ಸದಸ್ಯ:Sulochanaraghavendra/sandbox
ಒಂದೂರಿನಲ್ಲಿ ಒಬ್ಬ ಬ್ರಾಹ್ಮಣನು ಪೇಟೆಯಲ್ಲಿ ವ್ಯಾಪಾರಕ್ಕಾಗಿ ಹೊರಡುತ್ತಾನೆ. ಹೊರಡುವಾಗ ತಾಯಿ ಹೇಳುತ್ತಾಳೆ. ಮಗನೆ ನೀನು ಒಬ್ಬನೆ ಹೊರಡಬೇಡ. ನಿನ್ನೊಡನೆ ಒಂದು ಆಮೆಯನ್ನು ಕೊಂಡು ಹೋಗು ಎಂದು ಹಿತ್ತಲಿನ ಕೆರೆಯಿಂದ ಒಂದು ಆಮೆಯನ್ನು ತಂದು ಕೊಡುತ್ತಾಳೆ. ಬ್ರಾಹ್ಮಣನು ತನ್ನ ಜೋಳಿಗೆಯಲ್ಲಿ ಆಮೆಯ ಮರಿಯನ್ನು ಹಾಕಿಕೊಂಡು ವ್ಯಾಪಾರಕ್ಕಾಗಿ ಹೋಗುತ್ತಾನೆ. ದಾರಿಯಲ್ಲಿ ಹೋಗುವಾಗ ಅವನಿಗೆ ತುಂಬಾ ಆಯಾಸವಾಗಿ ಒಂದು ಮರದ ನೆರಳಿನಲ್ಲಿ ಮಲಗುತ್ತಾನೆ. ನಿದ್ರೆಯು ಆವರಿಸಿ ಬ್ರಾಹ್ಮಣ ಎಚ್ಚರವಾಗದೆ ಮಲಗುತ್ತಾನೆ. ಅವನ ಜೋಳಿಗೆಯಲ್ಲಿ ಆಮಯು ಒದ್ದಾಡುತ್ತಿರುತ್ತದೆ. ಇದನ್ನು ಅಲ್ಲೆ ಇರುವ ಒಂದು ನಾಗರಹಾವು ಚೀಲವನ್ನು ಹಿಡಿಯಲು ಬರುತ್ತದೆ. ಆಮೆಯು ಹಾವನ್ನು ನೋಡಿ ಅದನ್ನು ಕಚ್ಚಿ ಕೊಂದು ಹಾಕುತ್ತದೆ. ನಿದ್ದೆಯಿಂದ ಎಚ್ಚೆತ್ತ ಬ್ರಾಹ್ಮಣ ಹಾವು ಸತ್ತಿರುವುದನ್ನು ನೋಡಿ ಆಶ್ಚರ್ಯವಾಗುತ್ತದೆ. ಆಮೆಯು ಹಾವನ್ನು ಕೊಂದಿತ್ತು. ಬ್ರಾಹ್ಮಣನಿಗೆ ಬಹಳ ಸಂತೋಷವಾಗುತ್ತದೆ. ನಾನು ಒಂಟಿಯಾಗಿ ಬಂದಿದ್ದರೆ ಹಾವು ನನ್ನನ್ನು ಕೊಂದು ಬಿಡುತ್ತಿತ್ತು ಆಮೆಯು ನನ್ನ ಜೀವವನ್ನು ಉ:ಳಿಸಿತು ಎಂದು ಸಂತೋಷಪಡುತ್ತಾನೆ;