮಾರ್ಗದ ಪ್ರವರ್ತಕರೆನಿಸಿರುವ ಅಡಿಗರು 'ಕಟ್ಟುವೆವು ನಾವು ಹಿಸ ನಾಡೊಂದನು ರಸದ ಬೀಡೊಂದನು' ಎಂದು ಹುಮ್ಮಸ್ಸಿನಿಂದ ಹಾಡಿದ ಕವಿ. ದೇಶದ ಹಿತ ಮರೆತ ರಾಜಕೀಯ ವ್ಯವಸ್ಥೆಯಿಂದ ಭ್ರಮನಿರಸನಗೊಂಡು ಚೆಂಡೆಮದ್ದಳೆಯಿಂದ ಹೊಸ ಮಾರ್ಗದಲ್ಲಿ ಹೆಜ್ಜೆ ಇರಿಸಿದರು. ಅಡಿಗರ ಕಾವ್ಯ ಅಂದಿನ ಹೊಸ ತಲೆಮಾರಿನ ಮೇಲೆ ಗಾಢ ಪರಿಣಾಮವನ್ನು ಬೀರಿದೆ. 'ನಾವೆಲ್ಲರೂ ಒಂದೇ ಜಾತಿ, ಒಂದೇ ಮತ, ಒಂದೇ ಕುಲ, ನಾವು ಮನುಜರು' ಎಂಬುದು ಅಡಿಗರ ಪ್ರಸಿದ್ಧಸಾಲು ಮತ್ತು ಸಮಾಜ ತಿಳಿದು ಬದುಕಬೇಕಾದ ಸಾಲು. ಅಡಿಗರು 1992 ರಲ್ಲಿ ಇಹಲೋಕ ತ್ಯಜಿಸಿದರು.