ಸೋನುಬಾಯಿ
Born೧೯೨೦
Nationalityಭಾರತಿಯರು
Occupationರಂಗಕಲೆನಾಟಕಿ

ಸೋನುಬಾಯಿ ದೊಡ್ಡ ಮನಿ

ಬದಲಾಯಿಸಿ

ಲಷ್ಮೇಶ್ವರದ ದೊಡ್ಡ ಮನಿ ಮನತನದ್ದು ಕನ್ನಡದ ರಂಗಕಲೆಯ ಷೇತ್ರದಲ್ಲಿ ಒಂದು ದೊಡ್ಡ ಹೆಸರು. ಅಲ್ಲಿನ ಲಷ್ಮೇಲಿಂಗಕ್ಕೆ ಸಂಗೀತ, ನೃತ್ಯ ಸೇವೆ ಸಲ್ಲಿಸುತ್ತಿದ್ದ ಮನೆ ತನವಾದ್ದರಿಂದ ಆಭಿನಯ ಸಂಗೀತಗಳ ಯಮಳ ವಿದ್ಯಗಳು ಈ ಮನೆತನದವರಲ್ಲಿ ರಕ್ತ ಗತವಾಗಿ ಹೋಗಿತ್ತು. ಆ ಮನೆತನದ ಮಗಳು ಸೋನುಬಾಯಿ ದೊಡ್ಡ ಮನಿ. ಅವರು ಹುಟ್ಟಿದ್ದು ೧೯೨೦ರಲ್ಲಿ. ಎಳೆ ವಯಸ್ಸಿಗೇ ಪಿತೃವಿಯೋಗ ಹಾಗೂ ಲಷ್ಮೇಶ್ವರದಲ್ಲಿ ಪ್ಲೇಗಿನ ಸಿಡುಗು ಹೆಚ್ಚಿದ್ದಕ್ಕೆ ಹೆದರಿದ ತಾಯಿ ಪೀರವ್ವ, ತನ್ನ ಹಿರಿಯ ಮಗಳು ಮಲಕವ್ವನಿದ್ದ ಹಾವೇರಿಗೆ ದೌಡಾಯಿಸಿದರು. ಆ ವೇಳೆಗೆ ಸೋನುಬಾಯಿಯವರಿಗೆ ಹಿರಿಯರಾಡ ತಾರವ್ವ,ಮಲಕವ್ವ, ಪ್ಯಾರವ್ವ,ಆಮೀನವ್ವ ಎಲ್ಲರಿಗೂ ವಿವಾಹವಾಗಿ ಸಂಸಾರಸ್ಥರಾಗಿದ್ದರು.ದೊಡ್ಡ ರಾಜಾಸಾನಿಯವರು ಸೇರಿ ಒಡ ಹುಟ್ಟಿದವರು ಎಂಟು ಜನ ಕನ್ಯೆಯರು.ತನ್ನ ಏಳು ಜನ ತಂಗಿಯರಿಗೂ ಬಚ್ಚಾಸಾನಿಯವರೇ ಸಂಗೀತ ಗುರು.ಈ ಎಲ್ಲ ಪರಿವಾರವನ್ನು ಕಟ್ಟಿಕೊಂಡು ಬಚ್ಚಾಸಾನಿ ಅಂದಿನ ಯುಗದಲ್ಲೇ ಸ್ತ್ರಿ ಸಂಗೀತ ನಾಟಕ ಮಂಡಲಿ ಕಟ್ಟಿ ನಾಟಕಗಳಿಂದಲೂ ತಮ್ಮ ಅಪೂರ್ವ ಸಂಗೀತ ವಿದ್ಯೆಯಿಂದಲೂ ಅಂದಿನ ಕಲಾಭಿಮಾನಿಗಳ ಮನತಣಿಸಿದ್ದು,ಒಂದು ಅಪೂರ್ವ ಸಾಧನೆಯೂ ಹೌದು.ಅಧ್ಭುತ ಸಾಹಸವೂ ಹೌದು.ಅವರ ಮಂಡಳಿಯಲ್ಲಿ ಎಲ್ಲಾ ಪಾತ್ರಗಳು ಹೆಣ್ಣು ಮಕ್ಕಳದೇ ಆದರೆ ಮತ್ತು ವಿಶೇಷವೆಂದರೆ,ಗೇಟ್ ಕೀಪರ್ ಕೆಲಸದಿಂದ ತೊಳಗಿ ಎಲ್ಲ ಕೆಲಸಗಳನ್ನೂ ಹೆಂಗಳೆಯರೆ ನೆರವೇರಿಸುತ್ತಿದ್ದುದು. ರಂಗಭೂಮಿಯಲ್ಲಿ ಅನಂತರ ಖ್ಯಾತಿವೆತ್ತ ಸ್ತ್ರೀ ಪಾತ್ರಧಾರಿ ಅಹಮ್ಮದ, ವಜೀರಾ,ಲಲಿತ ಕುಮಾರಿ,ಹಸನ್ ಸಾಹೇಬ ಇವರೆಲ್ಲ ರಂಗಭೂಮಿಗೆ ಬಚ್ಚಾಸಾನಿಯವರ ಕೊಇಡುಗೆಯೆಂದೇ ಹೇಳಬೇಕು.ತಾಯಿ ಪೀರವ್ವನಿಗೆ ತನ್ನ ಮಕ್ಕಳೂ, ತನ್ನಕ್ಕನಂತೆ ಮಹಾಸಂಗೀತ ವಿದುಶಿಯರಾಗಬೇಕೆಂಬ ಹಂಬಲವಿತ್ತು.ಆದರೆ ಅವರ ಮಕ್ಕಳ ಪೈಕಿ ಮಲಕವ್ವನಷ್ಟು ಸಂಗೀತದಲ್ಲಿ ಆಸಕ್ತಿ ತೋರಿ ಅಭ್ಯಾಸ ಮಾಡಿದ್ದಳು.ಕಿರಿಯ ಮಗಳು ಸೋನುವಿಗೆ ಒಳ್ಳೆಯ ಕಂಠ ಮಧುರ್ಯವಿತ್ತು ಸಂಗೀತಸಕ್ತಿಯೂ ಇತ್ತು,ಆದರಿಂದ ಪೀರವ್ವ ತನ್ನ ಕೂಸನ್ನು ಬಚ್ಚಸಾನಿತ್ಯವರಲ್ಲೇ ಬಿಟ್ಟಿದ್ದರು. ಹಾವೇರಿಗೆ ಬಂದ ಸೋನೂಬಾಯಿಗೆ ಅಕ್ಕ ಮಲಕವ್ವನೇ ಸಂಗೀತದ ಗುರುವಾದಳು.ಎರಡು ಮೂರು ವರ್ಷ ಈ ಸಾಧನೆ ನಡೆಯಿತು.ಆಗಷ್ಟೇ ತಾಯಿ ಪೀರವ್ವ ಮಗಳಿಗೆ ಒಳ್ಳೆಯ ಸಂಗೀತ ಗುರುವಿಗಾಗಿ ಹುಡುಕಾದತೊಡಗಿದ್ದಳು.ಕಿರಾಣಾ ಘರಾಣದ ಖ್ಯಾತ ವಿದ್ವಾಂಸ ಖಾನ್ ಅಬ್ದುಲ್ ಕರೀಂಖಾನತಲ್ಲಿ ಸಂಗೀತ ಕಲಿಯುವ ಪ್ರಯತ್ನ ನಡೆಸಿ ವಿಫಲರಾದರು.ಆ ಸಮಯಕ್ಕೆ ಸರಿಯಾಗಿ ಪ್ರಸಿದ್ದ ಅಬ್ಬಿಗೇರಿ ಕಂಪನಿ ಹುಬ್ಬಳ್ಳಿಯಲ್ಲಿ ಮೊಕ್ಕಾಂ ಹೂಡಿತ್ತು.ಕಂಪನಿಯ ಮಾಲೀಕರಾಗಿದ್ದ ಬಸವನಗೌಡರ ಕಿವಿಗೆ ಸೋನುಬಾಯಿಯ ಸ್ಥಿತಿಗತಿಗಳ ವಿಚಾರ ಪ್ರಾಸಂಗಿಕವಾಗಿ ಮುಟ್ಟಿತ್ತು.ಬಸವನಗೌಡರು ಸೋನುಬಾಯಿಯನ್ನು ಕಂಡು ತಮ್ಮ ಕಂಪನಿಗೆ ಕರೆತೆರಬೇಕೆಂದು ಯೋಚಿಸಿ ಹಾವೇರಿಗೆ ಬಂದರು,ಸೋನುಬಾಯಿಯ ರೂಪ,ಕಂಠ ಮಾಧುರ್ಯಗಳನ್ನು ಪ್ರತ್ಯಕ್ಷವಾಗಿ ಕಂಡ ಮೇಲಂತೂ ಈ ಕಿಶೋರಿಯನ್ನು ಬಿಟ್ಟು ತೆರಳುವುದೇ ತಮಗೆ ಬಾರಿ ನಷ್ಟವೆಂದು ಭಾಸವಾಗತೊಡಗಿತು.ತಾಯಿ ಪೀರವ್ವನ ಆಸೆ ಆಕಾಂಕ್ಶೆಗಳಾಗಿದ್ದ ಸಂಗೀತ ವಿದೂಶಿ ಸೋನು ಎನಿಸುವ ಮಾತು ಕೊಟ್ತರು.ಸೋನುವಿನ ಸಂಗೀತ ಪಾಠದ ಪ್ರತ್ಯೇಕವಗಿ ಸಂಗೀತ ವಿದ್ವಾಂಸರೊಬ್ಬರನ್ನು ನೇಮಿಸಿ ಕಲಿಸುವ ಹೊಣೆ ಹೊತ್ತರು.ತಾಯಿ ಮಗಳು ಇಬ್ಬರು ಮಾತಿಗೆ ಕಟ್ತುಬಿದ್ದು ಹುಬ್ಬಳ್ಳಿಯಲ್ಲಿ ಕಂಪನಿ ಮನೆ ಸೇರಿದರು.

"ನಾಟನ ಜೀವನ"

ಬದಲಾಯಿಸಿ
ಕಿತುರ್ ರಾಣಿ ಚೆನ್ನಮ್ಮ, ಝಾನ್ಸಿ ಲಕ್ಷ್ಮೀ ಬಾಯಿ ಈ ಎರಡು ಇತಿಹಾಸಿಕ ನಾಟಕಗಳೇ ಅಬ್ಬಿಗೇರಿ ಕಂಪನಿಯನ್ನು ಕೀರ್ತಿ ಶಿಖರ ಮುಟ್ಟಿಸಿದ್ದ ನಾಟಕಗಳು.ಅದೇ ಕಾಲಕ್ಕೆ ಬಾಲನಟರಾಗಿ ಕಂಪನಿ ಸೇರಿದ್ದ ಏಣಗಿ ಬಾಳಪ್ಪ ಹಾಗು ಸೋನು ಬಾಯಿ ಇಬ್ಬರಿಗೂ ಈ ನಾಟಕಘಳಲ್ಲಿ ಯಾವ ಪಾತ್ರವು ಇರುತ್ತಿರಲ್ಲಿಲ್ಲ.ಆದರು ಇವರಿಗೆ ರಂಗದ ತಾಳೀಮು ಮಾತ್ರ ನಡೆಯುತ್ತಿತ್ತು.ನಾಂದೀಪದದಲ್ಲಿ ಭಾಗವಹಿಸುವುದು,ರಾಜ ದರ್ಬಾರಿನಲ್ಲಿ ಚಾಮರ ಬೀಸುವುದು ಇದೇ ಅವರು ನಿರ್ವಹಿಸುತ್ತಿದ್ದ ಪಾತ್ರಗಳು.೧೯೩೦ ರ ಸಮಯಕ್ಕೆ ಗಾಂಧೀಜೀಯವರ ಅಸಹಕಾರ ಚಲವಳಿ ಭಾರತದಾದ್ಯಂತ ವ್ಯಾಪಿಸಿತ್ತು,ಆಗ ಬ್ರಿಟಿಷ್ ಸರ್ಕಾರ ಯಾವುದೇ ಕ್ಷೇತ್ರದ ಯಾವುದೇ ನಡವಳಿಕೆಯನ್ನು ಸಂಶಯದಿಂದ ಕಾಣುತ್ತಿತ್ತು.ಈ ಬಿಸಿ ಅಬ್ಬಿಗೇರಿ ನಾಟಕ ಕಂಪನಿಗು ತಟ್ಟಿತು.ಬ್ರಿಟಿಷರ ಕುತಂತ್ರವನ್ನು ಚಿತ್ರಿಸುವ ಪ್ರಸಂಗಗಳಿದ್ದ ಈ ಎರಡು ನಾಟಕಗಳನ್ನೂ ಬ್ರಿಟಿಷ್ ಆಡಳಿತಗಾರರು ಪ್ರತಿ ಬಂಧಿಸಿದರು.ಇದರಿಂದಾಗಿ ಕಂಪೆನಿ ತತ್ತರಿಸುವಂತಾಯಿತು.ಸಮ್ಗೀತ ವಿದ್ಯೆಗಾಗಿ ನಾಟಕ ಕಂಪನಿಗಳ ಅಶ್ರಯದಲ್ಲಿ ಸುತ್ತಡಿದರೂ,ತ್ರುಪ್ತಿ ಸಿಗದಿದ್ದ ಸೋನುಬಾಯಿಗೆ ಖಾನ್ ಅಬ್ದುಲ್ ಕರೀಂಖಾನರ ಪ್ರಿಯ ಶಿಷ್ಯರಾಗಿದ್ದ ಶಂಕರಬುವಾರಲ್ಲಿ ಸಂಗೀತಾಧ್ಯಯನದ ಅವಕಾಶ ದೊರೆಯಿತು.ಶಂಕರ ಬುವ ಹುಬ್ಬಳ್ಲಿಯಲ್ಲಿ ವಾಸಿಸುತ್ತಿದ್ದರು.ಅವರಲ್ಲಿ ಪಾಠಕ್ಕಾಗಿ ತಾಯಿ ಪೀರವ್ವ ಹುಬ್ಬಳ್ಳಿಯಲ್ಲೇ ಮನೆ ಮಾಡಿದರು.ಎಅರಡು ವರ್ಶದ ಕಾಲ ಸತತ ಸಂಗೀತ ಅಭ್ಯಾಸ ನೆರವೇರಿತು.ಆಗ ಶಂಕರ ಬುವ ಹುಬ್ಬಳ್ಳಿ ಬಿಟ್ಟು ಮೀರಜ್ಗೆ ಹೋದರು.ಸಂಗೀತ ಪಾಠ ನಿಂತಿತು.ಕಾಲೇಜ್ ಗರ್ಲ್ ನಾಟಕದಲ್ಲಿ ಸೋನುಬಾಯಿ ಪ್ರಧಾನ ಪಾತ್ರವನ್ನು ವಹಿಸಿದರು.ಈ ನಾಟಕ ಅವಳಿಗೆ ಅಭ್ಯಾಸವಾಯಿತು.ಹತ್ತಾರು ನಾಟಕಗಳ ಪ್ರದರ್ಶನವಾಯಿತು.ಈ ರೀತಿ ಸೋನುಬಾಯಿ ದೊಡ್ದ ಸಂಗೀತಸ್ಥರಾದರು ಹಾಗು ಸಂಗೀತದಲ್ಲಿ ಪ್ರವೀಣಲಾದಳು. ಕೃಷ್ಣ ಲೀಲಾ,ಕೃಷ್ಣ ಗಾರುಡಿ,ಲಂಕದಹನ,ರಾಮಾಯಣ, ತುಳಸೀದಾಸ,ರಾಯರಸೊಸೆ ಈ ನಾಟಕಗಳು ಕಂಪನಿ ಅಭಿನಯಿಸುತ್ತಿದ್ದ ನಾಟಕಗಳು. "ರಾಯರ ಸೊಸೆ" ಹುಬ್ಬಳ್ಳಿಯಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಪ್ರದರ್ಶನ ಕಂಡು ದಾಕಲೆ ಸ್ಥಾಪಿಸಿತು.

"ನಾಟಕಗಳು"

ಬದಲಾಯಿಸಿ
ಕ್ರುಷ್ಣಲೀಲೆಯ ರಾಧಾಯಾಗಿ, ಕ್ರುಷ್ಣ ಗಾರುಡಿಯ ಸತ್ಯಭಾಮೆಯಾಗಿ ಲಂಕಾ ದಹನ ಮತ್ತು ರಾಮಾಯಣಗಳಲ್ಲಿ ಸೀತೆಯಾಗಿ, ರಾಯರಸೊಸೆಯಲ್ಲಿ ಚಂದ್ರಾವತಿಯಾಗಿ ಸೋನುಬಾಯಿ ಪ್ರೆಕ್ಷಕರ ಅಚ್ಚು ಮೆಚ್ಚಿನ ನಟಿಯಾಗಿಬಿಟ್ಟರು.  ವೇಶ್ಯ್ ಚಂದ್ರಾವತಿಯ ಪಾತ್ರು ಸೋನುಬಾಯಿಯವರನ್ನು ಕೇವಲ ೧೨-೧೩ ವಯಸ್ಸಿನವರಾಗಿದ್ದಾಗಲೇ ಕಿರ್ತಿಪಾತ್ರರನ್ನಾಗಿಸಿತು.  ಅಂಬಾ ಪ್ರಸದಿಕಾ ನಾಟಕ ಕಂಪನಿಯ ಮಾಲೀಕರಾದ ಭಟ್ಟರು ಇಂಥ ಪ್ರತಿಭಾನ್ವಿತ ನಟ ಸೋನು ಅವರಿಗೆ ತಮ್ಮ ಕಂಪೆನಿ ನಾಟಕಗಳಲ್ಲಿ ನಾಯಕಿಯ ಪಾತ್ರ ವಹಿಸಿಕೊಟ್ತು ಆಕೆಯ ಕೀರ್ತಿಯನ್ನೊ ತಮ್ಮಗಲ್ಲಾಪೆಟ್ಟಗೆಯನ್ನೂ ಬೆಳಸಿಕೊಳುವ ಯೋಚನೆ ಮಾಡುತ್ತಿದ್ದಾಗಲೇ ಸೋನುಬಾಯಿಯವರ ಸಂಗೀತ ಗುರುವಾಗಿದ್ದ ವೆಂಕಟರವ್ ರಾಮದುರ್ಗ ಅವರು ಕಂಪೆನಿಯನ್ನು ಬಿಟ್ಟರು.  ಆದುಕಾರಣ ಹಾಗೂ ಆ ವೇಳೆಗೆ ೧೪ ವಯಸ್ಸು ತುಂಬಿದ್ದ ಮಗಳನ್ನು ರಂಗದ ಮೇಲೆ ಕುಣಿಸುವುದನ್ನುನಿಲ್ಲಿಸಲು ತೀರಾಮನಿಸಿದ್ದ ಪೀರವ್ವ, ಕಂಪೆನಿ ತ್ಯಜಿಸಿ ಮತ್ತೆ ಹಾವೇರಿಗೆ ಮಗಳೊಡನೆ ಮರಳಿ ಬಂದರು. ಸಂಗೀತಾಭ್ಯಾಸ: ಒಳ್ಳೆಯ ಸಂಗೀತಗಾರರದೇ ರಾಜಾಶ್ರಯವಿದ್ದ ಕಾಲ ಆದು.  ಸಂಗೀತಾಧ್ಯಾಯಿಗಳಿಗೆ ಸಂಗೀತಗಾರರದೇ ಆಶ್ರಯ.  ಅದಿಲ್ಲದಿದ್ದರೆ ನಾಟಕ ಕಂಪನಿಳದೇ ಆಶ್ರಯ.  ಸಂಗೀತ ವಿದ್ಯೆಗಾಗಿ ನಾಟಕ ಕಂಪನಿಗಳ ಆಶ್ರಯದಲ್ಲಿ ಸುತ್ತಾಡಿದರೂ, ತೃಪ್ತಿಸಿಗದಿದ್ದ ಸೋನುಬಾಯಿಗೆ ಖಾನ್ ಆಬ್ದುಲ್ ಕರೀಂಖಾನರ ಪ್ರಿಯಶಿಷ್ಯರಾಗಿದ್ದ ಶಂಕರಬುವಾರಲ್ಲಿ ಸಂಗೀತಾಧ್ಯಯನದ ಅವಕಾಶ ದೊರೆಯಿತು.  ಕರೀಂಖಾನರಲ್ಲಿ ಕಲಿಯುವ ಅವಕಾಷ್ ಲಭಿಸದೇ ಹೋದ ಕೊರತೆ ಕೆಲವು ವರ್ಷಗಳ ತರುವಾಯ ಅವರ ಶಿಷ್ಯರಿಂದ ಕಲಿಯುವ ಅವಕಾಶ ದೊರೆತುದರಿಂದ ನಿವಾರಣೆಯಾಯಿತು.  ಶಂಕರ ಬುವಾ ಹುಬ್ಬಳ್ಳಿಯಲ್ಲಿ ವಾಸಿಸುತ್ತಿದ್ದರು.  ಅವರಲ್ಲಿ ಪಾಠಕ್ಕಾಗಿ ತಾಯಿ ಪೀರವ್ವ ಹುಬ್ಬಳ್ಲಿಯಲ್ಲೇ ಮನೆ ಮಾಡಿದರು.  ಎರಡು ವರ್ಷ ಕಾಲ ಸತತ ಸಂಗೀತಾಭ್ಯಾಸ ನೆರವೇರಿತ್ತು.  ಆಗ ಶಂಕರಬುವಾ ಹುಬ್ಬಳ್ಳಿ ಬಿಟ್ಟು ಮೀರಜ್ಗೆ ಹೋದರು.  ಸಂಗೀತ ಪಾಠ ನಿಂತಿತು.  ಆದರೆ ಅ ವೇಳೆಗೆ ಆಂಬಾಪ್ರಸದಿಕ ನಾಟಕ ಕಂಪೆನಿಯಲ್ಲಿ ಸೋನುಬಾಯಿಯವರ ಸಂಗೀತ ಗುರುಗಳಾಗಿದ್ದ ರಾಮದುರ್ಗ ಆವರು ಹುಬ್ಬಳ್ಳಿಗೆ ಬಂದು ನೆಲೆಸಿದ್ದರು. ಮತ್ತೆ ಅವರಲ್ಲಿ ಸಂಗೀತಾಭ್ಯಾಸ ಮುಂದುವರೆಯಿತು.  ಆರೇಳು ತಿಂಗಳು ಕಳೆದಿರ ಬಹುದು.  ಆ ವೇಳೆಗೆ ಸೋನುಬಾಯಿ ವಿವಾಹಿತರಾಗಿದ್ದರು.

"ಕುಟುಂಬ ಜೀವನ"

ಬದಲಾಯಿಸಿ
ಅವರ ಪತಿ ಭೀಮರಾವ್ ವೃದ್ಯ ಅವರು ತಾಯಿ ಪೀರವ್ವನಂತೆಯೇ ಪತ್ನಿಯ ಸಂಗೀತಾಭ್ಯಾಸ ಮತು ಆಭಿನಯ ಕಲೆಗಳಲ್ಲಿ ಅತ್ಯಂತ ಆಸಕ್ತಿ ತಳೆದವರು.  ಆವರಿಗೂ ಎರಡೂ ಹವ್ಯಾಸಗಳು ಆಂಟಿದ್ದು, ಆವರ ಪ್ರೊತ್ಸಹ ಸೋನುಬಾಯಿಯವರಿಗೆ ವಿಪುಲವಾಗಿ ಲಭಿಸಿತ್ತು.  ಈ ಸಂಗೀತಾಭ್ಯಾಸದ ಅವಧಿಯಲ್ಲಿ ಅವರಿಗೆ ಅವರ ಮನೆತನದ ಅಕ್ಕಂದಿರು ದೊಡ್ಡಮ್ಮಂದಿರಿಂದ ದೊರೆತ ಪ್ರೊತ್ಸಾಹವನ್ನು ಬಗೆಬಗೆಯಾಗಿ ಈಗಲೂ ಬಣ್ಣಿಸುತಾರೆ ಸೋನುಬಾಯಿ

ಉಲ್ಲೇಖ

ಬದಲಾಯಿಸಿ

[]

  1. ಕರ್ನಾಟಕದ ರಂಗ ಕಲಾವಿದರು. ಸೀತಾರಾಮೈಯ.