==ಸಹಕಾರಿ ಸಂಘಗಳು==
೧೯೧೨ರ ಸಹಕಾರಿ ಸಂಘಗಳ ಕಾಯ್ದೆಯ ಪ್ರಕಾರ ಭಾರತದಲ್ಲಿ ಸಹಕಾರ ಸಂಘವನ್ನು ಸ್ಥಾಪಿಸಲು ಕನಿಷ್ಟ ಸದಸ್ಯರ ಸಂಖ್ಯೆ ಹತ್ತು ಇರತಕ್ಕದ್ದು.ಇದನ್ನು ಸಹಕಾರಿ ಸಂಘಗಳ ಕಾಯ್ದೆಯ ಪ್ರಕಾರ ನೋಂದಾಯಿಸಲೇಬೇಕು.ಷೇರುಗಳನ್ನು ಸದಸ್ಯರಿಗೆ ನೀಡುವುದರ ಮುಖಾಂತರ ಬಂಡವಾಳವನ್ನು ಸಂಗ್ರಹಿಸುತ್ತದೆ.

ವ್ಯಾಖ್ಯಾಗಳು

ಈ.ಹೆಚ್.ಕಲ್ವರ್ಟ್ ಅವರ ಪ್ರಕಾರ "ಸಹಕಾರವು ಒಂದು ಪ್ರಕಾರದ ವ್ಯವಹಾರಿ ಸಂಘಟನೆಯಾಗಿದ್ದು,ಅದರಲ್ಲಿರುವ ವ್ಯಕ್ತಿಗಳು ತಮ್ಮ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಸಮಾನತೆಯ ದೃಷ್ಠಿಯಿಂದ ಮಾನವರಾಗಿ ಸ್ವಯಂ ಪ್ರೇರಣೆಯಿಂದ ಒಂದುಗೂಡಿದ ಸಂಸ್ಥೆಯಾಗಿದೆ".

ಸಹಕಾರಿ ಸಂಘಗಳ ಲಕ್ಷಣಗಳೆಂದರೆ:-

೧.ಸ್ವಯಂ ಪ್ರೇರಣಯ ಸಂಘಟನೆ:- ಸಹಕಾರಿ ಸಂಘದ ಸದಸ್ಯತ್ವ ಐಚ್ಛಿಕವಾಗಿದೆ.ಸದಸ್ಯತ್ವವು ಮುಕ್ತವಾಗಿದ್ದು,ಯಾವುದೇ ಬೇದವಿಲ್ಲದೆ ಎಲ್ಲಾ ವಯಸ್ಕರಿಗೂ ಸದಸ್ಯರಾಗಿಲು ಅವಕಾಶವಿದೆ.ಸದಸ್ಯರು ತಮಗೆ ಬೇಡವೆನಿಸಿದಾಗ ಸಂಘವನ್ನು ಬಿಟ್ಟುಹೋಗಬಹುದು. ೨.ಕಾನೂನಿನ ಅಸ್ತಿತ್ವ :- ಈ ಸಂಘದಲ್ಲಿನೋಂದಣಿ ಕಡ್ಡಾಯವಾಗಿದೆ ಆದ್ದರಿಂದ ಸದಸ್ಯರಿಂದ ಪ್ರತ್ಯೇಕ ಅಸ್ತಿತ್ವ ಹೊಂದಿರುತ್ತದೆ. ಪ್ರತ್ಯೇಕ ಅಸ್ತಿತ್ವ ಹೊಂದಿರುವುದರಿಂದ ಅವರವರ ಹೆಸರಿನಲ್ಲೇ ವ್ಯವಹಾರವನ್ನು ನಡೆಸುತ್ತದೆ.ಅಲ್ಲದೇ ತನ್ನ ಹೆಸರಿನಲ್ಲೇ ಮೊಕದ್ದಮೆ ಹೂಡಬಹುದಾಗಿದೆ.ಸದಸ್ಯರ ಆಗಮನ ಮತ್ತು ನಿರ್ಗಮನದಿಂದ ವ್ಯವಹಾರಕ್ಕೆ ಧಕ್ಕೆ ಇಲ್ಲ. ೩.ನಿಯಮಿತ ಹೊಣೆಗಾರಿಕೆ:-ಸಹಕಾರಿ ಸಂಘಗಳಲ್ಲಿ ಸದಸ್ಯರ ಹೊಣೆಗಾರಿಕೆಯು ಅವರು ಆ ಸಂಸ್ಥೆಗೆ ನೀಡಿದ ಬಂಡವಾಳದ ಮೊತ್ತಕ್ಕೆ ಸೀಮಿತವಾಗಿರುತ್ತದೆ. ಆದಾಗ್ಯೂ ಕೆಲವು ಸಂದರ್ಭಗಳಲ್ಲಿ ಸದಸ್ಯರು ಅನಿಯಮಿತ ಭಾರ ಹೊತ್ತುಕೊಳ್ಳಬೇಕಾಗುತ್ತದೆ. ೪.ನಿಯಂತ್ರಣ:-ಸಂಘದ ಆಡಳಿತವು ಚುನಾಯಿತ ಪ್ರತಿನಿಧಿಗಳ ವ್ಯವಸ್ಥಾಪಕ ಮಂಡಳಿಯ ಕೈಯಲ್ಲಿರುತ್ತದೆ.ಒಬ್ಬರಿಗಾಗಿ ಎಲ್ಲರೂ ಮತ್ತು ಎಲ್ಲರಿಗೂಗಿ ಒಬ್ಬರು ಎಂಬ ಪ್ರಜಾಪ್ರಭುತ್ವದ ತತ್ವದಡಿಯಲ್ಲಿ ವ್ಯವಸ್ಥಾಪಕ ಮಂಡಳಿ ರಚನೆಯಾಗಿರುವುದರಿಂದ ಪ್ರಜಾಸತ್ತಾತ್ಮಕ ವ್ಯವಸ್ಥಾಪನೆ ಹೊಂದಿರುತ್ತದೆ. ಸಹಕಾರ ಸಂಘಗಳ ಪ್ರಕಾರಗಳು

ಸಹಕಾರಿ ಸಂಘಗಳು ನಿರ್ವಹಿಸುವ ಆಡಳಿತದ ಸ್ವರೂಪದ ಆಧಾರದ ಮೇಲೆ ಈ ಕೆಳಗಿನಂತೆ ವಿಂಗಡಿಸಬಹುದಾಗಿದೆ.

೧.ಬಳಕೆದಾರರ ಸಹಕಾರ ಸಂಘಗಳು:-

ಸಂಘವು ತನ್ನ ಸದಸ್ಯರಿಗೆ ಉತ್ತಮ ದರ್ಜೆಯ ದೈನಂದಿನ ಬಳಕೆಯ ಸಾಮಾನುಗಳನ್ನು ನ್ಯಾಯಯುತ ಬೆಲೆಗೆ ಒದಗಿಸಲು ಅಸ್ತಿತ್ವಕ್ಕೆ ಬಂದಿದೆ. ಇಂಥ ಸಂಘಗಳನ್ನು ಸಂಘಗಳನ್ನು ಸಂಘಟಿಸುವವರು,ಬಳಕೆದಾರರಾದ ಸದಸ್ಯರುಗಳೇ. ಇಇ ಸಂಘಗಳ ಉದ್ದೇಶ ವ್ಯಾಪಾರಿ ಮಧ್ಯಸ್ಥಗಾರರನ್ನು ತೆಗೆದು-ಹಾಕಿ ಸದಸ್ಯರ ಆರ್ಥಿಕತೆಯನ್ನು ಹೆಚ್ಚಿಸುವುದೇ ಆಗಿದೆ. ಉತ್ವಾದಕರ ಮತ್ತು ಬಳಕೆದಾರರ ನಡುವೆ ಇರುವ ವರ್ತಕ ಮಧ್ಯಸ್ಥಾಗಾರರನ್ನು ದೂರವಿಟ್ಟು, ಸರಕುಗಳನ್ನು ನೇರವಾಗಿ ಉತ್ಪಾದಕರಿಂದ ಬ್ರುಹತ್ ಪ್ರಮಾಣದಲ್ಲಿ ಖರೀದಿಸಿ ತನ್ನ ಸದಸ್ಯರಿಗೆ ನ್ಯಾಯವಾದ ಬೆಲೆಗೆ ಮಾರುತ್ತವೆ.ಇದರಿಂದ ಮಾರಿ ಬಂದ ಲಾಭವನ್ನು ತನ್ನ ಸದಸ್ಯರಿಗೆ ಅವರುಗಳು ಹಾಕಿದ ಬಂಡವಾಳದ ಆಧಾರದ ಮೇಲಾಗಲಿ ಇಲ್ಲವೇ ಅವರುಗಳು ಸಂಘದಿಂದ ಖರೀದಿಸಿದ ಸರಕುಗಳ ಪ್ರಮಾಣದ ಮೇಲೆ ಹಂಚುತ್ತದೆ.

೨.ಉತ್ಪಾದಕರ ಸಹಕಾರ ಸಂಘಗಳು:-

ಇಂಥ ಸಹಕಾರ ಸಂಘಗಳು ಸಣ್ಣ ಉತ್ಪಾದಕರ ಹಿತರಕ್ಷಣೆಗೋಸ್ಕರ ಅಸ್ತಿತ್ವಕ್ಕೆ ಬಂದವುಗಳಾಗಿವೆ.ಸ್ವತಂತ್ರವಾಗಿ ಉತ್ಪಾದನೆ ಕಾರ್ಯದಲ್ಲಿ ತೊಡಗಿದ ಸಣ್ಣ ಉತ್ಪಾದಕರು ಇಂಥ ಸಂಘಗಳನ್ನು ಸ್ಥಾಪಿಸುತ್ತಾರೆ.ಸಂಘದ ಸದಸ್ಯರು ಸಂಘದ ಮೀಲಕ ತಮಗೆ ಬೇಕಾದ ಕಚ್ಚಾ ಸಾಮಾಗ್ರಿಗಳನ್ನು , ತಾಂತ್ರಿಕ ಮಾರ್ಗದರ್ಶನವನ್ನು ಕಡಿಮೆ ಬೆಲೆಗೆ ದೊರಕಿಸಿ,ಗುಣಮಟ್ಟದ ಸರಕುಗಳನ್ನುಉತ್ಪಾದಿಸಿ ಯೋಗ್ಯ ಬೆಲೆಗೆ ಮಾರಾಟ ಮಾಡುತ್ತವೆ. ದೊಡ್ಡ ಕೈಗಾರಿಕೆಗಳಿಗೆ ಪೈಪೋಟಿ ನೀಡುವುದರ ಜೊತೆಗೆ ಲಾಭವನ್ನು ಗಳಿಸುತ್ತವೆ. ಲಾಭಾಂಶವನ್ನು ಸದಸ್ಯರಿಗೆ ಅವರುಗಳು ಉತ್ಪಾದಿಸಿದ ಸರಕುಗಳ ಮಾರಟದ ಪ್ರಮಾಣದಲ್ಲಿ ಹಂಚುತ್ತವೆ.

೩.ಮಾರಾಟದ ಸಹಕಾರ ಸಂಘಗಳು

ಸಣ್ಣ ಉತ್ಪಾದಕರು ಉತ್ಪಾದಿಸಿದ ಸರಕುಗಳನ್ನು ಮಾತ್ರ ಮಾರಟ ಮಾಡಲು ಅಸ್ತಿತ್ವಕ್ಕೆ ಬಂದ ಸಂಘಗಳಾಗಿವೆ. ಇಂಥ ಸಣ್ಣ ಉತ್ಪಾದಕರು ತಮ್ಮ ಸರಕುಗಳನ್ನು ಸಂಗ್ರಹಿಸಿಡುವುದಕ್ಕಾಗಲಿ ಮತ್ತು ಒಳ್ಳೆಯ ಬೆಲೆಗೆ ಮಾರಾಟ ಮಾಡುವುದಕ್ಕಾಗಲೀ ಸಾಧ್ಯವಾಗುವುದಿಲ್ಲ. ಅಂಥಹ ಸಂದರ್ಭದಲ್ಲಿ ವ್ಯಪಾರೀ ಮಧ್ಯವರ್ತಿಗಳಿಗೆ ಅವರು ಕೇಳಿದ ಬೆಲೆಗೆ ಮಾರಟ ಮಾಡ್ಬೇಕಾಗುತ್ತದೆ. ಆಗ ಹೆಚ್ಚು ನಷ್ಟ ಅನುಭವಿಸಬೇಕಾಗುತ್ತದೆ. ಇದರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸಂಘ ಸ್ಥಾಪಿಸಿ ಸಂಘದ ಮೂಲಕ ನೇರವಾಗಿ ಹೆಚ್ಚಿನ ಬೆಲೆಗೆ ಮಾರುತ್ತಾರೆ. ಮಾರಾಟ ಮಾಡಿ ಬಂದ ಹಣವನ್ನು ಸಣ್ಣ ಉತ್ಪಾದಕರು ಪೂರೈಸಿದ ಸರಕುಗಳ ಪ್ರಮಾಣದ ಆಧಾರದ ಮೇಲೆ ಹಂಚಿಕೋಳ್ಳುತ್ತಾರೆ.

೪.ವ್ಯವಸಾಯ ಸಹಕಾರಿ ಸಂಘಗಳು

 ಸಣ್ಣ ಹಿಡುವಳಿ ಹೊಂದಿದ ರೈತರ ಹಿತರಕ್ಷಣೆಯನ್ನು ಕಾಪಾಡಲು ಇವುಗಳು ಅಸ್ತಿತ್ವಕ್ಕೆ ಬಂದಿವೆ.ಸಣ್ಣ ಹಿಡುವಳಿ ಹೊಂದಿದ ರೈತರು ಸ್ವಯಂ ಪ್ರೇರಣೆಯಿಂದ ತಮ್ಮೆಲ್ಲ ಹಿಡುವಳಿಗಳನ್ನು ಮತ್ತು ಇತರೆ ವ್ಯವಸಾಯದ ಸಲಕರಣೆಗಳನ್ನು ಒಟ್ಟುಗೂಡಿಸಿ ಸಾಮೂಹಿಕವಾಗಿ ವ್ಯವಸಾಯವನ್ನು ಕೈಗೊಳ್ಳುತ್ತಾರೆ. ಸಂಘವು ವ್ಯವಸಾಯಕ್ಕೆ ಬೇಕಾದ ಯಂತ್ರೋಪಕರಣ , ರಾಸಾಯನಿಕ ಗೊಬ್ಬರ , ಸುಧಾರಿತ ತಳಿ ಬೀಜವನ್ನು ಒದಗಿಸಿ ಎಲ್ಲಾ ಕ್ರುಷಿಕರು ಒಟ್ಟಾಗಿ ಸಾಗುವಳಿ ಮಾಡುವಂತೆ ವ್ಯವಸ್ಥೆಗೊಳಿಸುತ್ತದೆ. ಇದರಿಂದ  ಇಳುವರಿ ಅತ್ಯಧಿಕವಾಗುತ್ತದೆ.ಅದನ್ನು ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆಗೆ ಮಾರಾಟ ಮಾಡುತ್ತದೆ. ಮಾರಾಟದಿಂದ ಬಂದ ಹಣದಲ್ಲಿ ಕ್ರುಷಿಗೆ ತಗುಲಿದ ಖರ್ಚನ್ನು ಕಳೆದು ಉಳಿದ ಹಣವನ್ನು ರೈತರು ಸಂಘಕ್ಕೆ ನೀಡಿದ ಭೂಮಿ ಆಧಾರದ ಮೇಲೆ ಹಂಚತ್ತದೆ. ರೈತರು ನೇರವಾಗಿ ಕ್ರುಷಿಯ ಅಭಿವ್ರುದ್ಧಿಗೆ ಸಲ್ಲಿಸಿದ ಸೇವೆಗೆ ಕೂಲಿಯನ್ನು ಪಡೆಯತ್ತಾರೆ.

೫.ಪತ್ತಿನ ಸಹಕಾರಿ ಸಂಘಗಳು

 ಕಡಿಮೆ ಬಡ್ಡಿದರದಲ್ಲಿ ತನ್ನ ಸದಸ್ಯರಿಗೆ ಸುಲಭವಾಗಿ ಸಾಲ ನೀಡಲು ಅಸ್ತಿತ್ವಕ್ಕೆ ಬಂದಿದರುವ ಸಂಘಗಳಾಗಿವೆ. ಯಾರು ಧನ ಸಹಾಯ ಪಡೆಯುವ ಅವಶ್ಯಕತೆ ಇದೆಯೋ ಅಂಥ ವ್ಯಕ್ತಿಗಳು ಈ ಸಂಘದ ಸದಸ್ಯರಾಗಿರುತ್ತಾರೆ.ಇಂಥ ಸಂಘಗಳ ಪ್ರಮುಖ ಗುರಿ ಹೆಚ್ಚಿನ ಬಡ್ಡಿಗೆ ಸಾಲ ನೀಡುವ ಸಾಹುಕಾರರಿಂದ ತಮ್ಮ ಸದಸ್ಯರನ್ನು ರಕ್ಷಿಸುವುದಾಗಿದೆ.ಇಂಥ ಸಂಘಗಳು ಸದಸ್ಯರಿಂದ ಕಲೆ ಹಾಕಿದ ಬಂಡವಾಳದಿಂದ ಮತ್ತು ಠೇವಣಿಗಳಿಂದ ಸಾಲ ನೀಡುತ್ತವೆ. ಕೆಲವು  ಸಂದರ್ಭಗಳಲ್ಲಿ ಬ್ಯಾಂಕುಗಳಿಂದ ಸಾಲ ಪಡೆದು ತನ್ನ ಸದಸ್ಯರಿಗೆ ಸಾಲ ನೀಡುಲು ಬಳಸುತ್ತವೆ.ಸಾಲದ ಮರುಪಾವತಿಯು ಸದಸ್ಯರಿಗೆ ಅನುಕೂಲವಾಗುವಂತೆ ಅನೇಕ ಸುಲಭ ಕಂತುಗಳ ಮೂಲಕ ನಡೆಯುತ್ತದೆ.ಸಮಕಾಲೀನ ಭಾರತದಲ್ಲಿ ಮಹಿಳೆಯರ ಪತ್ತಿನ ಸಹಕಾರ ಸಂಘಗಳು ಅಸ್ತಿತ್ವಕ್ಕೆ ಬಂದಿವೆ ಅವು  :-
*ಸ್ತ್ರೀಶಕ್ತಿ ಕೇಂದ್ರಗಳು
*ಮಹಿಳಾ ವಿವಿದೋದ್ದೇಶ ಸಹಕಾರ ಸಂಘಗಳು

೬. ಸಹಕಾರಿ ಗ್ರುಹ ನಿರ್ಮಾಣ ಸಂಘಗಳು

ಇಂಥ ಸಂಘಗಳು ಸ್ವಂತ ಮನೆಯಿಲ್ಲದ ಕಡಿಮೆ ಆದಾಯದ ಸದಸ್ಯರಿಗೆ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿ ತನ್ನ ಸದಸ್ಯರಿಗೆ ಹಂಚಲು ಅಸ್ತಿತ್ವಕ್ಕೆ ಬಂದಿವೆ.ಸ್ವಂತ ಮನೆಯಿಲ್ಲದ ಜನರು ಮನೆ ಹೊಂದುವುದಕ್ಕಾಗಿ ಇಂಥ ಸಂಘಗಳ ಸದಸ್ಯರಾಗಿರುತ್ತಾರೆ. ಸದಸ್ಯರು ಹಾಕಿದ ಬಂಡವಾಳದ ಆಧಾರದ ಮೇಲೆ ಯೋಗ್ಯವಾದ ಜಾಗವನ್ನು ಮನೆಗಳನ್ನು ಕಟ್ಟಲು ಖರೀದಿ ಮಾಡಿ,ಹಣಕಾಸಿನ ಸಂಸ್ಥೆಗಳಿಂದ ಸಾಲ ಪಡೆದು ವಿವಿಧ ಮನೆಗಳನ್ನು ಕಟ್ಟಿಸುತ್ತದೆ,ಇಲ್ಲವೇ  ಸದಸ್ಯರುಗಳಿಗೆ ಜಾಗಗಳನ್ನು ಹಂಚುತ್ತದೆ.ಮನೆಗಳನ್ನು ಕಟ್ಟಿಸಲು ತಗುಲಿದ ವೆಚ್ಚವನ್ನು ಸದಸ್ಯರು ಹಲವಾರು ವಾರ್ಷಿಕ ಕಂತುಗಳಲ್ಲಿ ಮರುಪಾವತಿ ಮಾಡುಬೇಕಾಗುತ್ತದೆ.ಮನೆ ಕಟ್ಟಿಸಲು ಜಾಗಗಳನ್ನು ಪಡೆದುಕೊಂಡ ಸದಸ್ಯರಿಗೆ ಮನೆ ನಿರ್ಮಾಣ ಮಾಡಲು ಮಾಡಲು ದೀರ್ಘಾವಧಿ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ನೀಡುತ್ತದೆ. ಇಂಥ ಸಾಲವನ್ನು ಮನೆ ನಿರ್ಮಾಣದ  ನಂತರ ಹಲವಾರು ವಾರ್ಷಿಕ ಕಂತುಗಳಲ್ಲಿ ಮರುಪಾವತಿ ಪಡೆಯುತ್ತದೆ.